ಕೆ ಆರ್ ಪೇಟೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇಂದು ಶಾಸಕ ಹೆಚ್.ಟಿ ಮಂಜು ರವರ ನೇತೃತ್ವದಲ್ಲಿ ಮೂರು ಬಸ್ ಗಳಲ್ಲಿ ಎರಡು ಕಾಲೇಜಿನಿಂದ ಸುಮಾರು ಕಾಲೇಜಿನ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿನಿಗಳು ವಿಧಾನಸಭಾ ಕಲಾಪ ವೀಕ್ಷಿಸಿದರು.
ಬಳಿಕ ವಿಧಾನ ಮಂಡಲ ಕಲಾಪ ವೀಕ್ಷಿಸಿ ಅವಕಾಶ ಮಾಡಿಕೊಟ್ಟ ಶಾಸಕರಾದ ಹೆಚ್.ಟಿ ಮಂಜು ಅವರಿಗೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ ಮಾತನಾಡಿದರು ನಮ್ಮ ಕ್ಷೇತ್ರದ ಶಾಸಕರಾದ ಹೆಚ್.ಟಿ ಮಂಜು ಅವರ ಆಸಕ್ತಿಯಿಂದ ನಾವು ಟಿ.ವಿ ಮಾಧ್ಯಮಗಳಲ್ಲಿ ಮೊಬೈಲ್ ಗಳಲ್ಲಿ ವಿಧಾನ ಸಭೆ ಕಲಾಪಗಳನ್ನು ವೀಕ್ಷಣೆ ಮಾಡುತ್ತಿದ್ದೆವು.ವಿದ್ಯಾರ್ಥಿ ಜೀವನದಲ್ಲೇ ನೇರವಾಗಿ ವಿಧಾನಸೌಧ ಕಲಾಪ ವೀಕಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ದಿನ ನಮ್ಮ ಜೀವನ ಚರಿತ್ರೆಯಲ್ಲಿ ಸುವರ್ಣಾಕ್ಷರದಿಂದ ಬರದಿಡುವಂತಾಗಿದೆ,ಶಾಸನಬದ್ಧ ಅಂಶಗಳನ್ನು ಮೈಗೂಡಿಸಿಕೊಂಡು ಸದೃಢ ಸಮಾಜಕ್ಕೆ ಮತ್ತು ನಮ್ಮ ಭವಿಷ್ಯಕ್ಕೆ ಈ ವೀಕ್ಷಣೆ ಉಪಯುಕ್ತವಾಗಿದೆ.ಸುವರ್ಣವಕಾಶ ಕಲ್ಪಿಸಿಕೊಟ್ಟ ಹೆಚ್.ಟಿ ಮಂಜು ರವರಿಗೆ ಮನಪೂರ್ವಕ ಅಭಿನಂದನೆಗಳು ಎಂದರು.
ಬಳಿಕ ಮಾತನಾಡಿದ ಶಾಸಕ ಹೆಚ್.ಟಿ ಮಂಜು ನಾನು ಕೂಡ ಬಡ ಕುಟುಂಬದಿಂದ ಬಂದ ವ್ಯಕ್ತಿ,ನನ್ನ ಕ್ಷೇತ್ರದ ಜನರ ಅಮೂಲ್ಯವಾದ ಆಶೀರ್ವಾದದಿಂದ ವಿಧಾನಸೌಧ ಪ್ರವೇಶಿಸಲು ಸಾಧ್ಯವಾಯಿತು, ನನ್ನಂತಹ ನೂರಾರು ಬಡಮಕ್ಕಳು ಕೂಡ ವಿದ್ಯಾರ್ಥಿ ಜೀವನದಲ್ಲಿ ಇಂತಹ ಸುವರ್ಣ ಸೌಧ ಪ್ರವೇಶಿಸಿ ಸದೃಢ ಸಮಾಜದ ಬಗ್ಗೆ ಚಿಂತಿಸಲಿ ಎಂಬ ದೂರದೃಷ್ಟಿಯಿಂದ ಅವಕಾಶ ಕಲ್ಪಿಸಿದ್ದೇನೆ ವಿದ್ಯಾರ್ಥಿಗಳು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್, ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರತಿಮಾ, ಡಾ.ಅನುರಾಧ, ಸಹಾಯಕ ಪ್ರಾಧ್ಯಾಪಕರಾದ ಜಯಕೀರ್ತಿ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್,ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಜೀವನ್, ಶಶಾಂಕ್, ಕಾಲೇಜಿನ ಸಿಬ್ಬಂದಿ ಅಭಿಷೇಕ್, ಸೇರಿದಂತೆ ವಿದ್ಯಾರ್ಥಿಗಳಿದ್ದರು
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
