ಕೆ ಆರ್ ಪೇಟೆ: ಟಿಎಪಿಸಿಎಂಎಸ್ ನೂತನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತ, ಜೆಡಿಎಸ್ ಕಟ್ಟಾಳು,ಶಾಸಕರಾದ ಹೆಚ್. ಟಿ ಮಂಜು ಕಟ್ಟಾ ಬೆಂಬಲಿಗ ತೆರ್ನೇನಹಳ್ಳಿ ಬಲದೇವ್ ಅವಿರೋಧವಾಗಿ ಆಯ್ಕೆಯಾದರು.
ಕಳೆದ ತಿಂಗಳು 28 ರಂದು ಟಿಎಪಿಸಿಎಂಎಸ್ ನೂತನ ಆಡಳಿತ ಮಂಡಳಿಯ ನೂತನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 14ಕ್ಕೆ 11ಅಭ್ಯರ್ಥಿಗಳು ಪ್ರಚಂಡ ಜಯಭೇರಿ ಬಾರಿಸಿದ್ದರು.
ನೂತನ ಆಡಳಿತ ಮಂಡಳಿಯ ಅದ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು.ಅಧ್ಯಕ್ಷ ಸ್ಥಾನ ಬಯಸಿ ತೆರ್ನೇನಹಳ್ಳಿ ಬಲದೇವ್ ಹಾಗೂ ಉಪಾಧ್ಯಕ್ಷ ಸ್ಥಾನ ಬಯಸಿ ಲತಾಮಣಿಮಂಜೇಗೌಡ ಬಿಟ್ಟರೆ ಉಳಿದ ಯಾವ ನಿರ್ದೇಶಕರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ ಕಾರಣ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ತಹಶಿಲ್ದಾರ್ ಅಶೋಕ್ ಅವರು ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ತೆರ್ನೇನಹಳ್ಳಿ ಬಲದೇವ್ ಹಾಗೂ ಉಪಾಧ್ಯಕ್ಷ ರಾಗಿ ಲತಾಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ತೆರ್ನೇನಹಳ್ಳಿ ಬಲದೇವ್ ಹಾಗೂ ಉಪಾಧ್ಯಕ್ಷೆ ಲತಾಮಣಿ ಅವರನ್ನು ಶಾಸಕ ಹೆಚ್ ಟಿ ಮಂಜು ಅವರು ಅಭಿನಂದಿಸಿ ಮಾತನಾಡಿ ನಮ್ಮ ಜೆಡಿಎಸ್ ಪಕ್ಷವನ್ನು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದ ಸಂಸ್ಥೆಯ ಷೇರುದಾರರು, ಸದಸ್ಯರು ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಮತ್ತು ಪ್ರತ್ಯೇಕ್ಷವಾಗಿ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಮುಂದಿನ ಬರುವ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವ ಮೂಲಕ ನಮ್ಮ ಪಕ್ಷದ ಪರಮೋಚ್ಚ ನಾಯಕರು ಮಾಜಿ ಪ್ರಧಾನಿಗಳಾದ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಣ್ಣ,ನಿಖಿಲಣ್ಣ ಅವರ ಕೈಬಲಪಡಿಸೋಣ ಎಂದು ಕರೆ ನೀಡಿದರು.ಪಕ್ಷದ ವಿಚಾರ ಬಂದರೆ ನನ್ನ ಹೆಗಲಿಗೆ ಹೆಗಲು ಕೊಟ್ಟು ಏನೇ ಜವಾಬ್ದಾರಿ ಕೊಟ್ಟರೂ ಚಾಚು ತಪ್ಪದೆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ನನಗೆ ಸಾಥ್ ನೀಡುವ ತೆರ್ನೇನಹಳ್ಳಿ ಬಲದೇವ್ ಅವರಿಗೆ ಅವರ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನ ಕೊಟ್ಟು ಜವಾಬ್ದಾರಿಯನ್ನು ವಹಿಸಿದ್ದೇವೆ. ತಾಲ್ಲೂಕಿನ ಪ್ರತಿಷ್ಠಿತ ಟಿಎಪಿಸಿಎಂಎಸ್ ಸಂಸ್ಥೆಯು ರೈತರ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತಾ ಬಂದಿದೆ. ಅದಕ್ಕೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಬೆಂಗಾವಲಾಗಿ ನಿಂತು ಮುಂದುವರೆಸಿಕೊಂಡು ಸಂಸ್ಥೆಯನ್ನು ಇನ್ನೂ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಸಂಸ್ಥೆಯ ಶ್ರೇಯೋಭಿದ್ದಿಗೆ ಶ್ರಮಿಸುವಂತೆ ಸಲಹೆ ನೀಡಿದರು.ಸಂಸ್ಥೆಯ ಅಧ್ಯಕ್ಷರು ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆ.ಆಡಳಿತ ಮಂಡಳಿಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸಂಸ್ಥೆಯಲ್ಲಿ ನೂತನ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಪ್ರಯತ್ನವನ್ನು ಮಾಡಬೇಕು ಎಂದು ಶಾಸಕರು ಸಲಹೆ ನೀಡಿದರು.
ನೂತನ ಅಧ್ಯಕ್ಷ ತೆರ್ನೇನಹಳ್ಳಿ ಬಲದೇವ್ ಮಾತನಾಡಿ ನನ್ನನ್ನು ಅವಿರೋಧವಾಗಿ ಅಧ್ಯಕ್ಷನಾಗಲು ಅವಕಾಶ ಮಾಡಿಕೊಟ್ಟ ನಮ್ಮ ನಾಯಕರಾದ ಶಾಸಕರು ಹೆಚ್ ಟಿ ಮಂಜು ಅವರು ಹಾಗೂ ನನ್ನೆಲ್ಲಾ ಸಹೋದ್ಯೋಗಿಗಳಾದ ಎಲ್ಲಾ ನಿರ್ದೇಶಕರು ಜೆಡಿಎಸ್ ಮುಖಂಡರು ಕಾರ್ಯಕರ್ತರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ನನ್ನ ಗೆಲುವನ್ನು ತಾಲ್ಲೂಕಿನ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಸಮರ್ಪಣೆ ಮಾಡುತ್ತೇನೆ.ಟಿಎಪಿಸಿಎಂಎಸ್ ದೊಡ್ಡ ಸಂಸ್ಥೆಯ ಬೆಳವಣಿಗೆಗೆ ಕಾಯಾ ವಾಚಾ ಮನಸ್ಸಿನಿಂದ ಕೆಲಸವನ್ನು ಎಲ್ಲಾ ನಿರ್ದೇಶಕರು ಹಾಗೂ ಶಾಸಕರ ಸಹಕಾರದಿಂದ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ನನಗೆ ಹಲವಾರು ಸಂಸ್ಥೆಯ ಬಗ್ಗೆ ಕನಸುಗಳಿವೆ.ಶಾಸಕರ ಸಹಕಾರದಿಂದ ಹೈಟೆಕ್ ಸಮುದಾಯ ಭವನವನ್ನು ನಿರ್ಮಾಣ ಮಾಡಬೇಕೆಂಬ ಬಹುದಿನಗಳ ಅಸೆ ಇದೆ. ರೈತರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಸಂಸ್ಥೆಯನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಪ್ರಾಮಾಣಿಕವಾಗಿ ದುಡಿಯುತ್ತೇನೆ ಅಲ್ಲದೆ ಕೊಟ್ಟ ಜವಾಬ್ದಾರಿಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
4 ನಿರ್ದೇಶಕರ ಗೈರು : ಕಾಂಗ್ರೆಸ್ ಪಕ್ಷದ ನಿರ್ದೇಶಕರಾದ ಎಂ.ಪಿ.ಲೋಕೇಶ್, ಎ.ವೈ.ವಿಜಯಕುಮಾರ್, ಕಿಕ್ಕೇರಿ ಸುರೇಶ್ ಹಾಗೂ ಜೆಡಿಎಸ್ ಬೆಂಬಲಿತ ನಿರ್ದೇಶಕ ಬಿ.ಎಂ.ಕಿರಣ್ ಅವರು ಚುನಾವಣಾ ಪ್ರಕ್ರಿಯೆಗೆ ಗೈರು ಹಾಜರಾಗಿದ್ದರು.
ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಡಾಎಸ್.ಯು.ಅಶೋಕ್, ಸಹ ಚುನಾವಣಾಧಿಕಾರಿಗಳಾಗಿ ತಾಲ್ಲೂಕು ಚುನಾವಣಾ ಶಾಖೆಯ ಶಿರಸ್ತೇದಾರ್ ಹರೀಶ್, ಟಿಎಪಿಸಿಎಂಎಸ್ ಸಂಸ್ಥೆಯ ಕಾರ್ಯದರ್ಶಿ ಬೋರೇಗೌಡ, ರವಿಕುಮಾರ್ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್,ಟಿಎಪಿಸಿಎಂಎಸ್ ನೂತನ ನಿರ್ದೇಶಕ ಹೆಚ್ ಟಿ ಲೋಕೇಶ್, ತಾ.ಪಂ.ಮಾಜಿ ಸದಸ್ಯ ಟಿಎಪಿಸಿಎಂಎಸ್ ನೂತನ ನಿರ್ದೇಶಕ ಮಲ್ಲೇನಹಳ್ಖಿ ಮೋಹನ್, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಎಸ್ ಎಲ್ ಮೋಹನ್,ನಾಗರಘಟ್ಟ ದಿಲೀಪ್ ಕುಮಾರ್, ಜ್ಯೋತಿ, ಮಧು,ನಾಗರಾಜು,ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಕೃಷ್ಣೇಗೌಡ,ಬಸವಲಿಂಗಪ್ಪ,ಜೈನಹಳ್ಳಿ ಧರಣೇಶ್,ಚಿಕ್ಕಹೊಸಹಳ್ಳಿ ನಾಗೇಶ್, ಯೋಗೇಶ್,ಅಲೋಕ್,ಶಾಸಕರ ಆಪ್ತ ಸಹಾಯಕ ಪ್ರತಾಪ್ ಅರಳಕುಪ್ಪೆ, ಸೇರಿದಂತೆ ಇತರರು ಅಭಿನಂದಿಸಿದರು
ವರದಿ : ಮನು, ಮಂಡ್ಯ
