ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ನಗರೂರು, ಚೀಲದಹಳ್ಳಿ,ಮಾರ್ಗೋನಹಳ್ಳಿ, ಸಮೀಪದ ಶ್ರೀ ಮುರಾರ್ಜಿ ದೇಸಾಯಿ ವಸತಿ ಶಾಲೆಯ 2025-26ರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಶಾಲಾ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ನೃತ್ಯ ನಾಟಕ ಪ್ರದರ್ಶನ ಮೂಲಕ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹೆಚ್,ಟಿ ಮಂಜು ಈ ವಸತಿ ಶಾಲೆಯು ಆರಂಭಗೊಂಡ ದಿಂದಲೂ ಸೂಕ್ತ ಕಾಂಪೌಂಡ್ ಭದ್ರತೆ ವ್ಯವಸ್ಥೆ ಇಲ್ಲದೆ ಆತಂಕದಲ್ಲೇ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಅನಿವಾರ್ಯ ಸೃಷ್ಟಿಯಾಗಿತ್ತು,ಅದನ್ನು ಪರಿಗಣಿಸಿ ಒಂದು ಕೋಟಿ ವೆಚ್ಚದಲ್ಲಿ ಸಂಪೂರ್ಣ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ,ನಮ್ಮ ತಾಲೂಕಿನ ವಸತಿ ಶಾಲೆಗಳಲ್ಲಿ ಈ ಶಾಲೆಯು ಗುಣಮಟ್ಟದ ಶಿಕ್ಷಣಕ್ಕೆ ಶಾಲೆಯ ಶಿಕ್ಷಕರರು ಶ್ರಮಪಡುತ್ತಿದ್ದಾರೆ,ಈ ವರ್ಷ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಶೇ. 100ರಷ್ಟು ಸಾಧನೆ ಬರಬೇಕು.ತಾಲೂಕಿನ ಘನತೆ ಹೆಚ್ಚಿಸಬೇಕು ಶಾಲೆಯ ಪರಿಸರ ಮತ್ತು ಶಿಸ್ತಿನ ವ್ಯವಸ್ಥೆಯ ಬಗ್ಗೆ ಪ್ರಶಂಸೆಕೇಳಿ ಬರುತ್ತಿದೆ ಸರ್ಕಾರದ ಮಟ್ಟದಲ್ಲಿ ಇಷ್ಟು ದೊಡ್ಡ ಯೋಜನೆಗಳನ್ನು ಹಮ್ಮಿಕೊಂಡು ದಿನ-ದಲಿತರ ಬಾಳಿಗೆ ಬೆಳಕು ನೀಡುವ ಕಾರ್ಯವನ್ನು ಆಂಗ್ಲ ಮಾಧ್ಯಮದ ಶಿಕ್ಷಣ ಶಾಲೆಗಳ ಶಿಕ್ಷಣ ವ್ಯವಸ್ಥೆಯನ್ನು ಗ್ರಾಮೀಣ ಭಾಗದಲ್ಲಿ ಸರ್ಕಾರ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜಸೇವಕ ಆರ್ಟಿಓ ಮಲ್ಲಿಕಾರ್ಜುನ್ ರವರು ಮಾರ್ಗೋನಹಳ್ಳಿ ಶ್ರೀ ಮರಡಿಲಿಂಗೇಶ್ವರ ಕ್ಷೇತ್ರದಲ್ಲಿರುವ ಈ ಶಾಲೆ ವಾತಾವರಣವೇ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ, ಪ್ರಸ್ತುತ ಸರ್ಕಾರವು ಕೂಡ ವಸತಿ ಶಾಲೆಯ ಸೌಲಭ್ಯಗಳಿಗೆ ಹೆಚ್ಚು ಹೊತ್ತು ನೀಡುತ್ತಿದೆ, ಹಾಗಾಗಿ ವಿದ್ಯಾರ್ಥಿಗಳಿಗೆ ಕಲಿಯುವ ಆಸಕ್ತಿ ಇದ್ದಲ್ಲಿ ಅವಕಾಶಗಳು ಸಾಕಷ್ಟು ಇದೆ ಅದನ್ನು ಬಳಸಿಕೊಳ್ಳುವ ಕೆಲಸ ಮಕ್ಕಳಿಂದ ಆಗಬೇಕು ಪೋಷಕರು ಇದಕ್ಕೆ ಸಹಕಾರವನ್ನು ನೀಡಬೇಕು ವಿದ್ಯಾರ್ಥಿಗಳು ಸುಶಿಕ್ಷಿತರಾಗಿ ಭವ್ಯ ಭವಿಷ್ಯತ್ತಿನ ನಾಗರಿಕ ಪ್ರಜೆಗಳಾಗಿ ಸಮಾಜಮುಖಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿಸಿದರು.

ಬಳಿಕ ಮಾತನಾಡಿ ಪಾಂಡುಪುರ ಉಪ ವಿಭಾಗಧಿಕಾರಿ ಶ್ರೀನಿವಾಸ್ ಮುರಾರ್ಜಿ ದೇಸಾಹಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ನೀಡುತ್ತಿವೆ,ಪಠ್ಯ ಶಿಕ್ಷಣದೊಟ್ಟಿಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿದೆ.ನಾಗರೀಕ ಸಮಾಜದಲ್ಲಿ ಹಬ್ಬ ಹರಿದಿನ ಆಚರಿಸುವಂತೆ ಶಾಲಾ ಕಾಲೇಜುಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕೋತ್ಸವ ಮಕ್ಕಳ ಪಾಲಿಗೆ ಹಬ್ಬದ ಸನ್ನಿವೇಶವನ್ನು ಸೃಷ್ಟಿ ಎಲ್ಲಾ ಧರ್ಮಗಳ ಸಮನ್ವಯತೆಯನ್ನು ಕಾಣಲು ಹಾಗೂ ಪ್ರತಿಬೆ ಹೊರಹಾಕುವ ಸುಂದರ ಶಾಲಾ ವಾರ್ಷಿಕೋತ್ಸವವನ್ನು ಕೈಗೊಳ್ಳುವುದರಿಂದ ಮಕ್ಕಳಲ್ಲಿರುವ ಪ್ರತಿಭೆ ಹೊರ ಹಾಕುವ ಉತ್ತಮ ವೇದಿಕೆ ಕಾರ್ಯಕ್ರಮ ಕೈಗೊಂಡಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ಬಣ್ಣಿಸಿದರು.
ಶಾಲಾ ವಿದ್ಯಾರ್ಥಿಗಳು ನೃತ್ಯ ವೈಭವ ವಿವಿಧ ಸಂಸ್ಕೃತಿಕ ನರ್ತನ ಜಾನಪದ ಕಲಾವೇಷದಲ್ಲಿ ವಿದ್ಯಾರ್ಥಿಗಳಿಗೆ ಅದ್ಭುತ ನೃತ್ಯ ಪ್ರದರ್ಶಿಸಿ ಕಾರ್ಯಕ್ರಮದ ವೈಭವ ಕಳೆಗಟ್ಟಿತು.
ಈ ಸಂದರ್ಭದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಕ್ರೈಸ್ ಡಿಸಿಓ ಮಂಡ್ಯ ಅಭಿಲಾಶ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಲದೇವ್,ತಾಲ್ಲೂಕು ಶಿಕ್ಷಣ ಸಂಯೋಜಕ ಹರೀಶ್,ತಾಲ್ಲೂಕು ಶಾಂಖ್ಯಿಕ ಅಧಿಕಾರಿ ಮೊದೂರು ಶ್ರೀನಿವಾಸ್,ವಸತಿ ಶಾಲೆಗಳ ಪ್ರಾಂಶುಪಾಲರಾದ ವೈ.ಪವಿತ್ರ ರಾಜಣ್ಣ ಟಿ.ಆರ್, ಲಲಿತ. ಬಿ.ಎಸ್, ಶಾಂತಿ, ಗ್ರಾಮ ಪಂಚಾಯಿತಿ ಸದಸ್ಯೆ ಕಾಳಮ್ಮ ನಿಂಗೇಗೌಡರು, ಮುಖಂಡರಾದ ಚಿಲ್ಲದಹಳ್ಳಿ ರಮೇಶ್ ಗೌಡರು, ಯಾಲಕಪ್ಪ, ವಸತಿ ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಿಕಾರ್ಜುನ್ ಸ್ವಾಮಿ ಎಲ್, ಉಪ ಪ್ರಾಂಶುಪಾಲ ಧನಂಜಯಕುಮಾರ್.ಸಿ.ಕೆ, ಹಿರಿಯ ಶಿಕ್ಷಕರಾದ ಎಚ್.ಮಹೇಶ್ , ಸುನೀಲ್ ಕುಮಾರ್.ಎಂ.ಎಸ್, ಶಾಲೆಯ ಸಂಸ್ಕೃತಿಕ ಕಾರ್ಯದರ್ಶಿ ಟಿ.ವೈ. ಆನಂತರಸಿಂಹನ್, ಸೇರಿದಂತೆ ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
