ಅಘಲಯ- ದೊಡ್ಡಸೋಮನಹಳ್ಳಿ ತಿರುವಿನಲ್ಲಿರುವ ತೆರೆದ ಕಫಿಲೆ ಬಾವಿಯ ದಡದಲ್ಲಿ ಸುಮಾರು 3ಲಕ್ಷ ಬೆಲೆ ಬಾಳುವ ಬೈಕ್, 50 ಸಾವಿರ ಬೆಲೆ ಬಾಳುವ ಮೊಬೈಲ್ ಬಿಟ್ಟು ಕಫಿಲೆ ಬಾವಿಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಬಾವಿಯ ದಡದಲ್ಲಿ ಸ್ಥಳದಲ್ಲಿ ಈತನ ಕಾಲೇಜು ಬ್ಯಾಗ್ ದೊರೆತಿದ್ದು ಆಧಾರ್ ಕಾರ್ಡ್ ಸಿಕ್ಕಿದ್ದು ಈತ ಕಡೂರು ತಾಲ್ಲೂಕಿನ ಹಳೆಸಿದ್ದರಹಳ್ಳಿ( ಎಮ್ಮೆದೊಡ್ಡಿ) ಗ್ರಾಮದ ಸಿದ್ದಪ್ಪ ಅವರ ಕರಣ್.ಎಸ್(22) ಎಂಬ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಮೃತನು ಶ್ರವಣಬೆಳಗೊಳ ಶ್ರೀ ಬಾಹುಬಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಕರಣ್. ಲವ್ failure ನಿಂದ ಆತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಜೊತೆಗೆ ಮುಖದ ಭಾಗಕ್ಕೆ ಗಾಯಗಳಾಗಿದ್ದು ಪೋಲೀಸರು ತನಿಖೆ ನಡೆಸಿ ಸಾವಿಗೆ ನಿಖರ ಕಾರಣವನ್ನು ಪತ್ತೆ ಮಾಡಬೇಕಾಗಿದೆ.
ಇದನ್ನು ಓದಿ: ಕೆ.ಆರ್.ಪೇಟೆ- ತಾಲ್ಲೂಕಿನ ಬೂಕನಕೆರೆ ಹೋಬಳಿ ಮಟ್ಟದ ಪ್ರೌಢಶಾಲಾ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಕೆ.ಆರ್.ಪೇಟೆ ಟೌನ್ ಪೋಲೀಸ್ ಠಾಣಾ ವ್ಯಾಪ್ತಿಯ ಅಘಲಯ- ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಧಾರುಣ ಘಟನೆ. ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಸುಮಾರಾಣಿ ಬೇಟಿ ನೀಡಿ ಮೃತ ದೇಹವನ್ನು ನೀರಿನಿಂದ ಮೇಲೆತ್ತಿ ವೈದ್ಯಕೀಯ ಪರೀಕ್ಷೆಗಾಗಿ ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಪೋಷಕರಿಗೆ ವಿಷಯ ಮುಟ್ಟಿಸಿದ್ದು ಪೋಷಕರು ದೌಡಾಯಿಸಿ ಬಂದಿದ್ದು ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದ ತಮ್ಮ ಪುತ್ರನ ಶವ ನೋಡಿ, ಇಂಜಿನಿಯರ್ ಆಗಲು ಬಂದು ಹೆಣವಾಗಿರುವುದನ್ನು ಕಂಡು ಪೋಷಕರು ಮತ್ತು ಬಂಧುಗಳ ಆಕ್ರಂಧನ ಮುಗಿಲು ಮುಟ್ಟಿದೆ.
– ಶ್ರೀನಿವಾಸ್ ಆರ್.
