ಕೆ.ಆರ್.ಪೇಟೆ: ಪಟ್ಟಣದ ಹೊರಹೊಲಯದ ಮೈಸೂರು-ಕೆ.ಆರ್.ಪೇಟೆ ರಾಜ್ಯ ಹೆದ್ದಾರಿ ಸಾಗರ್ ಕೆಫೆ ಬಳಿಯಿಂದ ಜಮೀನಿಗೆ ಹೋಗುವ ಮಣ್ಣು ರಸ್ತೆಯಲ್ಲಿ ಒಂದು ಅಪರಿಚಿತ ವ್ಯಕ್ತಿಯ ಶವ ದೊರಕಿದೆ. ಶವವನ್ನು ಆದಿ ಚುಂಚನಗಿರಿಯ ಆಸ್ಪತ್ರೆಯ ಶೈತ್ಯ ಶವಾಗಾರದಲ್ಲಿ ಇಡಲಾಗಿದೆ.
ಚಹರೆ: ಎತ್ತರ 5.4 ಅಡಿ, ದೃಢಕಾಯ ಶರೀರ, ಕಪ್ಪು ಬಣ್ಣ, ಕಪ್ಪು ಕೂದುಲು, ಕುರುಚಲು ಗಡ್ಡ ದುಂಡುಮುಖ, ವಯಸ್ಸು ಸುಮಾರು 35 ರಿಂದ 40 ವರ್ಷ, ಆಕಾಶ್ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಂಡು ಬಣ್ಣದ ಉದ್ದ ಗೀರು ಇರುವ ತುಂಬು ತೋಳಿನ ಶರ್ಟ್, ಕತ್ತಿನಲ್ಲಿ ಕೇಸರಿ ಬಣ್ಣದ ಟವಲ್ ಇದ್ದು, ಕಲಿಗೆಬಿಳಿ ಬಣ್ಣದ ರಬ್ಬರ್ ಚಪ್ಪಲಿ ಹಾಕಿರುತ್ತಾರೆ. ಸದರಿ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದರೆ, ಅಂತಹವರು ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಮಾರಾಣಿ ಅವರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9480804833 ಹಾಗೂ ಮುಖ್ಯ ಪೇದೆ ಜಯಕೀರ್ತಿ ದೂರವಾಣಿ ಸಂಖ್ಯೆ 9986403403 ಅನ್ನು ಸಂಪರ್ಕಿಸಲು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.
-ಶ್ರೀನಿವಾಸ್ ಆರ್.
