ಕೆ ಆರ್ ಪೇಟೆ : ಇತ್ತೀಚೆಗೆ ನೆಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಪರೋಕ್ಷವಾಗಿ ಜೆಡಿಎಸ್ ಅಭ್ಯರ್ಥಿಗೆ ಮತದಾನ ಮಾಡಿದ್ದಾರೆ ಎಂದು ಸಾಬೀತಾದ ಹಿನ್ನಲೆಯಲ್ಲಿ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಹಾಗೂ ಮಾಜಿ ಪುರಸಭಾ ನಿರ್ದೇಶಕ ಚಕ್ರಪಾಣಿ ಹಾಗೂ ಪುರಸಭಾ ಸದಸ್ಯ ಕೆಬಿ ಮಹೇಶ್ ರವರನ್ನು ಮುಂದಿನ ಆದೇಶದ ವರೆಗೂ ಅಮಾನತು ಮಾಡಿ ಜಿಲ್ಲಾ ಕಾಂಗ್ರೇಸ್ ಘಟಕದ ಅಧ್ಯಕ್ಷ ಸಿಡಿ ಗಂಗಾಧರ್ ರವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ .

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಕಳೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶೀಳನೆರೆ ಅಂಬರೀಶ್ ಸ್ಪರ್ಧಿಸಿದ್ದರು ಕಾಂಗ್ರೇಸ್ ಬೆಂಬಲಿತ ನಿರ್ದೇಶಕನಾಗಿ ಮತದಾನದ ಹಕ್ಕನ್ನು ಹೊಂದಿದ್ದ ಕೆಟಿ ಚಕ್ರಪಾಣಿ ಮತದಾನದ ದಿನ ಕಾಂಗ್ರೇಸ್ ನಾಯಕರ ಮಾತಿಗೂ ಕ್ಯಾರೆ ಎನ್ನದೆ ಜೆಡಿಎಸ್ ಅಭ್ಯರ್ಥಿ ದರಣೀಶ್ ರವರಿಗೆ ಮತದಾನ ಮಾಡಿರುವುದಾಗಿ ಆರೋಪಿಸಿದ ಅವರು ಪಕ್ಷದ ಸಿದ್ದಾಂತಕ್ಕೆ ವಿರುದ್ದವಾಗಿ ನೆಡೆದುಕೊಂಡಿದ್ದು ಹಾಗೂ ಜನತಾದಳ ಅಭ್ಯರ್ಥಿಗೆ ಮತ ನೀಡುವಂತೆ ಹಲವರಿಗೆ ಹೇಳಿರುವುದು ವರಿಷ್ಠರ ಗಮನಕ್ಕೆ ಬಂದಿರುವುದರಿಂದ ಕೆ,ಟಿ ಚಕ್ರಪಾಣಿ ಮತ್ತು ಕೆ ಬಿ ಮಹೇಶ್ ರವರನ್ನು ಈ ಕೂಡಲೆ ಮುಂದಿನ ಆದೇಶದವರೆಗೂ ಅಮಾನತು ಮಾಡಿರುವುದಾಗಿ ತಿಳಿಸಿದರು .

ಇದೇ ಸಂದರ್ಭದಲ್ಲಿ ಶಾಸಕರಿಗೆ ಟಾಂಗ್ ನೀಡಿದ ಕೈಮಗ್ಗ ಅಧ್ಯಕ್ಷ ನಾಗೇಂದ್ರಕುಮಾರ್ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಜಯಬೇರಿ ಬಾರಿಸಿದೆ ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯವಾಗಿದೆ ಕಾಂಗ್ರೇಸ್ ಪಕ್ಷವು ಗೆದ್ದಾಗ ಬೀಗುವುದು ಸೋತಾಗ ಕುಗ್ಗುವುದು ಯಾರನ್ನು ಹೀಯಾಳಿಸುವ ಕೆಲಸವನ್ನು ಕಾಂಗ್ರೇಸ್ ಪಕ್ಷ ಮಾಡುವುದಿಲ್ಲ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸೋಲಾಗಿದೆ ಅದನ್ನು ಸ್ವೀಕರಿಸಬೇಕು ಎಂದು ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಐಪನಹಳ್ಳಿ ನಾಗೇಂದ್ರಕುಮಾರ್ ಶಾಸಕ ಹೆಚ್ ಟಿ ಮಂಜುರವರಿಗೆ ಟಾಂಗ್ ನೀಡಿದರು.

ಕಾಂಗ್ರೇಸ್ ಪಕ್ಷದಿಂದ ಅಮಾನತುಗೊಂಡ ಕೆಟಿ ಚಕ್ರಪಾಣಿ,ಮತ್ತು ಕೆಬಿಮಹೇಶ್ ನಿಲುವೇನು ಮಾಜಿ ಇಂದು ಅಮಾನತುಗೊಂಡಿರುವ ಪುರಸಭಾ ಸದಸ್ಯ ಕೆಬಿ ಮಹೇಶ್ ಮತ್ತು ಕೆಟಿ ಚಕ್ರಪಾಣಿ ಅವರ ನಿಲುವು ಏನೆಂದು ತಿಳಿಯಬೇಕಿದೆ ಏಕೆಂದರೆ ಕೆಟಿ ಚಕ್ರಪಾಣಿ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ರವರ ಸಹೋದರಿಯ ಪುತ್ರನಾಗಿದ್ದು ಕೆ ಬಿ ಮಹೇಶ್ ಸ್ವತಃ ಸಹೋದರರಾಗಿದ್ದಾರೆ ಆದುದರಿಂದ ಇನ್ನು ಮುಂದೆ ಕಾಂಗ್ರೇಸ್ ಗೆ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ರವರ ಅಗತ್ಯವಿಲ್ಲವೆನೋ ಎಂಬುದು ಮೇಲ್ನೋಟಕ್ಕೆ ಕಾಣಬಹುದಾಗಿದೆ ಎಂದು ಹೇಳಿದರು.

ಗೋಷ್ಟಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ತಾಲ್ಲೂಕು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಬ್ಬಲಗೆರೆ ಪುಟ್ಟಸ್ವಾಮಿಗೌಡ, ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಕಿಹೆಬ್ಬಾಳು ಟಿ.ಎನ್.ದಿವಾಕರ್ ತಾಲ್ಲೋಕು ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್,ತಾಲ್ಲೋಕು ಕಾಂಗ್ರೆಸ್ ಉಸ್ತುವಾರಿ ಚಿನಕುರಳಿ ರಮೇಶ್,ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಪ್ರಸನ್ನಕುಮಾರ್, ತಾಲ್ಲೂಕು ಕೆಡಿಪಿ ನಿರ್ದೇಶಕರಾದ ಬೂಕನಕೆರೆ ಮಲ್ಲಿಕಾರ್ಜುನ್, ಇಲ್ಯಾಸ್ ಪಾಷ,ಯುವಮುಖಂಡ ಕರೋಟಿ ಸುನೀಲ್,ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
