ಕೆ.ಆರ್.ಪೇಟೆ,ಅ.30: ಶಾಸಕನಾಗಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂಧಿಸುವ ಕೆಲಸ ಮಾಡುತ್ತಿದ್ದೇನೆ. ಆದರೆ ನನ್ನ ನಿರೀಕ್ಷೆಗೆ ತಕ್ಕಂತೆ ತಾಲ್ಲೂಕಿನ ಅಭಿವೃದ್ಧಿಗೆ ಕೆಲಸ ಮಾಡಲು ಸರ್ಕಾರವು ವಿರೋಧ ಪಕ್ಷಗಳ ಶಾಸಕರಿಗೆ ಅಗತ್ಯ ಅನುಧಾನ ನೀಡದೇ ತಾರತಮ್ಯ ಮಾಡುತ್ತಿದೆ.
ಆಡಳಿತ ಪಕ್ಷದ ಶಾಸಕರಿಗೆ ಒಂದು ರೀತಿ ಅನುಧಾನ ಜೊತೆಗೆ ನೂರಾರು ಕೋಟಿ ರೂಗಳ ವಿಶೇಷ ಪ್ಯಾಕೇಜ್ ನೀಡುತ್ತಿದೆ. ಆದರೆ ವಿರೋಧ ಪಕ್ಷಗಳ ಶಾಸಕರಿಗೆ ಕೇವಲ ೨೫ಕೋಟಿ ನೀಡುತ್ತಿದೆ. ಇದು ಕ್ಷೇತ್ರದ 300ಗ್ರಾಮಗಳಿಗೆ ಏನೇನು ಸಾಲದಂತಾಗಿದ್ದು ಇದು “ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ” ಎಂಬ ಗಾದೆಯಂತೆ ಆಗಿದೆ ಎಂದು ಶಾಸಕ ಹೆಚ್.ಟಿ.ಮಂಜು ಬೇಸರ ವ್ಯಕ್ತಪಡಿಸಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬೆಟ್ಟದಹೊಸೂರು ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಹಾಗೂ ಬೂಕನಕೆರೆ ಹೋಬಳಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯದ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಹಿಂದೆ ಆಡಳಿತ ಪಕ್ಷದ ಶಾಸಕರಿಗೂ ಅನುಧಾನ ನೀಡದೇ ಕೇವಲ ಗ್ಯಾರಂಟಿಗೆ ಹಣ ಹೊಂದಿಸಲು ಮುಂದಾಗಿದ್ದ ಸರ್ಕಾರವು ಕಳೆದ ಐದಾರು ತಿಂಗಳಿನಿAದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ತಿಂಗಳಿಗೆ 2000 ರೂ ನಂತೆ ಜಮಾ ಮಾಡದೇ ಬಂದ್ ಮಾಡಿದೆ. ಅದೇ ಹಣವನ್ನು ಆಡಳಿತ ಪಕ್ಷದ ಶಾಸಕರಿಗೆ ಹಂಚುವ ಮೂಲಕ ಸಮಾಧಾನ ಮಾಡುವ ಕೆಲಸದಲ್ಲಿ ನಿರತವಾಗಿದೆ. ವಿರೋಧ ಪಕ್ಷದ ಶಾಸಕರನ್ನು ಕಡೆಗಣಿಸುವ ಮೂಲಕ ಅಭಿವೃದ್ಧಿಗೆ ತೊಂದರೆ ನೀಡುತ್ತಿದೆ. ವಿರೋಧ ಪಕ್ಷಗಳಿಗೆ ಸಂವಿಧಾನ ಬದ್ದವಾಗಿ ನೀಡಬೇಕಾದ ಅನುಧಾನವನ್ನು ನೀಡಿದರೆ ಸಮಾಧಾನಕರವಾಗಿ ಅಭಿವೃದ್ದಿ ಮಾಡಬಹುದು.

ಸಂವಿಧಾನ ಬದ್ದವಾಗಿ ನೀಡಬೇಕಾದ ಅನುಧಾನವನ್ನೂ ಸಹ ನೀಡದೇ ವಿರೋಧ ಪಕ್ಷಗಳ ಶಾಸಕರನ್ನು ಕಡೆಗಣಿಸುತ್ತಿದೆ. ಹಿಂದೆ ನಮ್ಮ ತಾಲ್ಲೂಕಿನಲ್ಲಿ ವಿರೋಧ ಪಕ್ಷದ ಶಾಸಕರಿದ್ದರೂ ಸಹ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದು ಸುಮಾರು 600ಕೋಟಿಗೂ ಹೆಚ್ಚು ಅನುಧಾನವನ್ನು ನೀಡುವ ಮೂಲಕ ವಿರೋಧ ಪಕ್ಷದ ಶಾಸಕರನ್ನೂ ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ಕುಮಾರಣ್ಣ ಸಿಎಂ. ಆಗಿದ್ದಾಗಲು ವಿರೋಧ ಪಕ್ಷಗಳ ಶಾಸಕರನ್ನು ಕಡೆಗಣಿಸಿರಲಿಲ್ಲ.
ಇದನ್ನು ಓದಿ: ಕೆ.ಆರ್.ಪೇಟೆ- ರಾಮಾಯಣ-ಮಹಾಭಾರತ(ಕುರುಕ್ಷೇತ್ರ) ಪೌರಾಣಿಕ ನಾಟಕಗಳು ನಮ್ಮ ಸಂಸ್ಕೃತಿ ಪರಂಪರೆಯ ಪ್ರತಿಬಿಂಬ- ಶಾಸಕ ಹೆಚ್.ಟಿ. ಮಂಜು
ಆಡಳಿತ ಪಕ್ಷಕ್ಕೆ ಎಷ್ಟು ಅನುಧಾನ ನೀಡುತ್ತಾರೋ ಅಷ್ಟೇ ಅನುಧಾನವನ್ನು ವಿರೋಧ ಪಕ್ಷಗಳ ಶಾಸಕರಿಗೂ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸುತ್ತಿದ್ದರು. ಆದರೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5ಗ್ಯಾರಂಟಿ ಯೋಜನೆಗಳಲ್ಲಿಯೇ ಮುಳುಗಿದ್ದಾರೆ. ಗ್ಯಾರಂಟಿ ಯೋಜನೆಗಳಿಗಾಗಿ ಅಗತ್ಯ ವಸ್ತುಗಳ ಬೆಲೆಗಳನ್ನು ಗಗನಕ್ಕೆ ಏರಿಸಿದ್ದಾರೆ.2 ಸಾವಿರ ನೀಡಿ, ಪರೋಕ್ಷವಾಗಿ ಪ್ರತಿ ಕುಟುಂಬದಿಂದ 4 ಸಾವಿರ ವಾಪಸ್ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಸರ್ಕಾರದ ನಡೆಯ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ಅಧ್ಯಕ್ಷ ಬಲದೇವ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಳವೇಗೌಡ, ರೈತ ಮುಖಂಡ ಅಂಗಡಿ ನಾಗರಾಜು, ಬೂಕನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಂಪ್ರಸಾದ್, ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಇಂಜಿನಿಯರ್ ಚೇತನ್, ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ವಿನೋದ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ನವೀನ್, ಬೂಕನಕೆರೆ ಗ್ರಾಮ ಪಂಚಾಯಿತಿ ಪಿಡಿಓ ಶಿವಸ್ವಾಮಿ, ಐಚನಹಳ್ಳಿ ಗ್ರಾ.ಪಂ.ಪಿಡಿಓ ಕಾರ್ತೀಕ್, ಬೂಕನಕೆರೆ ಗ್ರಾ.ಪಂ.ಸದಸ್ಯರಾದ ರಾಜೇಶ್ವರಿ, ಸುನಂದಮ್ಮ, ಎಸ್.ಟಿ.ಭಾಗ್ಯ, ಕಾರ್ಯದರ್ಶಿ ಲೋಕೇಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಕುಮಾರಸ್ವಾಮಿ, ಪ್ರಥಮ ದರ್ಜೆ ಗುತ್ತಿಗೆದಾರ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.

[…] ಇದನ್ನು ಓದಿ: ಕೆ.ಆರ್.ಪೇಟೆ- ವಿರೋಧ ಪಕ್ಷದ ಶಾಸಕರಿಗೆ ಅನುಧ… […]