ಕೆ.ಆರ್.ಪೇಟೆ:ತಾಲೂಕಿನ ಮಾಕವಳ್ಳಿ ಗ್ರಾಮದ ಮುಖಂಡ ದಿ.ಮಂಜೇಗೌಡ ಧರ್ಮಪತ್ನಿ ಸರಸ್ವತಿ(55) ರವರು ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿವಾಸದಲ್ಲೇ ಇಂದು ಬೆಳಿಗ್ಗೆ 9:30ರಲ್ಲಿ ನಿಧನ ಹೊಂದಿದ್ದಾರೆ.
ಮೃತರಿಗೆ ಇಬ್ಬರು ಗಂಡು ಮಕ್ಕಳು,ಒರ್ವೆ ಪುತ್ರಿ ಸೇರಿದಂತೆ ಅಪಾರ ತುಂಬಿದ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು ಶುಕ್ರವಾರ(ಇಂದು) ಮದ್ಯಾಹ್ನ 03ಗಂಟೆಗೆ ಮಾಕವಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರ ನಿಧನಕ್ಕೆ ತಾಲ್ಲೂಕಿನ ವಿವಿಧ ಗಣ್ಯರು ಸಮಾಜ ಸೇವಕರು, ವಿವಿಧ ಕನ್ನಡ ಹಾಗೂ ರೈತಪರ ಸಂಘಟನೆಗಳು,ಸಂತಾಪ ಸೂಚಿಸಿದ್ದಾರೆ.
– ಮನು ಮಾಕವಳ್ಳಿ ಕೆ ಆರ್ ಪೇಟೆ
