ಕೆ.ಆರ್.ಪೇಟೆ,ನ.21: ತಾಲ್ಲೂಕಿನ ತೆಂಡೇಕೆರೆ ಗ್ರಾಮದ ಶ್ರೀ ರಂಬಾಪುರಿ ಬಾಳೆಹೊನ್ನೂರು ಶಾಖಾ ಮಠದಲ್ಲಿ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಕಾರ್ತೀಕ ಅಮಾವಾಸ್ಯೆಯ ಅಂಗವಾಗಿ ದೀಪೋತ್ಸವ, ಅನ್ನದಾನ, ವಿಶೇಷ ಪೂಜಾ ಕಾರ್ಯಕ್ರಮಗಳು, ಕ್ಷೇತ್ರ ರಕ್ಷಕ ಶ್ರೀ ವೀರಭದ್ರಸ್ವಾಮೀಯ ಪಲ್ಲಕ್ಕಿ ಉತ್ಸವವು ಸಡಗರ ಸಂಭ್ರಮದಿಂದ ನಡೆದವು.

ದೀಪೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಭಕ್ತರಿಗೆ ಆಶೀರ್ವದಿಸಿ ಮಾತನಾಡಿ ಕಾರ್ತಿಕ ಮಾಸದ ಅಮಾವಾಸ್ಯೆಯ ಕತ್ತಲಿನಲ್ಲಿ ಹಚ್ಚುವ ದೀಪಗಳಿಂದ ಬೆಳಕು ಪ್ರಜ್ವಲಿಸುವಂತೆ ನಿಮ್ಮ ಬದುಕಿನಲ್ಲೂ ಬೆಳಕಾಗಲಿ. ಜೀವನ ಸುಖಮಯವಾಗಿರಲಿ.ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಮಠಗಳ ಮತ್ತು ಭಕ್ತರ ನಡುವೆ ಅವಿನಾಭಾವ ಸಂಬಂಧವಿದೆ. ಮಠವಿಲ್ಲದೆ ಭಕ್ತರಿಲ್ಲ ಭಕ್ತರಿಲ್ಲದೆ ಮಠವಿಲ್ಲ ದೇವರು ಪೂಜೆ ಪುನಸ್ಕಾರಗಳಲ್ಲಿ ಹಲವು ವರ್ಷಗಳಿಂದಲೂ ಭಕ್ತರು ಮುಂದೆ ನಿಂತು ಧಾರ್ಮಿಕ ಆಚರಣೆಗಳು, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಕೊಡುತ್ತಾರೆ. ಹಿಂದೂಗಳಿಗೆ ಕಾರ್ತಿಕ ಮಾಸ ಬಹಳ ಮಹತ್ವದ್ದು ಕಾರ್ತಿಕ ಮಾಸದ ಆಚರಣೆ, ಪೂಜೆಗೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲೂ ಈ ಮಾಸದಲ್ಲಿ ಆಚರಿಸುವ ಕಾರ್ತಿಕ ಅಮಾವಾಸ್ಯೆ ದೀಪೋತ್ಸವ ಬಹಳ ಪವಿತ್ರವಾಗಿ ಆಚರಿಸಲಾಗುತ್ತದೆ. ದೇಶದ ನಾನಾ ಭಾಗಗಳಲ್ಲಿ ದೀಪೋತ್ಸವವನ್ನು ವಿಭಿನ್ನ ಹೆಸರುಗಳಿಂದ ಆಚರಿಸಲಾಗುತ್ತದೆ ಎಂದು ಶ್ರೀಗಳು ತಿಳಿಸಿದರು.

ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳು ದೀಪೋತ್ಸವ, ಪೂಜಾ ಮಹೋತ್ಸವ ಹಾಗೂ ಅನ್ನದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೀಪೋತ್ಸವದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸುಜೇಂದ್ರಕುಮಾರ್, ಮುಖಂಡರಾದ ಚಂದ್ರಪ್ರಕಾಶ್, ಪ್ರಥಮ ದರ್ಜೆ ಗುತ್ತಿಗೆದಾರರಾದ ಮನು-ಶರತ್, ನಾಗರತ್ನಮ್ಮ ಗಂಗಾಧರ್, ಸುವರ್ಣ, ಕಾಂತರಾಜು, ಯಜಮಾನ್ ಮೀಸೆ ನಂಜಪ್ಪ, ಶೈಲಶ್ರೀಬಸವರಾಜು, ರೇಖಾಮಂಜುನಾಥ್, ರಾಜಮ್ಮ, ರೇಖಾ ಮಂಜುನಾಥ್, ಆಲಹಳ್ಳಿ ಎ.ಎನ್.ಮಹಾದೇವಪ್ಪ, ಕೆ.ಬಿ.ರೂಪದರ್ಶಿನಿ ಸೇರಿದಂತೆ, ಅಂಚನಹಳ್ಳಿ, ತೆಂಡೇಕೆರೆ ಗ್ರಾಮದ ಸಾವಿರಾರು ಮಂದಿ ಭಕ್ತಾಧಿಗಳು ಭಾಗವಹಸಿ ದೇವರ ಕೃಫೆಗೆ ಪಾತ್ರರಾದರು.

ಗವಿಮಠ ಶ್ರೀ ಕ್ಷೇತ್ರದಲ್ಲಿಯೂ ದೀಪೋತ್ಸವ: ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಅಮಾವಾಸ್ಯೆ ಪ್ರಯುಕ್ತ ಲಕ್ಷ ದೀಪೋತ್ಸವ ಮಠದ ಪೀಠಾಧ್ಯಕ್ಷರಾದ ಚನ್ನವೀರ ಮಹಾಸ್ವಾಮಿಗಳ ದಿವ್ಯ ನೇತೃತ್ವ ಸಡಗರ ಸಂಭ್ರಮದಿAದ ಸಾವಿರಾರು ಭಕ್ತ ಸಾಗರದಲ್ಲಿ ಯಶಸ್ವಿಯಾಗಿ ಜರಗಿತು.

ಈ ಸಂದರ್ಭದಲ್ಲಿ ಶಾಸಕ ಹೆಚ್.ಟಿ.ಮಂಜು, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ರಾಜಸ್ವ ನಿರೀಕ್ಷಿಕಿ ಚಂದ್ರಕಲಾ, ವಿಠಲಾಪುರ ಗ್ರಾ.ಪಂ ಅಧ್ಯಕ್ಷ ಕುಮಾರ್, ಹಿರಿಯ ಮುಖಂಡ ತೊಟ್ಟಪ್ಪಶೆಟ್ಟಿ, ವಿ.ಡಿ.ಮೋಹನ್, ನಾಟನಹಳ್ಳಿ ಮುರುಳಿ, ನಾಗೇಶ್, ಪಟೇಲ್ ಶಂಕರ್, ಎಲ್.ಐ.ಸಿ ಶಿವಪ್ಪ, ವಿಜಯಕುಮಾರ್, ನಂದಿ ಮೆಡಿಕಲ್ ಪುನೀತ್, ಪ್ರಧಾನ ಅರ್ಚಕ ಹೇಮಂತ್, ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಪಾಲ್ಗೊಂಡಿದ್ದರು.
– ಶ್ರೀನಿವಾಸ್ ಆರ್.
