
ನಾ ಓದಿದ ಪುಸ್ತಕ
ಲೇಖಕರಾದ ಜಗದೀಶಶರ್ಮ ಸಂಪ ರವರ ಕುಂತಿ- ಪಾಂಡು ಕೃತಿಯು ,ಕಥೆಗಳ ಕಥೆಯಾಗಿರುವ ಮಹಾಭಾರತದ ಕಥೆಯನ್ನು ಕೇವಲ 132 ಪುಟಗಳಲ್ಲಿ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.
ಅದರಲ್ಲೂ ಕುಂತಿ ಮತ್ತು ಪಾಂಡುವಿನ ಜೀವನ ಚಿತ್ರವನ್ನು ಮುಖ್ಯವಾಗಿ ಚಿತ್ರಿಸಿದ್ದಾರೆ.
ಕುಂತಿಯು ಮಹಾಭಾರತದ ಮಹಾನಾಯಕಿ, ಅವಳು ಸುಖ-ದುಃಖಕ್ಕಿಂತ ನೋವನ್ನೇ ಸಹಿಸಿದ್ದೇ ಹೆಚ್ಚು, ಹುಟ್ಟಿನಿಂದಲೂ ಅವಳ ಜೀವನ ಒಂದು ತಪಸ್ಸಿನಂತೆ ಕೂಡಿತ್ತು , ಋಷಿ ದುರ್ವಾಸರ ಸೇವೆ , ನಂತರ ಅವರಿಂದ ಪಡೆದ ವರದ ಫಲಾಪೇಕ್ಷೆ ಬಯಸಿ ಮೊದಲ ಮಂತ್ರದ ಪಠಣ , ಅದರಿಂದ ಆದ ಕರ್ಣನ ಜನನ , ನಂತರವೂ ಕನ್ಯೆಯಾಗಿ ಉಳಿದಿದ್ದು, ಪಾಂಡುವಿನೊಂದಿಗೆ ಮದುವೆ ಮತ್ತು ಮುಂದಿನ ವನವಾಸ , ಗಂಡನ ಅಂತ್ಯ , ಅರಗಿನ ಮನೆಯ ಕ್ರೂರ ಕೃತ್ಯ, ದ್ರೌಪದಿಯನ್ನು ಐವರಿಗೂ ಹಚ್ಚಿದ್ದು , ದ್ರೌಪದಿಯ ವಸ್ತ್ರಾಭರಣ ನಂತರ ಮಕ್ಕಳ 12 ವರ್ಷದ ವನವಾಸದ ಜೀವನ , ತನ್ನ ಹಿರಿಯ ಮಗ ಕರ್ಣನು ಉಳಿದ ಐವರ ವಿರುದ್ಧ ಯುದ್ಧದಲ್ಲಿ ಸೆಟದು ನಿಂತದ್ದು , ಹೀಗೆ ಅವಳು ಮಹಾಭಾರತದ ಮಹಾ ನಾಯಕಿಯಾಗಿ ಎಲ್ಲಾ ಸನ್ನಿವೇಶಗಳಲ್ಲೂ ಮುಖ್ಯ ಪಾತ್ರವಾಗಿ ನಿಂತಿರುವುದನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ ಲೇಖಕರು.
ಇನ್ನು ಪಾಂಡುವಿನ ಚಿತ್ರಣವನ್ನು ಸಹ ಸಂಕ್ಷಿಪ್ತವಾಗಿ ನಮ್ಮ ಮುಂದಿಟ್ಟಿದ್ದಾರೆ.
ಪಾಂಡು ಮತ್ತು ಕುಂತಿಯ ಜೀವನವನ್ನು ಕೆಲವೇ ಕೆಲವು ಪುಟಗಳಲ್ಲಿ ಅವರ ವ್ಯಕ್ತಿತ್ವವನ್ನು ಅರಿಯುವಂತೆ ಸಂಕ್ಷಿಪ್ತವಾಗಿ ನಮಗೆ ಈ ಕೃತಿಯ ಮೂಲಕ ತಿಳಿಸಿಕೊಟ್ಟಿದ್ದಾರೆ , ಆದರೆ ಮೂಲ ಕೃತಿಯನ್ನು ಅಥವಾ ಮಹಾಭಾರತದ ಕಥೆಯನ್ನು ಕೇಳದೆ ಈ ಕೃತಿಯನ್ನು ಓದಿದರೆ ಕೇವಲ ಪಾತ್ರ ಮತ್ತು ಸನ್ನಿವೇಶಗಳನ್ನು ತಿಳಿಯಬಹುದೇ ಹೊರತು ಆಳವನ್ನು ತಿಳಿಯಲಾಗದು.
— ಇಂತಿ ನಿಮ್ಮ ಪ್ರೀತಿಯ ಅಪರಿಚಿತ ಮೌನಿ