ಕೆ.ಆರ್.ಪೇಟೆ: ತಾಲ್ಲೂಕಿನ ಕೇಂದ್ರ ಬಿಂದು ತಾಲ್ಲೂಕು ಪಂಚಾಯತಿ ಕಚೇರಿಯು 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯ ಸಂದರ್ಭದಲ್ಲೂ ದೀಪಾ ಅಲಂಕಾರ (ಲೈಟಿಂಗ್ಸ್ ) ಇಲ್ಲದೇ ಕಟ್ಟಡ ಇರುವುದು ದೇಶ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇಡೀ ನಮ್ಮ ದೇಶವು 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ತಾಲ್ಲೂಕಿನ ಎಲ್ಲಾ ಪಂಚಾಯತಿ, ಪ್ರತಿಯೊಂದು ಕೇಂದ್ರ ಬಿಂದು ತಾಲ್ಲೂಕು ಪಂಚಾಯತಿ ಕಚೇರಿಯಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಸಡಗರ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಒಂದು ವೇಳೆ ಸರ್ಕಾರದ ರೂಲ್ಸ್ ಇಲ್ಲದಿದ್ದರೂ ನಮ್ಮ ದೇಶ,ನಮ್ಮ ರಾಜ್ಯ, ನಮ್ಮ ಜಿಲ್ಲೆ, ನಮ್ಮ ತಾಲ್ಲೂಕು, ನಮ್ಮ ಹೋಬಳಿ, ನಮ್ಮ ಇಲಾಖೆ,ನಮ್ಮ ವೃತ್ತಿ,ನಮ್ಮ ಕಚೇರಿ ಎಂದು ಸರ್ಕಾರಿ ಇಲಾಖೆಯ ಸೇವೆ ಸಲ್ಲಿಸುವ ಅಧಿಕಾರಿಗಳಲ್ಲಿ ನಮ್ಮದು ಎಂಬ ಭಾವನೆ ಬರಬೇಕು ಎಂದು ಮನಸ್ಸಿನಲ್ಲಿ ಅಂದು ಕೊಂಡಾಗ ಮಾತ್ರ ನಮ್ಮ ದೇಶದ ಬಗ್ಗೆ ಗೌರವ,ಹೆಮ್ಮೆ ಎಂಬ ಭಾವನೆ ಬರಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
