ಲಕ್ಷದ್ವೀಪವು ದೇಶದ ಮಟ್ಟಿಗೆ ಮಹತ್ವದ ಮೈಲುಗಲ್ಲು ನಿರ್ಮಿಸಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (SIR) ಸಂಬಂಧಿತ ಎಲ್ಲಾ ಗಣತಿ ನಮೂನೆಗಳನ್ನು ಶೇ.100ರಷ್ಟು ಡಿಜಿಟಲೀಕರಿಸಿದ ಭಾರತದ ಮೊದಲ ಕೇಂದ್ರಾಡಳಿತ ಪ್ರದೇಶ ಎಂಬ ಗೌರವಕ್ಕೆ ಪಾತ್ರವಾಗಿದೆ.
ಮತದಾರರ ವಿವರಗಳ ಸುಲಭ ಲಭ್ಯತೆ, ಪಾರದರ್ಶಕತೆ ಹಾಗೂ ವ್ಯವಸ್ಥೆಯ ಶುದ್ದೀಕರಣಕ್ಕೆ ಇದು ಮಹತ್ವದ ಹೆಜ್ಜೆಯೆಂದು ಚುನಾವಣಾ ಆಯೋಗ ತಿಳಿಸಿದೆ. ಡಿಜಿಟಲೀಕರಣ ಪೂರ್ಣಗೊಂಡಿರುವುದರಿಂದ ಭವಿಷ್ಯದಲ್ಲಿ ಮತದಾರರ ಪಟ್ಟಿಯ ತಿದ್ದುಪಡಿ, ಪರಿಶೀಲನೆ ಮತ್ತು ನವೀಕರಣ ಕಾರ್ಯಗಳು ಇನ್ನಷ್ಟು ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಯಲಿವೆ.
ಲಕ್ಷದ್ವೀಪ ಆಡಳಿತದ ಸಮನ್ವಯ ಮತ್ತು ಅಧಿಕಾರಿಗಳ ಸಮರ್ಪಿತ ಪ್ರಯತ್ನದಿಂದ ಈ ಸಾಧನೆ ಸಾಧ್ಯವಾಗಿದ್ದು, ಇತರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾದರಿಯಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಶ್ಲಾಘನೆ ವ್ಯಕ್ತಪಡಿಸಿದೆ.
