ಇಂದು ನಮ್ಮ ಜೀವನದ ಕೌಶಲ್ಯಾ ವೃದ್ಧಿಗೆ ಭಾಷೆ ಅತ್ಯಮೂಲ್ಯ. ಭಾಷೆ ಸಂವಾದಾತ್ಮಕ ಗುಣ ಹೊಂದಿರುತ್ತದೆ. ಭಾಷೆಯ ಉಗಮ ಅಥವಾ ಎಲ್ಲಿಂದ ಬಂದಿದೆ ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ಲಿಪಿ ಮತ್ತು ಭಾಷೆ ಸಾವಿರಾರು ವರ್ಷಗಳಿಂದ ಬಂದಿರುವಂತಾ ಕ್ರಿಯೆ. ಹಿಂದಿನ ಭಾಷೆ ತನ್ನ ಗತಿಯನ್ನು ಉಳಿಸಿಕೊಂಡಿದ್ದೀಯೇ ಎನ್ನುವುದರ ಬಗ್ಗೆ ಮಾಹಿತಿ ನನಗೆ ತಿಳಿದಿಲ್ಲ. ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಭಾಷೆಯೂ ಕೂಡ ಬದಲಾವಣೆ ಕಂಡಿರಬಹುದು. ನಾನು ಭಾಷಾ ಪ್ರವೀಣ, ಜ್ಞಾನಿ ಅಥವ ಪಂಡಿತನಲ್ಲ. ಈ ನನ್ನ ಲೇಖನದ ಉದ್ದೇಶ ಭಾಷೆ ಎಂಬುದು ವೈಜ್ಞಾನಿಕವಾಗಿ ಹೇಗೆ ರೂಪ ಕಂಡಿತೆನ್ನುವುದರ ಬಗ್ಗೆ.
ಒಮ್ಮೆ ಯೋಚಿಸಿ ನಮ್ಮ ಭಾಷೆಯು ಹೇಗೆ ಜನ್ಮ ಜನ್ಮಾಂತರಗಳಿಂದ ಯಾವ ಯಾವ ಉಪಕರಣೆಗಳಿಂದ ಬಡಿದು ಅಂಕು ಡೊಂಕುಗಳನ್ನು ತೆಗೆದು ನೆಟ್ಟಗೆ ಮಾಡಿರಬಹುದು ಎಂದು. ಇದರ ಗೌರವ ಯಾವ ಕುಶಲ ಕರ್ಮಿಗೆ ನೀಡಬೇಕು? ಭಾಷೆ ನಮ್ಮ ಆಸ್ತಿ ಅಲ್ಲ. ನಮ್ಮ ಪೂರ್ವಜರ ಆಸ್ತಿ. ನಾವು ಈ ಭಾಷೆಯನ್ನು ಹಿಡಿದು ನಮ್ಮ ದೇಶವನ್ನೇ ವಿಭಜಸಿದ್ದೇವೆ. ಈ 21 ನೇ ಶತಮಾನದಲ್ಲೂ ಈ ಭಾಷಾ ಕಾವು ಮುಗಿದಿಲ್ಲ. ಭಾಷೆಯು ಕೆಲವರಿಗೆ ಗರ್ವ ಮತ್ತು ಪ್ರತಿಷ್ಠೆ ಆಗಿದೆ. ಗೆಲವು ಯಾರಿಗೆ? ಭಾಷೆಯ ಆವಿಷ್ಕಾರ ಧಾತರಿಗೆ ಗೆಲವು, ನಮಗೆ ಸೊಲು ಅಲ್ಲವೇ.
ಈಗಂತೂ ಭಾಷೆಯ ಬಗ್ಗೆ ಕೆಲವರ ಹತ್ತಿರ ಮಾತನಾಡಿದರೆ ತಮ್ಮ ಆಸ್ತಿಯಂತೆ ವರ್ತಿಸುತ್ತಾರೆ. ಹಾಗಾಗಿಯೇ ಭಾಷೆ ದ್ವೇಷವನ್ನು ಹೆಚ್ಚಿಸಿ ಅಗಲವಾದ ಕಂದಕಗಳನ್ನು ಸೃಷ್ಟಿ ಮಾಡಿದೆ. ಭಾಷೆಯ ಮೂಲ ಉದ್ದೇಶ ಒಂದು ಗೂಡಿಸಿವುದು. ಭಾಷೆಗೆ ತಾನು ದೊಡ್ಡವನು, ನೀನು ಚಿಕ್ಕವನು ಇಲ್ಲ. ಕೆಲವು ಭಾಷೆ ಕಲಿಯಲು ಕಷ್ಟ ಇರಬಹುದು ಆದರೇ ದ್ವೇಷ ಸಲ್ಲ. ಇಲ್ಲಿ ನನ್ನದೇ ಆದ ಒಂದ ವಿಷಯವನ್ನು ಮಂಡಿಸುವ ಪ್ರಯತ್ನ ಮಾಡುವೆ.
ಹಿಂದೆ ಜರ್ಮನಿ ದೇಶ ಒಂದಾಗುವ ಮುನ್ನ ಈಸ್ಟ್ ಮತ್ತು ವೆಸ್ಟ್ ಜರ್ಮನಿಗಳೆಂದು ವಿಭಜನೆ ಆಗಿತ್ತು. ಈಸ್ಟ್ ಜರ್ಮನಿಯು ಕಮ್ಯುನಿಸ್ಟರ ಕಪಿ ಮುಷ್ಟಿಯ ಆಳ್ವಿಕೆಯಲ್ಲಿ ಇತ್ತು. ಈಗಿನ ಚೀನಾ ಇರುವ ಹಾಗೆ. ಆ ದೇಶದ ಒಳಗೆ ಏನು ನಡೆಯುತ್ತಿದೆ ಎಂಬುದರ ಮಾಹಿತಿ ಪ್ರಪಂಚಾದ್ಯಂತ ಲಭ್ಯವಿರಲಿಲ್ಲ. ಆದರೆ ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ಈಸ್ಟ್ ಜರ್ಮನಿಯು ಚಿನ್ನದ ಪದಕಗಳನ್ನು ಬಾಚಿ ಕೊಳ್ಳುತ್ತಿತ್ತು. ಇಷ್ಟು ಚಿಕ್ಕ ದೇಶ ಹೇಗೆ ಚಿನ್ನದ ಪದಕಗಳನ್ನು ಕೊಳ್ಳೆ ಹೊಡೆಯುತ್ತಿದ್ದರೆಂಬುದನ್ನು ಪ್ರಪಂಚದ ಕ್ರೀಡಾಪಟುಗಳು ವಿಸ್ಮಿತರಾಗಿ ಕಾಣುತ್ತಿದ್ದರು. ಆ ಆಟಗಾರರ ತರಬೇತಿ ತರೆಮರೆಯಲ್ಲಿ ನಡೆಯುತ್ತಿತ್ತು. ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿಲಿಲ್ಲ. ಅಂದಿನ ಸಾರ್ವಭೌಮಿ ನರಹಂತಕ ಹಿಟ್ಲರ್ ನ ಆಸೆ “ಸೂಪರ್ ರೇಸ್” ಸೃಷ್ಟಿಯನ್ನು ಮಾಡುವುದಾಗಿತ್ತು. ಕೆಲವಾರು ಸೀಕ್ರೆಟ್ ಕ್ಲಾಸಿಫೈಡ್ ಫೈಲ್ಸಗಳನ್ನು ಪರಿಶೀಲಿಸಿದಾಗ ಅಲ್ಲಿಯ ಕಮ್ಯುನಿಸ್ಟರು ಎಲ್ಲಾ ಮೊದಲ ಗರ್ಭಗಳನ್ನು ಕಡ್ಡಾಯ ಗರ್ಭಪಾತ ಮಾಡಿಸಬೇಕಂಬ ಆದೇಶವನ್ನು ಹೊರಡಿಸಿದ್ದರಂತೆ, ಪಾಲಿಸಿದೆ ಇರುವವರಿಗೆ ಶಿಕ್ಷೆ ಕಾಯಂ ಕೊಡುತ್ತಿದ್ದರಂತೆ.
ಈ ಕಠಿಣ ಆದೇಶಗಳ ಹಿಂದೆ ಏನಿರಬಹುದು? ಕಾರಣ ಹುಡುಕುವ ಸಾಹಸ ಮಾಡ ಬೇಕೆನ್ನೆಸಿತ್ತು. ಕಾಕತಾಳಿಯ ಎಂಬಂತೆ ನನ್ನ ಲಕ್ಷ್ಯ ನಾನು ನನ್ನ ಚಿಕಿತ್ಸಾಲಯದಲ್ಲಿ ನೋಡುತ್ತಿದ್ದ ಕಲಿಕೆಯ ನ್ಯೂನತೆಯ ಕಡೆ ಹೋಯಿತು. ಈ ನ್ಯೂನತೆಯನ್ನು “ಕಾಗ್ನಿಟವ್ ಡಿಸ್ ಎಬಿಲಿಟಿ ಸಿಂಡ್ರೋಮ್ (Cognitive Disability Syndrome)” ಎಂದು ಕರೆಯಲಾಗುತ್ತದೆ. ಒಂದು ಮಾತಿದೆ, ಎರಡನೇ ಮಗು ಮೊದಲನೆಯ ಮಗುವಿಗಿಂತ ಚೂಟಿ ಎಂದು. ಕೆಲವು ಮನೆಗಳಲ್ಲಿ ಪೋಷಕರು “ದಡ್ಡ, ನಿನ್ನ ತಮ್ಮನನ್ನು ನೋಡಿ ಕಲಿ” ಎಂಬುದಾಗಿ ಹೇಳಿ ದೊಡ್ಡವನನ್ನು ಹೋಲಿಕೆ ಮಾಡಿ ಹಿಯ್ಯಾಳಿಸುತ್ತಾರೆ. ಇದರಿಂದ ಮೊದಲನೇ ಮಗುವಿಗೆ “ಸಿಬ್ ರೈವಲ್ರಿ (Sib Rivalry)” ಎನ್ನುವ ಮಾನಸಿಕ ಸಮಸ್ಯೆ ಉಂಟಾಗಬಹುದು. ನಾನು ಹಿಸ್ಟರಿ ತೆಗದುಳ್ಳುವಾಗ ಈ ಮಾನಸಿಕ ವೈಫಲ್ಯವನ್ನು ಮೊದಲನೇ ಮಕ್ಕಳಲ್ಲಿ ಹೆಚ್ಚು ಕಾಣುತ್ತಿದ್ದೆ. ಈ ಮನೋ ವೈಫಲ್ಯವನ್ನು “ಡಿಸ್ ಲೆಕ್ಸಿಯಾ (Dyslexia)” ಎಂದು ಕರೆಯುತ್ತಾರೆ. ಇದರಲ್ಲಿ ಮೂರು ವಿಧ. “ಎ ಗ್ರಾಫಿಯಾ (Agraphia)”, ಇದರಲ್ಲಿ ಬರೆಯುವಾಗ ನ್ಯೂನತೆ ಕಾಣುತ್ತದೆ. “ಎ ಕ್ಯಾಲಿಕುಲಿಯಾ (Acalculia)”, ಇದರಲ್ಲಿ ಲೆಕ್ಕದ ನ್ಯೂನತೆ ಎದ್ದು ಕಾಣುತ್ತೆ. “ಎ ಫೇಸಿಯಾ Aphasia)” ಇದರಲ್ಲಿ ಮಾತನಾಡುವಾಗ ಎಡವಬಹುದು. ಈ ನ್ಯೂನತೆಗಳಿಂದ ಮಕ್ಕಳ ಕಲಿಕೆಯಲ್ಲಿ ಸಮಸ್ಯೆಗಳು ಉಂಟಾಗಬಹುದು. ಹಲವು ಶಿಕ್ಷಕರು ಇವರಿಗೆ “ದಡ್ಡ” ಅಥವಾ “ಮೂರ್ಖ” ಎಂದು ಹಣೆ ಪಟ್ಟಿ ಕಟ್ಟಿಬಿಡುತ್ತಾರೆ. ನಿಜ ಹೇಳಬೇಕೆಂದರೆ ಇವರು ದಡ್ಡರಲ್ಲ. ಓದುಗರು “ತಾರೇ ಜಮೀನ್ ಪರ್” ಹಿಂದಿ ಸಿನಿಮಾ ನೋಡಿರಬಹುದು. ಈ ಚಿತ್ರದಲ್ಲಿ ಬರುವ ಹುಡುಗ ಇಂತಹ ಮಾನಸಿಕ ನ್ಯೂನತೆಯಿಂದ ಬಳಲುತ್ತಿರುತ್ತಾನೆ. ಇದುವರಿಗೂ ಈ ಸಮಸ್ಯೆಗೆ ಔಷದಿ ತಯಾರಿಸಿಲ್ಲ. ಅನುಕಂಪ, ಸಹಾನುಭೂತಿ ಮತ್ತು ಆತ್ಮ ಸಮಾಲೋಚನೆಗಳೇ ಮದ್ದು.
ಈ ಸಮಸ್ಯೆಯ ಕಾರಣವನ್ನು ಅವಲೋಕನ ಮಾಡಿದಾಗ ಮೊದಲನೇ ಗರ್ಭದಲ್ಲಿ ಗರ್ಭ ಚೀಲ ( Uterus) ಅಪಕ್ವತೆಯಿಂದ ಕೂಡಿದ್ದು, ಮೆದುಳು ಮತ್ತು ನರಗಳಿಗೆ ಬೇಕಾಗಿರುವ “ಬಿ ಕಾಂಪ್ಲೆಕ್ಸ್” ವಿಟಮಿನ್ ಗರ್ಭಾವಸ್ಥೆಯಲ್ಲಿರುವ ಮಗುವಿಗೆ ಕಮ್ಮಿ ರವಾನಿಸಿ ಮೆದುಳಿನ ನ್ಯೂನತೆ ಬರಬಹುದು ಎಂದು ಕೆಲವು ಮೆಡಿಕಲ್ ಜರ್ನಲ್ಗಳಲ್ಲಿ ದಾಖಲಾಗಿವೆ. ಇಂದು ಇಂತಹ ಸಮಸ್ಯೆಗಳು ಕಾಣುತ್ತಿಲ್ಲ. ಕಾರಣ ಗರ್ಭವತಿ ಆದ ತಕ್ಷಣ “ಪಿರಡಾಕ್ಸಿನ್ (Pyridoxine)” B – complex ಮಾತ್ರೆಗಳನ್ನು ವೈದ್ಯರು ನೀಡುತ್ತಾರೆ. ನೂರಾರು ವರ್ಷಗಳ ಹಿಂದೆ ಈ ವ್ಯವಸ್ಥೆ ಇರಲಿಲ್ಲ.
ಮೊದಲು ಹುಟ್ಟಿದ ಗಂಡು ಮಕ್ಕಳಿಗೆ ಮನೆ ಪಾಲಾಗುವ ಸಮಯದಲ್ಲಿ ಎರಡು ಪಾಲು ಕೊಡಿತ್ತಿದ್ದರೆಂಬ ವಿಷಯವನ್ನು ಹಿರಿಯರು ಹೇಳುತ್ತಿದ್ದನು ಕೇಳಿದ್ದೇನೆ. ವ್ಯಾಪಾರ ಮತ್ತು ವ್ಯವಹಾರ ಚಾಣಾಕ್ಷತನಕ್ಕೆ ಲೆಕ್ಕ ಮತ್ತು ಮಾತು ಸರಿ ಇರಬೇಕು.
ಮೊದಲನೆಯ ಮಕ್ಕಳಿಗೆ ಮೇಲೆ ಹೇಳಿದ ಮೆದುಳಿನ ನ್ಯೂನತೆಗಳು ಇರಬಹದು ಎನ್ನುವ ಕಾರಣಕ್ಕೆ ಎರಡು ಪಾಲು ನೀಡುತ್ತಿದ್ದರೋ ಏನೋ. ಲೆಕ್ಕ ಮತ್ತು ಮಾತು ನಮ್ಮ ನರ ವ್ಯೂಹ ರಚನೆಯ ಮೇಲೆ ಅವಲಂಬಿಸಿರುತ್ತದೆ. ಕೆಲವರು ಬರೆಯುವುದರಲ್ಲಿ ಪಾಂಡಿತ್ಯ ಹೊಂದಿರುತ್ತಾರೆ.
ಮತ್ತೊಬ್ಬರು ನಿರ್ಗಳವಾಗಿ ಭಾಷಣ ಮಾಡುತ್ತಾರೆ. ಆದುದರಿಂದ, ಮಾತು ಬರುವುದಿಲ್ಲ ಅಥವ ಬರೆಯುಲು ಬರುವುದಿಲ್ಲ ಎಂದು ಅವಹೇಳನ ಬೇಡ. ಕೆಲವರಂತೂ ನಾವೇ ಭಾಷಾ ಪ್ರವೀಣರು ಎಂದುಕೂಂಡಿರುತ್ತಾರೆ. ಈ ತರಹದ ಬೋಷ್ಟಿಂಗ್ ಅಗತ್ಯವಿಲ್ಲ…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

