ಚಾಮರಾಜನಗರ:-ಸಾಹಿತಿ ಶ್ರೀಧರ್ ಇನ್ನೂ ಹೆಚ್ಚಿನ ಸಾಹಿತ್ಯ ಕೃಷಿ ಮಾಡಲಿ:ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ-ಬಿಗ್ ಚಂಪಕ ಇಂಗ್ಲಿಷ್ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ

ಬೇರೆ ಜಿಲ್ಲೆಯಿಂದ ಬಂದು ಚಾಮರಾಜನಗರದ ಮಣ್ಣಿನ ಸೋಗಡನ್ನ ಅರ್ಥಮಾಡಿಕೊಂಡು, ಇಲ್ಲಿಯ ಜನರ ಭಾಷೆಯ ವೈಭವವನ್ನ ಪ್ರಸ್ತುತ ಪಡಿಸುವುದಕ್ಕೆ ಬಹಳ ಸಮಯ ಬೇಕಾಗುತ್ತದೆ. ಎರಡು ಮಹಾಕಾವ್ಯಗಳನ್ನು ಕೊಟ್ಟಿರುವ ಜಿಲ್ಲೆಯ ಜನರ ಮನದಾಳ ಅರಿತು ಮನಸೋತಿರುವ ಶ್ರೀಧರ್ ಇನ್ನೂ ಹೆಚ್ಚಿನ ಸಾಹಿತ್ಯ ಕೃಷಿ ಮಾಡಲಿ ಎಂದು ಅಪರ ಜಿಲ್ಲಾಧಿಕಾರಿ  ಟಿ. ಜವರೇಗೌಡ ಆಶಿಸಿದರು.