ಭಾರತೀಯ ಷೇರು ಮಾರುಕಟ್ಟೆ ಸದ್ಯದಲ್ಲೇ ದೊಡ್ಡಮಟ್ಟದ ಆರಂಭಿಕ ಸಾರ್ವಜನಿಕ ಹಂಚಿಕೆ (ಐಪಿಒ) ಸ್ವಾಗತಿಸಲಿದೆ. ಎಲ್ಜಿ ಇಲೆಕ್ಟ್ರಾನಿಕ್ ಸಂಸ್ಥೆಗೆ ಐಪಿಒ ಪ್ರವೇಶಿಸಲು ಸೆಕ್ಯೂರಿಟಿ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಹಸಿರು ನಿಶಾನೆ ತೋರಿದೆ.
ಸೌತ್ ಕೋರಿಯಾದ ಎಲ್ಜಿ ಇಲೆಕ್ಟ್ರಾನಿಕ್ಸ್ನ ಅಂಗ ಸಂಸ್ಥೆಯಾದ ಎಲ್ಜಿ ಇಲೆಕ್ಟ್ರಾನಿಕ್ಸ್ ಇಂಡಿಯಾ ಕಳೆದ ಡಿಸೆಂಬರ್ 6, 2024ರಂದು ಸಿಬಿ ಎದುರು ಕರಡು ದಾಖಲೆಗಳನ್ನು ಸಲ್ಲಿಕೆ ಮಾಡಿತ್ತು. ಐಪಿಒ ಪ್ರವೇಶಿಸಲು ಸದ್ಯ ಎಲ್ಲಾ ರೀತಿಯ ಅನುಮತಿ ದೊರೆತಿದ್ದು 10.18 ಕೋಟಿ ಇಕ್ವಿಟಿ ಷೇರುಗಳನ್ನು ಮಾರಾಟಕ್ಕಿಡಲಾಗಿದೆ. ಈ ಎಲ್ಲಾ ಷೇರುಗಳು ಆಫರ್ ಫಾರ್ ಸೇಲ್ ಷೇರುಗಳೇ ಆಗಿದ್ದು ಷೇರುಗಳ ಮುಖಬೆಲೆ 10 ರೂ ನಿರ್ಧರಿಸಲಾಗಿದೆ.
ಸದ್ಯ ಮಾರುಕಟ್ಟೆಗೆ ಯಾವ ದಿನಾಂಕದಂದು ಲಿಸ್ಟ್ ಆಗಲಿದೆ ಎಂಬ ಬಗ್ಗೆ ಘೋಷಣೆಯಾಗಿಲ್ಲ., ಆದರೆ ಸದ್ಯದಲ್ಲೇ ಲಿಸ್ಟ್ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಭಾರತದ ಹೋಂ ಅಪ್ಲೈನ್ಸೆಸ್ ಹಾಗೂ ಗ್ರಾಹಕ ಇಲೆಕ್ಟ್ರಾನಿಕ್ಸ್ ಮಾರುಕಟ್ಟೆಯ ಕಿಂಗ್ ಎನಿಸಿಕೊಂಡಿರುವ ಎಲ್ಜಿ ಇಲೆಕ್ಟ್ರಾನಿಕ್ಸ್ 2024ನೇ ಹಣಕಾಸು ವರ್ಷದಲ್ಲಿ 21,352 ಕೋಟಿ ಆದಾಯವನ್ನು ಘೋಷಿಸಿದೆ. 2023ರಲ್ಲಿ 19,868.24 ಕೋಟಿ ಆದಾಯವಿದ್ದು ತೆರಿಗೆ ನಂತರದ ಲಾಭ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 12.35 ರಷ್ಟು ಏರಿಕೆ ಕಂಡಿದೆ.

ಈ ಐಪಿಒವನ್ನು ಮಾರ್ಗನ್ ಸ್ಟಾನ್ಲಿ, ಜೆ ಪಿ ಮಾರ್ಗನ್ ಇಂಡಿಯಾ, ಎಕ್ಸಿಸ್ ಕ್ಯಾಪಿಟಲ್, ಬೊಫಾ ಸೆಕ್ಯೂರಿಟಿಸ್ ಇಂಡಿಯಾ ಮತ್ತು ಸಿಟಿ ಗ್ರೂಪ್ ಗ್ಲೋಬಲ್ ಮಾರ್ಕೆಟ್ ಇಂಡಿಯಾ ನಿರ್ವಹಿಸುತ್ತಿದ್ದು , ಕೆಫಿನ್ ಟೆಕ್ನಾಲಜಿಸ್ ರೆಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿದೆ.

[…] https://vicharavisthara.com/lg-electronics-to-launch-biggest-ipo-in-the-market-soon-sebi-gives-green… […]