ಮೋಟಾರ್ ಇನ್ಶೂರೆನ್ಸ್ ಅನುಭವ ಹೆಚ್ಚಿಸಲು ‘ಲಿಬರ್ಟಿ ಅಶ್ಯೂರ್’ ಆಡ್-ಆನ್ ಕವರ್ ಬಿಡುಗಡೆ
ಮುಂಬೈ, ಫೆಬ್ರವರಿ 06, 2026: ಗ್ರಾಹಕರ ಮೋಟಾರ್ ಇನ್ಶೂರೆನ್ಸ್ ಅನುಭವವನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ಲಿಬರ್ಟಿ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ‘ಲಿಬರ್ಟಿ ಅಶ್ಯೂರ್’ ಎಂಬ ಹೊಸ ಮೌಲ್ಯ-ಆಧಾರಿತ ಆಡ್-ಆನ್ ಕವರ್ ಅನ್ನು ಬಿಡುಗಡೆ ಮಾಡಿದೆ. ಖಾಸಗಿ ಕಾರು ಮಾಲೀಕರಿಗೆ ಕ್ಲೈಮ್ ಮತ್ತು ಬ್ರೇಕ್ಡೌನ್ ಸಂದರ್ಭಗಳಲ್ಲಿ ತ್ವರಿತ, ವಿಶ್ವಾಸಾರ್ಹ ಹಾಗೂ ಖಚಿತ ಬೆಂಬಲ ಒದಗಿಸುವಂತೆ ಈ ಆಡ್-ಆನ್ ವಿನ್ಯಾಸಗೊಳಿಸಲಾಗಿದೆ.
ಲಿಬರ್ಟಿ ಅಶ್ಯೂರ್ ಮೂಲಕ ಲಿಬರ್ಟಿ ಅಧಿಕೃತ ದುರಸ್ತಿ ಅಂಗಡಿಗಳಲ್ಲಿ ವಾಹನ ದುರಸ್ತಿ ಮಾಡಿಸಿದ ಗ್ರಾಹಕರಿಗೆ ಆದ್ಯತೆಯ ದುರಸ್ತಿ ಮತ್ತು ಡೆಲಿವರಿ ಸೌಲಭ್ಯ ಲಭ್ಯವಿರಲಿದೆ. ಜೊತೆಗೆ ಕಾರ್ಯಕೌಶಲಕ್ಕೆ ಆರು ತಿಂಗಳ ಭರವಸೆ, ಉಚಿತ ಎಂಜಿನ್ ಟ್ಯೂನ್-ಅಪ್, ಉಚಿತ ಹವಾನಿಯಂತ್ರಣ ಪರಿಶೀಲನೆ, ಉಚಿತ ಪಿಕ್-ಅಪ್ ಮತ್ತು ಡ್ರಾಪ್ ಸೇವೆಗಳನ್ನು ಒಳಗೊಂಡಿದೆ. 15,000 ರೂ.ಗಿಂತ ಹೆಚ್ಚಿನ ಅರ್ಹ ಕ್ಲೈಮ್ಗಳಿಗೆ ವ್ಹೀಲ್ ಅಲೈನ್ಮೆಂಟ್ ಮತ್ತು ಬ್ಯಾಲೆನ್ಸ್ ಸೌಲಭ್ಯವೂ ಒದಗಿಸಲಾಗುತ್ತದೆ. ಇದಲ್ಲದೆ, ಕಡ್ಡಾಯ ಕಡಿತಗೊಳಿಸುವಿಕೆಯ ಮನ್ನಾ ನೀಡುವ ಮೂಲಕ ಕ್ಲೈಮ್ ಸಮಯದಲ್ಲಿ ಗ್ರಾಹಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲಿದೆ.
ಈ ಆಡ್-ಆನ್ನಲ್ಲಿ ಆನ್ಸೈಟ್ ರಿಪೇರಿ, ಫ್ಲಾಟ್ ಟೈರ್ ಸಹಾಯ ಹಾಗೂ ಪ್ರಮುಖ ಬ್ರೇಕ್ಡೌನ್ ಸಂದರ್ಭದಲ್ಲಿ ವಾಹನ ಸ್ಥಳಾಂತರದಂತಹ ಅಂತರ್ನಿರ್ಮಿತ ವಾಹನ ಮತ್ತು ರಸ್ತೆಬದಿಯ ಸಹಾಯ ಸೇವೆಗಳೂ ಸೇರಿವೆ. ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ, ಚಾರ್ಜ್ ಖಾಲಿಯಾದ ಸಂದರ್ಭದಲ್ಲಿಯೂ ಸಮೀಪದ ಅಧಿಕೃತ ಚಾರ್ಜಿಂಗ್ ಸ್ಟೇಷನ್ ಅಥವಾ ರಿಪೇರಿ ಕೇಂದ್ರಕ್ಕೆ ವಾಹನವನ್ನು ಸ್ಥಳಾಂತರಿಸುವ ವಿಶೇಷ ಬೆಂಬಲವನ್ನು ಲಿಬರ್ಟಿ ಅಶ್ಯೂರ್ ಒದಗಿಸುತ್ತದೆ.
ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಲಿಬರ್ಟಿ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ನ ಸಿಇಒ ಮತ್ತು ಪೂರ್ಣಾವಧಿ ನಿರ್ದೇಶಕರಾದ ಶ್ರೀ ಪರಾಗ್ ವೇದ್,
“ಇಂದಿನ ದಿನಗಳಲ್ಲಿ ಮೋಟಾರ್ ಇನ್ಶೂರೆನ್ಸ್ ಕೇವಲ ರಕ್ಷಣೆಗೆ ಸೀಮಿತವಾಗದೆ, ಗ್ರಾಹಕರಿಗೆ ಅತ್ಯವಶ್ಯಕ ಸಮಯದಲ್ಲಿ ನೈಜ ಆನ್-ಗ್ರೌಂಡ್ ಬೆಂಬಲ ನೀಡಬೇಕು. ಲಿಬರ್ಟಿ ಅಶ್ಯೂರ್ ಈ ಅಗತ್ಯವನ್ನು ಪ್ರತಿಬಿಂಬಿಸುತ್ತದೆ. ಇದು ಆದ್ಯತೆಯ ಸೇವೆ, ಗುಣಮಟ್ಟದ ಭರವಸೆ ಮತ್ತು ಅರ್ಥಪೂರ್ಣ ಮೌಲ್ಯವರ್ಧಿತ ಸೌಲಭ್ಯಗಳ ಮೂಲಕ ಮಾಲೀಕತ್ವದ ಅನುಭವವನ್ನು ಸರಳಗೊಳಿಸುತ್ತದೆ. ಡೌನ್ಟೈಮ್ ಕಡಿಮೆ ಮಾಡಿ, ರಿಪೇರಿ ಸಂಬಂಧಿತ ಒತ್ತಡವನ್ನು ತಗ್ಗಿಸುವ ಮೂಲಕ ಗ್ರಾಹಕರು ಹೆಚ್ಚಿನ ಮನಶಾಂತಿಯೊಂದಿಗೆ ಬೇಗನೆ ರಸ್ತೆಗೆ ಮರಳಲು ಸಹಾಯ ಮಾಡುತ್ತದೆ,” ಎಂದು ಹೇಳಿದರು.
ಲಿಬರ್ಟಿ ಅಶ್ಯೂರ್, ಲಿಬರ್ಟಿ ಜನರಲ್ ಇನ್ಶೂರೆನ್ಸ್ನ ಖಾಸಗಿ ಕಾರು ಪ್ಯಾಕೇಜ್ ಪಾಲಿಸಿ, ಬಂಡಲ್ಡ್ ಕವರ್, ಸ್ಟ್ಯಾಂಡ್ಅಲೋನ್ ಓನ್ ಡ್ಯಾಮೇಜ್ ಪಾಲಿಸಿ ಹಾಗೂ ದೀರ್ಘಕಾಲಿಕ ಖಾಸಗಿ ಕಾರು ಪಾಲಿಸಿಗಳೊಂದಿಗೆ ಅನ್ವಯವಾಗುವ ಕರಾರುಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಈ ಬಿಡುಗಡೆಯೊಂದಿಗೆ ಲಿಬರ್ಟಿ ಜನರಲ್ ಇನ್ಶೂರೆನ್ಸ್ ಮೋಟಾರ್ ವಿಮಾ ಕ್ಷೇತ್ರದಲ್ಲಿ ನಂಬಿಕೆ, ವಿಶ್ವಾಸಾರ್ಹತೆ ಮತ್ತು ಸೇವಾ ಶ್ರೇಷ್ಠತೆಯನ್ನು ಮತ್ತಷ್ಟು ಬಲಪಡಿಸಿದೆ.
