ಹಾಸನ: ಮಹಾನಗರಪಾಲಿಕೆ ಇಂಜಿನಿಯರ್ ಸತ್ಯನಾರಾಯಣ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸತತ 12 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ್ದಾರೆ.
ತನಿಖೆಯ ವೇಳೆ ಇದುವರೆಗೆ ಸುಮಾರು ₹6 ಕೋಟಿ 82 ಲಕ್ಷ 54 ಸಾವಿರ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಸತ್ಯನಾರಾಯಣ ಅವರ ಆದಾಯಕ್ಕಿಂತ 200.74% ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
🔎 7 ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ತಂಡಕ್ಕೆ ಪತ್ತೆಯಾದವು:
🏠 ಸ್ಥಿರಾಸ್ತಿ
▪️ ₹52 ಲಕ್ಷ ಮೌಲ್ಯದ 7 ನಿವೇಶನ
▪️ ₹5.30 ಕೋಟಿ ಮೌಲ್ಯದ 3 ಮನೆ
▪️ 3 ಎಕರೆ 33 ಗುಂಟೆ ಕೃಷಿ ಜಮೀನು
➡️ ಒಟ್ಟು ₹5.98 ಕೋಟಿ ಮೌಲ್ಯದ ಸ್ಥಿರಾಸ್ತಿ
💰 ಚರಾಸ್ತಿ
▪️ 1 ಕೆಜಿ 36 ಗ್ರಾಂ ಚಿನ್ನ – ₹90.75 ಲಕ್ಷ
▪️ 11 ಕೆಜಿ 208 ಗ್ರಾಂ ಬೆಳ್ಳಿ – ₹18.22 ಲಕ್ಷ
▪️ ₹15 ಲಕ್ಷ ನಗದು
▪️ ₹22 ಲಕ್ಷ ಮೌಲ್ಯದ ಎರಡು ಕಾರು
➡️ ಒಟ್ಟು ₹1.46 ಕೋಟಿ ಮೌಲ್ಯದ ಚರಾಸ್ತಿ
ಇದೇ ವೇಳೆ ಸುಮಾರು ₹25 ಲಕ್ಷ ಮೌಲ್ಯದ ಇತರೆ ಆಸ್ತಿ ಹಾಗೂ ಎರಡು ಲಾಕರ್ಗಳು ಕೂಡ ಪತ್ತೆಯಾಗಿವೆ.
ದಾಳಿ ವೇಳೆ ಇಂಜಿನಿಯರ್ ಸತ್ಯನಾರಾಯಣ ಅವರು ಸುಮಾರು 3.5 ಗಂಟೆಗಳ ಕಾಲ ಮನೆ ಬಾಗಿಲು ತೆರೆಯದೆ ಅಧಿಕಾರಿಗಳನ್ನು ಕಾಯಿಸಿಟ್ಟಿದ್ದರೆಂದು ತಿಳಿದುಬಂದಿದೆ.
ಪ್ರಸ್ತುತ ಹಾಸನದ ರಕ್ಷಣಾಪುರಂನ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಶೋಧ ಕಾರ್ಯ ಮುಂದುವರಿದಿದೆ.

