Oplus_16908288
ಲಾಸ್ ಏಂಜಲೀಸ್ : ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎಸ್ನಲ್ಲೇ ಭಾರೀ ವಿರೋಧ ವ್ಯಕ್ತವಾಗಿದೆ.ವಲಸಿಗರ ಮೇಲೆ ಭದ್ರತಾ ಪಡೆಗಳು ನಡೆಸುತ್ತಿರುವ ಅಮಾನುಷ ದಾಳಿಯನ್ನು ಖಂಡಿಸಿ ನಡೆಸಲಾಗುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ.
ಯುಎಸ್ನ ಭದ್ರತಾ ಪಡೆಗಳು ಅಲ್ಲಿ ನೆಲೆಸಿರುವ ವಲಸಿಗರ ಮನೆಯ ಮೇಲೆ ಏಕಾಏಕಿ ದಾಳಿ ನಡೆಸಿ ಸಾವಿರಾರು ಮಂದಿಯನ್ನು ಬಂಧಿಸಿ ಗಡೀಪಾರು ಮಾಡಲು ಪ್ರಾರಂಭಿಸಿದ್ದರು. ಇದರ ವಿರುದ್ದ ವಲಸಿಗರು ಕಳೆದೆರೆಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಶನಿವಾರ ಪ್ರತಿಭಟನೆಯು ಏಕಾಏಕಿ ಉಗ್ರಸ್ವರೂಪ ತಳೆದಿದ್ದು, ಹಲವು ಪ್ರತಿಭಟನಾಕಾರರು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಲಾಸ್ ಏಂಜಲೀಸ್ ಪೊಲೀಸರಿಗೆ ದಂಗೆಯನ್ನು ಹತ್ತಿಕ್ಕಲು ಕಷ್ಟವಾಗಿದ್ದು, ಹೆಚ್ಚಿನ ಸೇನಾ ನೆರವಿಗೆ ಮನವಿ ಮಾಡಿಕೊಂಡಿದ್ದರು.
ದಂಗೆಯನ್ನು ಹತ್ತಿಕ್ಕಲು ಯುಎಸ್ ನ್ಯಾಷನಲ್ ಗಾರ್ಡ್ಸ್ ನ ಯೋಧರನ್ನು ನಿಯೋಜಿಸಲಾಗಿದ್ದು, ಯಾವ ಕಾರಣಕ್ಕೂ ವಸಲಿಗರ ಮೇಲೆ ದಾಳಿ ನಿಲ್ಲುವುದಿಲ್ಲ. ಯಥಾ ಪ್ರಕಾರ ದಾಳಿ ಮುಂದುವರೆಯಲಿದೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.
