ಮಧುಗಿರಿ:- ತಾಲೂಕಿನ ಕೊಡಗೆನಳ್ಳಿ ಹೋಬಳಿಯ ಮೈದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 1999 ನೇ ಬ್ಯಾಚ್ ನ ಹಳೆಯ ವಿದ್ಯಾರ್ಥಿಗಳು ಸೇರಿ ಗುರುವಂದನಾ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಮಕೃಷ್ಣಯ್ಯ ಟಿ ರವರು ಹಳೆಯ ವಿದ್ಯಾರ್ಥಿಗಳು ನಿಮ್ಮ ನಿಮ್ಮ ವೃತ್ತಿಗಳಲ್ಲಿ ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆಯನ್ನು ಪಾಲಿಸಬೇಕೆಂದು ಹಿತವಚನ ನುಡಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ನರಸಪ್ಪ ರವರು ನಿವೃತ್ತ ಶಿಕ್ಷಕರಾದ ಚಿಕ್ಕ ರಾಮಯ್ಯ ರವರು ಶಿಕ್ಷಕರುಗಳಾದ ದೇವರಾಜುರವರು, ರಾಮಕೃಷ್ಣಯ್ಯ ಟಿ ರವರು, ಪ್ರಭು ರವರು, ನಾಗರಾಜುರವರು ಹಾಗೂ ಶ್ರೀಮತಿ ಚೆನ್ನಮ್ಮ ರವರು ಹಾಗೂ ಆ ಬ್ಯಾಚಿನ ಎಲ್ಲಾ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು .
– ಶ್ರೀನಿವಾಸ್, ಕೊರಟಗೆರೆ.
