ಮಧುಗಿರಿ:- ಇತಿಹಾಸ ಪ್ರಸಿದ್ಧ ಶ್ರೀ ಮೀನ ಗೊಂದಿ ಮಲೇರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಏಪ್ರಿಲ್ 4ರ ಶನಿವಾರ ಮಧ್ಯಾಹ್ನ 1: 30ಕ್ಕೆ ಸ್ವಾತಿ ನಕ್ಷತ್ರದಲ್ಲಿ ಜರುಗಲಿದೆ .
ಮಧುಗಿರಿ ತಾಲೂಕಿನ ಕಸಬಾ ಹೋಬಳಿ ಬಂದ್ರೇಹಳ್ಳಿ ಗ್ರಾಮದ ಹೊಲಬಿನ ತೇರಿನ ಬೀದಿ ಶ್ರೀ ಮೀನಗೊಂದಿ ಮಲೇ ರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವದ ಪ್ರಯುಕ್ತ ಗರುಡೋತ್ಸವ, ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಲು ಕೋರಿದೆ.
ಶ್ರೀ ಮೀನಗೊಂದಿ ಮಲೇ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವದ ಪ್ರಯುಕ್ತ ಏಪ್ರಿಲ್ 2ರಿಂದ ಅಂಕುರಾರ್ಪಣ, ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನಂತರ ಏಪ್ರಿಲ್ 3ರ ಶುಕ್ರವಾರ ಗಜೇಂದ್ರ ಮೋಕ್ಷ ಹಾಗೂ ಕಲ್ಯಾಣೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು ಏಪ್ರಿಲ್ 4ರ ಶನಿವಾರ ಮಧ್ಯಾನ 1:30ಕ್ಕೆ ಬ್ರಹ್ಮರಥೋತ್ಸವ ಜರಗಲಿದೆ, ಏಪ್ರಿಲ್ 5ರ ಭಾನುವಾರ ಸ್ವಾಮಿಗೆ ಜಲ ಕ್ರೀಡೆ, ವಾಹನ ಉತ್ಸವ, ಮೃಗಯಾತ್ರೆ, ಗರುಡೋತ್ಸವ ಹಮ್ಮಿಕೊಳ್ಳಲಾಗಿದ್ದು, ಏಪ್ರಿಲ್ 6ರ ಸೋಮವಾರ ಕೊನೆಯ ದಿನ ವಸಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವತಾ ಕಾರ್ಯವನ್ನು ಯಶಸ್ವಿಗೊಳಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
