ಜೀ಼ ಕನ್ನಡ ವಾಹಿನಿಯಲ್ಲಿ ಇದೇ 14 ರಿಂದ ಮಹಾನಟಿ ಸೀಸನ್ 2

2024 ನಲ್ಲಿ ನಡೆದ ಮಹಾನಟಿ ಸೀಸನ್ 1 ಜನಮನ ಗೆದ್ದಿದ್ದು ಆ ಆವೃತ್ತಿಯ ವಿಜೇತೆ ಸ್ಯಾಂಡಲವುಡ್ ನ ಹಿಟ್ ನಿರ್ದೇಶಕ ತರುಣ್ ಸುಧೀರ್ ಅವರ ಚಿತ್ರದಲ್ಲಿ ನಾಯಕನಟಿ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅನೇಕ ಸ್ಪರ್ಧಿಗಳು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬ್ಯುಸಿ ಆಗಿ ಇದ್ದಾರೆ. ಇನ್ನು ಮಹಾನಟಿ ಸೀಸನ್ 2 ನಲ್ಲಿ 18-25 ವಯಸ್ಸಿನ 12 ಪ್ರತಿಭಾವಂತ ಯುವತಿಯರುಭಾಗವಹಿಸಲಿದ್ದಾರೆ.