ಸಹಜೀವನದಲ್ಲಿ ಜನಿಸಿದ ಮಗುವಿಗೂ ಜೀವನಾಂಶ: ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್‌

ಮದುವೆ ಭರವಸೆಯಿಂದ ಸಹಜೀವನ ನಡೆಸಿದ ಬಳಿಕ ಹುಟ್ಟಿದ ಮಗನಿಗೆ ಜೀವನಾಂಶ ಪಾವತಿಸಲು ನಿರಾಕರಿಸಿದ್ದ ತುಮಕೂರು ಜಿಲ್ಲೆಯ ರಮೇಶ್ ಎಂಬುವವರಿಗೆ ಹೈಕೋರ್ಟ್ ಕಠಿಣ ತೀರ್ಪು ನೀಡಿದೆ. DNಎ ಮೂಲಕ ತಂದೆಪಾತ್ರ ಸಾಬೀತಾದ ಹಿನ್ನೆಲೆ, ಮಗನಿಗೆ ಮಾಸಿಕ ರೂ. 3000 ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.