ರಾಮನಾಥಪುರ: ಪಟ್ಟಣದ ದೇವಾಲಯದ ಬೀದಿಯಲ್ಲಿ ಒಬ್ಬರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ Sri Raghavendra Swamy Mutt ಮಠದ ಬಾಗಿಲು ಗುರುವಾರ ಮಧ್ಯಾಹ್ನ 12 ಗಂಟೆಯವರೆಗೆ ತೆರೆಯಲಾಗುವುದಿಲ್ಲ ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.
ಈ ಕುರಿತು ಮಠದ ವ್ಯವಸ್ಥಾಪಕ ಕನಕಾಚಾರ್ಯರು ಮಾಹಿತಿ ನೀಡಿ, ದೇವಾಲಯದ ಬೀದಿಯಲ್ಲಿ ಸಂಭವಿಸಿದ ಈ ದುರ್ಘಟನೆಯ ಹಿನ್ನೆಲೆ ಭಕ್ತರ ದರ್ಶನಕ್ಕೆ ತಾತ್ಕಾಲಿಕವಾಗಿ ಮಠದ ಬಾಗಿಲು ಮುಚ್ಚಲಾಗಿದ್ದು, ಮಧ್ಯಾಹ್ನ 12 ಗಂಟೆಯ ನಂತರ ಮಾತ್ರ ತೆರೆಯಲಾಗುವುದು ಎಂದು ತಿಳಿಸಿದ್ದಾರೆ.
ಹೀಗಾಗಿ ಮಠದ ಅಭಿಮಾನಿಗಳು ಹಾಗೂ ಭಕ್ತರು ಸಹಕಾರ ನೀಡುವಂತೆ ಅವರು ವಿನಂತಿಸಿದ್ದಾರೆ.
ವರದಿ- ಕುಮಾರಸ್ವಾಮಿ
