Version 1.0.0
ಮನಸು ಮೃದಂಗ
(ಲೇಖನಗಳ ಸಂಕಲನ)
ಮೇರಾ ಭಾರತ್ ಮಹಾನ್
ಸ್ನೇಹಿತನ ಮಗಳ ಮದುವೆ ನಿಮಿತ್ತ ಅವನ ನೆಂಟರೊಬ್ಬರು ಕುಟುಂಬ ಸಮೇತ ಅಮೇರಿಕಾದಿಂದ ಭಾರತಕ್ಕೆ ಆಗಿಮಿಸಿದ್ದರು. ದೊಡ್ಡವಳು ನಾಲ್ಕು ವರ್ಷದವಳು. ಅಮೇರಿಕದಲ್ಲಿ ಮಕ್ಕಳ ಶೋಷಣೆ, ಅಲ್ಲಿಯ ಕಾನೂನಿನ ವ್ಯವಸ್ಥಯಲ್ಲಿ ಶಿಕ್ಷೆ ಅತಿ ಕಠೋರ ಮತ್ತು ಪೋಷಕರು ಆ ದೇಶದ ಶಿಸ್ಥಿಗೆ ಬದ್ದರಾಗಿರಬೇಕು. ಇಲ್ಲದಿದ್ದಲ್ಲ್ಲಿ ಕಾನೂನಿನ ಸಮರವನ್ನು ಎದುರಿಸಬೇಕು. ಅಂದರೆ ಮಕ್ಕಳು ಮಾಡುವ ತಪ್ಪುಗಳನ್ನು ಗೌರವಿಸಿ, ಪ್ರೀತಿಸಿ ತಿದ್ದಬೇಕು.ಬೈಯ್ಯುವುದು ಹಾಗು ಹೊಡೆಯುವದು ನಿಷಿದ್ದ. ಆದರೆ ನಮ್ಮಲ್ಲಿ ಆ ಶಿಸ್ತು ಅಶಿಸ್ತಾಗಿದೆ. ಹೇಳುವದಕಷ್ಟೆ “ಮಹಾನ್ ಭಾರತ”, ಮೂರು ವರ್ಷಗಳ ಬಾಲಕಿಯರನ್ನೂ ಲೈಂಗಿಕ ಶೋಷಣೆಗೆ ಬಳಸಿಕೊಂಡು ಹತ್ಯೆಗೈದು ರಾಜಾರೋಷವಾಗಿ ತಿರುಗಾಡುವವರನ್ನು ಕೇಳಿದ್ದೇವೆ. ಅಂದರೆ, ಊಹಿಸಿ ನಮ್ಮಲ್ಲಿ ಮಕ್ಕಳು ಎಷ್ಟು safe ಎಂದು.
ಫ್ಯಾಮಿಲಿ ಸಮೇತ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಟ್ರಾಫಿಕ್ ಸಿಗ್ನಲ್ ಬಳಿ ಕಾರು ನಿಲ್ಲಿಸಿದಾಗ ಲೈಂಗಿಕ ಅಲ್ಪಸಂಖ್ಯಾತರು ತನ್ನ ಮೇಕಪ್ ಮತ್ತು ಗೆಟಪ್ನಲ್ಲಿ ಅವರ ಬಳಿ ಬಂದು ತನ್ನ ಶೈಲಿಯಲ್ಲಿ ಕಾಸನ್ನು ಬೇಡುತ್ತಿದ್ದ ಪರಿಯನ್ನು ಕಂಡು ಸ್ನೇಹಿತನ ನೆಂಟರ ಮಗಳು ಒಂದೇ ಸಮನೆ ಅಳಲು ಶುರು ಮಾಡಿದಳು. ಅಮೇರಿಕಾದಲ್ಲಾಗಿದ್ದರೆÉ ಅಲ್ಲಿಯ ಪೊಲೀಸ್ನವರು ಅಂತಹವರನ್ನು ಹಿಡಿದು ಕಂಬಿಯ ಹಿಂದೆ ಕಳಿಸುತ್ತಿದ್ದರು. ಆದರೆ ಇಲ್ಲಿ?
ಇಂದು “LGBT (lesbian, gay, bisexual and transgender)” ಎಲ್ಲರಿಗು ತಿಳಿದಿರುವ ವಿಷಯ. ಸೂಕ್ಷ್ಮವಾಗಿ ಹೇಳಬೇಕಂದರೆ ಸಪಿಂಡಗಳು ಎಂದು. ಇಂದು ನಮ್ಮ ಪರಮೋಚ್ಚ ನ್ಯಾಯಲಯ ಮಾನವೀಯ ದೃಷ್ಟಿಯಿಂದ “ಇವರು ನಮ್ಮ ಹಾಗೆಯೇ” ಎಂಬ ತೀರ್ಪನ್ನು ನೀಡಿ, ಹಿಂದೆ ಇದ್ದ ಅವರ ಅಪರಾಧಿ ಅಥವ ಶಿಕ್ಷಾರ್ಹ ಸ್ಥಾನಕ್ಕೆ ತಿಲಾಂಜಲಿ ಹಾಡಿದೆ. ಹೌದು ನಾನು ಈ ತೀರ್ಪಿಗೆ ಸಮ್ಮತಿಸುತ್ತೆನೆ. ಆದರೆ ನನ್ನದೆ ಆದ ಒಂದು “ವಿಶ್ವಮಿತ್ರ ಸಿಧ್ಧಾಂತವನ್ನು” ಮಂಡಿಸುವೆನು. ಇದು ನನ್ನ ವೈಯಕ್ತಿಕ ವಿಚಾರವಷ್ಟೇ…
ಮಹಾಋಷಿ ವಿಶ್ವಾಮಿತ್ರರನ್ನು ಬಲ್ಲವರು ಯಾರಿಲ್ಲ? “ಗಾಯತ್ರಿ ಜಪ” ವನ್ನು ಬರೆದು ಇಂದು ಎಲ್ಲಾ ಮನೆ ಮೆನೆಗಳಲ್ಲಿ ಚಿರ ಪರಿಚತರು ಈ ಮಹಾ ಋಷಿ. ಈ ಋಷಿ ತನ್ನ ಮುಂಗೋಪಕ್ಕೆ ಹಾಗು ಶಾಪಕ್ಕೆ ಹೆಸರುವಾಸಿಯದ ಋಷಿ. ಸಮಸ್ಥ ದೇವಾನು ದೇವತೆಗಳು ಇವರನ್ನು ನೋಡಿದರೆ ಮತ್ತು ಅವರ ಹೆಸರು ಕೇಳಿದರೆ ಹೆದಿರುತ್ತಿದ್ದರು. ಅವರ ತಪಸ್ಸು ತಪೋ ಭಂಗವಾದರೆ, ತಪಸ್ಸು ಕೆಡಿಸಿದ ವ್ಯಕ್ತಿಯ ಮೇಲೆ ಅವರ ದೃಷ್ಠಿ ಬಿದ್ದ ತಕ್ಷಣ ಆ ವ್ಯಕ್ತಿ ಕಲ್ಲು ಅಥವ ಬೂದಿ ಆಗಿಬಿಡುತಿದ್ದ.

ಈ ತೇಜಸ್ವಿಯ ಪದವನ್ನು ಬಿಡಿಸಿ ನೋಡಿದಾಗ ನನಗೆ ಕಂಡಿದ್ದು “ವಿಶ್ವಾಸ + ಮಿತ್ರ”. ಈ ಋಷಿ ಯಾರಿಗೆ ವಿಶ್ವಾಸ ತಂದಿದ್ದರು? ಯಾರಿಗೆ ಮಿತ್ರರಾಗಿ ಇದ್ದರು? ತಿಳಿಯದು. ಯಾರು ಈ ತಪಸ್ವಿಗೆ ಈ ಹೆಸರನ್ನು ಇಟ್ಟರು ಎನ್ನುವದೇ ಸೋಜಿಗ. ಪುರಾಣಗಳಲ್ಲಿ ಇವರ ಘೋರ ತಪಸ್ಸಿಗೆ ಶಿವನು ಮೆಚ್ಚಿ ಅಘಾದವಾದ ಶಕ್ತಿಯನ್ನು ನೀಡಿದ್ದನೆನ್ನುವ ಉಲ್ಲೇಕವಿದೆ. ಮೊದಲೆ ಕೋಪಿಷ್ಟ, ಈ ಬೃಹುತ್ ಶಕ್ತಿಯಿಂದ ಇಡೀ ವಿಶ್ವವನ್ನೆ ಸುಟ್ಟುಬಿಡಬಹುದೇನೊ ಎನ್ನುವ ಭಯದಿಂದ ಇಂದ್ರ ಮಹಾರಾಜನು ಇವರ ತಪಸ್ಸಿಗೆ ಭಂಗ ತರಲೆಂದು ಸ್ಪೂರ ದ್ರೂಪಿಯಾದ ಮೇನಕೆಯನ್ನು ಸೃಷ್ಟಿಸಿ ನೃತ್ಯಿಸಿ ಋಷಿಯ ತಪೋಭಂಗವನ್ನು ಮಾಡಿಸಿದ. ಇದರಿಂದ ಕುಪಿತಗೊಂಡ ವಿಶ್ವಾಮಿತ್ರರು ತನ್ನ ಕಣ್ಣುಗಳನ್ನು ತೆರದು ಆಕೆಯನ್ನು ಭಸ್ಮ ಮಾಡಿದರು. ಅವರ ತಪಸ್ಸು ಭಂಗವಾಗದೆ ಹೋಗಿದ್ದರೆ ಅವರ ಅಘಾದವದ ಶಕ್ತಿ ಊಹಿಸಲಸಾದ್ಯವಾಗಿರುತಿತ್ತು? ಇದರಿಂದ ಇಡೀ ವಿಶ್ವವನ್ನೆ ಸುಟ್ಟುಬಿಡುತ್ತಿದ್ದರೇನೊ?. ಇದರಿಂದ ಇಡೀ ವಿಶ್ವವೆ ನಾಶವಾಗುತಿತ್ತೊ ಏನೋ? ವಿಶ್ವ ನಾಶವಾಗಿದ್ದರೆ ನಾವುಗಳು ಇಲ್ಲವಾಗುತ್ತಿದ್ದಿವಿ. ನಾವು ಇಲ್ಲದಿದ್ದರೆ ವಿಶ್ವದ ಅಸ್ಥಿತ್ವವೇ ಇರುತ್ತಿರುಲಿಲ್ಲ. ಇದನ್ನೇ ನಾನು ಪ್ರಳಯ ಎನ್ನುವದು.
ಸದ್ಯ ಈಗ ಈ ಪ್ರಳಯದ ಮಾತು ದೂರ. ದಿನ ನಿತ್ಯ ಮಾದ್ಯಮಗಳಲ್ಲಿ ಬೊಗಳೊ ಪ್ರಳಯ ಬಂಡಲ್ ಪ್ರಳಯಗಳಾಗಿವೆ. ಆದರೆ ಒಂದು ಮಾತು, ಪ್ರಳಯವಂತು ನಿಜ, ಎಂದೊ ಗೊತ್ತಿಲ್ಲ ಆದರೆ ಇಂದು ನಾವೆಲ್ಲಾ ಸಲಿಂಗಿಗಳಾದರೇ ಪ್ರಳಯವಂತು ಕಟ್ಟಿಟ್ಟ ಬುತ್ತಿ. ಕಾರಣ ಈ ಸಲಿಂಗಿಗಳ ಜಾತ್ರೆಯಲ್ಲಿ ಎಲ್ಲಿಯ ಜನ್ಮ, ಎಲ್ಲಿ ನಮ್ಮ ಸಂತತಿ? ನಮ್ಮ ಜನ್ಮ ಕೊನೆಗೊಂಡಾಗ ಅಂದೇ ಪ್ರಳಯ ಅಲ್ಲವೆ. ಅಗೋಚರವಾದ ಅಕಾಶಕಾಯ ಬಂದು ಭೂಮಿಗೆ ಅಪ್ಪಳಿಸೊ ಅಗತ್ಯವಿಲ್ಲ, ಈಡಿ ದೇಶವನ್ನು ದೈತ್ಯಾಕಾರದ ಸುನಾಮಿ ಆವರಿಸೊ ಅಗತ್ಯವಿಲ್ಲ, ನಮ್ಮ ಭೂಮಿಯನ್ನು ಕೃಷ್ಣರಂದ್ರ ತನ್ನ ಗುರುತ್ವಾಕರ್ಷಣೆಕಡೆ ಎಳದುಕೊಳ್ಳುವ ಅಗತ್ಯವಿಲ್ಲ. ಆದರೆ ಇಂದಿನ ಯಾಂತ್ರಿಕ ಹಾಗು ತಾಂತ್ರಿಕ ವಿಶ್ವದಲ್ಲಿ ನೈಸರ್ಗಿಕ ವ್ಯವಸ್ಥೆ ಎಂದು ಆರುತ್ತದೊ ಅಂದೇ ಪ್ರಳಯ ಆದೀತು, ಎಚ್ಚರ!
ಈ ವಿಶ್ವದ ಹುಟ್ಟು ಅಂದಾಜು ನಲ್ವತ್ತು ಮಿಲಿಯನ್ ವರ್ಷಗಳ ಹಿಂದೆ ಎಂದು ಅಂದಾಜಿಸಲಾಗಿದೆ. ಮೂರು ಯುಗಗಳನ್ನು ದಾಟಿ ಇಂದು ನಾಲ್ಕನೆ “ಕಲಿ ಯುಗ”ಕ್ಕೆ ಕಾಲಿಟ್ಟಿದ್ದೇವೆ. ಇನ್ನು ಎರಡು ಅಥವ ಮೂರು ಮಿಲಿಯನ್ ವರ್ಷಗಳಲ್ಲಿ ನಮ್ಮ ಬಾಳಿಗೆ ಅಥವ ಬದುಕಿಗೆ ನೆರವಾದ ಸೂರ್ಯದೇವ ತಣ್ಣಗಾಗುತ್ತಾನೆನ್ನೋ ವದಂತಿ ವೈಜ್ಞಾನಿಕವಾಗಿಯೂ ಸಹ ಸತ್ಯ. ಅಂದು ನಮ್ಮ ಉಳಿವು ಇರುವುದಿಲ್ಲ. ನನ್ನ ಪ್ರಕಾರ ಆ ಅಳಿವು ಕೆಲವೆ ಸಹಸ್ರ ವರ್ಷಗಳಲ್ಲಿ ಆದೀತು. ಹೇಗೆಂದರೆ, ಇಂದು ಗಂಡಸು ಹೆಣ್ಣಾಗಿ ಪರಿವರ್ತನೆಯಾಗುತಿದ್ದಾನೆ. ಹಾಗೆಯೆ ಹೆಣ್ಣು ಗಂಡಾಗಿ ಪರಿವರ್ತನೆಯಾಗುತಿದ್ದಾಳೆ. ಅನೈಸರ್ಗಿಕವಾಗಿ ಆಥವ ಕೃತಕ ಅಂಡಾಣು ಹಾಗು ವೀರ್ಯಾಣುಗಳ ತಯಾರು, ನಮ್ಮ ಹಾಗೆಯೆ ರೋಬೊಟ್ಗಳ ತಯಾರಿ, ಕೃತಕ ಬುದ್ದಿ ತಯಾರು, ಸಮಾಜದ ಜೊತೆ ಸಂವೇದನಾಶೀಲ ಕೃತಕ ಮನುಷ್ಯರು, ಹೀಗೆ ಆನೇಕ ತರಾವರಿ ಕೃತಕ ತಯಾರುಗಳಿಂದ ನಮ್ಮ ಉಳಿವು ವಿನಾಶದ ಅಂಚಿಗೆ ತಲುಪಿಸುತ್ತಿದ್ದೇವೆ. ಇದನ್ನೆ ನಾನು “ವಿಶ್ವಾಮಿತ್ರ ಸಿಧ್ಧಾಂತ” ವೆನ್ನುವದು. ಹಿಂದೆ ತಪ್ಪಿದ ವಿಶ್ವಾಮಿತ್ರರಿಂದ ಆಗುತ್ತಿದ್ದ ವಿಶ್ವ ನಾಶ ಇಂದು ನಮ್ಮ ಅತೀ ಬುದ್ದಿತನವನ್ನು ಉಪಯೋಗಿಸಿ ನಾವೆ ನಮ್ಮ ಗುಂಡಿಗಳನ್ನು ತೋಡಿಕೊಳ್ಳುತ್ತಿದ್ದೇವೆ.
ಇಲ್ಲಿಯವರಿಗು ಸಲಿಂಗಕಾಮಿಗಳುಗಳು ನಮ್ಮ ಸಂವಿದಾನ ದೃಷ್ಟಿಯಲ್ಲಿ ಶಿಕ್ಷೆಗೆ ಅರ್ಹರಾಗಿದ್ದರು. ಇವರೆಲ್ಲರು ಸಹ ನಮ್ಮ ಹಾಗೆ ಜೀವ ಉಳ್ಳವರೆಂದು ಅನೇಕ ಸಂಘಸಂಸ್ಥೆಗಳಿಂದ ಹಾಗು ಸಂವಿದಾನದಿಂದ ಅವರಿಗೂ ಸ್ವತಂತ್ರ ತಂದು ಕೊಟ್ಟಿದೆ. ನಾನು ಮನೊ ವೈದ್ಯನಾಗಿ ಎಲ್ಲರಂತಯೆ ನನ್ನ ಮಾನವೀಯತೆಯನ್ನ ಸಲಿಂಗಿಗಳಿಗೆ ತೋರುತ್ತೇನೆ. ಸಲಿಂಗಿಗಳನ್ನ ಅಪರಾಧ ಸ್ಥಾನದಲ್ಲಿ ನಿಲ್ಲಿಸಲು ನಮಗೆ ಯಾವ ಹಕ್ಕು ಇಲ್ಲ. ಇವರು ಸಹ ನಮ್ಮಂತಯೆ ಅಲ್ಲವೆ.
ನನಗೆ ಇವರೆಲ್ಲರು ಸಹ ಜೀವಿಗಳೆ ಆದರೆ ನನಗೆ ನಮ್ಮ ಸಂವಿದಾನ ಹಾಗು ಕಾನೂನು, ಅವರ ಆಗು ಹೋಗುಗಳನ್ನು ಮತ್ತು ಅವರ ನಡುವಳಿಕೆಗಳನ್ನ ಗಮನದಲ್ಲಿ ಇಟ್ಟು ಸಲಿಂಗ ಅಪರಾಧದ ಅಂಟನ್ನ ಅಳಿಸಿಬೇಕು. ಇದು ಮನದಾಳದಿಂದ ಬಂದು ಯಾವುದೇ ಆಮಿಶಕ್ಕೆ ಒಳಗಾಗದೆ ಹಾಗು ಯಾವುದೆ ಸ್ವಾರ್ಥಕ್ಕೆ ಬಳಿಸಿಕೊಳ್ಳದೆ ನಮ್ಮ ಸಮಾಜದ ಜೊತೆಗೆ ಹಂತ ಹಂತವಾಗಿ ಕ್ರೂಡಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕನ್ನುವುದೇ ನನ್ನ ಅಭಿಲಾಸೆ.
ನಮಗೆ ಎರೆಡು ರೀತಿಯ ಕಾನೂನು ಇವೆ. ಒಂದು, ಆದಿಕಾಲದಿಂದಲು ಬಂದಂತಾ ಬ್ರಹ್ಮವಿತ್ತ ಕಾನೂನು, ಇದು ಸಮಸ್ತ ಲೊಕಕ್ಕು ಅನ್ವಯವಾಗಿರುತ್ತದೆ. ಮತ್ತೊಂದು ನಮ್ಮ ಸಂವಿದಾನದ ಕಾನೂನು, ಇದು ನಮ್ಮ ಸಮಾಜದ ಸ್ವಸ್ಥಕ್ಕೆ ನಮ್ಮಿಂದಲೆ ಅಂದರೆ ಪ್ರಜಾಪ್ರಭುತ್ವದಿಂದ ಮಾಡಿದಂತ ಕಾನೂನು. ಮಾನವೀಯತೆ ದೃಷ್ಟಿಯಲ್ಲಿ ಸಮಾಜ ಸಲಿಂಗಿಗ ಳನ್ನು ಒಪ್ಪಿದರೆ ಬ್ರಹ್ಮ ಒಪ್ಪುವಿದಿಲ್ಲ. ಕಾರಣ ಬಲು ಸೂಕ್ಷ್ಮ, ಸೃಷ್ಟಿಕರ್ತನಿಗೆ ನಮ್ಮ ವಂಶೋದ್ಧಾರ ಅತ್ಯಗತ್ಯ.
ಸಂತತಿ ಇಲ್ಲದಿದ್ದರೆ ಬ್ರಹ್ಮನು ಇರುವುದಿಲ್ಲ. ಈ ಕಾರಣದಿಂದಲೊ ಏನೊ ವೇದ ಪುರಾಣಗಳಲ್ಲಿ ಶಿವನು ಇವರನ್ನು ತಿರಸ್ಕಾರ ಮನೋಭಾವದಿಂದ ನೋಡುತ್ತಾನೆಂದು ಲಿಖಿತ ಉಲ್ಲೇಕಗಳು ಕಾಣಬಹುದು ಎಂದು ಧರ್ಮಗುರುಗಳು ಹೇಳುವದು. ಉದಾರವಾಗಿ ನೀಡಿದ ರತಿಕ್ರೀಡೆಯನ್ನ ಅನಿಷ್ಟ ಪದ್ದತಿಗಳಲ್ಲಿ ಉಪಯೋಗಿಸದರೆ ನಮ್ಮ ಈ ಬ್ರಹ್ಮಾಂಡವನ್ನು ಅರಿಯುವ ಆತ್ಮ ಸಾದನೆಗಳೇ ಇರುವುದಿಲ್ಲ ಎನ್ನುವದು ಶಿವನ ತರ್ಕ. ಹೀಗಾಗಿ ಮಾನವ ಧರ್ಮಗಳು ಸಲಿಂಗಿಗಳನ್ನ ಒಪ್ಪುವುದಿಲ್ಲವೆನ್ನುವುದು ನನ್ನ ಅನುಮಾನ. ಎನೇ ಇರಲಿ ನಮ್ಮ ಈ ಪ್ರಜಾಪ್ರಬುತ್ವದಲ್ಲಿ ರಾಜಪ್ರತಿನಿಧಿಗಳು ಸಲಿಂಗಿಗಳಿಗೆ ಸ್ವಾತಂತ್ರವನ್ನು ಇತ್ತು ಅವರ ಓಟುಗಳನ್ನು ಕೀಳುತ್ತಿರುವರು ಆದರೆ ಶಿವನು ಮಾತ್ರ ಈ ವಿಷಯವಾಗಿ ಬೇಜಾರಾಗಿರುವನು.

ಇಂದಿನ ಮಾಧ್ಯಮಗಳಲ್ಲಿ ಅನೇಕ ಜ್ಯೋತಿಷ್ಯ ಮತ್ತು ಬುದ್ದಿ ಜೀವಿಗಳ ಹೇಳಿಕೆಗಳಿಂದ ಮಾನವರನ್ನು ಆತಂಕ ಹಾಗು ಜಿಜ್ಞಾಸೆಕಡೆಗೆ ಒಯ್ಯತ್ತಿದ್ದಾರೆ. ಮಾನವರ ಮೌಢ್ಯ ಹಾಗು ಅಮಾಯಕತೆಯನ್ನ ಬಂಡವಾಳವಾಗಿಸಿಬಿಟ್ಟಿದ್ದಾರೆ. ವಿಜ್ಞಾನ ಬಡವಾಗುತ್ತಿದೆ. ನಾಡಿನ ಶ್ರೇಷ್ಟ ವಿಜ್ಞಾನಿಗಳು ಹೇಳ ಕೇಳದಂತೆ ಮರೆಯಾಗುತ್ತಿದ್ದಾರೆ. ಜನ ಸಾಮಾನ್ಯರು ಹತಾಶನಾಗುತ್ತಿದ್ದಾನೆ. ಇಲ್ಲದ ದೇವರಿಗೆ, ಇರುವ ಸ್ವಾಮಿಗಳಿಗೆ ಹಾಗು ಕಾಣುವ ಜ್ಯೋತಿಷ್ಯರಿಗೆ ಜನರು ಮಾರು ಹೋಗುತ್ತಿದ್ದಾರೆ.
ಅವರ ಮುಗ್ದತೆಯನ್ನು ವ್ಯವಹಾರ ಹಾಗು ವಾಣಿಜ್ಯವಾಗಿಸಿದ್ದಾರೆ. ಅನೇಕರು ನಿದ್ರೆಗೆಟ್ಟು, ಗೀಳಾಗಿಸಿಕೊಂಡು, ಮನೊ ನ್ಯೂನತೆಗಳನ್ನು ತರಿಸಿಕೊಳ್ಳತ್ತಿದ್ದಾರೆ. ವಿಕಲ್ಪಗಳು ಕಾಣಿಸುತ್ತಿವೆ, ಸಂಕಲ್ಪಗಳು ದೂರ ಸರಿಯುತ್ತಿವೆ. ಚಿಂತಕನಿಗೆ ಪ್ರಳಯ ಆಯೊಮಯವಾಗಿದೆ. ಕೆಲವರಿಗೆ ಅದೆ ಪ್ರಳಯ ನುಂಗಲಾರದ ತುತ್ತಾಗಿದೆ. ಎಲ್ಲಾ ವರ್ಗದವರು ಗಲಿಬಿಲಿ ಗೊಂಡಿದ್ದಾರೆ. ಏನೆ ಇರಲಿ ಪ್ರಳಯವಂತು ಶತ ಸಿದ್ದ, ಅದಕ್ಕೆ ಕೆಲವು ಶತ ಕೋಟಿ ವರ್ಷಗಳನ್ನೇ ಕಾಯಬೇಕು. ಹೋಗಲಿ ಬಿಡಿ, ಅಲ್ಲಿಯವರಿಗು ನಾವು ಯಾರು ಇರುವುದಿಲ್ಲ.
ನನ್ನ ಈ ವಿಚಾರವು ನನ್ನ ಚಿಂತನೆಯಷ್ಟೆ.ಸುತಮುನಿಗಳು ಹೇಳುತ್ತಾರೆ “ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಗೋ ಕಾಯೊ ಹುಡುಗ ಬಿಟ್ಟ ಬಾಣದಿಂದ ಸಂಹಿರಸಲ್ಪಟ್ಟು ಅಂದು ದ್ವಾಪರ ಯುಗ ಮುಗಿದು ಕಲಿ ಯುಗ ಪ್ರಾರಂಭಗೊಂಡಿತು. ಕಲಿ ಯುಗ ಆರಂಭದಲ್ಲಿ ಕತ್ತಲಲ್ಲೆ ಜೀವಿಸುವ ಬ್ರಹ್ಮನು ಅಧರ್ಮನೆಂಬ ಮಾನವನನ್ನು ಸೃಷ್ಟಿಸಿದ. ತಾನು ಕಾಮುಕೆ ಮಿಥ್ಯೆಯ ಜೊತೆ ಬೆರೆತು ಗಂಡು ‘ಡಂಬಾ’ ಹಾಗು ಹೆಣ್ಣು ‘ಮಾಯೆ’ಗೆ ಹೆತ್ತ. ಇವರಿಬ್ಬರ ಜೊತೆಯೆ ಅನೈತಿಕ ಲೈಂಗಿಕಾರ್ಷಣೆಯಾಗಿ ಗಂಡು ‘ಲೋಬಿ’ ಗೆ, ಹೆಣ್ಣು ‘ನಿಕ್ರೇತಿ’ ಗೆ ಹುಟ್ಟಲು ಕಾರಣರಾದರು.
ನಿಕ್ರೇತಿಯಿಂದ ಕ್ರೋಧ ಹಾಗು ಪಾಪದಿಂದ ಕೂಡಿದ ವಂಶೋಭಿವೃದ್ದಿಯ ಅನುಗುಣವಾಗಿ ಕೆಟ್ಟ ‘ಕಲಿ’ ಹುಟ್ಟಿದ. ಈಗ ನಮ್ಮನ್ನು ಆಳುತ್ತಿರೊ ಈ ಮಹಾರಾಜನಿಗೆ ಸಾವಿಲ್ಲ. ಶರೀರಕ್ಕೆ ಸಾವಿದ್ದರೂ ಅವನ ಕೆಟ್ಟ ಮನಸ್ಸಿಗೆ ಸಾವಿಲ್ಲ. ಇದರಿಂದಲೋ ಏನೊ ಇವತ್ತಿನ ಪ್ರಪಂಚದಲ್ಲಿನ ಜನಮನಗಳಲ್ಲಿ ಷಢ್ ಐಶ್ರ್ಯಗಳಿಂದ ಕೂಡಿದ ಚಿತ್ತಗಳು ರಾರಾಜಿಸುತ್ತಿವೆ. ನಾವೆಲ್ಲರು ಕಲಿ ಮಹಾರಾಜನಂತೆಯೇ ವರ್ತಿಸುತ್ತಿದ್ದೇವೆ. ಹೀಗೆ ಸಾಗಿದರೆ ನನ್ನ ಈ ವಿಶ್ವಾಮಿತ್ರ ಸಿಧ್ಧಾಂತದಂತೆ ನಮ್ಮ ಸರ್ವನಾಶ ಖಂಡಿತ. ಈ ಸರ್ವನಾಶ ಶರೀರಕಲ್ಲ, ಮನಸ್ಸಿಗೆ. ನಾವೇನಾದರು ನಮ್ಮ ಮನ ಪರಿವರ್ತನೆ ಮಾಡಿಕೊಳ್ಳದೆ ಇದ್ದ ಪಕ್ಷದಲ್ಲಿ ನಾವೆಲ್ಲ ಇದ್ದು ನಾಶವಾದಂತೆ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

