ಮನಸು ಮೃದಂಗ
(ಲೇಖನಗಳ ಸಂಕಲನ)
ಮಧು-way
ನನ್ನ ಪದವಿಪೂರ್ವ ಸ್ನೇಹಿತನ ಮಗಳ ಮದುವೆಗೆ ಹೋಗಿದ್ದಾಗ ಅನೇಕ ಹಳೆ ಸ್ನೇಹಿತರು ಸಿಕ್ಕಿದ್ದರು. ಅವರಲ್ಲಿ ಒಬ್ಬ ಸ್ನೇಹಿತ “ಏನ್ಲೇ, ಬಿರದಿ ಸಿಲ್ವರ್ ಜೂಬ್ಲಿ ಫಂಕ್ಷನ್ಗೆ ಕರಿಲಿಲ್ವೆನ್ಲೇ”, ಅಂದ. ಇಲ್ಲವೆಂದು ಕತ್ತಾಡಿಸಿದೆ. ವೃತ್ತಿಯಲ್ಲಿ ಇಂಜನಿಯರ್ ಆದ ಇವನು ಕೋಟ್ಯಾಂತರ ರೂಪಾಯಿಗಳ ಒಡೆಯ. ಹೆಸರುವಾಸಿಯಾದ ಉಧ್ಯಮಿಯೂ ಕೂಡ. ಇವರ ಇಪ್ಪತೈದು ವರ್ಷಗಳ ಸುಧೀರ್ಘ ಮದುವೆ ಸಂಬಂಧ ಅನ್ಯೋನ್ಯವಾಗಿ ಇರಲಿಲ್ಲವೆಂದು ಕೆಲವು ಸ್ನೇಹಿತರು ತಿಳಿಸಿದ್ದರು. ನನ್ನ ವೃತ್ತಿಯಲ್ಲೆ ಮೈ ಮರೆತ್ತಿದ್ದರಿಂದ ನಾನು ಈ ವಿಷಯದ ಬಗ್ಗೆ ಹೆಚ್ಚು ತಲೆ ಕೆಡಸಿಕೊಂಡರಲಿಲ್ಲ. ಸರಿಯಾದ ಮಾಹಿತಿ ಸಿಗದೆ ಈ ಸ್ನೇಹಿತನ ಮತ್ತು ಆತನ ಪತ್ನಿಯ ಬಂಧನದ ಒಡಕಿನ ಕಾರಣ ಅಸ್ಪಷ್ಠ.
ಇವನಿಗೆ ಇಬ್ಬರು ಗಂಡು ಮಕ್ಕಳು. ಮೊದಲನೆಯವನು ಇವನ ಉಧ್ಯಮದಲ್ಲೆ ಸಹಬಾಗಿತ್ವ. ಎರಡನೆಯವನು ಅಮೇರಿಕದಲ್ಲಿ ಸಾಫ್ಟವೇರ್ ಕೆಲಸ ಹಾಗು ಅಲ್ಲೆ ನೆಲಸಿರುವನು. ಇವನ ಇಪ್ಪತೈದು ವರ್ಷಗಳ ವೈವಾಹಿಕ ಜೀವನದ ಕುರಹುವಿಗಾಗಿ ಇಪ್ಪತೈದು ಲಕ್ಷಗಳ ಬೆಲೆಬಾಳುವ ವಾಚ್, ಒಡವೆ, ಸೀರೆ ಮತ್ತು ಇತರೆ ವಸ್ತುಗಳನ್ನ ಹೆಂಡತಿಗೆ ಉಡುಗೊರೆಯಾಗಿ ನೀಡಿದ್ದ. ಈ ಕಾರ್ಯಕ್ರಮದಲ್ಲಿ ಇಪ್ಪತೈದು ತರಹದ ವೈವಿಧ್ಯ ಖಾಧ್ಯಗಳನ್ನ ಮಾಡಿಸಿದ್ದ. ಈ ಸಂಬ್ರಮಕ್ಕೆ ಇಪ್ಪತೈದು ನಿಮಿಷಗಳ ಕಾಲ ಪಠಾಕಿಯನ್ನು ಸಿಡಸಿದ್ದ.
“ಇವರಿಬ್ಬರು ವಿಛ್ಛೇಧನದವರಿಗೂ ಹೋಗಿದ್ದರಲ್ಲ!” ಸ್ನೇಹಿತನನ್ನು ಕೇಳಲು “ಹೌದ್ಲೇ….., ನೀ ಖರೆ ಹೇಳ್ದೆ ನೋಡ್ಲೆ….ಅವನೆಲ್ಲೀ ಇದ್ನ ಮಾಡ್ತಾನ್ಲೇ, ಮಾಡ್ತಿರೋದು ಮಕ್ಳು ಕಣ್ಲೇ….” ಅಂದ, “ಇನ್ನೂ ಸರಿ ಹೋಗಿರಲಿಲ್ಲವೆ?” ” ಇವನ್ ಅಯ್ಯನ್… ಇವನೆಲ್ಲಿ ಸರಿಹೋಗ್ತಾನ್ಲೇ….., ಪಲ್ಲಂಗ ಹತ್ತೀದ್ರೇ ಇವ್ನ ದಕ್ಷಿಣ, ಅವ್ಳು ಉತ್ತರಾಲೇ…”
ಊರು ಸೆರಿದ ಕೆಲವು ದಿನಗಳ ನಂತರ ನನ್ನ ಮನಸ್ಸಿಗೆ ಆ ದಂಪತಿಗಳ ವಿಚಾರಗಳೇ ಕಾಡ ತೊಡಗಿದವು.
“ಎಲೇ ಸಂಬಂಧವೇ ನೀ ಅದೇಷ್ಟು ಆಡಂಬರ, ಪಾವಿತ್ರತೆಯ ಮದುವೆಯೆಂಬ ವಿದ್ರೋಹಿ ಸಂಭಂದದಲ್ಲಿ ಮಾಯೆಯಾ ಬಣ್ಣವನ್ನು ಹಚ್ಚಿ ದ್ರೋಹಿ ಆಗಬಿಟ್ಟೆಯೆಲ್ಲಾ”.
“ಸಪ್ತಪದಿಯನ್ನು ತುಳಿದು, ವೇದ ಪಠಣಗಳನ್ನು ಮೊಳೆಗರೆದು,
ಬ್ರಾಹ್ಮಿ ಮುಹೂರ್ತದಲ್ಲಿ, ಹೂ ಹಾಗು ಅಕ್ಷತೆ ಕಾಳುಗಳ ಮಳೆಯನ್ನೇ ಸುರಿಸಿ,
ನಿನಗೆ ನಾನು ಮತ್ತು ನನಗೆ ನೀನು ಮೂಕ ಮನೋ ಉಲ್ಲಾಸವ ಹೊತ್ತು,
ಗುರುಹಿರಿಯರ ಸಮ್ಮುಕದಲ್ಲಿ, ತಾಳ ಮೇಳಗಳ ನಡುವೆ ಮೂರು ಗಂಟುಗಳ ತಾಳಿ ಕಟ್ಟಿದರೆ ಮದುವೆ”
ಇದನ್ನು ಮಾಹಿತಿ ತಂತ್ರಜ್ಞಾನಿಗೆ ತಿಳಿಸಿದ ತಕ್ಷಣವೇ “ಮದುವೆಯೆನ್ನೋದು ಇಷ್ಟು ಕಷ್ಠವೇ ಎಂದು ಉದ್ಗರಸಿದ. “ಇಲ್ಲಿಗೆ ಮದುವೆ ನಿಲ್ಲಲ್ಲಿಲ್ಲ ಮಗು, ಇನ್ನೂ ಇದೆ” ಅಂದಾಗ ಅವನ ಕಣ್ಣಲ್ಲಿ ಮಿಂಚು ಮೂಡಿ ಅವನಲ್ಲಿ ಮತ್ತಷ್ಠು ಮದುವೆಯ ಬಗ್ಗೆ ತಿಳಿದುಕೊಳ್ಳುವ ಕಾತರವನ್ನ ಕಂಡೆ.
“ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು” ಎನ್ನುವ ಗಾದೆ ರೂಢಿಯಲ್ಲಿದೆ,ಇದು ಅಕ್ಷರಷಃ ನಿಜ. ಮದುವೆ ಹಿಂದೆ ಅಡಗಿರುವ ಕಾತುರ, ಪೋಷಕರ ಭಯ, ಆತಂಕ, ಹಣದ ಬವಣೆ, ವ್ಯಾಪರಿ ಮನೋ ಭಾವ, ಆಶಾ ಭಾವನೆಗಳ ಗಾಳಿ ಗೋಪರಗಳು, ಹಗಲು ಕನಸಗಳು, ಹೊಟ್ಟೆ ಕಿಚ್ಚು, ಆಡಂಬರದ ಮಾತುಗಳು, ವಸ್ತು ವಿನಿಮಯ, ನಿಷ್ಠೆಗಳ ಹುಡಕಾಟ, ಇವುಗಳೆಲ್ಲವು ಇಂದಿನ ವಿಸ್ಮೃತ ವಿಸ್ಥಾರ ಮದುವೆಯ ಒಡಂಬಡಿಕೆಗಳಾಗಿ ಬಿಟ್ಟಿವೆ. ಇದರಿಂದ “ಸಾವಿರ ಸುಳ್ಳು ಹೇಳಿ ಮದುವೆ ಮಾಡು” ಎಂಬ ನಾಣ್ನುಡಿ ಉದಯವಾಯಿತೇನೊ?. ಮದುವೆ ಆಯಿತು, ಆದ ಮೇಲೆ?
ಮೇಲೆ ತಿಳಸಿರುವ ವಿಚಾರಗಳೆಲ್ಲವು ಇಲ್ಲದ ಅಥವ ಕಾಮನೆ ವಿಕಲ್ಪಿತ ಮದುವೆ ನಡೆಯುವದೆಂದುಕೊಳ್ಳೋಣ. ಆಗ ಮೊಟ್ಟಮೊದಲ ಈರ್ವರ ನೋಟ ಮೋಹಕತೆಯ ಆಕರ್ಷಣೆ ಅಥವಾ ಮೋಹಕತೆಯ ಅಂಕುರವಾಯಿತೆಂದರೆ ಸಂಸಾರದ ಮೊಟ್ಟಮೊದಲನೆಯ ಮೆಟ್ಟಿಲು ಹತ್ತಿದರೆಂದು ಭಾವಿಸೋಣ.
ದಿನ ಕಳದಂತೆ ಭಯ, ನಿರೀಕ್ಷೆ, ನಂಬಿಕೆ, ಅವಲಂಬನೆ, ವಿಡಂಬನೆ, ಭಾವನಾ ವೈರುತ್ವಗಳು, ಅಹಂನ ಘರ್ಷಣೆಗಳು, ಮೂಕ ಭಾವ ಸಂವೇದನೆಗಳು, ಮಿಲನಾ ಪೂರಕಗಳು, ಅರಿಯದೆ ಮಿಲನಭಂಗಗಳು, ಮನೋ ವೇದನೆಗಳನ್ನೆಲ್ಲವು ಅರಿತ ಇವರು ಪ್ರೇಮಾನುಬವಕ್ಕೆ ಕಾಲಿಡುವರು. ಇದು ಸಂಸಾರದ ಎರಡನೆ ಮೆಟ್ಟಿಲು. ಸಂಪಾದನೆ, ಆರ್ಥಿಕ ವ್ಯವಸ್ಥೆ, ಮಕ್ಕಳ ಹುಟ್ಟು ಹಾಗು ಪೋಷಣೆ, ಭವಿಷ್ಯದ ಚಿಂತೆ ಮೆಟ್ಟಿ ಸಂಸಾರದ ಮಹಾ ಸಾಗರದಲ್ಲಿ, ಸ್ನೆಹದ ಹರಿಗೋಲಿನಲ್ಲಿ ಸಾಗುತ್ತಾ, ಏಳುತ್ತಾ ಮತ್ತು ಮುಳಗುತ್ತಾ ದಡವನ್ನ ಸೇರಿದ ಪಕ್ಷದಲ್ಲಿ ಈ ಪ್ರೇಮವು ಸ್ನೇಹವಾಗಿ ಮಾರ್ಪಾಟಾಗುವುದು. ಇದೆ ಸಂಸಾರದ ಮೂರನೆ ಮೆಟ್ಟಿಲು.
ಸ್ನೇಹವು ಅತ್ಯುನ್ನತ ಸಂಬಂಧ. ಇಲ್ಲಿ ಒತ್ತಡವಿಲ್ಲ, ಹಿಡತವಿಲ್ಲ ಮತ್ತು ಎಲ್ಲವೂ ಮುಕ್ತ. ಅಹಂಗಳ ನಿರ್ಗಮನ, ಅರ್ಥಗಳ ಆಗಮನ ಇಲ್ಲಿಯ ವಿಶೇಷ. ಈ ಸ್ನಹದ ಹರಿಗೋಲು ಮುರಿದರೆ ವಿಚ್ಚೆದನೆಗೆ ಅಹ್ವಾನ. ಮಧ್ಯಸಾಗರದಿಂದ ದಡ ಸೇರಿದ ದಂಪತಿಗಳು ಸಮುದ್ರ ನರ್ತವನ್ನ ನೆನದು, ಸವಿದು, ಮನಗಳು ಬೆರತು ಒಂದದಾಗ ಸಂಸಾರದ ನಾಲ್ಕನೆ ಮೆಟ್ಟಿಲೆನ್ನಬಹುದು. ಇಲ್ಲಿ ದಯೆಯೇ ಪ್ರಧಾನ.
ಸಂಬಂಧಗಳು ಸತ್ಯಾ ಮಿಥ್ಯಾರ್ಥಗಳಿಂದ ಕೂಡಿರುತ್ತೆ. ಗೋಚರವಾದರೂ ಅರ್ಥೈಸಿಕೊಳ್ಳದ ದಂಪತಿಗಳಿಗೆ ಈ ಸಂಬಂಧ ದ್ರೋಹದಂತೆ ಕಾಣುವದು, ಕಂಡು ಅರ್ಥೈಸಿದರೆ ಸಂಬಂಧಗಳು ವಿದ್ರೋಹವೇ. ಆದುದರಿಂದ ಮದುವೆಯೆನ್ನುವುದು ಭೋಗ. ಭೋಗದಿಂದ ಸಂಭೋಗ, ಸಂಭೋಗದಿಂದ ಸಂಯೋಗ. ಅಂದರೆ ಇದರ ಅರ್ಥ “ವಿಭಜನೆಯ ದ್ರೋಹ, ಅವಿಭಾಜ್ಯದ ವಿಧ್ರೋಹ” ಇದನ್ನ ಪಾಲಿಸುವಂತಾ ಜ್ಞಾನವೇ ಯೋಗ.

ನಂಬಿಕೆ ಹಾಗೂ ಸಂಯಮಗಳೇ ಯೋಗದ ಮಾನ ದಂಡಗಳು. ಹೆಣ್ಣು ಮತ್ತು ಗಂಡಿನ ದೇಹ ಎರಡಾದರೂ ಮನಸ್ಸು ಒಂದಾಗಿರಬೇಕು. ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಇಂದಿನ ಯಾಂತ್ರಿಕ ಪ್ರಪಂಚದಲ್ಲಿ ಸಮಯ ಅತ್ಯಮೂಲ್ಯ. ಹೀಗಾಗಿ ಸಂಯಮದ ಕೊರತೆ ಎದ್ದು ಕಾಣುತ್ತಿವೆ. ಈ ಅಭಾವದಿಂದ ಸಂಯಮವೇ ಕಾಣದ ಇವರಿಗೆ ಇನ್ನೆಲ್ಲಿಯ ಸಂಯೋಗ?
ಇಪ್ಪತೈದು ವರ್ಷಗಳ ಸಂಸಾರ ಬಂಧನ ಓಡನಾಟಗಳಲ್ಲಿ ಕುರುಡು ನಿಷ್ಠಾ ಪ್ರವೃತ್ತಿಯನ್ನು ಅನುಸರಿಸಿದ್ದರಿಂದ ದೇಹಗಳು ಪರಸ್ಪರ ಸೇರಿದರೂ ಮನಸ್ಸು ದೂರವಾಗಿಯೇ ಉಳಿದುಹೋಯಿತು. ಹೃದಯ ಜರ್ಜರಿತವಾಯಿತು, ಭಾವನೆಗಳಿಗೆ ಅರ್ಥವಿಲ್ಲದಾಯಿತು, ಅನುಮಾನಗಳು ಹುತ್ತವಾಯಿತು, ನಂಬಿಕೆಗಳು ಬರಿದಾಯಿತು, ಈ ದಂಪತಿಗಳು ಕೊನೆಗೂ ದ್ರೋಹಿಗಳಾಗಿಯೇ ಉಳಿದು ಬಿಟ್ಟರು………………..!

ಸಪ್ತ ಪದಿ
ಕಣ್ಣು ನೋಡಿ
ಜೋಡಿ ಕೂಡಿ
ಸಪ್ತ ಪದಿ ಮೆಟ್ಟಿ
ಮೂರು ಗಂಟು ಕಟ್ಟಿ
ಕನಸುಗಳ ಹೊತ್ತಿ
ಕಿನಾರೆಯ ಸುತ್ತಿ
ಪ್ರೇಮವ ಹೊಕ್ಕಿ
ದೋಣಿಯ ಹುಡಿಕಿ
ಬಾಳ ಸಾಗರದ ಅಲೆ ಬಿರುಗಾಳಿಯ ದಾಟಿ
ಕಷ್ಠವು ದೂರ ಸ್ನೆಹವು ಒಂದೇ ಎಂದು ಹಾಡಿ
ಕ್ಷಮೆಯೆಂಬುದ ಮನವರಿತ ಆನಂದಕೆ
ಸರ್ಯ ಚಂದ್ರರೇ ಸಾಕ್ಷಿ
ಅರಿತ ಸತ್ಯಕೆ ಆತ್ಮವೇ ಸಾಕ್ಷಿ
ಈ ಸಂದೇಶ ನಾವೆಲ್ಲಾ ಸಾರಿ
ಜೀವನವನ್ನು ಆನಂದಿಸೋಣ
ಜೀವನವ ಹಸಿರಿಸೋಣ……
ದಾಂಪತ್ಯವು ಸುಮಧುರವಾದ ಸಂಭಂದ
ಸಮಾ ಮಾಧುಕತೆಯಲ್ಲಿ ಅರುಳುವುದು ಅನುಭಂದ
ಶರೀರ ಭಂಧಾನುಭಂದ ಸಂಭೋಗ
ಮನ ಭಾವನಾಭಂದ ಸಂಯೋಗ
ಭೋಗ ಯೋಗ ನಿರಂತರ
ನಿರಂತರ ಜೀವನ ಬೆಸುಗೆಯೇ……….”ಇಂಟಮಸಿ ಮ್ಯಾರ್ಸ್ (ಬಂಧನದ ಅರವಿನ ಸಂಙ್ಞ)”
* * * * *
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

