ಮನಸು ಮೃದಂಗ
(ಲೇಖನಗಳ ಸಂಕಲನ)
ಶರೀರವೆಂಬುದು ಯಂತ್ರ
ಮಾನವನ ರಸಾಯನಿಕ ಹಾಗು ಭೌತಿಕ ವಿಭಾಗಗಳ ಸಮ್ಮಿಲನವೇ ನಮ್ಮ ದೇಹದ ಪೂರ್ಣ ಸಂಕೀರ್ಣ ಜೈವ ಸಂಚಲನಾ ಯಂತ್ರ. ಈ ಮಾನವನನ್ನು ನಾವು ಯಾವುದೆ ಕಾರ್ಖಾನೆಗೆ ಹೋಲಿಸಬಹುದು. ಕಾರ್ಖಾನೆಯ ಸಂಪೂರ್ಣ ಫಲವು ಕಾಣುವಂತಹ ಮತ್ತು ಕಾಣದಂತಹ ಅಂದರೆ, ಕಾಣುವ ಯಂತ್ರಗಳಿಂದ ಮತ್ತು ಕಾಣದೇ ಇರುವ ಕಾರ್ಮಿಕರ ಶ್ರಮದ ಸಮ್ಮಿಲನದಿಂದಿರಬಹುದು. ಹಾಗೆಯೆ ಮಾನವ ಯಂತ್ರವು ಕೂಡ. ಒಂದನೆಯದು ದೈಹಿಕ ಕಾರ್ಖಾನೆ ಮತ್ತೊಂದು ಮನೋ ಸಂಸ್ಕರಣಾ ಘಟಕ. ದೇಹ ಮತ್ತು ಮನಸ್ಸಿನ ಒಳ ಒಪ್ಪಂದವಿಲ್ಲದೇ ಇದ್ದರೆ ಮಾನವನು ಮನುಜನಾಗಿಯೇ ಉಳಿಯುತ್ತಾನೆ ಹೊರೆತು ಮಾನವೀಯತೆಯನ್ನು ಬೆಳಸಿಕೊಳ್ಳುವುದರಲ್ಲಿ ವಿಫಲನಾಗುತ್ತಾನೆ. ಒಂದು ಕಾರ್ಖಾನೆಯ ಯಶಸ್ಸು ಅನೇಕ ಪೂರ್ವಸಿದ್ದತೆಗಳನ್ನು ಒಳಗೊಂಡಿರುತ್ತೆ.
ನಿರ್ಮಾಣ ಸ್ಥಳ, ಆರ್ಥಿಕ ವ್ಯವಸ್ಥೆ, ರಸ್ತೆ, ಯತೇಚ್ಚ ನೀರಿನ ಸರಬರಾಜು, ಒಳ ಹಾಗು ಹೊರ ಚರಂಡಿ ವ್ಯವಸ್ಥೆ, ಸದಾ ವಿದ್ಯುತ್ ಪೂರೈಕೆ, ವಾಸ್ತು ನೈಪುಣ್ಯತೆ, ನಿಪುಣ ಕಾರ್ಯಕರ್ತರು, ಸರಕಾರದ ಸವಲತ್ತುಗಳು, ಉದ್ಯೋಗಿಗಳ ಆತ್ಮಸ್ಥೆöರ್ಯ, ಯಾಂತ್ರಿಕ ಖರೀದಿ ಮತ್ತು ಹೂಡಿಕೆದಾರನ ಆತ್ಮ ವಿಶ್ವಾಸಗಳೆಲ್ಲವು ಕಾರ್ಖಾನೆಯ ನಿರ್ಮಾಣ ಪೂರಕಗಳಾಗಿರುತ್ತವೆ. ಕಾರ್ಖಾನೆಗೆ ತಕ್ಕ ಕಚ್ಚಾವಸ್ತುಗಳು, ಒಳ್ಳೆಯ ನಿರ್ವಹಣೆ, ಫಲ, ಬೇಡಿಕೆ, ಬೆಲೆ ನಿಗದಿಗಳೆಲ್ಲವು ಹೂಡಿಕೆದಾರರು ನಿರ್ಣಯಿಸಿ ಕಾರ್ಖಾನೆಯ ಅಭಿವೃಧ್ದಿ ಕಡೆ ಗಮನ ವಹಿಸುವರು. ಇವಲ್ಲೆವು ನಾವು ನೋಡುವ ಕಾರ್ಖಾನೆಗಳಿಗೆ ಸಂಬಂಧಪಟ್ಟಿದ್ದಾದರೆ “ಮನುಷ್ಯ”ನೆಂಬ ಕಾರ್ಖಾನೆಯನ್ನು ತಿಳಿಯಬೇಕಲ್ಲವೇ?
ಶರೀರ ಯಂತ್ರವನ್ನು ಸೃಷ್ಠಿಕರ್ತನು ಜನ್ಮ ಜನ್ಮಾಂತರಗಳಿಂದ ಪಂಚಭೂತ ಹಾಗು ಪ್ರಕೃತಿ ಸಂಯೋಗದೊಂದಿಗೆ ಅರ್ಥವಾಗದ ಪೂರ್ವನಿಯೋಜಿತ ಬ್ರಹ್ಮಾನುಸಾರ ಲಿಂಗ ಮಿಲನ ಮಹೋತ್ಸವದಲ್ಲಿ ಅಂಡಾಣು ಹಾಗು ವರ್ಯಾಣು ಸೂಕ್ಷ್ಮ ಕೋಶಗಳ ನಡುವಿನ ಘರ್ಷಣೆಗೆ ತಾಯಿಯ ಗರ್ಬ ಚೀಲದಲ್ಲಿ ವಿಸ್ಮಯಾಕಾರ ದೇವಾನುಗ್ರಹ ದೇವತಾಮನವುಳ್ಳ ಕೂಸು ಬೆಳೆದು ಹೊರಬಂದು ಅತ್ಯಾಕರ್ಷಕವೆಂದು ಕೊಂಡಿರುವ ನಾವು ಹೊರ ಬಂದಿದ್ದೆವೇ. ನಮ್ಮ ಈ ಧಡೋತಿ ಗಾತ್ರದ ಆಕೃತಿಯನ್ನು ಸೃಷ್ಡಿಕರ್ತ ಬೆಳಿಸಿದ್ದಾನೆ. ಮೊದಲೇ ತಿಳಿಸಿದ ಹಾಗೆ ಈ ಆಕಾರವುಳ್ಳ ನಾವುಗಳು ಜೈವ ಯಂತ್ರವೇ ಸರಿ. ಜೀವಿಯೊಳಗೆ ಜೀವ ವಿಜ್ಞಾನಿ ಪಯಣಿಸಿದಷ್ಠು ಈ ಶರೀರ ಅದ್ಬುತ ಹಾಗು ತಿಳಿದುಕೊಂಡೊಷ್ಠು ಪರಮಾಶ್ಚರ್ಯವಾಗುತ್ತದೆ.
ಓದುಗರೆ, ನಾವು ಗ್ರಹಗಳನ್ನು ತಿಳಿಯಲು ಹೊರಿಟಿದ್ದೇವೆ ಆದರೆ ನಾವು ಎಂದೂ ನಮ್ಮ ಒಳಗಿರುವ ಸೂಕ್ಷ್ಮಾ ಸೂಕ್ಷ್ಮ ಒಳ ಬ್ರಹ್ಮಾಂಡವನ್ನು ತಿಳಿಯುವ ಪ್ರಯತ್ನವನ್ನು ಮಾಡುವುದೇ ಇಲ್ಲ. ಕಾರಣ ನಮ್ಮ ಕಣ್ಣುಗಳು ಹೊರ ಪ್ರಪಂಚವನ್ನು ಅರಿಯುತ್ತವೆಯೇ ಹೊರತು ಒಳ ಪ್ರಪಂಚವನಲ್ಲ. ಹೀಗಾಗಿ ಇದನ್ನು ತಿಳಿಯುವ ಗೊಜಿಗೆ ನಾವು ಹೋಗುವುದಿಲ್ಲ. ಈ ಪ್ರಯತ್ನ ಸಾದ್ಯ, ಯಾವಾಗ? ನಾವು ನಮ್ಮ ಒಳ ಕಣ್ಣನ್ನು ತೆರೆದಾಗ ಮಾತ್ರ. ಇದನ್ನೆ ಯೋಗದಲ್ಲಿ ಅಥವ ವೇದದಲ್ಲಿ “ಅಧ್ಯಾತ್ಮ”ವೆನ್ನುವುದು. ಅಂದರೆ ಜ್ಞಾನ ಉಳ್ಳವನಾಗು ಎಂದು. ನಮ್ಮ ಈ ಬೃಹತ್ ಗಾತ್ರದ ಮಾನಸಿಕ ಹಸಿವನ್ನು ನೀಗಿಸಲು ಷಡ್ಐಶ್ವರ್ಯಗಳ ಮಾಯೆಗೆ ಒಳಗಾಗಿ ಲೋಭಿತನಕ್ಕೆ ಮಾರು ಹೋಗುತ್ತೇವೆ. ಈ ವಿಷಯ ಶರೀರದಲಲ್ಲ, ಆದರೆ ನಮ್ಮ ಈ ಮಾರ್ಪಾಟಿಗೆ ತಿಳಿಯದ, ವಿಸ್ಥಾರವಾದ, ನಿಲುಕದ ಮನಸ್ಸಿನ ಘಟಕವೇ ಕಾರಣ.
ಈ ಯಂತ್ರ ಮಾನವನಿಗೆ ಯಾವುದೇ ಪೂರ್ವ ಸಿದ್ದತೆಗಳು ಅಥವ ನಿರ್ಮಾಣಗಳು ಇರುವುದಿಲ್ಲ. ಆದರೆ ಗಂಡು ಮತ್ತು ಹೆಣ್ಣಿನ ಪ್ರೇಮವೊಂದಿದ್ದರೆ ಸಾಕು. ಕಾರ್ಖಾನೆ ಕಟ್ಟಡಗಳಿಗೆ ಒಳ್ಳೆಯ ಬುನಾದಿ, ವಿದ್ಯಾರ್ಹತೆ, ಶ್ರಮ ಮತ್ತು ಶ್ರದ್ದೆಗಳು ಬೇಕಾಗುವ ಅರ್ಹ ಸರುಕಗಳು. ನಮ್ಮ ಮಾನವ ಯಂತ್ರ ನಿರ್ವಹಣಾ ಸಾಮರ್ಥ್ಯ ಅಥವ ಭುನಾದಿ ತಲತಲಾಂತರ ವರ್ಷಗಳಿಂದ ವೃದ್ದಿ ಹೊಂದಿ ಬೆಳದ ಸಮರ್ಥ ಜೀವತಂತುಗಳೇ ಆಧಾರ. ಇದರಿಂದ ಆಗುವ ಮಾನವನ ಜೈವಿಕ ಯಂತ್ರ ಕಾರ್ಯ ನಿರ್ವಹಣೆಯನ್ನು “ಇನ್ನರ್ ಇಂಜಿನಿಯರಿಂಗ್” ಎಂದು ಕರೆಯುವರು.

ಅಣುಗಾತ್ರದ ರಸಾಯನಿಕ ಜೀವತಂತುವಿನಿಂದ ಅಥವ ವಂಶವಾಹಿನಿಯಿಂದ ಹೊರಹೊಮ್ಮಿದ ನಮ್ಮ ಆಕಾರ, ಬಣ್ಣ, ಸೌಂದರ್ಯ ಮತ್ತು ಭಾಹ್ಯರಂಗ ದಾರ್ಶಿನಿಕ ನಡವಳಿಕೆಗಳಾದರೆ, ಅಂತರಂಗದ ಪ್ರಜ್ಞೆ, ಬುದ್ದಿ, ಶೀಲತೆ, ಯೋಚನೆ, ಭಾವನೆ, ಸ್ಮರಣೆ, ಕ್ರಿಯೆ ಹಾಗು ಇಚ್ಚೆಗಳಾಗಿರುತ್ತವೆ. ಈ ಎರೆಡು ರಂಗಗಳು ಸಮರ್ಪಕವಾಗಿ, ಸಂಯೋಜನೆಯಿಂದ, ಸಹಯೋಗಗಳಿಂದ ಕಾರ್ಯ ಪ್ರವೃತ್ತಿಯಲ್ಲಿ ತೊಡಿಗಿದರೆ ಈ ಮಾನವ ಯಂತ್ರವು ತನ್ನ ವ್ಯಕ್ತಿತ್ವದಲ್ಲಿ ಬೆಳುಯುತ್ತಾ ಸಾಗುತ್ತೆ.
ಒಂದು ಕಾರ್ಖಾನೆಯ ಸಮೃಧ್ದ ಬೆಳವಣಿಗೆ ಹಾಗು ವಾಣಿಜ್ಯ ವರ್ಧನೆ ಆ ಕಾರ್ಖಾನೆಯ ಕಚ್ಚಾ ವಸ್ತುವಿನ ಬಳಕೆ, ಒಳ ಸಮ್ಮಿಶ್ರಣ, ಉತ್ಪನ್ನ, ಮೌಲ್ಯ ನಿಗಧಿಗಳನ್ನು ಅವಲಂಬಿಸಿರುತ್ತದೆ. ಹಾಗೆಯೇ ಮಾನವ ಯಂತ್ರ ಮನಸ್ಸಿನ ಘಟಕದ ಸೌಜನ್ಯ, ಸೃಜನ, ಚಾಣಾಕ್ಷತನ, ವಿವೇಕ, ವಿಮರ್ಶೆಗಳು ಆ ಯಂತ್ರಗಳ ವಂಸಪಾರಂಪರ್ಯದಿಂದ(genes) ಬಂದಿರುತ್ತದೆ. ಸರಕಾರದ ನಿಬಂಧನೆಗಳು, ಮೇಲ್ವಿಚಾರಣೆಗಳು ಮತ್ತು ಯಂತ್ರನಿಯೋಜನೆಗಳು ಕಾರ್ಖಾನೆಯ ಗತಿ ಹಾಗು ನಿರ್ಗತಿಗಳನ್ನು ಹೇಗೆ ಸೂಚಿಸುತ್ತೊ ಹಾಗೆಯೇ ಮಾನವನ ಕಾರ್ಖಾನೆಗೆ ಆಯಾ ಪರಂಪರೆ, ಸಂಸ್ಕೃತಿ, ಸುಸಂಸ್ಕೃತತೆ, ವಿದ್ಯಾಭ್ಯಾಸಾ, ಭಾಂದವ್ಯ, ಸಕಾರಾತ್ಮಕ ಅವಲೋಕನ, ಮಾನವೀಯತೆ, ಪರದೃಷ್ಠಿ, ಸೇವಾ ದೃಷ್ಠಿ ಊರ್ಧ್ವಪಥ ಅಥವ ನಿರ್ಪಥಗಳನ್ನು ತಿಳಿಸುತ್ತವೆ.
ಕಾರ್ಕನೆಯಲ್ಲಿ ಕಾರ್ಮಿಕನ ಶ್ರದ್ದಾ ಮನೋಭಾವನೆಗಳ ಮೇಲೆ ಹೇಗೆ ಫಲ ನಿರ್ಧಾರವಾಗುತ್ತೊ ಹಾಗೆಯೇ ಮಾನವ ಯಂತ್ರದ ಸಂಯಮ, ಸಂಯೋಜನೆ ಹಾಗು ಕ್ರಿಯಾ ಶೀಲತೆಗಳಿಂದ ಇವನ ಫಲಾಪೇಕ್ಷೆ ಮತ್ತು ಫಲಶೂನ್ಯತೆಯನ್ನು ನಿರ್ಧರಿಸುತ್ತದೆ. ಕಾರ್ಖಾನೆಯ ಯಂತ್ರಗಳ ಸರಿಯಾದ ಸಂರಕ್ಷಣೆ ಹಾಗು ಒಳ್ಳೆಯ ನಿರ್ವಹಣೆ ಅಭಿವೃದ್ದಿಗೆ ಕಾರಣವಾಗುತ್ತದೆ. ಹಾಗೆಯೇ ಜ್ಞಾನ ಮತ್ತು ಪ್ರಜ್ಞೆಗಳು ಮಾನವ ಯಂತ್ರದ ಏಳಿಗೆಯನ್ನು ಅವಲಂಬಿಸಿರುತ್ತದೆ. ರಾಸಾಯನಿಕ ಕಚ್ಚಾ ವಸ್ತುಗಳ ಸರಿಯಾದ ಸಮ್ಮಿಶ್ರಣದಿಂದ ಹೇಗೆ ಒಂದು ಉದ್ದೇಶಿತ ವಸ್ತು ಉತ್ಪಾದನೆಯಾಗುತ್ತದೊ, ಹಾಗೆಯೇ ಒಳ್ಳೆಯ ಆಹಾರ ಸೇವನೆಯಿಂದ ಮಾನವನ ಯಂತ್ರವು ಸದಾ ಕಾಲ ಆರೋಗ್ಯ ಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗುತ್ತದೆ.
ವಸ್ತುಗಳ ಉತ್ಪಾದನೆಯ ವೇಗ ಹಾಗು ಶ್ರೇಷ್ಠತೆಯ ಅವಲಂಬನೆಗಳು ಸದಾ ವಿದ್ಯುತ್ ನ ಒಳ ಹರಿವು, ವಿದ್ಯುತ್ ತಂತಿಗಳ ಗುಣಮಟ್ಟ, ವಿದ್ಯುತ್ ಉತ್ಪಾದನ ಸ್ಥಾವರ ಅಥವ ಘಟಕಗಳ ಶ್ರೇಷ್ಠತೆ, ಮತ್ತು ವಿದ್ಯುತ್ ಪೂರೈಕೆಗಳಿಂದ ಕೂಡಿರುತ್ತದೆ. ಅದೇ ರೀತಿ ಮಾನವಯಂತ್ರದ ವಿದ್ಯುತ್ ಸ್ಥಾವರ ಚೇತನ ನರ ವ್ಯೂಹಾ ಕೇಂದ್ರವಾಗಿ ಇರುತ್ತದೆ. ಇದನ್ನು “Reticular activating system” ” ಎಂದು ಕರೆಯುವರು. ಮಾನವ ಯಂತ್ರದ ಜೀವನಾಡಿ ಎಲ್ಲಿಯವರೆಗು ಕೆಲಸ ಮಾಡುವುದೊ ಅಲ್ಲಿಯವರೆಗು ಯತೇಚ್ಚವಾಗಿ ವಿದ್ಯುತ್ನ್ನು ಇಡೀ ನರ ಕೇಂದ್ರ ಬಿಂದುಗಳಿಗೆ, ನರ ಮಂಡಲಗಳಿಗೆ, ನರ ಕೋಶಗಳಿಗೆ ಸರಬರಾಜು ಮಾಡುತ್ತಿರುತ್ತದೆ. ಹೃದಯದಲ್ಲಿ ಸಹ ಇಂತಹದ್ದೆ ಇನ್ನೊಂದು ವಿದ್ಯುತ್ ಘಟಕವಿದೆ. ಇದನ್ನು ““auricalar node” ” ಎಂದು ಕರೆಯುತ್ತಾರೆ. ಸೃಷ್ಟಿಕರ್ತನು ಈ ಯಂತ್ರ ಮಾನವನಿಗೆ ಬಳುವಳಿಯಾಗಿ ನೂರು ವರ್ಷ (ಎಲ್ಲವು ಸರಿಯಿದ್ದರೆ) ಬಾಳುವ ಬ್ಯಾಟರಿ (battery) ಯನ್ನು ಧಯಪಾಲಿಸಿರುವನು. ಚೇತನಾ ನರ ವ್ಯೂಹದಿಂದ ತಯರಾದ ವಿದ್ಯುತ್ ಇಡೀ ಮಾನವ ಶರೀರವನ್ನು ತನ್ನ ನರ ತಂತಿಗಳ ವ್ಯವಸ್ತೆಯಿಂದ ಪ್ರವಹಿಸಿ, ಆವರಿಸಿ ಅದರ ಸಂವಹನಾ ಶಕ್ತಿಯಿಂದ ಪ್ರಕೃತಿಯನ್ನು ಅರಿತು ಮೆದುಳಿನ ಲಕ್ಷ ಲಕ್ಷ ಸಂಖ್ಯೆಯುಳ್ಳ ನರ ಕೆಂದ್ರ ಬಿಂದುಗಳಿಗೆ ರವಾನಿಸಿ, ಸಂಯೋಜನಾ ನರ ಘಟಕಗಳಿಂದ ತಿಳಿದು, ವಿಮರ್ಶಿಸಿ, ವಿವೇಕಿಸಿ, ತರ್ಕಿಸಿದಂತಹ ಸಂವಹನಾ ವಿಷಯಗಳನ್ನು ಪ್ರಜ್ಞ, ಜ್ಞಾನ ಹಾಗು ಪ್ರಬುದ್ದತೆ ಜೊತೆಯಲ್ಲಿ ಬೆರಸಿ ಕೊನೆಗೆ ನೆನಪಿನ ಕೋಣೆಯ ಒಳಗೆ ಸಂಸ್ಕರಿಸಿ ಶೇಕರಣೆಗೊಳ್ಳುವುದು. ಮಾನವನ ಮನೋ ಘಟಕ ಕರ್ತವ್ಯಗಳಾದ ಯೋಚನೆ, ಕಾರ್ಯ, ಇಚ್ಚೆ ಹಾಗು ಭಾವನೆಗಳಿಂದ ಶರೀರ ಯಂತ್ರದೊಳಗಿನ ರಸೋಭೌತಿಕ ಕ್ರಿಯೆಗಳ ಸಹಕಾರದೊಂದಿಗೆ ಈ ಮಾನವ ಯಂತ್ರವು ಪ್ರಕೃತಿಯೊಂದಿಗೆ ಇದ್ದು ತನ್ನ ಕರ್ತವ್ಯವನ್ನು ನಿಭಾಯಿಸುತ್ತಿರುತ್ತದೆ.

ಈ ಅಸಮಾನ್ಯ ವಿಸ್ಮಯ ಅಚಲ ನೈಪುಣ್ಯತೆಗಳ ಕಾರ್ಯ ವೈಕರಿಗಳನ್ನು ಅತೀ ಅಣುಗಾತ್ರದಲ್ಲಿ ಹಿಡಿದಿಟ್ಟ ಮಾಹಿತಿ ಕಣವಾದ ನಮ್ಮ ಈ ಜೀವ ತಂತುಗಳ ಸಮ್ಮಿಲನ ತರುವಾಯ ವಿಭಜನೆಗೊಂಡು ರಸಾಯನ ಹಾಗು ಭೌತ ವಿಭಾಗಗಳ ದ್ರವ್ಯ ರಾಶಿಯನ್ನು ಸುರಿಸಿ ಬೆಳೆದ ಈ ಮಹಾನ್ ಶರೀರ ಹಾಗು ಮನಸ್ಸಿನ ರಚನೆಯನ್ನು ಮಾಡುವ ಈ ಶಿಲ್ಪಿಧಾತನನ್ನು ಮರೆಯಲು ಸಾದ್ಯವೆ? ಇವುಗಳೆಲ್ಲವನ್ನು ತಿಳಿಸಿದ ವಿಜ್ಞಾನಿಗಳನ್ನು ನೆನೆಯಬಾರದೇಕೆ? ಇದೇ ಕಾಣುವ ಯಂತ್ರ ಮತ್ತು ಕಾಣದ ಮನೋ ಮಂತ್ರಗಳ ಸಮ್ಮಿಶ್ರಣದ ವಿಶೇಷಗಳನ್ನು ಜೈವಿಕ ಹಾಗು ತಾಂತ್ರಿಕ ವಿಭಾಗದಲ್ಲಿ ಅರಿಯುವಂತಹಾ ವಿಜ್ಞಾನವನ್ನು “medico biological engineering ಎನ್ನುವರು.
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

