ಮನಸು ಮೃದಂಗ
(ಲೇಖನಗಳ ಸಂಕಲನ)
ಪ್ರೀತಿ ನಂಜು
ನಮ್ಮ ಯಾಂತ್ರಿಕ ಜೀವನ ಜಂಜಾಟದಲ್ಲಿ ‘ರಜೆ’ ಎಂದರೆ ಎಲ್ಲಿಲ್ಲದ ಖುಷಿ. ಕೆಲವರು ಪ್ರಕೃತಿ ಸೊಬಗನ್ನು ಸವಿದು ಮನ ತಣಿಸಿಕೊಳ್ಳುತ್ತಾರೆ. ಇನ್ನು ಕೆಲವರು ಮನೆಯ ಉಳಿದ ಕೆಲಸ ಮಾಡಿ ವಿಶ್ರಾಂತಿ ಬಯುಸುತ್ತಾರೆ. ಆದರೆ ನನಗೆ ಮತ್ತು ನನ್ನ ಟೆನ್ನಿಸ್ ಆಟದ ಸ್ನೇಹಿತರಿಗೆ ರಜಾ ದಿನಗಳು ಬಂತೆದರೆ ಅರ್ಧ ಅಥವ ಒಂದು ತಾಸು ಹೆಚ್ಚು ಆಟವಾಡಿ ದಣಿದು, ನಕ್ಕು, ಕುಪ್ಪಳಿಸಿದರೆ ಆ ಮಜವೇ ಬೇರೆ. ಅಂತಹ ಒಂದು ರಜಾ ದಿನದಂದು ನನ್ನ ಆಟದ ಸ್ನೆಹಿತ ನಮ್ಮ ಟೆನ್ನಿಸ್ ಅಂಗಳದ ಕಾರಿಡರ್ನಲ್ಲಿ ವಿರಮಿಸುತ್ತಿದ್ದಾಗ ಆಳವಾದ ಯೋಚನಾ ಚಿತ್ತದೊಂದಿಗೆ ಅಲ್ಲಿ ಹರಡಿದ್ದ. ಎಲ್ಲಾ ದಿನ ಪತ್ರಿಕೆಗಳನ್ನು ಏಕಾಗ್ರತೆಯಿಂದ ಓದುತಿದ್ದ. ಆಡಿ ದಣಿದು ಆಸೀನನಾಗಿದ್ದ ನನಗೆ “ಏನಯ್ಯಾ, ನೀನು ಮಾನಸಿಕ ಡಾಕ್ಟರ್ ಅಂತೀಯಾ, ಮನಸ್ಸಿಗೆ ಬೇಜಾರು ಹಾಗೂ ನೋವು ಆಗಬಾರದೆಂದರೆ ಏನು ಮಾಡಬೇಕು ಹೇಳು”? ಎಂದು ಪ್ರಶ್ನೆ ಹಾಕಿದ. ಆ ಪ್ರಶ್ನೆಗೆ ಸ್ವಲ್ಪ ಅವಕ್ಕಾದರೂ ಸಾವಧಾನಿಸಿಕೊಂಡು “ನಿನಗೆ ಬೇಜಾರು ಆಗಬಾರದು ಎನ್ನುವದಾದರೆ ದಿನ ಪತ್ರಿಕೆಗಳನ್ನು ಓದಬೇಡ, ದೂರದರ್ಶನ ವಾಹಿನಿಗಳನ್ನು ನೋಡಬೇಡ” ಎಂದೆ.
ಹೌದು ಓದುಗರೆ, ಆ ದಿವಸದಂದು ನಮ್ಮ ದುರ್ದೈವವೊ ಏನೋ ತಿಳಿಯದು, ಆ ದಿನ ಎಲ್ಲಾ ದಿನ ಪತ್ರಿಕೆಗಳ ಮುಖ ಪುಟಗಳಲ್ಲಿ ಹತ್ಯೆ, ಆತ್ಮಹತ್ಯೆ ಮತ್ತು ಅಂದು ಅನೇಕ ಅವಘಡಗಳು ಸಂಭವಿಸಿದ್ದ ವರದಿಗಳು ಮುದ್ರಣವಾಗಿತ್ತು.
“ಶೀಲ ಶಂಕಿಸಿ ಪತಿ ಪತ್ನಿಯನ್ನ ಸುಟ್ಟ”
“ಮತ್ತೊಂದು ರ್ಯಾದೆ ಹತ್ಯೆ, ಉತ್ತರ ಪ್ರದೇಶದಲ್ಲಿ”
“ಭಗ್ನ ಪ್ರೇಮಿ, ಪ್ರಿಯತಮೆಯನ್ನು ಚಾಕುವಿನಿಂದ ಇರಿದ”
“ಎರಡು ಮಕ್ಕಳ ತಾಯಿ ಯುವ ಪ್ರೇಮಿಯ ಜೊತೆ ಪರಾರಿ”
“ಗಂಡನನ್ನು ಕೊಂದು ಮಾಜಿ ಪ್ರೇಮಿಯ ವರಿಸಿದ ಪಾಪಿ”
ಎಂದೆಲ್ಲಾ ಪ್ರಕಟವಾಗಿರುವುದನ್ನು ಗಮನಿಸಿ ಸ್ನೇಹಿತ ನನಗೆ ಆ ಪ್ರಶ್ನೆ ಕೇಳಿದ್ದ. ಪ್ರಾಯಶಃ ಈ ವರದಿಗಳನ್ನು ಓದಿದ ಯಾರೇ ಸಾಮಾನ್ಯ ವ್ಯಕ್ತಿಯ ಮನಸ್ಸು ನೊವ್ವಾಗುವದು ಸಹಜ. ಇಂದಿನ ಯಾಂತ್ರಿಕ ಬದುಕಿನಲ್ಲಿ, ಮಾಹಿತಿ ತಂತ್ರಜ್ಞಾನವು ಹೆಚ್ಚಾದಂತೆ, ಸಾಮಾಜಿಕ ತಾಣಗಳನ್ನೆ ಗಂಡ ಹೆಂಡತಿಯೆಂದು ನಮ್ಮ ಯುವಕರು ಭಾವಿಸುತಿದ್ದಾರೆ. ಅವರ ಪೋಷಕರ ಮುಂದೆ ಕಾಡುವ ಸಹಜವಾದ ಪ್ರಶ್ನೆ “ಏನು, ಪ್ರೀತಿ ಪ್ರೇಮಗಳೆಂಬುದು ಆಷ್ಟು ಶಕ್ತಿ ಶಾಲಿಯೇ”?
ಸಂತ, ಸ್ವಾಮಿ ವಿವೇಕಾನಂದರು ಅಮೆರಿಕ ಪ್ರವಾಸದಲ್ಲಿದ್ದಾಗ ನ್ಯೂಯಾರ್ಕ್ ಪುರಭವನದಲ್ಲಿ ಪ್ರೇಮದ ಬಗ್ಗೆ ಪ್ರವಚಿಸುತ್ತಿದ್ದನು. ಆಗ ಅಲ್ಲಿಯ ಯುವ ಮಹಾಷಯನೊಬ್ಬ ಎದ್ದು ನಿಂತು ಕುಚೋಧ್ಯಯಿಂದ You, man from the mystique east, tell what is love?“(ಏ ಮಾನವನೆ, ಸಾಗರದ ಆಚೆಯಿಚಿಂದ ಬಂದಿರುವನೆ, ಹೇಳು ಪ್ರೀತಿಯಂದರೇನು?) ಎಂಬ ಪ್ರಶ್ನೆಯನ್ನು ಕೇಳಿದ. ಸ್ವಾಮಿ ವಿವೇಕಾನಂದರು ವಿವೇಕ ಚಿತ್ತ ತಾಳೆ್ಮ ವಹಿಸಿ ಹಸನ್ಮುಖಿಯಾಗಿಯೆ ಉತ್ತರಿಸಿದರು.
‘Love is Thee has no fear,
Love is Thee do not expect,
Love is Thee for service,
Love is Thee only for love sake’

“ಪ್ರೀತಿಗೆ ಭಯವಿಲ್ಲ,
ಪ್ರೀತಿಗೆ ಫಲಾಪೇಕ್ಷವಿಲ್ಲ,
ಪ್ರೀತಿ ಪರರಿಗೆ ಮಾತ್ರ,
ಪ್ರೀತಿಯೆನ್ನುವುದು ಪ್ರೇಮಕ್ಕೆ ಮಾತ್ರ ಮೀಸಲು”
ಈ ಉತ್ತರವನ್ನು ಕೇಳಿ ಆ ಯುವಕ ಅವಕ್ಕಾದ. ಇವರ ಪ್ರವಚನ ಕೇಳಲು ಸೇರಿದ್ದ ಸಹಸ್ರಾರು ಅಮೇರಿಕನ್ನರು ಚಪ್ಪಾಳೆ ಸುರಿಸಿದರು. ಪ್ರೀತಿ, ಪ್ರೇಮ ಯುವಕರ ಮನಸ್ಸಿನಲ್ಲಿ ‘ಜನ್ಮ ಸಿದ್ದ ಹಕ್ಕು’ ಎನ್ನುವ ಧೋರಣೆ. ಈ ನಕಾರಾತ್ಮಕ ನಿಲುವು ಸಕಾರತ್ಮಕ ನಿಲುವಿಗೆ ಪರಿವರ್ತನೆಯಾದರೆ ಒಳಿತು, ಇಲ್ಲವಾದರೆ ನರಕ ಸದೃಶ ಕಂಡಿತ. ಯುವಕ ಅಥವ ಹದಿಹರೆಯದ ಮೂಲ ತತ್ವ “ಹದವನ್ನು ಅರಿಯದವ” ಎಂದು.
ಈ ಸ್ಥಿತಿಯಲ್ಲಿ ಅವರ ಪ್ರೇಮ ಭಾವನೆ ಹೇಗಿರುತ್ತದೆ.
“ಪ್ರೀತಿ ಹಾಗು ಪ್ರೇಮ ದೇವರ ಸಮಾನ, ಇದನ್ನು ದೇವರೇ ಬಂದರೂ ಬೇರ್ಪಡಿಸಿಲು
ಸಾಧ್ಯವಿಲ್ಲ, ಬೆರ್ಪಡಿಸುವ ಹಕ್ಕು ಯಾರಿಗು ಇಲ್ಲ, ಯಾರು ಏನು ಮಾಡುತ್ತಾರೋ
ನೊಡೇ ಬಿಡೋಣ”.
ಯುವಕರ ಮಿದುಳು ಗಾತ್ರದಲ್ಲಿ ಸಮಾನವಾದರು ತಿಳುವಳಿಕೆಯಲ್ಲಿ ಕಮ್ಮಿಯೇ. ಇವರ ಬಿಸಿ ರಕ್ತ, ಅಹಂ ಭಾವನೆ, ಪಾಶ್ಚಾöತ್ಯರ ಪ್ರಭಾವ, ಅಪೂರ್ವ ಸಂಸ್ಕೃತಿ, ಅಜ್ಞಾನ, ಕೆಟ್ಟ ಸ್ನೇಹಿತರ ಒಡನಾಟ, ದುಸ್ಸಾಹಸ, ಮಾದಕ ವಸ್ತುಗಳ ಸೇವನೆ ಮತ್ತು ಪೂರ್ಣತೆಯ ಕೊರತೆಗಳೆಲ್ಲವೂ ನಕಾರಾತ್ಮಕ ಪ್ರೀತಿ ಪ್ರೇಮಗಳಿಗೆ ಕಾರಣಗಳಾಗುತ್ತದೆ. ವಿವೇಕವಿಲ್ಲದ, ತರ್ಕಹೀನ ಪ್ರೀತಿ ಪ್ರೇಮಗಳು ವಿರುದ್ದ ಕಟ್ಟುಪಾಡುಗಳಿಗೆ ಸಿಲುಕಿ ಜೀವನ ರ್ಯಂತ ಬಿಡಿಸಿಲಾಗದ ಗಂಟುಗಳಾಗಿ ವಿಚ್ಚೇದನೆ, ಮಾಂಸದಂದೆ, ಕ್ಷಲ್ಲಕ ಕಾರಣಕ್ಕೆ ಹತ್ಯೆಗಳು, ವಿನಾಕಾರಣ ಆತ್ಮಹತ್ಯೆಗಳು, ಮಾನಸಿಕ ಚಂಚಲತೆ, ನ್ಯೂನತೆ ಮತ್ತು ವಿಕಲ್ಪಗಳಿಗೆ ತಿರುಗಿ ಪರಿತಪಿಸಿತ್ತಿರುವರನ್ನು ನಾವು ನೊಡುತ್ತಿದ್ದೇವೆ. ಇಲ್ಲಿ ಬೇಕಾಗಿರುವದು ಜ್ಞಾನ, ಸಹನೆ, ಸಂಯಮ, ವಿವೇಕತನ ಹಾಗು ಅರ್ಥಗಳು ಸರಿಯಾದ ಮಾನದಂಡಗಳು. ಈ ಅಳತೆಗೋಲುಗಳನ್ನು ಸರಿಯಾಗಿ ಉಪಯೋಗಿಸಿದರೆ ಹಾಗು ಅನುಸರಿಸಿದರೆ ಸಂಸಾರವು ರಸೋದ್ಬರಿತವಾಗಿ ಇರುತ್ತೆನ್ನುವದನ್ನು ನಾವು ಮರೆಯಬಾರದು.
ಸ್ವಾಮಿ ವಿವೇಕಾನಂದರು ಹೇಳಿದಂತೆ ‘ಅರ್ಥಪೂರ್ಣ ಅಥವ ಸೃಜನಶೀಲ ಪ್ರೀತಿ ಪ್ರೇಮಗಳಿಗೆ ಭಯವಿಲ್ಲ’, ಇದು ಯಾವತ್ತೂ ಅಪೇಕ್ಷಾಹೀನ, ಇವುಗಳು ಎಂದೆಂದಿಗೂ ಪರರಿಗೆ ಮೀಸಲು ಮತ್ತು ಸಜ್ಜನರ ಪ್ರೀತಿ ಪ್ರೇಮ ಸಜ್ಜನರಿಗೆ ಮಾತ್ರವಲ್ಲದೆ ಸಮಸ್ತ ಜೀವ ಕೋಟಿಗೂ ಅನ್ವಯವಾಗಿರುತ್ತದೆ. ಯಾವತ್ತೂ ಪ್ರೇಮ ಪ್ರೇಮವಾಗಿಯೆ ಉಳಿಯಬೇಕು, ಕಾಮ ಕೇಳಿಯಾಗಬಾರದು. ಇದರ ಅರ್ಥ, ಪ್ರೀತಿ ನಮ್ಮ ಪಂಚೇAದ್ರಿಯಗಳಿಗೆ ಸೀಮಿತಗೊಳ್ಳದೆ ಉದಾರತೆಯ ಸಿರಿ ಹಾಗು ಹೃದಯದ್ಬರಿತವಾಗಿರಬೇಕು. ಸಂತ ಶಿಶುನಾಳ ಷರೀಫ ತನ್ನ ವಚನ ಸಾಹಿತ್ಯದ ಮೂಲಕ ತನ್ನ ಉದಾರ ಪ್ರೇಮವನ್ನ ನಮಗೆಲ್ಲಾ ಸಾರಿದರು, ಡಿ.ವಿ. ಗುಂಡಪ್ಪನವರು ತಮ್ಮ ಮಂಕು ತಿಮ್ಮನ ಕಗ್ಗದ ಕವಿತೆಗಳ ಮೂಲಕ ನಮ್ಮ ಮೌಢ್ಯತೆಗಳನ್ನು ನಮ್ಮಲ್ಲೆ ನೋಡಿಕೊಳ್ಳುವಂತೆ ಮಾಡಿ ನಮ್ಮೆಲ್ಲರ ಪ್ರೀತಿಯನ್ನು ಸಂಪಾದನೆ ಮಾಡಿದ್ದರು. ಮದರ್ ತೆರೆಸಾ ಅವರ ಅರ್ಥಪೂರ್ಣ ಸೇವಾ ಮನೋಭಾವದಿಂದ ನಮ್ಮಲ್ಲೆರ ಹೃದಯದಾಳದಲ್ಲಿ ಅವರನ್ನು ದೇವತಾ ಸ್ವರೂಪಿ ಎಂದೇ ನೋಡಿದ್ದೇವೆ. ಗಾಂಧೀಜಿಯವರ ನಿಸ್ವಾರ್ಥ ದೇಶಾಭಿಮಾನದಿಂದ ನಮ್ಮ ರಾಷ್ಟçವನ್ನು ಪಾಶ್ಚಾತ್ಯರ ಕಪಿಮುಷ್ಟಿಯಿಂದ ಮುಕ್ತಿ ಗೊಳಿಸಿದರು. ಅವರ ಈ ಅಹಿಂಸಾ ಮಾರ್ಗ, ಪ್ರೇಮ ಭಿಕ್ಷೆ ನಮಗೆಲ್ಲಾ ಸ್ವತಂತ್ರ ಸಿಗಲಿ ಎಂಬುದೇ ವಿನಹ, ಅವರು ಪ್ರಧಾನ ಮಂತ್ರಿ ಆಗಬೇಕೆಂದಲ್ಲಾ. ಹೀಗಾಗಿ ಗಾಂಧೀಜಿಯವರು ನಮ್ಮ ಮನಸ್ಸಿನಲ್ಲಿ ಮಾಹಾತ್ಮರಾಗಿಯೇ ಉಳಿದು ಬಿಟ್ಟರು.
ಸ್ನೇಹಿತರೆ ನಾನೊಬ್ಬ ಮನೋ ವೈದ್ಯನಾದ್ದರಿಂದ ನನ್ನದೆ ರೀತಿಯಲ್ಲಿ ಈ ಪ್ರೇಮವನ್ನು ತಿಳಿಸುವೆನು. ಈ ವಿಚಾರ ನನ್ನ ವೈಯುಕ್ತಿಕವಷ್ಟೇ, ಕೆಲವರಿಗೆ ತಪ್ಪು ಅಂತಲೂ ಅನಿಸಬಹುದು.
“ಪ್ರೇಮ ಹಾಗು ದ್ವೇಷ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದನ್ನು “ಪ್ರೀತಿ ಮತ್ತು ದ್ವೇಷದ ಸಂಭಂದ (LOVE AND HATE RELATIONSHIP)” ಎಂದು ಸಹ ಕರೆಯುವರು. ಪ್ರೀತಿ ಮಾಡಿದ್ದಾತ ತನ್ನಲ್ಲಿರುವ “ನಾನು” ಎಂಬುದನ್ನು ತನ್ನಲ್ಲೆ ಇರಸಿಕೊಳ್ಳದೆ ಈ ಸರ್ವಸ್ವವನ್ನೂ ತನ್ನ ಪ್ರಿಯತಮಗೆ ಧಾರೆ ಎರೆಯುತ್ತಾನೆ. ಇದರಿಂದಾಗಿ ಇವನ ಪ್ರೇಮ ಭಾವ ಶೂನ್ಯದಿಂದ ಹಗುರವಾಗಿ ತೇಲುತ್ತಿರುತ್ತಾನೆ. ಹಾಗೆಯೇ ಪ್ರೇಮದ ಗುಂಗಿನಲ್ಲಿ ಹಕ್ಕಿಯಂತೆ ಹಾರುತ್ತಿರುತ್ತಾನೆ. ಇಂತಹ ಸಮಯದಲ್ಲಿ ಎಲ್ಲವು ಸರಿಯಾದರೆ ಅನುರಾಗವು ಮೂಡುತ್ತೆ. ಈ ಅನುರಾಗವು ಎಷ್ಟು ಆಳವಾಗಿ ಬೇರೂರುತ್ತೊ ಅಷ್ಟೇ ಆಳವಾಗಿ ಪ್ರಿಯತಮೆ ಹತ್ತಿರವಾಗತೊಡಗುತ್ತಾಳೆ. ಹತ್ತಿರವಾದಂತೆ ಇವನ ನರನಾಡಿಗಳಲ್ಲು ಅವಳೇ ತುಂಬಿ ಹೋಗಿರುತ್ತಾಳೆ. ಇದನ್ನು LOVE TOXICITY (ಪ್ರೀತಿ ನಂಜು) ಎಂದು ಕರಿಯಬಹುದು.
ಈ ಹುಚ್ಚಾಟದಲ್ಲಿ ಅವನ ಪ್ರೀತಿ ಹೆಚ್ಚಾದಂತೆ ಅನುಮಾನವು ಹೆಚ್ಚಾಗತ್ತಾ ಹೋಗುತ್ತೆ. ಈತನು ಎಂದು ಅವಳನ್ನು ಅನುಮಾನಿಸಿತ್ತಾನೊ ಅಂದೇ ಆ ಘಳಿಗೆಯಲ್ಲೆ ಅರವತ್ತು ಕೇಜಿ ತೂಕದ ತನ್ನ “ನಾನು” ಅನ್ನೊ ತನವನ್ನು ಈ ಹಿಂದೆ ಆಕೆಗೆ ಅರ್ಪಿಸಿರುತ್ತಾನೊ ಅಷ್ಟೇ ತೂಕವು ತನ್ನ ಮೇಲೆ ಬಿದ್ದಂತೆ ಬಾಸವಾಗಿ ತನ್ನಲ್ಲಿ ಮೊದಲೇ ಇದ್ದ ಕಿಡಿಯ ಜೊತೆ ಈ ಕಿಚ್ಚಿನ ಕಿಡಿ ಘರ್ಷಣೆಯಿಂದ ಬೃಹತ್ ಅಗ್ನಿಶಕ್ತಿಯಾಗಿ ಪರಿವರ್ತನೆಗೊಂಡು ಹೊರ ಹೊಮ್ಮಿದರೆ ಹತ್ಯೆಯಾಗುತ್ತೆ, ಒಳಹೊಕ್ಕರೆ ಆತ್ಮಹತ್ಯೆಯಾಗುತ್ತೆ ಅಲ್ಲವೆ”?
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ


[…] ಪ್ರೀತಿ ನಂಜು […]