ಮನಸು ಮೃದಂಗ
(ಲೇಖನಗಳ ಸಂಕಲನ)
ಕ್ಷಣದ ಅನುಭವ
ನಮ್ಮ ಈ ಬ್ರಹ್ಮಾಂಡದಲ್ಲಿ ನಮಗೆ ಕಾಣುವ ದ್ರವ್ಯ ರಾಶಿ ಶೇಕಡ ನಾಲ್ಕು ಮಾತ್ರ. ಆದರೆ ಕಾಣದಿರುವ ದ್ರವ್ಯ ರಾಶಿ ಶೇಕಡ ತೊಂಬತ್ತಾರು. ಜ್ಯೋತಿಷ್ಯ ಶಾಸ್ತ್ರದವರು ಮಾದ್ಯಮಗಳ ಮೂಲಕ ಪದೇ ಪದೇ ಉಲ್ಲೇಖಿಸುವ “ಪ್ರಳಯ” ಯಾವುದೆಂದರೆ ನಮಗೆ ಕಾಣದ ಆಕಾಶ ಕಾಯವೊಂದು ಭೂಮಿಗೆ ಬಂದು ಅಪ್ಪಳಿಸುತ್ತೆನ್ನುವದು. ಕಾಲ ಕಳೆದರೂ ಅಂತಹ ಸ್ಥಿತಿ ಪ್ರಸ್ಥುತದಲ್ಲಿ ಭೂತವಾಗಿಯೆ ಉಳಿದಿದೆ.
ಹುಟ್ಟು ಹಾಗು ಸಾವು ಹೇಗೆ ಸತ್ಯವೊ ಹಾಗೆಯೆ ಪ್ರಳಯ ಕೂಡ ಸತ್ಯ, ಆದರೆ ಎಂದು ಅನ್ನುವದೇ ಪ್ರಶ್ನೆ. ಸಹಜವಾಗಿ ಹುಟ್ಟಿದ ಮಾನವನಿಗೆ ಬದಕಲೇ ಬೇಕೆನ್ನುವುದು ಸತ್ಯ. ಪ್ರಳಯ ನಾಳೆ, ನಾಳಿದ್ದ್ದು ಅಂತ ಹೇಳಿ ಬದುಕಿ ಬಾಳುತ್ತಿರುವ ಮಾನವನಿಗೆ ಅನಗತ್ಯವಾಗಿ ಭಯವನ್ನು ತುಂಬಿ ಮಾನಸಿಕ ತೊಳಲಾಟಕ್ಕೆ ಕಾರಣರಾಗಿದ್ದಾರೆ.
ಬ್ರಹ್ಮನ ಹುಟ್ಟು ಮತ್ತು ಸಾವು ಇಂದಿನ ವೈಜ್ಞಾನಿಕ ಯುಗದಲ್ಲಿ ಸಾದ್ಯವೆ? ಈ ಪ್ರಶ್ನೆಗೆ ಅನೇಕ ಭೌತ ಶಾಸ್ತ್ರದ ವಿಜ್ಞಾನಿಗಳು ಶ್ರಮವಹಿಸುತ್ತಿರುವರೇ ಹೊರತು ಉತ್ತರ ಇನ್ನೂ ಅವರಿಗೆ ಸಿಗಬೇಕಾಗಿದೆ. ಬ್ರಹ್ಮನಲ್ಲಿ ಅಡಗಿರುವ ಕಾಣುವ ಹಾಗು ಕಾಣದೇ ಇರುವ ದ್ರವ್ಯ ರಾಶಿಯ ಘನ ಸಾಂದ್ರತೆಯನ್ನು ಘನೀಕರಿಸಿ ಗಣಕಯಂತ್ರದ ಮೂಲಕ ವಾಸ್ತು ಸ್ಥಿತಿಯನ್ನು ನಮ್ಮ ಮಾಹಿತಿ ತಂತ್ರಜ್ಞಾನ ತಿಳಿಸಿದ್ದೇ ಆದರೆ ಮತ್ತು ಕಾಲ ನಿಯಮದಲ್ಲಿ ಕಾಣದೇ ಇರುವ ಕ್ಷಣ ಅಥವ ಗಳಿಗೆಯನ್ನು ಸಮರ್ಪಕವಾಗಿ ಮಾನವ ಉಪೊಯೂಗಿಸಿದ್ದೇ ಆದರೆ ನಮ್ಮ ಈ ಅಗೊ ಬ್ರಹ್ಮನ ಸಾವು ಮತ್ತು ಹುಟ್ಟು ತಿಳಿಯಬಹುದಾಗಿದೆ.
ಈ ಕಾರ್ಯ ಮಾನವನಿಗೆ ಅಸಾದ್ಯವಾದ್ದರಿಂದ ಹುಟ್ಟು ಸಾವು ಕರಾರುವಕ್ಕಾಗಿ ನಮಗೆ ತಿಳಿಯಲು ಆಗುತ್ತಿಲ್ಲ. ಮೂರುವರೆ ಸಾವಿರ ವರ್ಷಗಳ ಹಿಂದೆ ಪಥಂಜಲಿ ಮಹಾ ಋಷಿ ತನ್ನ ಕೈವಲ್ಯ ಪಾದದಲ್ಲಿ
ಕ್ಷಣ ಪ್ರತಿಯೋಗಃ ಪರಿಣಾಮ ಅಪರಾಂತ ನಿಗ್ರಹ್ಯಃ ಕ್ರಮಾಃ
ಅಂದರೆ, ಕಾಲ ಕ್ಷಣದ ಅಥವ ಗಳಿಗೆಯ ವ್ಯವಹಾರದ ಕೊನೆ ಹಿಂದಿನ ಕ್ರಮಕ್ಕೆ ಅನುಗುಣವಾಗಿರುತ್ತೆ.
ಈ ಸೂತ್ರದ ಪ್ರಕಾರ ಎರಡು ಕ್ರಮಗಳ ಮದ್ಯೆ ಶೂನ್ಯವಿದೆ ಎಂದಂತಾಯಿತು. ಅಂದರೆ ವರ್ತಮಾನ ಕಾಲದ ಉಳಿವು ನಶ್ವರ. ಇನ್ನೂ ಸುಲಭವಾಗಿ ಹೇಳುವುದಾದರೆ ಹಿಂದಿನ ಹಾಗು ಮುಂದಿನ ಕಾಲವಷ್ಟೇ ಪ್ರಸ್ಥುತ. ಇಂದಿನ ವಿಜ್ಞಾನಿಗಳು ಈ ಶೂನ್ಯ ಮದ್ಯ ಕಾಲವನ್ನ ತಿಳಿದು ಸಕಾರಾತ್ಮಕವಾಗಿ ಬಳಸಿದ ಪಕ್ಷದಲ್ಲಿ ನಾವು ಬ್ರಹ್ಮನನ್ನ ಅರಿಯಬಹುದು. ಈ ಕ್ಷಣವನ್ನು ಇಂಗ್ಲಿಷ್ ನಲ್ಲಿ “ದಟ್ ಮೊಮೆಂಟ್ (that moment)” ಎಂದು ಕರೆಯಲಾಗುವುದು.
ಇದನ್ನು ತಿಳಿದುಕೊಳ್ಳಬೇಕಾದರೆ ನಾವು ಸಿನಿಮಾದ “ರೀಲ್”ಗೆ ಹೋಲಿಸಿಕೊಳ್ಳಬಹುದು. ಸ್ಥಿರ ಚಿತ್ರಣಗಳ ಕ್ರಮವನ್ನು ನಿರ್ಧಿಷ್ಟವಾದ ವೇಗದಲ್ಲಿ ಯಂತ್ರದ ಮೂಲಕ ಪರದೆ ಮೇಲೆ ಬಿಂಬಿಸುವಂತೆ ಮಾಡಿದರೆ ಸ್ಥಿರ ಚಿತ್ರಣಗಳು ಚಾಲಿತ ನೈಜ ಚಿತ್ರವಾಗುತ್ತೆ. ಆ ರೀಲನ್ನು ನಾವು ಯಂತ್ರದ ಮೂಲಕ ತಿರುಗಿಸದೆ ಬರೀ ಕಣ್ಣಲ್ಲಿ ನೋಡಿದಾಗ ಒಂದು ಸ್ಥಿರ ಚಿತ್ರ ಹಾಗೂ ಮತ್ತೊಂದು ಸ್ಥಿರ ಚಿತ್ರದ ಮದ್ಯೆ ಕಾಲಿ ಜಾಗ ಇರುವುದನ್ನು ಗಮನಿಸಬಹದು. ಆದುದರಿಂದ ಚಿತ್ರವು ಎರೆಡು ಆಯಾಮಗಳ ಒಳಗೆ ನಿಜದಂತೆ ನಮ್ಮ ಕಣ್ಣುಗಳಿಗೆ ಗೋಚರಿಸುತ್ತದೆ. ಆದರೆ ಚಿತ್ರವು ನೈಜ ಸಂಚಲನಾ ನಿರಂತರ ಹೀನತೆಯಿಂದ ಕೂಡಿದ್ದಾಗಿರುತ್ತದೆ. ಅಂದರೆ ಅವಿಚಿನ್ಹದ ಕೊರತೆಯನ್ನು ನಾವು ಕಂಡುಕೊಳ್ಳಬಹುದು. ಇದು ನಿಜವಾದರೆ ನಮ್ಮ ಕಾರ್ಯ ಪ್ರವೃತ್ತಿ ಅಖಂಡದಂತೆನಿಸಿದರೂ ತುಂಡು ತುಂಡಾಗಿಯೇ ಇರುವದು. ಈ ಈರ್ವ ತುಂಡುಗಳ ಮದ್ಯ ಸಮಯವನ್ನು ಹಿಡಿದು ವ್ಯವಹರಿಸದರೆೆ ನಮ್ಮ ಸಮಸ್ತ ಮೂಲ ಅಥವ ಹುಟ್ಟು ತಿಳಿದುಕೊಳ್ಳಬಹುದು. ಹುಟ್ಟು ಗೊತ್ತಾದರೆ ಸಾವು ಸಹ ತಿಳಿಯಬಹುದು. ಈ ಶೂನ್ಯತೆಯ ಮಹತ್ವವನ್ನು ಮಹಾನ್ ಬುದ್ಧ “ಶೂನ್ಯ ಶಾಸ್ತ್ರ (ZERO THEORY)“ವೆಂದು ಕರೆದು ತನ್ನ ‘ಮಹಾಯಾನ’ ಗ್ರಂಥದಲ್ಲಿ ಬಹು ವಿಸ್ತಾರವಾಗಿ ಈ ವಿಷಯವನ್ನು ಬರೆದು ಚೀನಾ ತಜ್ಞರಿಗೆ ಹಾಗು ಸಿಧ್ಧಾಂತಿಗಳಿಗೆ ಅನುಕೂಲ ಮಾಡಿಕೊಟ್ಟರು. ಆದರೆ ಈ ಬುದ್ಧ ನಮ್ಮ ದೇಶದಲ್ಲೆ ಹುಟ್ಟಿ ಬೆಳೆದು ನಾವು ಅವನನ್ನು ಸರಿಯಾಗಿ ಅರ್ಥೈಸಿಕೊಳ್ಳುವದರಲ್ಲಿ ವಿಫಲವಾದದ್ದು ತೀರಾ ದುರಾದೃಷ್ಟಕರ.
ಈ ವಿಷಯವಾಗಿ ನನ್ನಲ್ಲಿ ಆದ ಆ “ಕ್ಷಣ”ದ ಅನುಭವ ತಿಳಿಸುವೆನು. ಓದುಗರೆ ಈ ವೈರುತ್ಯದ ಕಡೆ ಗಮನ ಹರಿಸಿ. ಈ “ಕ್ಷಣ” ಅಗೋಚರ ಹಾಗು ಸಂವೇದನಾಹೀನ. ಆದುದರಿಂದ ಸಾಮನ್ಯವಾಗಿ ಗಳಿಗೆಗಳನ್ನು ಅಕಾಲಿಕ ಅಘಾತಗಳೆಂದು ಕರೆಯುವರು. ಬಹುತೇಕ ಜನರು ಗಳಿಗೆಗಳನ್ನು ಶುಭವೆಂದು ಮೂಹರ್ತವನ್ನು ಸಹ ಇಡಿಸುವರು. ಅಂತಹ ಅಪಘಾತಗಳಲ್ಲಿ ಸಾವು ಕೂಡ ಒಂದು.
ಅಕಾಲಿಕ ಸಾವನ್ನು ಹೇಗೆ ನಾವು ಆಮಂತ್ರಿಸಬಹುದೊ ಹಾಗಯೆ ಸಾವನ್ನು ಗೆಲ್ಲಬಹುದು. ಅನೇಕ ವೇಳೆ ಅಪಘಾತಗಳು ಮಾನವ ನಿರ್ಮಿತ, ಅಂದರೆ ನಮ್ಮ ಅವಿವೇಕಿತನದಿಂದ ಎಂದುಕೊಂಡರೂ ಕೊನೆಗೆ “ವಿಧಿ” ಬಣ್ಣವನ್ನು ಕಟ್ಟಿ ತರ್ಕಿಸುವರು. ಇದೇ ವಿಧಿಗೆ ಕರ್ಮದ ಪಟ್ಟಿ ಕಟ್ಟಿ ಮರೆತುಬಿಡುವರು. ಪಥಂಜಲಿ ಸೂತ್ರದ ಪ್ರಕಾರ ಕ್ಷಣಗಳು ಕ್ರಮಕ್ಕೆ ಅನುಗುಣವಾಗಿರುತ್ತೆ ಎನ್ನುವುದಾದರೆ ಅನೇಕ ದುರ್ಘಟನೆಗಳನ್ನ ನಮ್ಮ ಸಹನೆ ಹಾಗು ಸಂಯಮದಿಂದ ತಡೆಯಬಹುದು.

ಒಮ್ಮೆ ಕುಟಂಬ ಸಮೇತ ನನ್ನ ಕಾರಿನಲ್ಲಿ ಪಕ್ಕದ ನಗರದಿಂದ ಊರಿಗೆ ವಾಪಸ್ಸಾಗುತಿದ್ದೆವು. ಆಗಿನ್ನು ರಸ್ತೆ ದುರಸ್ತಿ ಕೈಗೊಂಡಿದ್ದಿರಿAದ ಒಂದಗಲಕ್ಕೆ ಡಾಂಬರಿಕರಣ ಮಾಡಿ ಸೈಜ್ಗಲ್ಲುಗಳನ್ನ ಇಟ್ಟಿದ್ದರು. ಆದುದರಿಂದ ವಾಹನ ಸವಾರಿ ಅರ್ಧ ರಸ್ತೆಗೆ ಮಾತ್ರ ಸಿಮಿತವಾಗಿತ್ತು. ನನ್ನ ಆ ಕ್ಷಣ ಚಿತ್ತ ಚೇತನದಿಂದ ಬದಿ ಕೊರತೆಯ ಕಾರಣ ವಾಹನವನ್ನು ನಿಲ್ಲಿಸಿ, ಮೊದಲನೆ ಗೇರಿಗೆ ಹಾಕಿದೆ. ನನ್ನ ಎದುರಿಗೆ ಬರುತ್ತಿದ್ದ ಬಸ್ಸಿನ ಚಾಲಕ ನಿದ್ರೆ ಮಾಡುತಿದ್ದನೋ ಏನೊ ತಿಳಿಯದು.
ಎಡ ಬದಿ ಕಾರ್ಯನಿಮಿತ್ತ ನನ್ನ ಕಾರು ಬಲ ಬದಿ ಇದ್ದದರಿಂದ ಒಮ್ಮಲೆ ವಿರುದ್ದ ದಿಕ್ಕಿನಿಂದ ಬಂದ ಬಸ್ಸು ನನ್ನ ಕಾರಿನ ಮೇಲೆ ಮುಖಾ ಮುಖಿ ಎದುರಾಯಿತು. ತಕ್ಷಣ ನನ್ನ ವಾಹನವನ್ನು ಸೈಜ್ ಕಲ್ಲುಗಳ ಮೇಲೆ ಹರಿಸಿದ್ದರಿಂದ ನಾವುಗೆಳಲ್ಲೆರು ಪಾರಾದೆವು. ಆ ಸಮಯದಲ್ಲಿ ಹೋದ ಜೀವ ಬಂದಂತಾಯಿತು. ಒಟ್ಟಾರೆ ನಮ್ಮ ಜೀವ ಉಳಿಯಿತು. ಈ ವಿಷಯವನ್ನು ನನ್ನ ಸ್ನೇಹಿತರಿಗೆ ತಿಳಿಸಿದಾಗ “ಆ ಗಳಿಗೆ ಚೆನ್ನಾಗಿತ್ತು ಕಣಯ್ಯ” ಎಂದು ಹೊಗಳಿದರಾದರೂ ಅಂದಿನ ಆ ಕ್ಷಣ ನನ್ನ ಆರನೆ ಆಯಾಮವಲ್ಲವೆ?
ಒಮ್ಮೆ ನನ್ನ ಸಲಹಾ ಕೊಠಡಿಗೆ ಮದ್ಯ ವಯೋಮಾನದ ವ್ಯಕ್ತಿ ತನ್ನ ಕುಟುಂಬ ಸಮೇತ ಸಲಹೆಗೆ ಬಂದ. ಅವರು ಆಗತಾನೆ ಹತ್ತಿರದ ತೀರ್ಥಯಾತ್ರಾ ಸ್ಥಳಗಳನ್ನು ಮುಗಿಸಿ ತಮ್ಮ ವ್ಯವಸ್ಥಿತ ಆತ್ಮಹತ್ಯೆ ವಿಚಾರವಾಗಿ ಸಲಹೆಯನ್ನು ಪಡೆಯಲು ಬಂದಿದ್ದರು. ಈ ಹಿಂದೆ ಎರಡು ಬಾರಿ ಇವನು ಆತ್ಮ ಹತ್ಯೆಗೆ ಯತ್ನಿಸಿದರೂ ಬದುಕಿ ಉಳಿದಿದ್ದ. ಇವನ ಜಿಗುಪ್ಸೆಗೆ ಕಾರಣ ಇವನ ಉದ್ಯೋಗದ ನಷ್ಠ. ಇಡೀ ಕುಟಂಬವೆ ಸಾಯಬೇಕನ್ನುವ ನಿರ್ಧಾರ ಕೈ ಗೊಂಡು ಕೊನೆಗೆ ಮಾನಸಿಕ ವೈದ್ಯರ ಸಲಹೆಯನ್ನು ಪಡಯಬೇಕನ್ನುವ ಉದ್ದೇಶದಿಂದ ಬಂದಿದ್ದರು. ಅರ್ಧ ತಾಸಿನ ನನ್ನ ವೇದಾಂತ, ಮನೋ ವೈಜ್ಞಾನಿಕ ಆತ್ಮ ಸಮಾಲೋಚನೆ ನೀಡಿದ್ದರಿಂದ ಅವರು ಅತ್ಮಹತ್ಯೆ ವಿಚಾರ ಬಿಟ್ಟರೆನಿಸಿತು.
ಇದರ ಜೊತೆಯಲ್ಲೆ ಆರ್ಥಿಕ ಸಂಕಟದ ಪರಿಹಾರ ಮಾರ್ಗವನ್ನು ಸೂಚಿಸಿದ್ದಿರಿಂದ ಅವರು ಉಧ್ಯೋಗ ಮುಂದುವರಿಸುವ ವಿಚಾರ ಮಾತನಾಡಿದರು. ಆ ಕ್ಷಣ ಕಾಲದ ಅವರ ಸಲಹಾ ನಿರ್ಧಾರ ಘೋರ ಅನಾಹುತವನ್ನು ತಪ್ಪಿಸಿದಂತಾಯಿತು. ಸ್ನೇಹಿತರೆ ಅನೇಕ ಸಮಯಗಳಲ್ಲಿ ‘ಕ್ಷಣ ಕಾಲ’ ನಿರ್ಧಾರ ಹಾಗು ಸಂಯಮ ಚಿತ್ತಗಳು ಆತ್ಮಹತ್ಯೆಗಳನ್ನ ತಡೆಯಬಹುದು. ಇದರ ಜೊತೆ ಅನುಭೂತಿ ಮತ್ತು ಸಹಾನುಭೂತಿ ಸಿಕ್ಕರೆ ಅವರ ನಕಾರಾತ್ಮಕ ಪಥ ಸಕಾರಾತ್ಮಕ ಪಥಕ್ಕೆ ಪರಿವರ್ಥನೆಯಾಗುತ್ತದೆ. ಮನುಷ್ಯನು ಮಾನವೀಯತೆ ದೃಷ್ಟಿಕೊನದಲ್ಲಿ ಅಥವ ಮಾನದಂಡಗಳಲ್ಲಿ ವ್ಯವಹರಿಸಿದರೆ ಅನೇಕ ಘೋರ ಅನಾಹುತಗಳನ್ನು ತಡೆಗಟ್ಟಬಹುದಲ್ಲವೇ?
ಚಿಂತೆ
ಜೀವನವೆಂದರೇ……. ಅದರದೇ ಆದ ಚಿಂತೆ…………
ಮನ ಮಾರ್ಜಲಕೆ ಶರೀರದ ಚಿಂತೆ……
ಶರೀರ ಆಸೆಗಳಿಗೆ ಮನೋ ಹಿಡಿತದ ಚಿಂತೆ……..
ಸ್ತಿç ಪದವಿರುವ ತನಕ ಪುರಷನಿಗೆ ಚಿಂತೆ…..
ಗಂಡ ಸರಿಯಾಗುವ ತನಕ ಹೆಂಡತಿಗೆ ಚಿಂತೆ…….
ವಯಸ್ಸಿಗೆ ದೀಪ ಆರುವುದರ ಚಿಂತೆ….
ಹಣತೆ ಹಚ್ಚುವವನಿಗೆ ಜ್ಞಾನಪರ ಚಿಂತೆ……..
ಪ್ರಕೃತಿಗೆ ಹಸಿರು ಬಣ್ಣದ ಚಿಂತೆ……
ಕಲಾ ರಸಿಕನಿಗೆ ನಾನಾ ಬಣ್ಣದ ಚಿಂತೆ………
ಹಾಡು ಹಾಡುವನಿಗೆ ನುಡಿ ರಾಗದ ಚಿಂತೆ……..
ಹಾಡು ಕೇಳುವನಿಗೆ ಶೃಂಗಾರದ ಚಿಂತೆ……..
ಬದಕಬೇಕೆನ್ನುವವನಿಗೆ ಸಾವು ಗೀಳಿನ ಚಿಂತೆ…….
ಸಾಯಬಯಸುವನಿಗೆ ಸಾವು ಬರಲಿಲ್ಲಾವೆನ್ನೂ ಚಿಂತೆ…….
ಪ್ರೇಮಿಸುವನಿಗೆ ಪ್ರೇಮಿ ಎಲ್ಲಿರುವಳೆಂಬುದರ ಚಿಂತೆ………
ಮದುವೆಯಾದ ಮೇಲೆ ಬಂಧನ ಭಾರದ ಚಿಂತೆ…….
ಚಿರ ಯೌವನದಲ್ಲಿ ಸಾವಿರ ರಸ ಚಿಂತೆ…….
ಮುದಿ ಹೊಸ್ತಿಲಲ್ಲಿ ಚಿರ ಯುವಕನಾಗುವ ಚಿಂತೆ……
ಚೇತನದೊಳಗಿನ ಭಾವನೆಗೆ ಕ್ರಿಯೆಯಾ ಚಿಂತೆ…….
ಮನೊದೊಳಗಿನ ಇಚ್ಚೆಗಳಿಗೆ ಮಾನವಿಯತೆಯಾ ಚಿಂತೆ……
ಸೃಷ್ಠಿಕರ್ತನಿಗೆ ನೈಸರ್ಗಿಕ ಚಿಂತೆ………
ಮಾನವ ಸಂಹಿತೆಗಳಿಗೆ ಅನೈಸಿರ್ಗಿಕ ವಿದೇಯಕಗಳ ಚಿಂತೆ……..
ಪ್ರಾಣಿ ಪಕ್ಷಿಗಳಿಗೆ ಮಾನವನ ಚಿಂತೆ
ರೈತ ಬೆಳೆದ ಫಸಲಿಗೆ ಪ್ರಾಣಿ ಪಕ್ಷಿಗಳ ಚಿಂತೆ…….
ಬೆಳದಾ ಕಾಡಿಗೆ ಮರ ಕಟುಕನಾ ಚಿಂತೆ….
ಮನೆ ಕಟ್ಟುವನಿಗೆ ಮರದ ಚಿಂತೆ………
ಜೀವನವೆಂದರೆ……. ಅದರದೇ ಆದ ಚಿಂತೆ…………
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ


[…] ಕ್ಷಣದ ಅನುಭವ […]