ಮನಸು ಮೃದಂಗ
(ಲೇಖನಗಳ ಸಂಕಲನ)
ಯೋಚನೆ
ಯೋಚನಾ ಶೀಲವಂತರು ಯೋಚಿಸುವ ಪ್ರಶ್ನೆ ಎನೆಂದರೆ ಯೋಚನೆ ಎಂದರೆ ಏನು?
ಯೋಗ್ಯ ಆಲೋಚನೆಯ ಯೋಚನೆ ಯೋಗ್ಯನಿಗೆ ಅದರೆ ಯೋಗಿಗೆ ಯೋಚನೇತರ ವಿವಚನೆಯೇ ಯೋಚನೆ. ಪ್ರಾಣಿಗಳಿಗೆ ಬದಕುವ ಯೋಚನೆ, ಮಾನವನಿಗೆ ಬದುಕುವ ಆಸೆಯ ಯೋಚನೆ, ಜೊತೆಯಲ್ಲಿ ಸಮಾಜ ಮುಖಿ ಹಾಗು ಪ್ರಗತಿಪರ ಯೋಚನೆ. ಯೋಚನೆ ಮಾನವ ಮನೊ ಧರ್ಮಗಳಲ್ಲಿ ಒಂದು. ಯೋಚನೆ ನಮ್ಮ ಚಿತ್ತದ ಅವಿಭಾಜ್ಯತನದ ಒಂದು ಅಂಗ. ಇತರೆ ಮೂರು ಅಂಗಗಳು ಇಚ್ಚೆ, ಭಾವನೆ ಹಾಗು ಕೆಲಸ.
ಹುಟ್ಟಿದ ಕೂಸಿಗೆ ಈ ನಾಲ್ಕು ಮನೋ ಧರ್ಮಗಳು ಆಗಮನವೆ. ಈ ಆಗಮನಾ ಸೌಕರ್ಯವು ಕರ್ಮಸಾರ ಇಂದ್ರಿಯಗಳ ದ್ವಾರದಿಂದೆ ನಾವು ಬೆಳದಂತೆ ನಮ್ಮ ಮನಸ್ಸನ ಒಳಗೆ ಸೇರುತ್ತಾ ಹೋಗುತ್ತೆ. ಹುಟ್ಟಿದ ಮಗು ಎಂದೂ ನಗುತ್ತಾ ಹೊರ ಬರುವುದಿಲ್ಲ, ಯಾವತ್ತು ಅಳುತ್ತಳೇ ಹೊರ ಬರುವದು. ಆಂದರೆ ಭಯವೆ ಆ ಕೂಸಿಗೆ ಪ್ರಧಾನ, ಎಂದು ಆ ಮಗುವಿಗೆ ತಾಯಿಯ ಸ್ಪರ್ಶವಾಗಿ ತನ್ನ ಹಸಿವನ್ನು ತಾಯಿಯ ಹಾಲಿನ ಮೂಲಕ ಸಿಗುವದೂ, ಸಿಕ್ಕ ತಕ್ಷಣವೆ ಆಸರೆಯ ಯೋಚನೆ ಶುರುವಾಗಿ ಅಂದೆ ಆಳುವನ್ನು ನಿಲ್ಲಿಸುತ್ತದೆ. ಅಂದರೆ ನಮ್ಮ ಮನೋ ಧರ್ಮಗಳಿಗೆ ಆಸರೆಯೇ ಮೂಲವೆಂದಾಯಿತು.
ನಮ್ಮ ಪ್ರಜಾ ಪ್ರಭುತ್ವದಲ್ಲಿ ನಾಲ್ಕು ಆಸರೆಗಳನ್ನು ಸರಿಯಾದ ಹಾಗು ನಿರ್ದಿಷ್ಟ ರೂಪದಲ್ಲಿ ಪ್ರಜಾ ಪ್ರತಿನಿಧಿಯು ಪ್ರಜೆಗಳಿಗೆ ಒದಿಗಿಸಿದರೆ ಅವನೇ ಪರಮ ಶ್ರೇಷ್ಟನು. ಆ ನಾಲ್ಕು ಆಸರೆಗಳು ಯಾವುದೆಂದರೆ ಬಟ್ಟೆ, ನೀರು, ವಸತಿ ಹಾಗು ಅನ್ನ. ಬುದ್ದ ಸಮಾಕಾಲಿನದಿಂದಲು ಅನೇಕ ಬುದ್ದಿಶೀಲ ಉಳ್ಳವರು ಇಚ್ಚೆಗೆ ಯೋಚನೆ ಪೂರಕವೆ ಅಥವ ಯೋಚನೆಗೆ ಇಚ್ಚೆ ಪೂರಕವೆನ್ನೊ ತರ್ಕ, ತರ್ಕವಾಗಿಯೆ ಉಳಿದು ಬಿಟ್ಟಿದೆ.

Socrates ಅನುಯಾಯಿ Aristotle ಮಾತ್ರ ಇಚ್ಚೆಯು ಇಂದ್ರೀಯಗಳ ಮೂಲಕ ಹೋಗಲು ಸಾದ್ಯವಿಲ್ಲ, ಈ ಇಚ್ಚೆ ಮಾನವನ ಹುಟ್ಟುಗುಣವೆಂದ. ಈ ಸಿಧ್ಧಾಂತವನ್ನುAntiquity ಸಿಧ್ಧಾಂತದ ಅಡಿ ತರ್ಕಿಸಿದ್ದಾನೆ. ಸಾಮನ್ಯವಾಗಿ ಮನೊ ವಿಜ್ಞಾನದಲ್ಲಿ ಮನಸ್ಸಿನಡಿ ಹುಟ್ಟಿದ ಯೋಚನೆ ಇಚ್ಚಿಸಿದಾಗ ಮಾತ್ರ ಕಾರ್ಯೊನ್ಮುಕವಾಗಿ ಕರ್ತವ್ಯಾಗಿಸಿ, ಭಾವನಯ ಲೇಪನದಿಂದ ಕರ್ತವ್ಯ ಭಾವನಾ ಆಯಮಗಳು ಪ್ರಕೃತಿಯ ಆ ಸಮಯ ಹಾಗೂ ಇರುವ ಜಗದಲ್ಲಿ ರೂಪಗೊಳ್ಳತ್ತೆ. ರೂಪಗೊಂಡ ಆಯಾಮಗಳಿಗೆ ಉತ್ತರ ಹುಡುಕುವ ಯತ್ನವಿದ್ದು ಕಾರ್ಯಫಲ ಗಳಿಸಬಹುದು ಆಥವ ಗಳಿಸಿದೇರಬಹುದು. ಇವೆಲ್ಲವು ಕ್ಷಣಾರ್ಧದಲ್ಲಿ ನಮಗೆ ತಿಳಿಯದೆ ಅತಿ ವೇಗದಲ್ಲಿ ನಡಿಯುವಂತಹ ಮನೋ ಕಾರ್ಯವೈಖರಿಯಾಗಿರುತ್ತೆ. ಇದಲ್ಲವೆ ಸೃಷ್ಟಿಕರ್ತನ ಕರಾಮತ್ತು? ವ್ಯಕ್ತಿಯ ಕಾರ್ಯವು ಇಚ್ಚೆಯ ಪೂರಕದಿಂದ ಸಕಾರಾತ್ಮಕವಾಗಿ ಸಹಮತಿಸುವುದರಿಂದ ಅಥವ ಪ್ರಧಾನವಾಗಿದ್ದರೆ ಸೃಜನಾ ಶೀಲತೆಯನ್ನು ಹೊಂದುವದರಲ್ಲಿ ಜಯಶೀಲನಾಗುತ್ತಾನೆ. ಅದೆ ನಕರಾತ್ಮಕ ಯೋಚನೆಗಳಿಂದ ಕೂಡಿದ್ದರೆ ಚರಿತ್ರ ಶೀಲಾಹರಣನಾಗುತ್ತಾನೆ. ಹೇಳಿದ ಮನೋ ಕೌಶಲ್ಯಗಳು ಮಾನವನ ಅಂತರಾಳದಲ್ಲಿ ನೆಡದರು ಬಾಹ್ಯರಂಗದ ಪ್ರಕೃತಿಯಿಂದ ಬಂದ ಕಿರಣಗಳನ್ನ ಸಂಙ್ಞ (receptor))s ಗಳಿಂದ (ಇಂದ್ರಯಿಗಳಿಂದ) ಹಿಡಿದು ಚಾಚಿಕೊಂಡ ನರ ಕೋಶಗಳ ಮೂಲಕ ಮಿದಿಳಲ್ಲಿ ಕೆಂದ್ರಿತ ಅನೇಕ ನರಕೆಂದ್ರ ಬಿಂದುಗಳಲ್ಲಿ ಹಾಗು ಪುಂಜಗಳಲ್ಲಿ ಸಂಯೋಜನೆಗೊಂಡು ಕಾರ್ಯಾಪ್ರವೃತ್ತಿಗೊಳ್ಳುತ್ತೆ. ಇದರ ಅರ್ಥ ಯೋಚನೆ ಚಿತ್ತಕ್ಕೆ ಸಿಮತವಲ್ಲದೇ ಪ್ರಕೃತಿಯು ಸಹ ಭಾಗಿಯಾಗಿರುತ್ತೆ. ಆದುದರಿಂದ ಯೋಚನೆಯು ಮನೋ ಪ್ರಕೃತಿಯ ಸಂವೇದನಾ ಫಲ.
ಮಾನವನ ದ್ರವ್ಯ ರೂಪಾದಿ ಶರೀರವು ನಿಸ್ತಂತು ಹಾಗು ಜಢಾವಸ್ತಯ ಪ್ರತೀಕ. ನಮಗೆ ನಮ್ಮ ಶಕ್ತಿ ಮಾಂಸಕಂಡದಲ್ಲಿ ಅಡುಗಿದೆಯನ್ನುವದು ಸುಳ್ಳು. ಶರೀರದ ಶಕ್ತಿಯ ಹುಟ್ಟು ನಮ್ಮ ಮಿದಿಳ ಒಳಗೆ ಎನ್ನುವದನ್ನ ಮರೆಯಬಾರದು. ಆದುದರಿಂದ ಚಿತ್ತ ಧರ್ಮಗಳಲ್ಲಿ ಒಂದಾದ ಯೋಚನೆಗೆ ಅಘಾದವಾದ ಶಕ್ತಿ ಇರುತ್ತೆ. ಈ ಶಕ್ತಿಯನ್ನು ದ್ರವ್ಯ ಅಣುವಿಗೆ ಹೋಲಿಸಬಹುದು.
ಅಂದರೆ ಬೌತವಿಜ್ಞಾನಿ Einstein ರ E=mc2 ಸೂತ್ರದಲ್ಲಿ ಅಡಿಗಿರುವ ಶಕ್ತಿಗೆ ಹೊಲಿಸಬಹುದು. ಆದುದರಿಂದ ಪುರಷನ ಯೋಚನೆ ಅದಿಮಿಟ್ಟ ಶಕ್ತಿ ಎಂದು ಹೇಳಬಹುದು. ಇದರ ಪ್ರಾಯೋಜಕತ್ವವನ್ನು ನಕಾರತ್ಮಕವಾಗಿ ಅಥವ ಸಕಾರತ್ಮಕವಾಗಿ ಬಳಿಸಬಹುದು. ಉದಾಹರಣೆಗೆ ಮಹಾತ್ಮ ಗಾಂದೀಜಿಯವರು ಅವರ ಅಹಿಂಸಾ ಯೋಚನೆಯಿಂದ ನಮ್ಮನ್ನು ಆಂಗ್ಲರಿಂದ ಭಂದ ಮುಕ್ತಿಗೊಳಿಸಿದರು. ಅಂದರೆ ಸಾಂಘಿಟಿಕ ಯೋಚನೆ ಅಣು ಶಕ್ತಿಗಿಂತ ಶಕ್ತಿಶಾಲಿ.
ಒಬ್ಬ ವ್ಯಕ್ತಿ ತನ್ನ ಅಘಾದವಾದ ಶಕ್ತಿಯನ್ನು ನಿಯಂತ್ರಸಿವುದರಲ್ಲಿ ಯಶಸ್ವಿ ಕಂಡರೆ ಮಾನವನ ಏಳಿಗೆಗೆ ಆಶಾಧಾಯಕನಾಗುತ್ತಾನೆ. ಇಲ್ಲವಾದಲ್ಲಿ ಇಡೀ ಮನು ಹಾಗೂ ಜೀವ ಕುಲವನ್ನೆ ನಿರ್ಣಾಮ ಮಾಡಬಹುದು. ಇದನ್ನೆ ನಾವು ಭಯತ್ಪೋದಕಾರರಲ್ಲಿ ನೋಡಬಹುದು. ಅಧ್ಯಾತ್ಮದಲ್ಲಿ ಮಾನವನನ್ನ “ಅಹಂ ಬ್ರಹ್ಮಾಸ್ಮಿ” ಎಂದು ನುಡಿದಿದ್ದರು. ಇದರ ಅರ್ಥ ಕಟ್ಟದ್ದು ಹಾಗೂ ಒಳ್ಳೆಯದು ಮಾನವನಲ್ಲೇ ನೆಲಿಸಿದೆ ಎಂದು.
ಚಿಂತನೆ ಹಿಂದೆ ಯೋಚನೆ ಇರುತ್ತೆ ಎಂಬುದನ್ನು ನೆನೆಸಿಕೊಳ್ಳಬೇಕು. ಸಹಜ ಚಿಂತನೆ ಮನಿಸ್ಸಿನಲ್ಲಿ ಕಾಲಿ ಜಾಗ ಇದ್ದರೆ ಮಾತ್ರ ಸಾಧ್ಯ. ಮಾನವನು ಲೋಕಾ ಪ್ರಿಯಾನಾದ್ದರಿಂದ ಎಂದೇದ್ದಿಗೂ ಮನಸ್ಸು ಕಾಲಿ ಇರುವುದಿಲ್ಲ. ಇದನ್ನು ಸಂಪಾದಿಸ ಬೇಕಾದರೆ ತನ್ನ ಙ್ಣನವನ್ನು ಅರಿವಿನಿಂದ ಹೆಚ್ಚಿಸ ಕೊಳ್ಳಬೇಕು. ಕಾಲಿ ಮಡಿಕೆಯ ಮೌಲ್ಯ ಮಡಿಕೆಯ ಓಳಗೆ ಇರುವ ಕಾಲಿ ಜಾಗಕ್ಕೆ ಮಾತ್ರ, ಮಡಿಕೆಯ ಮಣ್ಣಿಗೆ ಅಲ್ಲ. ಅಧ್ಯಾತ್ಮ ಹಾಗು ಪರಾಮತ್ಮನ ಒಲವಿದ್ದರೆ ಇವುಗಳನ್ನು ನಾವು ಸಂಪಾದಿಸಬಹುದು.
ಅರ್ಥತ್ ನಮ್ಮಲ್ಲಿರುವ ನಿತ್ಯ ಲೋಕಾ ವಿಚಾರಗಳನ್ನ ಸ್ವಲ್ಪವಾದರು ಹೊರಗೆಸಿಯುವದರಲ್ಲಿ ಯಶಸ್ವಿಯಾದರೆ ಸತ್ಭಾವನೆಯನ್ನು ಹೊಂದಿ ಸತ್ಪುರಷನಾಗುವೆವು. ಸೃಜನಾ ಅಭಿವ್ಯಕ್ತಿತ್ವ, ಕ್ರಿಯಾ ಶೀಲತೆ, ಪರ ಅಭಿವೃಧ್ಧಿ ಚಿಂತನೆ, ಸೇವಾ ಮನೋಭಾವ, ಸಮಾಜ ಮುಖತ್ವ, ಪ್ರಶ್ನಾಸಕ್ತಿ, ವೈಙ್ಣನಿಕ ಹುಡುಕಾಟ, ಆಚಾರಗಳ ನಂಬಿಕೆ, ವಿಚಾರ ನಿಷ್ಟೆ, ಅಹಂ ಭಾವನೆ ನಿರ್ಮೂಲನಾ, ಸಂಮ್ಯಮ ಪರಿಪಾಲನಾ, ಙ್ಣನಾರ್ಧನೆ ಹಾಗು ವಿದ್ಯಾ ಧಾನಗಳಲ್ಲೆವು ಹಿಡಿದು ಅಧುಮಿ ಇಟ್ಟ ಮನಸ್ಸನ್ನು ತೆರೆದರೆ ಮಾತ್ರ ಸಾಧ್ಯ. ಇವುಗಳೆಲ್ಲವು ನಮ್ಮ ಮಾನದಂಡಗಳು ಅಥವ ಮೌಲ್ಯ ಮಾಪನಗಳು.
ಅಣುವಿಗು ಹಾಗು ಯೋಚನೆಗೂ ಯಾವುದೇ ತರಹದ ವ್ಯತ್ಯಾಸವಿಲ್ಲ. QUONTUM THEORY ಪ್ರಕಾರ ಅಣುವು ಗುರುತ್ವಾಕರ್ಷಣಾತೀತ ಹಾಗು ನಿಧೃಷ್ಟಪಥಾ ಹರಣ. ಇದೇ ತರಹ ಮನಿಸ್ಸಿನ ಯೋಚನೆಯು ಕೂಡ. ಈ ಕಾರಣದಿಂದಾಗೆ ಯೋಚನೆಯನ್ನು “ಚಂಚಲೆ” ಎಂದು ನಾಮಾಂಕೃತಗೊಂಡಿರುವದು. ಇವರೆಡರ ವೆತ್ಯಾಸವೆಂದರೆ, ಅಣುವು ನಿಧೃಷ್ಟ ಘನ ಸಾಂದ್ರತೆಯನ್ನು ಹೊಂದಿದೆ. ಈ ಸಾಂದ್ರತೆಗೆ ಅದರೆದೆ ಆದ ಲಕ್ಷಣ ಹಾಗೂ ಗುಣಗಳನ್ನು ಹೊಂದಿರುತ್ತೆ.
ಇದನ್ನು ತಿಳಿಯಲು ಬೌತ ಶಾಸ್ತçದಲ್ಲಿ ಮಾಪನಗಳಿವೆ. ಆದರೆ ಮನಸ್ಸು ಅಥವ ಯೋಚನೆಯು ಘಣಸಾಂದ್ರತಾಹೀನವಾದ್ದರಿಂದ ಯೋಚನೆಯನ್ನ ತಳಿಯಲು ಯಾವುದೆ ಮಾನ ದಂಡಗಳಿಲ್ಲ. ಹೇಳಿದ ವೆತ್ಯಾಸಗಳೇನೆ ಇದ್ದರು ಅಘಾದವಾದ ಶಕ್ತಿ ಎರಡರಲ್ಲಿ ಅಡಿಗಿದೆ ಎನ್ನುವದೇ ವಿಶೇಷ. ಮತ್ತೊಂದು ವಿಷಯವೆಂದರೆ ಮರಮಾಣುವನ್ನು ಸೂಕ್ಷ್ಮನೂ ಸೂಕ್ಷ್ಮ ದರ್ಶಕಗಳಿಂದ ಕಂಡರು ಅವುಗಳ ಬೌತದಾರ್ಶಿಕತ್ವವು ಅನುಮಾನವಷ್ಟೇ ಹಾಗೆಯೇ ಮನಸ್ಸು ಕೂಡ. ಮನಸ್ಸು ಸಹ ಕಾಣವುದಿಲ್ಲ. ಮನಸ್ಸು ಎಂದೆಂದಿಗು ಸರ್ವಾಂತ್ರಯಾಮಿ. ಈ ಕಾರಣದಿಂದಲೊ ಎನೊ ಮನಸ್ಸನ್ನು ಗುಲಾಬಿ ಹೂವಿಗೆ ಹೋಲಿಸ ಬಹುದು.
Einstein ರ ಕ್ಷಣ ಯೋಚನೆಯಿಂದ E=mc2 ಸೂತ್ರ ಹೊರಹೊಮ್ಮಿದ್ದು. Newton ರ ಪ್ರಶ್ನಾ ಯೋಚನೆಯಿಂದ ಗುರುತ್ವಾಕರ್ಷನೆ ಅರಳಿದ್ದು. Openheimer ರ ಯೋಚನೆಯಿಂದ Quontum theory ಉಧ್ಬವಿಸಿದ್ದು. ಬುದ್ದನ ಙ್ಣಣೋದಯದಿಂದ ಜೀವ, ನಿರ್ಜಿವ, ಪ್ರಕೃತಿಗಳೆಲ್ಲವು ಒಂದೆ ಎಂಬ ನಿರ್ಣಯಕ್ಕೆ ಬಂದಿದ್ದು. ಓದುಗರೆ ಅಷ್ಟೆ ಅಲ್ಲ, ಈ ಬ್ರಹ್ಮಾಂಡದಲ್ಲಿ ಅಡಿಗಿರುವ ಸಮಸ್ತವು ಒಂದಾನು ಒಂದು ರೀತಿಯಲ್ಲಿ ಅವುಗಳ ಕಾರ್ಯ, ಓಡನಾಟ, ಹೊಂದಾನಿಕೆ ನಿತ್ಯ ನಿರಂತರವಾದ ಭಂದನಾ ಮಾರ್ಗವಾಗಿ ಇರುತ್ತೆದೆಯೆಂಬ ಪರಿಕಲ್ಪನೆ ಮಹಾನ್ ಬುದ್ದರ ಯೋಚನೆಯಾಗಿತ್ತು.
ಈ ಕಾರಣದಿಂದಲೇಯೆನೋ ಬುದ್ದರನ್ನು ಭಗವಾನ್ ವಿಷ್ಣು ಅವತಾರಿ ಎಂದಹೇಳುವದು. ಅಣುವನ್ನು ವಿಭಿಜಿಸಿದಾಗ ಹೊರ ಹೊಮ್ಮುವ ಶಕ್ತಿಯನ್ನ ನಿಯಂತ್ರಿಸಿ ವಿದ್ಯತ್ತ್ ಶಕ್ತಿಯನ್ನು ಪಡೆಯಬಹುದು.America ನ್ನರು ಎರಡನೆ ಮಹಾ ಯುದ್ದದಲ್ಲಿ Japan ರಾಷ್ಟ್ರ ದ Nagasaki ಹಾಗೂ Hiroshima ನಗರಗಳ ಮೇಲೆ ಅಣು ಮದ್ದನ್ನು ಸಿಡಿಸಿ ಅಲ್ಲಿ ನೆಳಿಸಿದ್ದ ಲಕ್ಷಾಂತರ ಜೀವಗಳನ್ನು ಮರಣ ಹೋಮಿಸಿದರು. ಸಿಡಿಸಿದ್ದೇನೊ ನಿಜ, ಹಾಗೆಯೆ Japan ರಾಷ್ಟ್ರ ದ ಜನತೆಗೆ ಕ್ಷಮೆ ಯಾಚಿಸಿದ್ದು ನಿಜ. ಆದುದರಿಂದ ನಾವೆಲ್ಲಾ ವಿವೇಕಾತ್ಮಕ, ಸಕಾರತ್ಮಕ, ಪರ ಚಿಂತಾತ್ಮಕ ಯೋಚನಗಳಲ್ಲಿ ತೊಡಗೋಣ.
ಚಿಂತಿಸುವದು ಮಾನವನ ಸಹಜ ಮನೋ ಧರ್ಮ. ಚಿಂತನೆಯು ಮಾನವನ ಅಭಿಮುಖ ಕಾರ್ಯಗಳಲ್ಲಿ ಒಂದು. ಮನೋ ಚಿಂತಾಸಕ್ತಿ ಇಲ್ಲದವನು ಮನೋ ರೋಗಿ, ಅತಿಯಾದ ಚಿಂತೆ ಇದ್ದರು ಮನೋ ರೋಗಿಯೇ. ಈ ಹಿಂದೆ ಹೇಳಿದಂತೆ ಚಿಂತೆ ಒಂದು ಯೋಚನೆಯ ಅಂಗ. ಈ ಚಿಂತಾ ಯೋಚನೆಯು ಎಂದು ಭಾವನೆಗೆ ಓಳಗಾಗುತ್ತೊ ಅಂದು ನಕಾರತ್ಮಕ ಹಾಗು ಸಕಾರತ್ಮಕ ಚಿಂತೆ ಆಗುತ್ತೆ. ಮಾನವನಲ್ಲಿ ಈ ಚಿಂತೆ ತನ್ನ ಪ್ರಗತಿಗೆ ಪೂರಕವೆನ್ನುವದನ್ನ ತಿಳಿದುಕೊಳ್ಳಬೇಕು.
ಸಹಜ ಸಕಾರತ್ಮಕ ಚಿಂತೆ ಇಲ್ಲದವನು ತನ್ನ ವೈಯಕ್ತಿಕ ಪ್ರಗತಿ ಸಾದಿಸಲು ಸಾದ್ಯವಾಗವುದಿಲ್ಲ. ಸಾದಿಸಿದ ವ್ಯಕ್ತಿ ಎಂದು ಅತಿಯಾಗಿ ಸದಾ ಚಿಂತಯಲ್ಲೆ ಮುಳುಗುತ್ತಾನೊ ಅಂತಹವನು ಮಾನಿಸಿಕ ಗೀಳಿಗೆ ಶರಣಾಗುತ್ತಾನೆ. ಇಂತಹ ಗೀಳು ಹೊಂದಿದ ವ್ಯಕ್ತಿಗೆ ಕಿನ್ನತೆ ಆವರಿಸಿಕೊಳ್ಳುತ್ತೆ. ಈ ಕಾರಣದಿಂದ ಇಂದಿನ ಚಿಂತೆ ನಾಳೆಯ ಚಿಂತನೆಯಾಗಬೇಕು.
ಆಗಲೆ ಮಾನವನು ಮಾನವಿಯತೆಯನ್ನು ಅಳವಡಿಸಿಕೊಳ್ಳುವವನಾಗುತ್ತಾನೆ. ಆದುದರಿಂದ ಹರಿಯಕರ ಚಿಂತೆ ಚಿಂತೆಯಲ್ಲ. ಈ ಚಿಂತೆಗಳು ಮುಂದಿನ ಚಿಂತನೆಗಳೆಂದು Swamy Vivekananda ರು ಮನಗೊಂಡು ಯುವಕರ ವಿಕಾಸಕ್ಕೆ ಶ್ರಮಿಸದರು. ಇವರು ತಮ್ಮ ವಿಕಾಸ ತತ್ವವನ್ನ ಸೂಕ್ಷ್ಮವಾಗಿ “ಯುವಕರೆ ಎದ್ದೇಳಿ, ಎಚ್ಚತ್ತುಕೊಳ್ಳಿ” ಎಂದು ಸಾರಿದರು. ಇದನ್ನು ತಿಳಿಸಿದ ಅವರು ಯುವಕರಿಗೆ ಮಾದರಿ ಆದರು. ಇವರ ವಾಜ್ಮೂಲದ ಅರ್ಥವಾದರು ಎನು? ಎದ್ದೇಳಿ ಎಂದರೆ ಕುಳಿತಿರುವವರು ಎದ್ದೇಳುವದಲ್ಲ. ಇಂದಿನ ಯುವಕರು ಚಿಂತಾ ಪೀಡಿತರು. ಕಾರಣಗಳು ಅನೇಕ. ತಾಂತ್ರಿಕ, ಯಾಂತ್ರಿಕ, ಶೈಕ್ಷಿಣಿಕಾ ವಾಣಿಜ್ಯ ಹಾಗು ವೇಗದ ಬದಕುವಿನಲ್ಲಿ ಯುವಕರ ಗೋಳು ಹೇಳ ತೀರದು. ಯುವಕರ ಸ್ವಾತಂತ್ರ ವಾಸತುಗಳಿಗೆ ಹಾಗು ಪರಿಸರ ಲೋಕಿಕ ಬದುಕಿಗೆ ವ್ಯಾಕ್ತೃತ್ಯ ಪ್ರಧಾನವಾಗಿರುವದರಿಂದ ಇವರಲ್ಲಿ ಅಪಾರ ಚಿಂತೆಗಳು ಸಹಜ. ಇಂದಿನ ಯುವಕರ ಇಚ್ಚೆ ಹಾಗು ತಮ್ಮ ತಮ್ಮ ಕೌಟಂಬಿಕ ವ್ಯವಸ್ಥೆಗಳಲ್ಲಿ ತಮ್ಮ ತಮ್ಮ ದಾರಿ ಕಾಣದಾಗಿದೆ.
ಈ ಸ್ಥಿತಿಯಲ್ಲಿ ಇವರು ಹಗಳು ಕನಸು ಕಾಣುವ ವ್ಯಕ್ತಿತ್ವಕ್ಕೆ ಒಳಗಾಗುತ್ತಾರೆ. ಇಂತಹ ಕನಿಸಿಗೆ ಮಾರು ಹೋದ ಯುವಕರು ತಮ್ಮ ರ್ವಸ್ವವನ್ನು ಜಢಾವಸ್ಥೆಗೆ ದೂಡಿಕೊಳ್ಳುವವರಾಗುತ್ತಾರೆ. ಇದಿರಿಂದಾಗಿ ಹಗಲೆ ನಿದ್ರೆ ಮಾಡುವದನ್ನ ಕಲಿಯುತ್ತಾರೆ. ಇವರಲ್ಲಿ ಎಕಾಗ್ರತೆ ಹಾಗು ಗಮನಗಳು ಇಲ್ಲವಾಗುತ್ತವೆ. ತಮ್ಮ ಅವೆಸ್ಥೆಗಳನ್ನು ಇತರರಿಗೆ ತಿಳಿಸುವದರಲ್ಲಿ ಅಥವ ಹೇಳುವದರಲ್ಲಿ ವಿಪಲರಾಗುತ್ತಾರೆ. ಸಿಟ್ಟು, ಕ್ರೋದ, ಅಸುಯ್ಯೆ, ಅಸಹಾಯಕತನ, ಗೀಳು, ವ್ಯಸನ, ಅನೈತಿಕ ಚಟುವಟಿಕೆಗಳು, ದಂಬಾಲು ಹೀಗೆ ಅನೇಕ ನಕರಾತ್ಮಕ ದಾರಿಗಳಿಗೆ ಮಾರು ಹೋಗುತ್ತಾರೆ. ಆದುದರಿಂದ Swamy Vivekananda ರು ಇವುಗಳಿಂದ ಎಚ್ಚೆತ್ತುಕೊಳ್ಳಿ ಎಂದರು. ಎದ್ದೇಳಿ, ಎದ್ದು ಙ್ಞನ ಸಂಪಾದನೆ ಮಾಡಿ ಎಂದರು. ಏಕಾಗ್ರತೆ ಹಾಗು ಗಮನವಿಲ್ಲದೇರುವನು ಜ್ಞಾನದಿಂದ ವಂಚಿತನಾಗುತ್ತಾನೆ ಎಂದರು. ಜ್ಞಾನವಿಲ್ಲದವನು ಏಳಿಗೆಯಲ್ಲಿ ಎಳವನಾಗುತ್ತಾನೆ ಎಂದರು. ಇವರು “ಎದ್ದೇಳಿ” ಹೇಳಿಕೆಯ ಅರ್ಥ ಯುವಕರು ತಮ್ಮ ಜಢಾವಸ್ಥೆಯಿಂದ ಹೊರಬನ್ನಿ ಎಂದು. ನಿದ್ರೆಯಿಂದ ಹೊರಬಂದು ಜಾಗೃತರಾಗಿ, ಆರ್ಥಿಕ ಹಾಗು ಕೌಟಂಬಿಕ ವ್ಯವಸ್ಥೆಯನ್ನ ಬದಿಗಿಟ್ಟು ಗಮನ ಹಾಗು ಎಕಾಗ್ರತೆಗಳನ್ನು ಮರು ತನ್ನಿ, ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಿಗಿಸಿಕೊಳ್ಳಿ ಎಂದರು. ಪ್ರಜಾಪ್ರಭುತ್ವದಲ್ಲಿ ಸತ್ಪçಜೆಯನ್ನು ಆರಿಸಿ, ಸಂಕುಚಿತ ಮನೋಭಾವ ಬೇಡ, ದೂರ ದೃಷ್ಟಿಯುಳ್ಳವರಾಗಿ ಎಂದರು.
ಮನೋ ಧರ್ಮದಲ್ಲಿ ಒಂದಾದ ವಿವೆಕವನ್ನು ಬೆಳಸಿಕೊಳ್ಳಿ, ವಿವೇಕವಿಲ್ಲದವನಿಗೆ ವಿಮರ್ಶೆ ಇರುವುದಿಲ್ಲ, ವಿಮರ್ಶೆ ಇಲ್ಲದವನಿಗೆ ಪರಮಾರ್ಶೆ ಇರುವುದಿಲ್ಲ, ಪರಮಾರ್ಶೆ ಇಲ್ಲದವನಿಗೆ ಪ್ರಶ್ನೆಗಳ ಕೊರತೆ ಉದ್ಬವಿಸುತ್ತೆ, ಪ್ರಶ್ನೆಗಳ ಕೊರತೆ ಇದ್ದಾಗ ಜ್ಞಾನವಿರುವುದಿಲ್ಲ ಎಂದರು. ಇವುಗಳೆಲ್ಲವು ಇದ್ದಾಗ ಶ್ರವಣ ಮನನವಾಗುವದು ಎಂದರು. ಅಂತಹ ಯುವಕನಿಗೆ ಇಂದ್ರಿಯಗಳ ಹಿಡಿತವಿದ್ದು, ಚಿತ್ತಾಸಕ್ತಿ ಇದ್ದು, ನೊಡಿದ್ದನ್ನ ಕಲಿತು, ಕೇಳುವಂತನಾಗಿ ಕಲಿತಿದ್ದನ್ನು ತನ್ನ ಜ್ಞಾಪಕ ಬಂಢಾರದಲ್ಲಿ ಶೇಕರಗೊಳ್ಳುತ್ತೆಂದರು. ಇಂತಾ ಯುವಕರು ತಮ್ಮ ಮೌಲ್ಯವನ್ನ ಹೆಚ್ಚಿಸಿಕೊಳ್ಳುವದರಲ್ಲಿ ಯಶಸ್ವಿಯಾಗುತ್ತಾರೆ, ಇವರು ಚಿಂತಾಶೀಲರಾಗುತ್ತಾರೆ, ಸೃಜನ ಶೀಲರಾಗುತ್ತಾರೆ ಹಾಗು ಸ್ಮೃಜನಾವಂತರಾಗುತ್ತಾರೆ.
ಸ್ವಾಮಿ ವವೇಕಾನಂದರ ಯೊಗ ಇದೇ ಆಗಿರುತ್ತೆ. ಯುವಕರು ತಮ್ಮ ತಮ್ಮ ವಿಚಾರ ಹಾಗು ಆಚಾರಗಳು ಸಮಾಜ ದೃಷ್ಟಿಯಲ್ಲಿ ಏಳಿಗಿಗೆ ಸಹಕಾರಿಯಾಗುತ್ತೊ ಅಂದು ದೇಶದ ದಿಶಯೇ ಯೋಗದಿಂದ ಕೂಡಿರುತ್ತೆ. ಆ ದೇಶವು ಆರ್ಥಿಕ ಸ್ವಾಲಂಬನೆ, ಸಮೃದ್ದಿ, ಅತ್ಯುತ್ತಮ ರಾಷ್ಟ್ರವಾಗಿ ಬೇಳೆಯುವದರಲ್ಲಿ ಸಂದೇಹವಿಲ್ಲ ಎಂದರು. ಯಾವುದೆ ದೇಶದ ಶಕ್ತಿಗೆ ಯುವ ಶಕ್ತಿ ಅತ್ಯಗತ್ಯ, ಆದರೆ ಇಂದು ಆ ಶಕ್ತಿ ಕುಂದಿತ್ತಿರುವದು ಶೋಚನಿಯಾ. ಅರಿಯುವದನ್ನು ಅರಿಯದೇ ಅನೇಕ ಕಾರಣಗಳಿಂದ ಯುವಕರು ಮಧ್ಯಸಾರ ಹಾಗು ಇತರೆ ದ್ರವ್ಯಗಳಿಗೆ ದಾಸರಾಗುತ್ತಿದ್ದಾರೆ. ಹೀಗೇ ಇದ್ದರೆ ರಾಷ್ಟ್ರದ ಆಧಾರ ಸ್ತಂಬಗಳು ಇಲ್ಲವಾಗುತ್ತೆ. ಇಲ್ಲದೆ ಇದ್ದಾಗ ಆ ರಾಷ್ಟ್ರ ಕುಂಟುತ್ತೆ. ಇವುಗಲನ್ನು ಯುವಕರು ಮನಗೊಳ್ಳಬೇಕು. ಯುವಕರಲ್ಲಿ ಗೀಳು ಸಹಜ, ಇವುಗಳು ಸಮಾಜದ ಸ್ವಸ್ಥ ಹಾಗು ಕಾನೂನಿನ ಚೌಕಟ್ಟಿನಲ್ಲಿ ಇದ್ದರೆ ಒಳ್ಳೆಯದು. ಆದುದರಿಂದ ಯುವಕನು ಎದ್ದು, ಎಚ್ಚೆತ್ತು ಅನಂದವನ್ನು ತನಗು ಹಾಗು ಇತರಿರಿಗು ತರುವಂತನಾಗಬೇಕು.
ಮನಸ್ಸು ಮತ್ತು ಪ್ರಕೃತಿಯನ್ನ ಒಳಗೊಂಡತ್ತೆ ಒಂದು ಕವನ “ಚಿಂತೆ”
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

