ಮನಸು ಮೃದಂಗ
(ಲೇಖನಗಳ ಸಂಕಲನ)
ಜ್ಞಾನೋದಯ
ನನ್ನ ಮತ್ತು ಪ್ರೊಫೆಸರ್ ನಿರ್ವಾಣ್ರವರ ಸ್ನೇಹ ಅಜರಾಮರ. ನಾನು ಸಮಾಜವನ್ನು ಅರಿಯಬೇಕೆಂಬ ಸಂದರ್ಭದಲ್ಲಿ ಅವರನ್ನ ಭೇಟಿ ಮಾಡಿ ವಿಷಯಗಳನ್ನು ಸಂಗ್ರಹಿಸುತ್ತೇನೆ. ಒಂದು ಬೆಳಗ್ಗೆ ದಿನಪತ್ರಿಕೆಗಳ ಮೇಲೆ ಕಣ್ಣು ಹಾಯಿಸುತ್ತಿದ್ದಾಗ ಮತ್ತು ದೂರ ದರ್ಶನವನ್ನ ವೀಕ್ಷಿಸುತ್ತಿದ್ದಾಗ ಇಡೀ ದಿವಸ ನಮ್ಮ ದೇಶದ ಶ್ರೇಷ್ಠ ಕ್ರೀಡಾಪಟುವಿನ ನಿವೃತ್ತಿಯ ಬಗ್ಗೆ ದಪ್ಪ ಅಕ್ಷರಗಳಲ್ಲಿ ಪ್ರಕಟಗೊಂಡಿತ್ತು ಮತ್ತು ಚರ್ಚಾ ವಿಷಯವಾಗಿತ್ತು.
ದೂರ ದರ್ಶನದ ಎಲ್ಲಾ ವಾಹಿನಿಗಳ ವಕ್ತಾರರು ನಮ್ಮ ದೇಶವನ್ನೆ ಮರತಂತಿತ್ತು. ನಾನೊಬ್ಬ ಮನೋ ವೈದ್ಯನಾದ್ದರಿಂದ ನನ್ನ ಕಕ್ಷಿದಾರರಿಗೆ ಆತ್ಮಾಭಿಮಾನ ಮತ್ತು ಆತ್ಮವಿಶ್ವಾಸವನ್ನು ತುಂಬುವನಾಗಿದ್ದು ಈ ಕುರುಡು ಅಭಿಮಾನ (ನನ್ನ ವಿಷಯದಲ್ಲಿ ಮಾತ್ರ) ನನ್ನ ಮನಸ್ಸನ್ನು ಕೆದಕಿತು. ಈ ವಿಷಯವಾಗಿ ಪ್ರೊಫೆಸರನ್ನು ಕಂಡಾಗ ಅವರು “ಅಭಿಮಾನ” ವನ್ನು ಕುರಿತು
Fan is a fan, a lazy fan in front of a rotating fan,
Fan is a fan, a dirty fan in front of a Khan (acting Khan’s),
Fan is a fan, a good fan in front of his Khandan.
ಒಬ್ಬ ಅಭಿಮಾನಿ ಮೈ ಮರೆತು ತಿರುಗತ್ತಿರುವ ಪಂಕದ ಮುಂದೆ ಕೂತರೆ ಆಲಸಿಯಾಗುತ್ತಾನೆ. ಅದೆ ಅಭಿಮಾನಿ ತನ್ನ ಕುರಡು ತನದಿಂದ celebrity ಗೆ ಅಭಿಮಾನಿಯಾದರೆ ಆತನಿಗೆ ಕೊಳಕು ಅಭಿಮಾನಿಯೆಂದು ಕರೆಯಬಹುದು. ಮತ್ತೊಬ್ಬ ಅಭಿಮಾನಿ ತನ್ನ ತಂದೆ ತಾಯಿಗೆ ಅಥವ ತನ್ನ ಕುಲತನಕ್ಕೆ ಅಭಿಮಾನಿಯಾದರೆ ಆತನನ್ನು ಒಳ್ಳಯ ಅಭಿಮಾನಿಯೆಂದು ಕರೆಯಬಹುದು.
ಅರ್ಥಗರ್ಭಿತ ವಿಂಗಡಣೆ. ಒಬ್ಬ ವ್ಯಕ್ತಿ ಗಾಳಿ ಬೀಸೊ ಯಂತ್ರದ ಮುಂದೆ ಕುಳಿತರೆ ಅಂತವಹನು ಜಡ (ತಾಮಿಸಿಕ್) ಗುಣವನ್ನು ಹೊಂದಿರುತ್ತಾನೆ. ಇನ್ನೊಬ್ಬ ನಟ ಹಾಗು ನಟಿಯ ಮುಂದೆ ಕೂತರೆ ಅವನು ವರ್ತಕ (ರಜಸ್) ಗುಣಉಳ್ಳವನಾಗಿರುತ್ತಾನೆ. ಆದರೆ ಒಬ್ಬ ವ್ಯಕ್ತಿ ತನ್ನ ಪೋಷಕರ ಮುಂದೆ ನಿಂತು ಆಲಿಸುವಂತನಾದರೆ ಅವನು ಜ್ಞಾನವಂತನಾಗುತ್ತಾನೆ (ಸಾತ್ವಿಕ್). ಯುವಕರು ಅಂಧಃ ಅನುಕರಣೆ ಮತ್ತು ಅಸಹಜ ಅಭಿಮಾನಕ್ಕೆ ಮಾರು ಹೋದರೆ ಆ ದೇಶದ ಪ್ರಗತಿಗೆ ಮುಳ್ಳಾಗಿಬಿಡುವರು.
ನನ್ನ ಈ ಮಿತ್ರರ ನಿಜವಾದ ಹೆಸರು ಪ್ರೊ|| ನಿರಂಜನ್, ಆದರೆ ಅವರು ಹೇಗೆ ಪ್ರೊ|| ನಿರ್ವಾಣ್ ಆದರೆನ್ನುವುದು ಒಂದು ಸಾಂದರ್ಭಿಕ ಹಾಗು ಸ್ವಾರಸ್ಯಕರ ಕತೆ.
ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದಲ್ಲಿ ಪ್ರೊ|| ಆಗಿ ಕಾರ್ಯ ನಿರ್ವಹಿಸುತ್ತಿದ್ದರು ವಿಧ್ಯಾರ್ಥಿಗಳಿಗೆ ಇವರು ಅಚ್ಚುಮೆಚ್ಚು. ಕಾರಣ ಇವರ ಸರಳತೆ, ನೇರ ನುಡಿ, ಅರ್ಥೈಸುವ ವಿಧಾನ. ಇವರ ಉಪನ್ಯಾಸವೆಂದರೆ ಇಡೀ ಕೊಠಡಿ ಬರ್ತಿಯಾಗಿ ಕಂಗಳೊಸಿ ಎಲ್ಲಡೆಯು ತುಟಿ ಪಿಟಿಕ್ ಎನ್ನದ ಮೌನ ಆವರಿಸುರುತ್ತೆ. ಎಂಥಾ ದಡ್ಡನಿಗು ಸಹ ಇವರ ಉಪನ್ಯಾಸ ಅರ್ಥವಾಗುತಿತ್ತು.
ಸುಮಾರು ನಲ್ವರ್ತ ಆಸುಪಾಸಿನ ವಯಸ್ಸು, ಬ್ರಹ್ಮಚಾರಿ, ಹೆತ್ತವರ ಏಳು ಮಕ್ಕಳ ಪೈಕಿ ಆರನೆಯವರಾದ ಇವರು ಒಬ್ಬರೆ ಗಂಡು ಮಗ. ಬಡ ಉಪಧ್ಯಾಯರ ಮನೆಯಿಂದ ಬಂದಿದ್ದರಾದರಿಂದ ಅವರ ಆರ್ಥಿಕ ವ್ಯವಸ್ಥೆ ಅಷ್ಠಕಷ್ಠೆ. ಇವರಿಗೆ ಬರುವ ಸಂಬಳದಿಂದಲೇ ಆಕ್ಕಂದಿರ ಮದುವೆ ನಡೆಯಿತು, ಇವರ ತಂಗಿಯಂತೂ ಮದುವೆ ಆಗದೆ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೇ ಉಳಿದು ಬಿಟ್ಟರು. ಇವರು ಪ್ರೊಫೆಸರ್ ಆಗುವ ಮುನ್ನವೇ ತಂದೆ ತಾಯಿ ಸ್ವರ್ಗಸ್ಥರಾಗಿದ್ದರು.
ಇವರ ವಾಸ ವಿಶ್ವವಿದ್ಯಾನಿಲಯದ ವಸತಿ ಗೃಹದಲ್ಲೇ, ಒಂಟಿ ಜೀವನ. ಸರಕಾರದ ನಿರ್ಲಕ್ಷ್ಯದಿಂದಾಗಿ ಇವರ ವಸತಿ ಗೃಹದ ಸೂರು ಸೋರುತ್ತಿತ್ತು. ಮುರಿದ ಕಿಟಕಿ, ಅಭದ್ರ ಹಿಂದಿನ ಬಾಗಿಲು. ತಾವು ಕೂಡಿಟ್ಟಿದ್ದ ಹಣದಲ್ಲಿ ಪುಸ್ತಕ ಕೊಳ್ಳುವಿಕೆ ಇವರ ಹವ್ಯಾಸ. ಅವರ ಈ ಮನೆ, ವಿಧ್ಯಾರ್ಥಿಗಳಿಗೆ ಎಂದೆಂದಿಗೂ ಸ್ವಾಗತ ಬಯಸುತ್ತಿತ್ತು ಮತ್ತು ಅವರ ಪುಸ್ತಕಗಳ ಕಪಾಟು ಬೀಗ ಕಂಡ ಇರಿಲಿಲ್ಲ.
ಹೀಗಿರುವಾಗ ಒಂದು ದಿನ ಇಬ್ಬರು ಕಿಡಗೇಡಿ ವಿಧ್ಯಾರ್ಥಿಗಳು ಪ್ರೊಫೆಸರ್ ಊರಿನಲ್ಲಿ ಇಲ್ಲದ ಸಮಯದಲ್ಲಿ ಆಳತ್ತೆರದ ಹಿಂದಿನ ಗೋಡೆಯ ಹತ್ತಿ ಹಿಂಬಾಗಿಲಿನಿಂದ ಮನೆ ಒಳ ಹೊಕ್ಕು ಕಪಾಟು, ಟ್ರಂಕ್ ಮತ್ತು ಬೀರನ್ನು ಜಾಲಡಿದ್ದರು, ಏನೂ ಸಿಗದ ಪ್ರಯುಕ್ತ ವಾಪಸ್ಸಾಗಿದ್ದರು.
ಆದರೆ ಇವರಿಗೆ ಸಿಕ್ಕಿದ್ದು ಅವರು ಒಣ ಹಾಕಿದ್ದ ವಾಸನೆಯ ಕೋಪಿನ ಮಾತ್ರ. ಹಿಂದನ ಓಣಿ ಕಿರಿದಾದ ಕಾರಣ ಈ ಹುಡಗರು ಮೂಗು ಮುಚ್ಚೇ ಒಳ ಹೋಗಿದ್ದು ಮತ್ತು ಹೊರ ಬಂದಿದ್ದು. ವೈಸ್ ಚಾನ್ಸಲರ್ ದೂರವಾಣಿ ಮೂಲಕ ಪ್ರೊ|| ರಿಗೆ ಮಾಹಿತಿ ನೀಡಿದ್ದರೂ ಇವರು ತಲೆ ಕೆಡಸಿಕೊಂಡಿರಲಿಲ್ಲ, ಪ್ರಥಮ ತನಿಕಾ ವರದಿ ((FIR) ಸಹಾ ದಾಖಲಿಸಿರಲಿಲ್ಲ. ಕಾರಣ ಕದಿಯುವಂತಹಾ ಯಾವುದೇ ವಸ್ತು ಅವರ ಹತ್ತಿರ ಇರಲಿಲ್ಲ.
ಜಾಹೀರಾತು
ಮರು ದಿನ ಯೂನಿರ್ಸಿಟಿಗೆ ಬಂದು, ಮನೆಯನ್ನು ರಿಪೇರಿ ಮಾಡಿಸಿದ ತರುವಾಯ ಅವರು ತರಗತಿಗೆ ಉಪನ್ಯಾಸ ನೀಡಲು ಬಂದಾಗ ಬೋರ್ಡಿನ ಮೇಲೆ ದಪ್ಪಕ್ಷರದಲ್ಲಿ ” ಪ್ರೊ|| ನಿರ್ವಾಣ್” ಎಂದು ಬರೆದಿದ್ದರು. ಆವತ್ತಿನಿಂದ ಅವರು ಯೂನಿರ್ಸಟಿಯಲ್ಲಿ ಇರೋವರೆಗೂ ಪ್ರೊ|| ನಿರ್ವಾಣ್ ಎಂದೇ ಕರಿಸಿಕೊಳ್ಳುತ್ತಿದ್ದರು. ಪ್ರೊ|| ಅಂತರಾಳವು ಸಹ ಇದನ್ನೆ ಜಪಿಸುತಿತ್ತು. ಈ ವಿಷಯವನ್ನು ತಿಳಿದ ನಾನು ಅವರನ್ನು ಕಂಡಾಗ ನನಗೆ ಅವರು “ಮಾರಾಯ್ರೆ, ಎಲ್ಲಾ ಪುಸ್ತಕಗಳು ಉಂಟೂ….” ಎಂದು ಹೇಳಿ ನಿಟ್ಟುಸಿರು ಬಿಟ್ಟಿದ್ದರು.
ಪ್ರೊ|| ಅಧ್ಯಾಪಕರಲ್ಲದೆ ಒಳ್ಳೆಯ ಆಪ್ತ ಸಮಾಲೋಚಕರು ಹೌದು. ನಾನು ಮನೋ ವೈದ್ಯನಾದರೂ ಅವರಿಂದ ಸಾಕಷ್ಟು ಕಲಿಯುವುದಿತ್ತು. ಯುವಕರಲ್ಲಿ ಸಾಮನ್ಯವಾಗಿ ಕಾಣುವ ದುರ್ನಡತೆ, ದುರಭ್ಯಾಸ, ದುರಾಭಿಮಾನ, ದುರಾಲೋಚನೆ ಹಾಗು ದುಮ್ಮಾನಗಳಿಂದ ಆಗುವ ಮಾನಸಿಕ ಮತ್ತು ಶಾರೀರಿಕ ತೊಂದರೆಗಳನ್ನು ಯುವಕರಿಗೆ ಮನ ಮುಟ್ಟುವಂತೆ ತಿಳಿ ಹೇಳುತಿದ್ದರು. ಬಹು ಆಸೆ, ಬಹು ನಿರಿಕ್ಷೆ, ಬಹು ಆಕಾಂಕ್ಷೆ ಮತ್ತು ಅಸಹಜ ಆಶಾಭಾವನೆಗಳನ್ನ ನೀರಿನ ಮೇಲೆ ಗುಳ್ಳೆಯೆಂಬುದನ್ನ ಯುವಕರಿಗೆ ಮನವರಿಕೆ ಮಾಡಿಸುತಿದ್ದರು.
ವಿದ್ಯಾರ್ಥಿಯರನ್ನ ಕುರಿತು “ಗುರಿ ಉಂಟಲ್ಲಾ, ಅದು ನಾಳೆ ನಾವೆ ತೋಡಿದ ಗುಂಡಿ ಹೌದಲ್ಲೋ……, ಗುರಿ, ಲಾಕರ್ ಒಳ ಇಡು ಮಾರಾಯಾ……, ನಿನ್ನ ಮುಂದೆ ಪುಸ್ತಕವಿದಿಯಲ್ಲೋ……., ಓದು, ಓದಿ ತೇರ್ಗಡೆಯಾಗೋ ಹುಡಗ….. ಗೊತ್ತುಂಟಾ…….”, ಇವರ ಆರ್ಥದಲ್ಲಿ ಇವೆರೆಡು ನಕರಾತ್ಮಕದಿಂದ ಇದ್ದರೆ ಆಥವ ಗೀಳಾಗಿಸಿದರೆ ಯುವಕನ ಪಥ ನಿರ್ಪಥವಾಗುವದರಲ್ಲಿ ಸಂದೇಹವಿಲ್ಲ. ವಿಧ್ಯಾರ್ಥಿಯ ಗುರಿ ಒಂದೆ ಆಗಿರದೆ ಕೆಲವು ಗುರಿಗಳನ್ನು ಹೊಂದಿದವನಾದರೆ ಅದು ಸಕರಾತ್ಮಕ ಪಥವಾಗುತ್ತೆ.
ಗುರಿ ಮತ್ತು ಚಲ ಯಾವಾಗಲು ಗಾಬರಿ ಮತ್ತು ಭಯದಿಂದ ಕೂಡಿರುತ್ತದೆ, ಹೀಗಾಗಿ ಈ ಯಾಂತ್ರಿಕತೆ ಪೈಪೋಟಿಯ ಯುಗದಲ್ಲಿ ವಿದ್ಯಾರ್ಥಿಯ ಕಳವಳ ಹಾಗು ಅವರ ಮುಂದಿರುವ ಸಮಸ್ಯೆಗಳ ಚಿಂತನೆ ಸಹಜ. ಇಲ್ಲದ ಮುಂದಿನ ಚಿಂತೆ ಬಿಟ್ಟು ವಾಸ್ತವದ ಚಿಂತನೆಯ ಮಂಥನವನ್ನ ಮಾಡಿದ ವಿದ್ಯಾರ್ಥಿ ಹತ್ತಿರದ ಗುರಿ ತಲಪುತ್ತಾನೆ. ಪ್ರೊ|| ನನ್ನಂತೆಯೆ, ಸೋಗಿನ ನಟ, ನಟಿಯರು ಮತ್ತು ಸೆಲಬ್ರಿಟೀಸ್ ಕಂಡರೆ ಹೌಹಾರುತ್ತಿದ್ದರು.
ಇವರ ವಿಧ್ಯಾರ್ಥಿಗಳು ಅನುಕರೆಣೆಯ ಭೂತಕ್ಕೆ ಬಲಿ ಆದವರ ಪ್ರಮಾಣವನ್ನು ವಿವರಿಸುತಿದ್ದರು. ಇದರಿಂದಾದ ಈ ದೇಶದ ಅಮಾಯಕರ ಅನಾಹುತಗಳನ್ನ ನೆನದು ಚಿಂತಿಸುತಿದ್ದರು. ಅನೇಕ ಬಾರಿ ಸರಕಾರದವರಿಗೆ ಪತ್ರ ಬರೆದರೂ ಉಪಯೋಗವಾಗಲಿಲ್ಲ. ತಮಗೆ ಗೊತ್ತಿದ್ದ ಪಾತ್ರದಾರಿಗಳಿಗೆ ಸೃಜನಶೀಲ ನಟನೆಯನ್ನ ಪ್ರದರ್ಶಿಸಲು ವಿನಂತಿಸುತ್ತಿದ್ದರು. ಏನೇ ಆಗಿಲಿ ಅವರ ಚಿಂತನೆ ಎಲ್ಲರು ಸತತ ಪ್ರಜೆಗಳಾಗಲಿ ಎಂಬುದೇ ಆಗಿತ್ತು.
ನನ್ನ ಮೂಲ ಮಾನಸಿಕ ವಿಷಯಕ್ಕೆ ಬಂದಾಗ ಪ್ರೊ||ರವರು ಸಮಾಜದಲ್ಲಿನ ಕ್ರೂರತೆ ಮತ್ತು ಯುವ ಲೈಂಗಿಕತೆಯನ್ನು ವಿವರಿಸುತ್ತಿದ್ದರು. ದೃಶ್ಯವಾಹಿನಿಯನ್ನು ಮತ್ತು ದಿನ ಪತ್ರಿಕೆಗಳನ್ನು ಗಮನಿಸಿದಾಗ ಹದಿ ಹರೆಯರ ಲೈಂಗಿಕ ಹಾಗೂ ಕ್ರೂರತೆಗಳನ್ನು ಬಿಂಬಿಸುವ ವಿಷಯಗಳನ್ನು ವಿವರವಾಗಿ ತಿಳಿಸುತ್ತಿದ್ದರು.
ಸತ್ಯ ಮತ್ತು ಮಿಥ್ಯಗಳ ಒಳಗೊಂಡ ಲೇಖನಗಳು ಓದುಗನ ವಿಮರ್ಷೆಗೆ ಒಳಗಾಗಿರುತ್ತೆ. ಯುವಕರಲ್ಲಿ ಈ ಅಸಹಜ ಪ್ರವೃತ್ತಿಗಳು ಬರಲು ಕಾರಣಗಳಾದರೂ ಯಾವುದು? ನರ ರಚನೆಯೇ?, ನರ ಸಂಯೋಜನಯೇ?, ನರ ವಾಹಕವೇ, ನರ ರಸಗಳೇ? ಹಾಗು ವಂಶವಾಹಿನಿ ಜೀವ ತಂತುಗಳೇ? ಈ ಏಲ್ಲಾ ರಿತ್ಯಗಳಿಂದ ವಿಕೃತ ವೃತ್ತಿ ಹಾಗು ಪ್ರವೃತ್ತಿಗಳನ್ನ ಯುವಕರಲ್ಲಿ ಕಾಣಬಹುದೆಂದು ನರ ಮತ್ತು ಮನೋ ವಿಜ್ಞಾನಿಗಳು ಹೇಳಿರುವರು.
ಉದಾಹರಣೆಗೆ, ಅಸಹಜ ಕಾಮ ಪ್ರಚೋದನ ದೃಶ್ಯಗಳು ನರ ಮತ್ತು ಮನೋ ನ್ಯೂನತೆ ಉಳ್ಳವನಿಗೆ ಅತೀವ ಕಾಮಕೇಳಿ ಗೀಳು ತರಿಸಿ ಸಾಂದರ್ಬಿಕ ಸಮಯದಲ್ಲಿ ಅವನು ಮಾನ ಭಂಗ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಸಲಿಂಗತನ ಇತ್ಯಾದಿಗಳನ್ನ ಮಾಡಬಹುದು.
ಅನೇಕ ವೇಳೆ ಈ ಮಾನಸಿಕ ತೊಂದರೆಗಳಿಗೆ ಔಷದಿಯಿಂದ ಚಿಕಿತ್ಸೆ ಇಲ್ಲದಿದ್ದರೂ ಕೆಲವೊಮ್ಮೆ ಆಪ್ತ ಸಮಲೋಚನೆಯಿಂದ ಸರಿಪಡಿಸಲು ಸಾದ್ಯವೆನ್ನುವ ಮನೋ ಸಂಶೋದನೆಗಳು ಪ್ರಗತಿಯಲ್ಲಿ ಇವೆ. ಇಂತಹ ನ್ಯೂನತೆಯುಳ್ಳ ಯುವಕರು ಅನೇಕ ದ್ರವ್ಯಗಳಿಗೆ ದಾಸರಾಗಿರುತ್ತಾರೆ. ಅನೇಕ ದುಶ್ಚಟಗಳಿಗೆ ಮಾರು ಹೋಗಿರುತ್ತಾರೆ. ಅಂತವರನ್ನು ಬೇಗ ಗುರುತಿಸಿ ಮನೋವೈದ್ಯರಿಗೆ ತೋರಿಸಿದ ಪಕ್ಷದಲ್ಲಿ ಕಂಡಿತ ಪರಿಹಾರ ಸಿಗಬಹುದು. ಇದಲ್ಲದೆ ಅತಿಯಾದ ಅನುಮಾನ, ಅಸಹಜ ಪ್ರೇಮಾಂಕುರ, ಸತಾಯಿಸುವ ಪ್ರವೃತ್ತಿ, ಕಾರಣವಿಲ್ಲದೆ ಹಿಂಸಿಸುವ ಪ್ರವೃತ್ತಿ, ಕ್ಷಲ್ಲಕ ಕಾರಣಗಳಿಂದ ಹತ್ಯೆಗೈಯುವ ವಿಚಾರವೆಲ್ಲದಕ್ಕು ಮನೋ ಚಿಕಿತ್ಸೆ ಸಾಧ್ಯ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

