ಮಂಡ್ಯ : ಜಿಲ್ಲೆಯ ಮೇಲುಕೋಟೆಯಲ್ಲಿ ಬೆಂಗಳೂರಿನ ಅಖಿಲ ಭಾರತ ಸಂಗೀತ ಮತ್ತು ನೃತ್ಯ ಕಲಾವಿದರ ಒಕ್ಕೂಟದ ವತಿಯಿಂದ ಶ್ರೀ ಚೆಲುವರಾಯಸ್ವಾಮಿಯವರ ದೇವಾಲಯದ ಪ್ರಾಕಾರದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹೆಸರಾಂತ ಯುವ ಭರತನಾಟ್ಯ ಕಲಾವಿದ ವಿದೂಷಿ ಡಾ.ಸ್ವಾತಿ ಪಿ ಭಾರದ್ವಾಜ್ ರವರು ತಮ್ಮ ಶಿಷ್ಯರೊಂದಿಗೆ ಒಂದು ಗಂಟೆ 30 ನಿಮಿಷಗಳ ಕಾಲ ನಿರಂತರವಾಗಿ ಭಗವಂತನ ಚರಿತ್ರೆಯನ್ನು ಸಾರುವ ವಿಶೇಷ ಕೀರ್ತನೆಗಳಿಗೆ ನೃತ್ಯ ಪ್ರದರ್ಶನವನ್ನು ಶ್ರೀ ಚೆಲುವರಾಯಸ್ವಾಮಿ ಪಾದರವಿಂದಕ್ಕೆ ಸಮರ್ಪಣೆ ಮಾಡಿದರು ಇದೇ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಕಲಾವಿದರಿಗೆ ಪ್ರಸಾದ ನೀಡಿ ಅಭಿನಂದಿಸಲಾಯಿತು.
– ಕೆ.ಬಿ.ಚಂದ್ರಚೂಡ
