
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಅಮೆರಿಕದ ಪಾಡ್ಕ್ಯಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರ ಬಹುನಿರೀಕ್ಷಿತ ಪಾಡ್ಕ್ಯಾಸ್ಟ್ ಭಾನುವಾರ (ಮಾರ್ಚ್ 16) ಬಿಡುಗಡೆಯಾಗಲಿದೆ. ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡ ಲೆಕ್ಸ್ ಫ್ರಿಡ್ಮನ್, 3 ಗಂಟೆಗಳ ಚರ್ಚೆಯನ್ನು ತಮ್ಮ ಜೀವನದ ಅತ್ಯಂತ ಉತ್ತಮ ಅನುಭವಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ.
“ಭಾರತದ ಪ್ರಧಾನಿ ಮೋದಿ ಅವರೊಂದಿಗೆ ನಾನು 3 ಗಂಟೆಗಳ ಪಾಡ್ಕ್ಯಾಸ್ಟ್ ಸಂಭಾಷಣೆ ನಡೆಸಿದೆ. ಇದು ನನ್ನ ಜೀವನದ ಅತ್ಯುತ್ತಮ ಸಂಭಾಷಣೆಗಳಲ್ಲಿ ಒಂದಾಗಿದೆ. ಇದು ನಾಳೆ ಪ್ರಸಾರವಾಗಲಿದೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಲೆಕ್ಸ್ ಫ್ರಿಡ್ಮನ್ ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಈ ಸುದ್ದಿ ಹಂಚಿಕೊಂಡಿರುವ ಲೆಕ್ಸ್ ಫ್ರಿಡ್ಮನ್, ಪ್ರಧಾನಿ ಮೋದಿಯೊಂದಿಗೆ 3 ಗಂಟೆಗಳ ಕಾಲ ನಡೆದ ಅದ್ಭುತ ಸಂಭಾಷಣೆ ನಡೆಸಿರುವುದಾಗಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಯುಎಸ್ ಪಾಡ್ಕ್ಯಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರ ಪಾಡ್ಕ್ಯಾಸ್ಟ್ ಭಾನುವಾರ ಬಿಡುಗಡೆಯಾಗಲಿದೆ. ಪಾಡ್ಕ್ಯಾಸ್ಟರ್ ಫ್ರಿಡ್ಮನ್ ಪ್ರಧಾನಿ ಮೋದಿಯವರನ್ನು ಸಂದರ್ಶಿಸಲು ಕಳೆದ ತಿಂಗಳು ಭಾರತಕ್ಕೆ ಬಂದಿದ್ದರು. ತಮ್ಮ ಭೇಟಿಗೂ ಮುನ್ನ ಭಾರತದ ಇತಿಹಾಸ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಧಾನಿ ಮೋದಿಯವರೊಂದಿಗೆ ಗಂಟೆಗಟ್ಟಲೆ ಸಂವಹನ ನಡೆಸುವ ತಮ್ಮ ಸಂತೋಷ ಮತ್ತು ಉತ್ಸಾಹವನ್ನು ಫ್ರಿಡ್ಮನ್ ವ್ಯಕ್ತಪಡಿಸಿದ್ದರು.