ಹೃದಯದಾಳದ ನಗು ನಿನ್ನ ಮುಖದಲಿ ಬಿಂಭಿಸುವುದೇ….
ಬಿಂಭಿಸಿದ ಆ ನಗು ವ್ಯಂಗ್ಯವೇ…..
ವ್ಯಂಗ್ಯದೀ ನಗು ಸತ್ಯವೇ…..
ಸತ್ಯಾದೀತ ನಗು ಮನದಲಿ ಅರುಳುವುದೇ….. ಮನದಲಿ ಉಳಿಯುವುದೇ……
ಮನದೊಳಿಗಿನ ಭಾವನೆ ಹೃದಯದಂಗಳದಲಿ ಮೆರಯುವುದೇ…….
ಹೃದಯದಿಂದ ಬಂದ ಭಾವನೆ ಪರರಿಗೆ ತಲಪವುದೇ….
ಮಿಟುಕಿದಾ ಭಾವನೆ ಸತ್ಯವೇ……
ಸತ್ಯದ ಈ ಭಾವನೆ ಮನ ಕದಡುವುದೇ… ಮನ ಶಾಂತಿಸುವುದೇ…..
ಅಂತರಂಗದೊಳಗೆ ನೀ ರಂಗ ಕರ್ಮಿಯೇ…..
ಆ ರಂಗ ಮಂಟಪದಲಿ ನೀ ಅಭಿನಯಗಾರನೇ……….
ಅಭಿನಯಗಾರನಾದ ನೀ ಬಾಹ್ಯರಂಗ ನಡೆಸುವಿಯೇ
ನಡೆಸುವವನು ಸತ್ಯ ಉಳಿಸುವನೇ……
ಉಳಿಸಿದಾತನು ಇತರರಿಗೆ ಮಿಥ್ಯನೇ… ಉಳಿದವರಿಗೆ ಧೂರ್ಥನೇ……
ಮನದೊಳ ಯೋಚನೆ ಹೊರಳವುದೇ ನಾಲಿಗೆಯ ತುದಿಯಲಿ…..
ನಾಲಿಗೆಯಿಂದ ಹೊರ ಚಿಮ್ಮಿದ ಪದ ಅರ್ಥೈಸುವುದೇ……
ಅರ್ಥೈಸಿದ ನುಡಿ ಸತ್ಯವೇ…..
ಸತ್ಯ ಸತ್ಯಾತೀತ ಹಾಡು ಮಾಡುವುದೇ ಅಪಹಾಸ್ಯವ…. ಉಳಿಸವುದೇ ಹಾಸ್ಯವ………
– ಡಾ॥ ಎ ಮ್ ನಾಗೇಶ
ಖ್ಯಾತ ಮನೋರೋಗ ತಜ್ಞಾ
