ಕೆ.ಆರ್.ಪೇಟೆ – ತಾಲ್ಲೂಕು ಗ್ರಾ.ಪಂ ಕಚೇರಿಗಳಲ್ಲಿ ಇ-ಸ್ವತ್ತು ನರೇಗಾ ಯೋಜನೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತುಂಬಿತುಳುಕುತ್ತಿದೆ ಅಂಥವರ ವಿರುದ್ಧ ಶಿಸ್ತು ಕ್ರಮ ಹಾಗೂ ತಾ.ಪಂ ಯ ವಾಣಿಜ್ಯ ಸಂಕಿರಣಗಳನ್ನ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಕ್ರಮಬದ್ಧವಾಗಿ ನಡೆಸಬೇಕು ಎಂದು ಆಗ್ರಹಿಸಿ ತಾ.ಪಂ ಕಚೇರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ವೇಣು ಪಟ್ಟಣದ ತಾ.ಪಂ ಕಾರ್ಯಾಲಯ ಪ್ರಾಂಗಣದಲ್ಲಿ ಸುಮಾರು 45 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಇದ್ದು, ಕಳೆದ ಬಾರಿ ನಿಯಮ ಬಾಹಿರವಾಗಿ ಬಹಿರಂಗ ಹರಾಜು ಮಾಡದೇ 3 ತಿಂಗಳು ಬಾಡಿಗೆ ಮನ್ನ ಮಾಡಿ, ಸಭೆಯಲ್ಲಿ ನಿಯಮವನ್ನು ಉಲ್ಲಂಘಿಸಿ ಮೊದಲಿನಿಂದ ಬಾಡಿಗೆ ಇದ್ದವರ ಅನುಸಾರವಾಗಿಯೇ ನಡೆದುಕೊಂಡು ಬಂದಿದೆ. ಈ ವಿಚಾರವಾಗಿ 4 ಬಾರಿ ದೂರು ಕೊಟ್ಟರೂ ಯಾವ ರೀತಿಯ ಕಾನೂನು ಮುಖಾಂತರ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರವಾಗಿ ಬಹಿರಂಗ ಹರಾಜಿನ ಬಗ್ಗೆ ಪ್ರತಿಯೊಬ್ಬ ಜನಸಾಮಾನ್ಯರಿಗೆ ಮಾಹಿತಿ ನೀಡಿ ಕರಪತ್ರಗಳನ್ನು ಹಂಚಿ, ಬಹಿರಂಗಗೊಳಿಸಿದ ನಂತರ ಹರಾಜು ಪ್ರಕ್ರಿಯೆ ನಡೆಸಬೇಕು ಆದರೆ ಹಲವು ವರ್ಷಗಳಿಂದ ಉಳ್ಳವರಿಗೆ ಕೈ ಗೊಂಬೆಯಾಗಿ ತಾಲೂಕು ಪಂಚಾಯಿತಿ ಅಧಿಕಾರಿಗಳು ಕೂಡ ಕಾರ್ಯನಿರ್ವಹಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿ.
ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಯಲ್ಲಿ 15 ನೇ ಹಣಕಾಸನ್ನು ದುರುಪಯೋಗ ಪಡಿಸಿಕೊಂಡು ಕಳಪೆ ಗುಣಮಟ್ಟದ ಸಾಮಾಗ್ರಿಗಳನ್ನು ಖರೀದಿಸಿರುವುದು ಮತ್ತು ಕಾಮಗಾರಿಗಳನ್ನು ನಡೆಸಿ ನರೇಗಾ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡದೇ ಅವರಿಗೆ ಬೇಕಾದ ಜಾಬ್ ಕಾರ್ಡ್ ಗಳಿಗೆ ಹಣ ಬಿಡುಗಡೆ ಮಾಡಿ ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ನಿಯಮಬಾಹಿರವಾಗಿ ನಿರ್ವಹಿಸಿದ್ದಾರೆ ಪಂಚಾಯತ್ ರಾಜ್ ಅಧಿನಿಯಮಗಳನ್ನು ಉಲ್ಲಂಘನೆ ಮಾಡಿ ಹಲವಾರು ಇ ಸ್ವತ್ತುಗಳನ್ನು ಮಾಡಿರುವ ಮುರುಕನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಓ ಲೋಕಾಯುಕ್ತ ಬಂದ ಸಂದರ್ಭದಲ್ಲಿ ಪಿಡಿಓ ಮತ್ತು ಬಿಲ್ ಕಲೆಕ್ಟರ್ ರೈತನಿಂದ ಹಣ ಪಡೆಯುವಾಗಲೇ ಸಿಕ್ಕಿಬಿದ್ದು ಇವರ ಬಗ್ಗೆ ಇಲಾಖೆಯ ತನಿಖೆ ನಡೆಸಿ ಪಿಡಿಓಗೆ ಲೋಕಾಯುಕ್ತ ನ್ಯಾಯಾಲಯದಿಂದ ತೀರ್ಪು ನೀಡುವ ತನಕ ತಮ್ಮ ಇಲಾಖೆಯಲ್ಲಿ ಯಾವುದೇ ರೀತಿಯ ಹುದ್ದೆಗಳನ್ನು ನೀಡಬಾರದೆಂದು ಒತ್ತಾಯಿಸಿದ ವೇಣು ಅವರು ಅಧಿನಿಯಮ ಬಾಹಿರವಾಗಿ ನಡೆದಿರುವ ಕಾಮಗಾರಿಗಳು ಮತ್ತು ಸರ್ಕಾರದ ಹಣ ದುರುಪಯೋಗವಾಗಿರುವುದನ್ನು ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಣ ಅಧಿಕಾರಿ ಸುಷ್ಮಾ ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಅಗ್ರಹಾರಬಾಚಳ್ಳಿ ಶ್ರೀನಿವಾಸ್,ಪದವಿ ಘಟಕದ ಅಧ್ಯಕ್ಷ ಚೇತನ್ ಕುಮಾರ್,ಜಿಲ್ಲಾ ಉಪಾಧ್ಯಕ್ಷ ಶಿವಪ್ರಸಾದ್,ಯುವ ಘಟಕದ ಅಧ್ಯಕ್ಷ ಆನಂದ್,ಹೊನ್ನೇನಹಳ್ಳಿಸ್ವಾಮಿಗೌಡ,ಕಿಕ್ಕೇರಿ ಹೋಬಳಿ ಅಧ್ಯಕ್ಷ ಪದ್ಮನಾಭ,ಕಸಬಾ ಹೋಬಳಿ ಅಧ್ಯಕ್ಷ ಅನಿಲ್ ಗೌಡ ,ಕಾಮನಹಳ್ಳಿ ತಿಮ್ಮೇಗೌಡ,ಹೊಸಹೊಳಲು ಸಂಜೀವ್,ಅಜಯ್,ಯುವ ಘಟಕ ಕಾರ್ಯದರ್ಶಿಮನು, ಸಂಚಲಕ ಜಹಿರ್,ಮಂಜು,ಹರೀಶ್,ನಂಜುಂಡ,ಚೇತನ್,ನಜೀರ್, ಸಮೀರ್ ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
