
ಹಾಸನ-ನಗರ ಸ್ಥಳೀಯ ಸಂಸ್ಥೆಗಳು ಇ-ಆಸ್ತಿ ತಂತ್ರಾಂಶದ ಮೂಲಕ ಆಸ್ತಿಗಳ ಡಿಜಿಟಲೀಕರಣ, ಆಸ್ತಿ ಮಾಲೀಕ ಹಕ್ಕು ವರ್ಗಾವಣೆ ಮತ್ತು ಡಿಜಿಟಲ್ ಸಹಿಯುಳ್ಳ ನಮೂನೆ-3/2 ರನ್ನು ಸೃಜಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸತ್ಯಭಾಮ ಅವರು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಇ-ಆಸ್ತಿ ತಂತ್ರಾಂಶದ ಮೂಲಕ ಆಸ್ತಿಗಳ ಡಿಜಿಟಲೀಕರಣ ಅನುಷ್ಠಾನ ಕುರಿತು ಸಭೆ ನಡೆಸಿ ಮಾತನಾಡಿ ಸರ್ಕಾರ ಇ-ಆಸ್ತಿ ತಂತ್ರಾಂಶವನ್ನು ಏಪ್ರಿಲ್ ೨೦೧೬ ರಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಿ ಬಳಕೆಯನ್ನು ಕಡ್ಡಾಯಗೊಳಿಸಿದೆ, ಈ ನಿಟ್ಟಿನಲ್ಲಿ ತಂತ್ರಾಂಶದಲ್ಲಿರುವ ಮಾಹಿತಿಯನ್ನು ಪ್ರಚುರ ಪಡಿಸಲು ಫೆ.25 ರವರೆಗೆ ಮಹಾನಗರ ಪಾಲಿಕೆ /ನಗರ ಸ್ಥಳೀಯ ಸಂಸ್ಥೆಯ ವೆಬ್ ಸೈಟಿನಲ್ಲಿ ಪ್ರಚುರಪಡಿಸುವುದು.
ಕಚೇರಿಯಲ್ಲಿ ಮುದ್ರಣ ಪ್ರತಿಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಈ ಬಗ್ಗೆ, ಪತ್ರಿಕಾ ಪ್ರಕಟಣೆ ನೀಡಿ, ಪ್ರಚುರ ಪಡಿಸಲಾದ ದತ್ತಾಂಶದ ಕುರಿತು ಸಾರ್ವಜನಿಕರು ತಮ್ಮ ಸ್ವತ್ತಿನ ಮಾಹಿತಿಯಲ್ಲಿ ತಿದ್ದುಪಡಿಗಳಿದ್ದಲ್ಲಿ ಫೆ.೨೫ ರೊಳಗೆ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಯ ಕಚೇರಿಗೆ ಸಲ್ಲಿಸುವಂತೆ ತಿಳಿಸುವುದು. ಈ ಕುರಿತು ಲಭ್ಯವಿರುವ ಮೊಬೈಲ್ ಸಂಖ್ಯೆಗಳಿಗೆ SMS ಮೂಲಕ ಮಾಹಿತಿಯನ್ನು ರವಾನಿಸುವಂತೆ ತಿಳಿಸಿದರು.
ಸದರಿ ಮಾಹಿತಿ ಮನೆ ಮನೆಗೆ ತಲುಪುವಂತೆ ಮಾಡಲು ವ್ಯಾಪಕ ಪ್ರಚಾರ ಕಾರ್ಯವನ್ನು ಕೈಗೊಳ್ಳುವುದು, ಪ್ರಚುರಪಡಿಸಲಾದ ದತ್ತಾಂಶದ ಕುರಿತು ಸ್ವೀಕೃತವಾದ ತಿದ್ದುಪಡಿಗಳನ್ನು ಸ್ವೀಕೃತವಾದ 7 ದಿನಗಳ ಒಳಗಾಗಿ ಇತ್ಯರ್ಥ ಪಡಿಸಿ, ತಂತ್ರಾಂಶದಲ್ಲಿ ಕಾಲೋಚಿತಗೊಳಿಸುವಂತೆ ನಿರ್ದೇಶನ ನೀಡಿದರು.

ಈ ಸಂಬಂಧ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಮೊಬೈಲ್ ಸಂಖ್ಯೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಚುರ ಪಡಿಸಲು ತಿಳಿಸಿದರಲ್ಲದೆ, ಸದರಿ ಕಾರ್ಯವನ್ನು ಕೈಗೊಳ್ಳಲು ಸ್ಥಳೀಯ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳನ್ನು ತೊಡಗಿಸಿಕೊಂಡು 11.03.2025 ರ ಒಳಗಾಗಿ ಸಂಪೂರ್ಣ ಮಾಹಿತಿಯನ್ನು ಸಿದ್ಧಪಡಿಸಿ, ಇ-ಆಸ್ತಿ ತಂತ್ರಾAಶಕ್ಕೆ, ಇಂಡೀಕರಣ ಮಾಡಲು ಸಿದ್ಧಪಡಿಕೊಳ್ಳುವಂತೆ ಸೂಚಿಸಿದರು.
ಅನುಬಂಧ-೧ ನಮೂನೆಯಲ್ಲಿ ಮಾಹಿತಿಯನ್ನು ಯೋಜನಾ ನಿರ್ದೇಶಕರು, ಸಂಗ್ರಹಿಸಿ, ಪರಿಶೀಲಿಸಿ ಪ್ರತಿ ದಿನ ಸಂಜೆ 5.30 ರ ಒಳಗೆ ನಿರ್ದೇಶನಾಲಯಕ್ಕೆ ವರದಿ ಮಾಡುವಂತೆ ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಯಲ್ಲಿ ಸದರಿ ಪ್ರಕ್ರಿಯೆಯ ಕುರಿತು ಯೋಜನಾ ನಿರ್ದೇಶಕರು ವಾರಕ್ಕೊಮ್ಮೆ ಭೇಟಿ ನೀಡುವುದು, ಸದರಿ ಕಾರ್ಯವು ತ್ವರಿತವಾಗಿ ಮತ್ತು ವ್ಯವಸ್ಥಿತವಾಗಿ ಕೈಗೊಳ್ಳುತ್ತಿರುವ ಬಗ್ಗೆ ಪರಿಶೀಲಿಸಿ, ಅಗತ್ಯ ಮಾರ್ಗದರ್ಶನ ಮಾಡುವುದು, ಸದರಿ ಕಾರ್ಯದಲ್ಲಿ ನಿರ್ಲಕ್ಷ ತೋರುವ ಅಥವಾ ವಿಳಂಭಕ್ಕೆ ಕಾರಣರಾಗುವ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವಂತೆ ಹೇಳಿದರು.

ಇ-ಆಸ್ತಿ ತಂತ್ರಾಂಶದಲ್ಲಿ ಸ್ವತ್ತಿನ ಮಾಹಿತಿಯ ಇಂಡೀಕರಣ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಹಾನಗರ ಪಾಲಿಕೆ /ನಗರ ಸ್ಥಳೀಯ ಸಂಸ್ಥೆಗಳು ನಾಗರೀಕರ ಅನುಕೂಲಕ್ಕಾಗಿ ಇ-ಆಸ್ತಿ ತಂತ್ರಾಂಶದಲ್ಲಿ ನಮೂನೆ 2/3 ನ್ನು ಸೃಜಿಸಿ ನಾಗರೀಕರಿಗೆ ಒದಗಿಸಲು ಮೇಳಗಳನ್ನು ಆಯೋಜಿಸಲು ಜಾಗಗಳನ್ನು ಗುರುತಿಸಿ, ವ್ಯವಸ್ಥಿತವಾಗಿ ಮತ್ತು ಸಂಘಟಿತ ರೀತಿಯಲ್ಲಿ ಮೇಳಗಳನ್ನು ನಡೆಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರಲ್ಲದೆ, ಮೇಳ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಸಾರ್ವಜನಿಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಶೌಚಾಲಯ ಸಾಕಷ್ಟು ಸಂಖ್ಯೆಯ ಕಂಪ್ಯೂಟರ್ಗಳು, ಪ್ರಿಂಟರ್ಗಳು, ಸ್ಕಾನರ್ ಮತ್ತು ಇಂಟರ್ನೆಟ್ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳುವುದು ಜನಸಂದಣಿ ಮತ್ತು ಅನಗತ್ಯ ಕಾಯುವಿಕೆಯನ್ನು ತಪ್ಪಿಸಲು 25 ಅರ್ಜಿದಾರರಿಗೆ ಒಂದು ಕಂಪ್ಯೂಟರ್ ಮತ್ತು ಪ್ರಿಂಟರ್ ಖಚಿತಪಡಿಸಿಕೊಳ್ಳಬೇಕು. ಮುಖ್ಯ ಇಂಟರ್ನೆಟ್ ವಿಫಲವಾದಲ್ಲಿ ಬ್ಯಾಕ್-ಅಪ್ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿಯೊಬ್ಬ ನಾಗರಿಕ ತಮ್ಮ ಕರಡು ಇ ಆಸ್ತಿಯ ಪ್ರತಿಯನ್ನು ನೋಡಬಹುದು ಮತ್ತು ಡೌನ್ ಲೋಡ್ ಮಾಡಬಹುದು ಮತ್ತು PID/PUID ಟಿಪ್ಪಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸುವದು. ಇ-ಆಸ್ತಿ ಬಯಸುವ ಪ್ರತಿಯೊಬ್ಬ ನಾಗರಿಕನು ಸಲ್ಲಿಸಬೇಕಾದ ಮಾಹಿತಿ/ದಾಖಲೆಗಳ ವಿವರವನ್ನು ತಿಳಿಸುವುದು, ಅಧಿಕೃತ ಸ್ವತ್ತಿನ ಮಾಲೀಕರು ಸಲ್ಲಿಸಬೇಕಾದ ದಾಖಲೆಗಳು, ಮತ್ತು ಅನಧಿಕೃತ ಸ್ವತ್ತಾಗಿದ್ದಲ್ಲಿ ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಯ ವಿವರವನ್ನು ನೀಡುವಂತೆ ತಿಳಿಸಿದರು.

ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲು e-khata helpdesk ಅನ್ನು ಸ್ಥಾಪಿಸುವುದು (ಕಂಪ್ಯೂಟರ್ ಕೌಂಟರ್ ಹೊರತುಪಡಿಸಿ) ಪ್ರತಿಯೊಬ್ಬ ನಾಗರೀಕರ ಕರಡು ಇ-ಆಸ್ತಿ ಪ್ರತಿಯ ಪ್ರಿಂಟ್-ಔಟ್ ಅನ್ನು helpdesk ನಲ್ಲಿ ಇಟ್ಟುಕೊಳ್ಳುವುದು. ಇಂಡೀಕರಣದ ನಂತರ ನಮೂನೆ-೨/೩ ನೀಡಲು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ. ನಿಗಧಿಪಡಿಸಿದ ಶುಲ್ಕ, ಪಾವತಿಸಿ, ಸ್ವತ್ತಿನ ಮಾಲೀಕರು DOWNLOAD ಮಾಡಿಕೊಳ್ಳಲು ಅವಕಾಶ ಕಲ್ಪಿಸುವಂತೆ ಹೇಳಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನ ನಿರ್ದೆಶಕರಾದ ಕೃಷ್ಣಮೂರ್ತಿ, ಹಾಸನ ನಗರಸಭೆಯ ಪೌರಾಯುಕ್ತರಾದ ರಮೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.