ತುಮಕೂರು:ಹಾಸನ ಜಿಲ್ಲೆಯ ಗೋರೂರು ಜಲಾಶಯದಿಂದ ಹೇಮಾವತಿ ನೀರು ತುಮಕೂರು ತಾಲ್ಲೋಕು ಬುಗಡನಹಳ್ಳಿ ಕೆರೆಗೆ ಹರಿಯುತ್ತಿರುವ ಹಿನ್ನೆಲೆ ಇಂದು ಕೆರೆಗೆ ತುಮಕೂರು ಮಹಾನಗರ ಪಾಲಿಕೆಯ ಸರ್ವ ಪಕ್ಷಗಳ ಸದಸ್ಯರುಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ಬುಗಡನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿಸಲು ಕಾರಣರಾದ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಜಿ.ಪರಮೇಶ್ವರ್ ರವರಿಗೆ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಕೆ.ಎನ್. ರಾಜಣ್ಣ ರವರಿಗೆ ತುಮಕೂರು ನಗರದ ನಾಗರಿಕರ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ತಿಳಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಅಶ್ವಿಜರವರು ಈಗ ಪ್ರತಿ ದಿನ 30 ಎಂ.ಸಿ.ಎಫ್.ಟಿ.ನೀರು ಹರಿದು ಬರುತ್ತಿದೆ ಇನ್ನು ಹತ್ತು ದಿನ ಇದೇ ಪ್ರಮಾಣದಲ್ಲಿ ನೀರು ಬಂದರೆ ಬುಗುಡನಹಳ್ಳಿ ಕೆರೆ ತುಂಬುತ್ತದೆ ಒಟ್ಟು ಕೆರೆಯ ಗಾತ್ರ 363 ಎಂ.ಸಿ.ಎಫ್.ಟಿ.ಎಂದು ಸ್ಪಷ್ಟಪಡಿಸಿದರು.
– ಕೆ.ಬಿ.ಚಂದ್ರಚೂಡ
