ಕೆ.ಆರ್.ಪೇಟೆ,ಜ.12: ತಾಲ್ಲೂಕಿನ ಕಿಕ್ಕೇರಿ ಹೋಬಳಿ ಸೊಳ್ಳೇಪುರ, ಶ್ರವಣೂರು, ಚಿಕ್ಕಮಂದಗರೆ, ಗದ್ದೆಹೊಸೂರು, ಮೂಡನಹಳ್ಳಿ, ಆಲೇನಹಳ್ಳಿ, ಮಂಚೀಬೀಡು, ಬೀರುವಳ್ಳಿ, ಅರೇನಹಳ್ಳಿ, ಸಾಕ್ಷಿಬೀಡು ಗ್ರಾಮಗಳಲ್ಲಿ ಶಾಸಕರ ಪ್ರದೇಶಾಭಿವೃದ್ದಿ ನಿಧಿ ಅನುಧಾನದಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹೆಚ್.ಟಿ.ಮಂಜು ಅವರು ಭೂಮಿ ಪೂಜೆ ನೆರವೇರಿಸಿದರು.

ಅದೇ ರೀತಿ ಸೊಳ್ಳೇಪುರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಸಕ ಹೆಚ್.ಟಿ.ಮಂಜು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು ನಮ್ಮ ಕೆ.ಆರ್.ಪೇಟೆ ಕ್ಷೇತ್ರವು ಮಂಡ್ಯ ಜಿಲ್ಲೆಯ ಏಳೂ ತಾಲ್ಲೂಕುಗಳಿಗಿಂತ ಬೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿರುವ ತಾಲ್ಲೂಕು ಆಗಿರುತ್ತದೆ. ಆದರೆ ಅನುಧಾನ ಮಾತ್ರ ಬೇರೆ ತಾಲ್ಲೂಕುಗಳಿಗಿಂತ ಕಡಿಮೆ ಅನುಧಾನವನ್ನು ರಾಜ್ಯ ಸರ್ಕಾರವು ನೀಡುತ್ತಿದೆ. ತಾಲ್ಲೂಕಿಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ತಾಲ್ಲೂಕಿನ ಕಿಕ್ಕೇರಿ ಹೋಬಳಿ ಮಾದಿಹಳ್ಳಿ ಸೇತುವೆ, ಗೋಂದಿಹಳ್ಳಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿ ಸೇರಿದಂತೆ ಹಲವು ಯೋಜನೆಗಳಿಗೆ ಬಿಡುಗಡೆಯಾಗಿದ್ದ ಸುಮಾರು 35ಕೋಟಿ ರೂಪಾಯಿಗಳಷ್ಟು ಅನುಧಾನವನ್ನು ಎರಡೂವರೆ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಅಷ್ಟೂ ಅನುಧಾನವನ್ನು ವಾಪಸ್ ಪಡೆದುಕೊಂಡಿದೆ. ಈ ಪೈಕಿ ಹಲವು ಅನುಧಾನವನ್ನು ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳ ಮನವೊಲಿಸಿ ಬಿಡುಗಡೆ ಮಾಡಿಸಿಕೊಂಡು ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ನಡೆಸಲು ಶ್ರಮಿಸುತ್ತಿದ್ದೇನೆ. ಕಳೆದ ವರ್ಷ ಕಾಂಗ್ರೆಸ್ ಶಾಸಕರಿಗೆ 25ಕೋಟಿ ಅನುಧಾನ ನೀಡಿದರೆ. ಜೆಡಿಎಸ್ ಶಾಸಕನಾದ ನನಗೆ ಕೇವಲ 10ಕೋಟಿ ಅನುಧಾನ ನೀಡಲಾಗಿತ್ತು.
ಈ ಭಾರಿ ಕಾಂಗ್ರೆಸ್ ಶಾಸಕರಿಗೆ 50ಕೋಟಿ ಅನುಧಾನ ನೀಡಿದ್ದರೆ, ನನಗೆ ಕೇವಲ 25ಕೋಟಿ ಅನುಧಾನ ನೀಡಿದೆ. ಈ ತಾರತಮ್ಯದಿಂದಾಗಿ ತಾಲ್ಲೂಕಿನ ನಿರೀಕ್ಷಿತ ಅಭಿವೃದ್ದಿ ಸಾಧಿಸಲು ಆಗುತ್ತಿಲ್ಲ. ಆದರೂ ಬರುವಂತಹ ಅನುಧಾನದಲ್ಲಿ ಅಗತ್ಯ ಇರುವ ಗ್ರಾಮಗಳಿಗೆ ರಸ್ತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ತಾಲ್ಲೂಕಿನಾದ್ಯಂತ ರಸ್ತೆಗಳು ಮಂಡಿಯುದ್ದ ಗುಂಡಿ ಬಿದ್ದು ನಿಂತಿವೆ. ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಕನಿಷ್ಠ 100ಕೋಟಿಯಾದರೂ ತಕ್ಷಣಕ್ಕೆ ಬೇಕಾಗುತ್ತದೆ. ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ದೊಡ್ಡ ಮನಸ್ಸು ಮಾಡಿ ತಾಲ್ಲೂಕಿಗೆ ರಸ್ತೆ ಅಭಿವೃದ್ಧಿಗೆ ಗರಿಷ್ಠ ಪ್ರಮಾಣದ ಅನುಧಾನ ನೀಡಿ ಅಧ್ವಾನಗೊಂಡಿರುವ ತಾಲ್ಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ವಕ್ತಾರ ಗದ್ದೆಹೊಸೂರು ಅಶ್ವಿನ್ಕುಮಾರ್, ಜಿಲ್ಲಾ ದಿಶಾ ಸಮಿತಿ ಸದಸ್ಯ ನರಸನಾಯಕ್, ತಾಲ್ಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಹೆಚ್.ಬಿ.ಭರತ್ಕುಮಾರ್, ಸೊಳ್ಳೇಪುರ ಗ್ರಾ.ಪಂ.ಸದಸ್ಯ ಎಸ್.ಕೆ.ಬಾಲಕೃಷ್ಣ, ನಿವೃತ್ತ ಸರ್ವೆ ಅಧಿಕಾರಿ ಸೊಳ್ಳೇಪುರ ಪುಟ್ಟೇಗೌಡರು, ಕಿಕ್ಕೇರಿ ಹೋಬಳಿ ಜೆಡಿಎಸ್ ಮುಖಂಡರಾದ ಕೃಷ್ಣೇಗೌಡ, ಶೇಖರ್, ಸೊಳ್ಳೇಪುರ ಸೊಸೈಟಿ ಮಾಜಿ ಅಧ್ಯಕ್ಷ ಶೆಟ್ಟಿಹಳ್ಳಿ ಕೃಷ್ಣೇಗೌಡ, ಅಕ್ಕಿಹೆಬ್ಬಾಳು ಜೆಡಿಎಸ್ ಅಧ್ಯಕ್ಷ ಮಂಚೀಬೀಡು ಬಸವಲಿಂಗಪ್ಪ, ಮಂದಗೆರೆ ಗ್ರಾ.ಪಂ.ಉಪಾಧ್ಯಕ್ಷೆ ಪಲ್ಲವಿ ಅರುಣ್ಕುಮಾರ್, ತಾ.ಪಂ.ಮಾಜಿ ಅಧ್ಯಕ್ಷೆ ರೂಪಾಕೃಷ್ಣೇಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಲತಾಮಣಿಕಾಯಿಮಂಜೇಗೌಡ, ಬೀರುವಳ್ಳಿ ಸೊಸೈಟಿ ಮಾಜಿ ಅಧ್ಯಕ್ಷ ಈರೇಗೌಡ, ಕಿಕ್ಕೇರಿ ಗ್ರಾ.ಪಂ.ಪಿಡಿಓ ಚೆಲುವರಾಜು, ಮಂದಗೆರೆ ಗ್ರಾ.ಪಂ.ಕಾರ್ಯದರ್ಶಿ ಗಣೇಶ್, ಬೀರುವಳ್ಳಿ ಗ್ರಾ.ಪಂ.ಪಿಡಿಓ ಶಿವಕುಮಾರ್, ಕೆ.ಆರ್.ಡಿ.ಎಲ್.ಸಂಸ್ಥೆಯ ಇಂಜಿನಿಯರ್ ಚೇತನ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಸ್ವಾಮಿ ವಿವೇಕಾನಂದರಿಗೆ ಶಾಸಕ ನಮನ :ಇಂದು ನಡೆದ ವಿವಿಧ ಭೂಮಿ ಪೂಜೆ ಸಮಾರಂಭಗಳ ನಡುವೆ ಶ್ರವಣನಹಳ್ಳಿ ಗ್ರಾಮದಲ್ಲಿ ಶಾಲೆಯ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಶಾಸಕ ಹೆಚ್.ಟಿ.ಮಂಜು ಅವರು ವಿವೇಕಾನಂದರಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್, ಗ್ರಾ.ಪಂ.ಉಪಾಧ್ಯಕ್ಷೆ ಪಲ್ಲವಿ ಅರುಣ್ಕುಮಾರ್ ಇತರರು ಇದ್ದರು.
– ಶ್ರೀನಿವಾಸ್ ಆರ್.
