ಕೊರಟಗೆರೆ:- ಕರ್ನಾಟಕ ರಾಜ್ಯ ಸರ್ಕಾರ ನಡೆಸುವ ಬೈಚಾಪುರ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಂಸಶ್ರೀ 600 ಅಂಕಗಳಿಗೆ 578 ಅಂಕ ತೆಗೆದುಕೊಂಡು ಕಾಲೇಜಿಗೆ ಟಾಪ್ ರ್ಯಾಂಕ್ ಗಳಿಸಿದ್ದಾಳೆ.
ಈ ಮೂಲಕ ವಿಜ್ಞಾನ ಓದಲು ಖಾಸಗಿ ಕಾಲೇಜುಗಳೇ ಬೇಕು ಎಂಬ ಭ್ರಮೆ ಹೋಗಲಾಡಿಸಿ. ಇನ್ನು ಇದೆ ಕಾಲೇಜಿನಲ್ಲಿ ಹರ್ಷಿತಾ 574, ನಿಶಾಂತ್ ಬಿಜಿ 572, ಪ್ರವೀಣ್ ಬಿ ಎಸ್ 568, ಹರ್ಷಿತಾ 566, ದಾನೇಶ್ 560 (ಕನ್ನಡ ವಿಷಯದಲ್ಲಿ 100/100 ಅಂಕ ಗಳಿಸಿದ್ದಾನೆ), ಲೀಲಾ ಟಿ ಆರ್ 560 (ಗಣಿತ ವಿಷಯದಲ್ಲಿ 100/100 ಅಂಕ ಗಳಿಸಿದ್ದಾಳೆ), ಜೀವನ್ ಬಿ ಎಸ್ 560, ಗೀತಾಂಜಲಿ ಎಚ್ ಎಂ 557, ಮಾನ್ಯ ಆರ್ ಎಲ್ 556 ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಟಾಪ್ ಟೆನ್ ರ್ಯಾಂಕ್ ತೆಗೆದುಕೊಂಡ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದ್ದಾರೆ, ಈ ಕಾಲೇಜಿನ ದ್ವಿತೀಯ ಪಿಯುಸಿಯ ಒಟ್ಟು 73 ವಿದ್ಯಾರ್ಥಿಗಳಲ್ಲಿ 41 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದು, 32 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಸಾಧನೆ ಮಾಡಿದ್ದಾರೆ.

ಬೈಚಾಪುರ ಮುರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜ್ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 100ಕ್ಕೆ100 ರಷ್ಟು ಫಲಿತಾಂಶ ಸಾಧಿಸಿದೆ.
ಪೋಷಕರು ನನ್ನ ಮಗ ಅಥವಾ ಮಗಳು ದೊಡ್ಡ ಖಾಸಗಿ ಕಾಲೇಜಿನಲ್ಲಿ ಓದಿದರೆ ಮಾತ್ರವೇ ಹೆಚ್ಚಿನ ಅಂಕ ತೆಗೆಯುತ್ತಾನೆ ಎಂಬ ಭ್ರಮೆ ಕೆಲ ಪೋಷಕರಲ್ಲಿದೆ. ಆದರೆ, ಬೈಚಾಪುರ ಮುರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಟಾಪ್ ರ್ಯಾಂಕ್ ಹಾಗೂ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಮುರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ರ್ಯಾಂಕ್ ಗಳಿಸಿದ್ದಾರೆ. ಈ ಮೂಲಕ ಮುರಾರ್ಜಿ ದೇಸಾಯಿಯಂತಹ ಕಾಲೇಜುಗಳಲ್ಲಿಯೂ ಉತ್ತಮ ಶಿಕ್ಷಣ ದೊರೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ.

ಬೈಚಾಪುರ ಮುರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹನುಮಯ್ಯ ಹಾಗೂ ಉಪನ್ಯಾಸಕರುಗಳು ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಟಾಪ್ ರ್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿನಿ ಹಂಸಶ್ರೀ ಹಾಗೂ ಇನ್ನುಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆ ತಿಳಿಸಿ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
