1.ಶೀಘ್ರದಲ್ಲೇ ಕನಿಷ್ಠ ವೇತನ ಹೆಚ್ಚಳ: ಕಾರ್ಮಿಕರಿಗೆ ಶುಭ ಸುದ್ದಿ ನೀಡಲು ಮುಂದಾದ ಕರ್ನಾಟಕ ಸರ್ಕಾರ
Minimum wages in Karnataka: ಕರ್ನಾಟಕ ಸರ್ಕಾರವು ಕೌಶಲ್ಯಯುಕ್ತ ಮತ್ತು ಕೌಶಲ್ಯರಹಿತ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಲು ಉದ್ದೇಶಿಸಿದೆ. 20,000 ರೂ. ವರೆಗೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಕರಡು ಪ್ರಸ್ತಾವನೆಯನ್ನು ಕನಿಷ್ಠ ವೇತನ ಸಲಹಾ ಮಂಡಳಿಗೆ ಕಳುಹಿಸಿ ಅನುಮೋದನೆ ಪಡೆದ ನಂತರ, ಮುಂದಿನ ಒಂದೆರಡು ವಾರಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ.
******************************************************************************************
2. Modi Thailand Visit: ಎರಡು ದಿನಗಳ ಥೈಲ್ಯಾಂಡ್, ಶ್ರೀಲಂಕಾ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ನಲ್ಲಿ ಶುಕ್ರವಾರ ನಡೆಯಲಿರುವ ಆರನೇ ಆರನೇ BIMSTEC ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಥೈಲ್ಯಾಂಡ್ಗೆ ತೆರಳಿದರು. ಪ್ರಧಾನಿ ಮೋದಿ ಥೈಲ್ಯಾಂಡ್ ಮತ್ತು ಶ್ರೀಲಂಕಾ ಭೇಟಿಗೆ ತೆರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂದಿನ ಮೂರು ದಿನಗಳ ಕಾಲ ತಾವು ಥೈಲ್ಯಾಂಡ್ ಮತ್ತು ಶ್ರೀಲಂಕಾದಲ್ಲಿ ಇರುವುದಾಗಿ ಮತ್ತು ಈ ದೇಶಗಳು ಮತ್ತು BIMSTEC ದೇಶಗಳೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸುವುದಾಗಿ ಪ್ರಧಾನಿ ಮೋದಿ ಹೇಳಿದರು.
***************************************************************************
3.ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮತ್ತೆರೆಡು ಬೇಸಿಗೆ ವಿಶೇಷ ರೈಲುಗಳ ಘೋಷಣೆ, ಇಲ್ಲಿದೆ ವಿವರ
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ರೈಲ್ವೆ ಇಲಾಖೆ ಮೈಸೂರು-ಅಜ್ಮೀರ್ ಮತ್ತು ಬೆಂಗಳೂರು-ಭಗತ್ ಕಿ ಕೋಥಿ ನಡುವೆ ವಿಶೇಷ ಬೇಸಿಗೆ ರೈಲು ಸಂಚಾರಕ್ಕೆ ಮುಂದಾಗಿದೆ. ಈ ವಿಶೇಷ ರೈಲುಗಳು ಹೊರಡುವ ಮತ್ತು ತಲುಪುವ ಸಮಯ, ನಿಲುಗಡೆ ಸ್ಥಳಗಳು ಮತ್ತು ಬೋಗಿಗಳ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
*****************************************************************************
4. ದೆಹಲಿಯಲ್ಲಿ CM-DCM: ನೂತನ ಕರ್ನಾಟಕ ಭವನ ‘ಕಾವೇರಿ’ ಲೋಕಾರ್ಪಣೆ; ಇಂದು ರಾಹುಲ್ ಗಾಂಧಿ ಭೇಟಿ, MCL ಹುದ್ದೆ ಭರ್ತಿ ಕುರಿತು ಚರ್ಚೆ
ಬೆಂಗಳೂರು: ಕರ್ನಾಟಕ ಭವನ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ನಿನ್ನೆಯಷ್ಟೇ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ದೆಹಲಿಯಲ್ಲಿ 138 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕರ್ನಾಟಕ ಭವನವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕರು, ಸಂಸದರು ಮತ್ತು ಇತರ ರಾಜತಾಂತ್ರಿಕರಿಗೆ ವಸತಿ ಒದಗಿಸುವ ಈ ಭವನವು ಕರ್ನಾಟಕದ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
****************
5. ಮೆಟ್ರೋ, ಬಸ್, ಕಸ, ಹಾಲು, ವಿದ್ಯುತ್ ಆಯ್ತು ಇದೀಗ ಕುಡಿಯುವ ನೀರಿನ ದರವೂ ಏರಿಕೆ..!
ಬೆಂಗಳೂರು: ಮೆಟ್ರೋ, ಬಸ್, ಕಸ, ಹಾಲು, ಡೀಸೆಲ್ ದರ ದರ ಹೆಚ್ಚಳದ ನಂತರ ಇದೀಗ ಮತ್ತೊಂದು ದರ ಏರಿಕೆಗೆ ಸರ್ಕಾರ ಸಿದ್ದತೆ ನಡೆಸಿದ್ದು, ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ದರ ಪ್ರತಿ ಲೀಟರ್ ನೀರಿಗೆ 1 ಪೈಸೆಯಷ್ಟು ಬೆಲೆ ಹೆಚ್ಚಿಸಲು ಮುಂದಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ನೀರಿನ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮಂಡಳಿಯ ಅಧಿಕಾರಿಗಳು ಸಿದ್ಧತೆಗಳನ್ನು ನಡೆಸುತ್ತಿದ್ದು, ದರ ಹೆಚ್ಚಳ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಬಿಡಬ್ಲ್ಯೂಎಸ್ಎಸ್ಬಿ ನೀರಿನ ದರವನ್ನು ಲೀಟರ್ಗೆ ಒಂದು ಪೈಸೆ ಹೆಚ್ಚಿಸುವುದು ಅನಿವಾರ್ಯವಾಗಿದ್ದು, ಜನರ ಮೇಲೆ ಹೊರೆಯಾಗದಂತೆ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
*****************************************************************************************
6. ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಮೈಸೂರು, ಶಿರಾಡಿ ಘಾಟ್ ಸೇರಿ 12 ಯೋಜನೆಗಳ ಮಂಜೂರಾತಿಗೆ ಮನವಿ
ಬೆಂಗಳೂರು: ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಪುಣೆ-ಬೆಂಗಳೂರು ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇಗೆ ಶೀಘ್ರ ಮಂಜೂರಾತಿ ನೀಡಬೇಕು ಎಂಬುದು ಸೇರಿದಂತೆ ಸಂಚಾರ ದಟ್ಟಣೆ ಹೆಚ್ಚಿರುವ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡಿದ್ದಾರೆ.
ಬುಧವಾರ ದೆಹಲಿಯಲ್ಲಿ ಕೇಂದ್ರ ರಸ್ತೆ, ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಮುಖ್ಯಮಂತ್ರಿ, ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂರ್ಪಕ ಜಾಲವನ್ನು ವೃದ್ಧಿಸಲು ಸಹಕಾರ ನೀಡುತ್ತಿರುವುದಕ್ಕಾಗಿ ರಾಜ್ಯದ ಪರವಾಗಿ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.
**************
7. ಕಸ ಸಂಗ್ರಹಕ್ಕೂ TAX: ಸರ್ಕಾರದ ಕ್ರಮಕ್ಕೆ BBMP ಸಮರ್ಥನೆ
ಬೆಂಗಳೂರು: ಹೊಸ ಪಾರ್ಕಿಂಗ್ ಶುಲ್ಕ ಹಾಗೂ ಕಸ ಸಂಗ್ರಹಕ್ಕು ತೆರಿಗೆ ವಿಧಿಸಲು ನಿರ್ಧರಿಸಿರುವ ಸರ್ಕಾರದ ನಿರ್ಧಾರವನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ಗಿರಿನಾಥ್ ಅವರು ಬುಧವಾರ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಪೌಂಡ್ ಒಳಗೆ ವಾಹನಗಳ ಪಾರ್ಕಿಂಗ್ ಗೆ ತೆರಿಗೆ ವಿಚಾರ, ವಾಹನಗಳ ತೆರಿಗೆ ಬಗ್ಗೆ ಸ್ಪಷ್ಟನೆ ನೀಡಿದರು.
ಈ ಹಿಂದೆ ಪಾರ್ಕಿಂಗ್ ಶುಲ್ಕ ಎಂದು ಶೇ.50 ರಷ್ಟು ಹಣ ಕಟ್ಟಲಾಗುತ್ತಿತ್ತು. ಈಗ ಅದು ಜಾಸ್ತಿಯಿದೆ ಎಂದು ಆಕ್ಷೇಪಗಳು ಕೇಳಿಬಂದಿವೆ. ಹಿಂದೆ ಜೋನ್ ಗಳ ಆಧಾರದ ಮೇಲೆ ಶುಲ್ಕ ನಿಗದಿಯಾಗಿತ್ತು. ಆಗ ನಮಗೆ 211 ಕೋಟಿ ರೂ.ಗಳ ಅದಾಯ ಬರುತ್ತಿತ್ತು. ಆದರೆ, ಹೊಸ ಪದ್ದತಿಯಿಂದ 43 ಕೋಟಿ ಅಷ್ಟು ಆದಾಯ ಕಡಿಮೆಯಾಗುತ್ತಿದೆ. ನಮಗೆ ಕೋಟಿ ಕೋಟಿ ಹೊರೆಯಾದರೂ ಕೂಡ ಜನರಿಗೆ ಸಹಾಯವಾಗಲಿ ಎಂದು ಹೊಸ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
***********************************************************
8. ಬೆಲೆ ಏರಿಕೆ ವಿರುದ್ಧ ಹೋರಾಟ: ಏಕಾಂಗಿ ಹೋರಾಟ ಸರಿಯಲ್ಲ ಎಂದ JDS, ಮೈತ್ರಿ ಪಕ್ಷಗಳ ನಡುವೆ ಶುರುವಾಯ್ತು ಮುನಿಸು..!
ಬೆಂಗಳೂರು: ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಗೆ ರಾಜ್ಯ ಸರಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಅಸಮಾಧಾನ ಶುರುವಾಗಿದೆ.
ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಆದರೆ, ಈ ಪ್ರತಿಭಟನೆಗೆ ನಮ್ಮನ್ನು ಆಹ್ವಾನಿಸಿಯೇ ಇಲ್ಲ ಎಂದು ಜೆಡಿಎಸ್ ದೂರಿದೆ.
ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಅವರು ಪ್ರತಿಕ್ರಿಯಿಸಿ ಬಿಜೆಪಿ ಅಹೋರಾತ್ರಿ ಧರಣಿ ಮಾಡುತ್ತಿದೆ. ಆದರೆ ನಮಗೆ ಆಹ್ವಾನ ನೀಡಿಲ್ಲ. ಜೆಡಿಎಸ್ಗೆ ಮೇಲುಗೈ ಆಗುತ್ತದೆ ಎಂದು ಬಿಜೆಪಿ ನಮ್ಮನ್ನ ಕರೆದಿಲ್ಲ. ಮುಡಾ ಪಾದಯಾತ್ರೆಯಲ್ಲಿ ಹೀಗೆಯೇ ಆಯಿತು. ಈಗಲೂ ಹೀಗೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರಿಗೆ ಮನವಿ ಮಾಡುತ್ತಿದ್ದೇನೆ. ನಾವು ಒಟ್ಟಾಗಿ ಹೋರಾಟ ಮಾಡಬೇಕು. ರಾಜ್ಯದಲ್ಲಿ ಸಮನ್ವಯ ಸಾಧಿಸಲು ಒಂದು ಸಮಿತಿ ರಚಿಸಿಬೇಕು. ನಾವು ಒಟ್ಟಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಡಿದರೆ, ಬಲ ಹೆಚ್ಚಾಗುತ್ತದೆ. ಹೆಚ್ಚಿನ ಜನರನ್ನು ತಲುಪಬಹುದು ಎಂದು ಹೇಳಿದರು.
***********************************************************
9.ಜಾಗ್ವಾರ್ ಫೈಟರ್ ಜೆಟ್ ಪತನ: ವಾಯುಪಡೆಯ ಓರ್ವ ಪೈಲಟ್ ಸಾ*ವು
Jaguar Fighter Jet Crashes: ಗುಜರಾತ್ನ ಜಾಮ್ನಗರದಲ್ಲಿ ಬುಧವಾರ ರಾತ್ರಿ ಕಾರ್ಯಾಚರಣೆಯ ಸಮಯದಲ್ಲಿ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡು ವಾಯುಪಡೆಯ ಪೈಲಟ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪೈಲಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ಪೈಲಟ್ಗಳು ತಾಂತ್ರಿಕ ದೋಷವನ್ನು ಎದುರಿಸಿದರು ಮತ್ತು ಎಜೆಕ್ಷನ್ ಅನ್ನು ಪ್ರಾರಂಭಿಸಿದರು, ವಾಯುನೆಲೆ ಮತ್ತು ಸ್ಥಳೀಯ ಜನಸಂಖ್ಯೆಗೆ ಹಾನಿಯಾಗದಂತೆ ತಪ್ಪಿಸಿದರು” ಜಾಗ್ವಾರ್ ಯುದ್ಧ ವಿಮಾನ ಪತನಗೊಳ್ಳುವ ವೇಳೆ ಅಪಘಾತಕ್ಕೆ ಮುನ್ನ ಒಬ್ಬ ಪೈಲಟ್ ಹೊರಗೆ ಹಾರಿದರೆ, ಇನ್ನೊಬ್ಬರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವಾಯುಪಡೆ (ಐಎಎಫ್) ಹೇಳಿಕೆಯಲ್ಲಿ ತಿಳಿಸಿದೆ.
ತಮ್ಮ ಪೈಲಟ್ ಸಾವಿನ ಸುದ್ದಿಯನ್ನು ಹಂಚಿಕೊಂಡ IAF, “ಜೀವನ ನಷ್ಟಕ್ಕೆ IAF ತೀವ್ರವಾಗಿ ವಿಷಾದಿಸುತ್ತದೆ ಮತ್ತು ದುಃಖಿತ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ವಿಚಾರಣಾ ನ್ಯಾಯಾಲಯವನ್ನು ಆದೇಶಿಸಲಾಗಿದೆ” ಎಂದು ಬರೆದಿದೆ.
***********************************************************
10 ಮೋದಿ ನನ್ನ ಸ್ನೇಹಿತ ಎನ್ನುತ್ತಲೇ ಭಾರತಕ್ಕೆ ಶೇ. 26 ತೆರಿಗೆ ರಿಯಾಯಿತಿ ಘೋಷಿಸಿದ ಟ್ರಂಪ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಏಪ್ರಿಲ್ 02) ಭಾರತದ ಮೇಲೆ 26 ಪ್ರತಿಶತ ‘ಪಾರಸ್ಪರಿಕ ತೆರಿಗೆ’ (ರೆಸಿಪ್ರೋಕಲ್ ಟ್ಯಾಕ್ಸ್) ರಿಯಾಯಿತಿಯನ್ನು ಘೋಷಿಸಿದ್ದಾರೆ. ನಾವು ವಿಧಿಸಿರುವ ಸುಂಕಗಳು ಸಂಪೂರ್ಣವಾಗಿ ಪಾರಸ್ಪರಿಕ ಸಂಬಂಧ ಹೊಂದಿಲ್ಲವಾದರೂ ಭಾಗಶಃ ಹೊಂದಿದೆ ಎಂದರು. ಇದರಿಂದ ಭಾರತೀಯ ಸಾಮಾಗ್ರಿಗಳಿಗೆ ಅಮೆರಿಕದಲ್ಲಿ ಶೇ. 26 ರಷ್ಟು ರಿಯಾಯಿತಿ ದೊರೆಯಲಿದೆ.
ಇದು ಅಮೆರಿಕ ವಿಮೋಚನಾ ದಿನ. ಇದೊಂದು ಬಹುನಿರೀಕ್ಷಿತ ಕ್ಷಣ. 2025, ಏಪ್ರಿಲ್ 2 ಅಮೆರಿಕದ ಉದ್ಯಮವು ಮರುಜನ್ಮ ಪಡೆದ ದಿನವಾಗಿದೆ. ಅಮೆರಿಕದ ಹಣೆಬರಹವನ್ನು ಮರಳಿ ಪಡೆದ ದಿನ ಮತ್ತು ನಾವು ಅಮೆರಿಕವನ್ನು ಮತ್ತೆ ಶ್ರೀಮಂತಗೊಳಿಸಲು ಪ್ರಾರಂಭಿಸಿದ ದಿನವಾಗಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ನಾವು ಅಮೆರಿಕವನ್ನು ಉತ್ತಮ ಮತ್ತು ಶ್ರೀಮಂತಗೊಳಿಸಲಿದ್ದೇವೆ ಎಂದು ಟ್ರಂಪ್ ಬುಧವಾರ ಶ್ವೇತಭವನದ ರೋಸ್ ಗಾರ್ಡನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಿದರು. ಅದೇ ಸಮಯದಲ್ಲಿ ನಿರೀಕ್ಷಿತ ‘ಪಾರಸ್ಪರಿಕ ತೆರಿಗೆ’ (ರೆಸಿಪ್ರೋಕಲ್ ಟ್ಯಾಕ್ಸ್)ಯನ್ನು ಘೋಷಿಸಿದರು.
ತೆರಿಗೆ ಘೋಷಣೆಯ ಸಮಯದಲ್ಲಿ, ಭಾರತ, ಚೀನಾ, ಯುಕೆ ಮತ್ತು ಯುರೋಪಿಯನ್ ಒಕ್ಕೂಟ ಸೇರಿದಂತೆ ವಿವಿಧ ದೇಶಗಳ ಮೇಲೆ ವಿಧಿಸಿರುವ ಸುಂಕಗಳನ್ನು ಪ್ರದರ್ಶಿಸುವ ಚಾರ್ಟ್ ಅನ್ನು ಪ್ರಸ್ತುತಪಡಿಸಿದರು. ಜೊತೆಗೆ ಈ ರಾಷ್ಟ್ರಗಳು ಎದುರಿಸಬೇಕಾದ ಹೊಸ ಪಾರಸ್ಪರಿಕ ಸುಂಕಗಳನ್ನು ಸಹ ಪ್ರಸ್ತುತಪಡಿಸಿದರು. ಈ ಚಾರ್ಟಿನಲ್ಲಿ ಅಮೆರಿಕದ ಮೇಲೆ ಭಾರತ ವಿಧಿಸುತ್ತಿರುವ ಶೇ. 52 ರಷ್ಟು ಸುಂಕಗಳನ್ನು ಬಹಿರಂಗಪಡಿಸಿದೆ. ಇದರ ವಿರುದ್ಧ ಅಮೆರಿಕ ಈಗ ಶೇ. 26 ರಷ್ಟು “ರಿಯಾಯಿತಿ ಪಾರಸ್ಪರಿಕ ಸುಂಕ” ವನ್ನು ವಿಧಿಸಲಿದೆ.


