ಶುಭೋದಯ
ನಿನ್ನನ್ನು ಪೀಡಿಸುವ ಸಂಕಟಗಳನ್ನು ನಗುನಗುತ್ತಾ ನಾಶಪಡಿಸು.
– ಸ್ವಾಮಿ ವಿವೇಕಾನಂದ.
*******************************************************************************
1.Modi ಸರ್ಕಾರದ ವಿರುದ್ಧ Elon Musk ಕಾನೂನು ಸಮರ, ಕರ್ನಾಟಕ ಹೈಕೋರ್ಟ್ ನಲ್ಲಿ ಮೊಕದ್ದಮೆ
ಅಮೆರಿಕದ ಬಿಲಿಯನೇರ್ ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ದೈತ್ಯ ‘X’ (ಈ ಹಿಂದೆ ಟ್ವಿಟರ್) ಭಾರತ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿದೆ. ಕಾನೂನುಬಾಹಿರ ವಿಷಯ ನಿಯಂತ್ರಣ ಮತ್ತು ಅನಿಯಂತ್ರಿತ ಸೆನ್ಸಾರ್ಶಿಪ್ ಎಂದು ಕೇಂದ್ರ ಸರ್ಕಾರ ಪಟ್ಟಿ ಮಾಡಿರುವ ಅಂಶಗಳನ್ನು ಕೋರ್ಟ್ ನಲ್ಲಿ ಎಕ್ಸ್ ಸಂಸ್ಥೆ ಪ್ರಶ್ನಿಸಿದೆ. ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಕೇಂದ್ರದ ವ್ಯಾಖ್ಯಾನದ ಬಗ್ಗೆ, ವಿಶೇಷವಾಗಿ ಸೆಕ್ಷನ್ 79(3)(b) ಬಳಕೆಯ ಬಗ್ಗೆ ತನ್ನ ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಇದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲಂಘಿಸುತ್ತದೆ ಮತ್ತು ಆನ್ಲೈನ್ನಲ್ಲಿ ಮುಕ್ತ ಅಭಿವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ‘X’ ವಾದಿಸಿದೆ. ಸರ್ಕಾರವು ಈ ವಿಭಾಗವನ್ನು ಬಳಸಿಕೊಂಡು ಸಮಾನಾಂತರ ವಿಷಯವನ್ನು ನಿರ್ಬಂಧಿಸುವ ಕಾರ್ಯವಿಧಾನವನ್ನು ಸೃಷ್ಟಿಸುತ್ತಿದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ, ಇದು ಸೆಕ್ಷನ್ 69A ನಲ್ಲಿ ವಿವರಿಸಿರುವ ರಚನಾತ್ಮಕ ಕಾನೂನು ಪ್ರಕ್ರಿಯೆಯನ್ನು ಬೈಪಾಸ್ ಮಾಡುತ್ತದೆ ಎಂದು ಎಕ್ಸ್ ವಾದಿಸಿದೆ.

**********************************************************************************
2.ರಾಜಣ್ಣ ಮಾತ್ರವಲ್ಲಇನ್ನೂ ಮೂರು ಮಂತ್ರಿಗಳಿಗೂ ಹನಿಟ್ರ್ಯಾಪ್: ಗ್ಯಾಂಗ್ನ ಹಿಡಿದು ಬಾಯ್ಬಿಡಿಸಿದ ಸಚಿವ!
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಸುದ್ದಿ ಸಂಚಲನ ಸೃಷ್ಟಿಸಿದೆ. ರಾಜಕೀಯವಾಗಿ ಮುಗಿಸುವ ಹುನ್ನಾರದಿಂದ ಹನಿಟ್ರ್ಯಾಪ್ಗೆ ಯತ್ನಿಸಿದ್ದಾರೆ ಎನ್ನುವುದು ಸದ್ದು ಮಾಡುತ್ತಿದೆ. ಈ ಹಿಂದೆಯೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಕೆಲ ರಾಜಕೀಯ ನಾಯಕರು, ತಮ್ಮ ಅಸ್ತಿತ್ವವೇ ಕಳೆದುಕೊಂಡಿರೋ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇದರ ಮಧ್ಯೆಯೇ ಇದೀಗ ಶಕ್ತಿ ಸೌಧ, ವಿಧಾನಸೌಧದ ಕಚೇರಿಯಲ್ಲೇ ಕೆಲ ಸಚಿವರನ್ನ ಹನಿಟ್ರ್ಯಾಪ್ಗೆ ಯತ್ನಿಸಿರುವುದು ಸಂಚಲನ ಸೃಷ್ಟಿಸಿದೆ. ಹನಿಟ್ರ್ಯಾಪ್ಗೆ ಯತ್ನಿಸಿದ್ದ ತಂಡವನ್ನೇ ಸಚಿವರೊಬ್ಬರು ಹಿಡಿದು ಎಲ್ಲಾ ಬಾಯ್ಬಿಡಿಸಿದ್ದಾರೆ.

*****************************************************************************
3.ಕರ್ನಾಟಕ ಬಂದ್: ಮಾ 22ರಂದು ಶಾಲಾ-ಕಾಲೇಜು ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಬೆಂಗಳೂರು: ಎಂಇಎಸ್, ಶಿವಸೇನೆ ಪುಂಡಾಟ ಖಂಡಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್ ಹಿನ್ನೆಲೆ ಶಾಲಾ-ಕಾಲೇಜುಗಳ ರಜೆ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ನಾಳೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶನಿವಾರ ಎಸ್ಎಸ್ಎಲ್ಸಿ ಪರೀಕ್ಷೆ ಇಲ್ಲ. ಸಾರ್ವಜನಿಕ ವಾಹನ ಇಲ್ಲದೆ ಇದ್ದರೆ ಮಕ್ಕಳಿಗೆ ತೊಂದರೆ ಆಗುತ್ತೆ. ಗೃಹ ಇಲಾಖೆ ಜೊತೆ ಚರ್ಚೆ ನಡೆಸಿ ನಾಳೆ ತೀರ್ಮಾನ ಮಾಡುತ್ತೇವೆ. ಬಂದ್ಗೆ ಸಾರಿಗೆ ಬೆಂಬಲ ಕೊಟ್ಟರೆ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ.

******************************************************************************
4.ಆಕಾಶಕ್ಕೆ ಉಗಿದ್ರೆ ಮುಖದ ಮೇಲೆಯೇ ಬೀಳುತ್ತೆ ಮಂಕೆ: ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ಯಾರಿಗೆ?
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಭೂ ಒತ್ತುವರಿಯ ಗಂಭೀರ ಆರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ಇತ್ತೀಚೆಗೆ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಅವರ ಡಿಎನ್ಎಯಲ್ಲಿಯೇ ದ್ವೇಷದ ರಾಜಕೀಯವಿದೆ ಎಂದಿದ್ದರು. ಇದೀಗ ತಿರುಗೇಟು ನೀಡಿರುವ ಹೆಚ್ಡಿ ಕುಮಾರಸ್ವಾಮಿ, ಆಕಾಶಕ್ಕೆ ಉಗಿದರೆ ಮುಖದ ಮೇಲೆಯೇ ಬೀಳುತ್ತೆ ಮಂಕೆ ಎಂದು ಟಾಂಗ್ ಕೊಟ್ಟಿದ್ದಾರೆ.

********************************************************************
5.ಬೆಂಗಳೂರು ಮೆಟ್ರೋ ಹಂತ-3: ಸುಂಕದಕಟ್ಟೆಯಲ್ಲಿ ಡಿಪೋ ನಿರ್ಮಾಣಕ್ಕೆ ಕಾನೂನು ತೊಡಕು; ಹೈಕೋರ್ಟ್ ನಲ್ಲಿ ಜಮೀನು ವಿವಾದ!
ಕೇಂದ್ರ ಮತ್ತು ರಾಜ್ಯದಿಂದ ಅನುಮೋದಿಸಲಾದ ನಮ್ಮ ಮೆಟ್ರೋ ಹಂತ-3 ಅನುಷ್ಠಾನಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು BMRCL ವೇಗಗೊಳಿಸಿರುವಂತೆಯೇ, ಡಿಪೋ ನಿರ್ಮಿಸಲು ಅಗತ್ಯವಿರುವ ಜಮೀನು ವಿವಾದ ಹೈಕೋರ್ಟ್ನಲ್ಲಿದೆ. ಸುಂಕದಕಟ್ಟೆಯಲ್ಲಿನ ಜಮೀನು ತನಗೆ ಸೇರಿದ್ದು ಎಂದು ರಾಜ್ಯ ಸರ್ಕಾರ ಮತ್ತು ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್ ಹೇಳುತ್ತಿವೆ.
ಸುಂಕದಕಟ್ಟೆಯಲ್ಲಿ ಡಿಪೋ: ಹಂತ-3 ಎರಡು ಮಾರ್ಗಗಳಲ್ಲಿ 31 ನಿಲ್ದಾಣಗಳನ್ನು ಒಳಗೊಂಡಿದೆ. ಕಾರಿಡಾರ್ 1: ಜೆಪಿ ನಗರ ಹಂತ 4 ರಿಂದ ಕೆಂಪಾಪುರದವರೆಗೆ 32.15 ಕಿ.ಮೀ. ಉದ್ದವಿದೆ. ಕಾರಿಡಾರ್ 2 ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿಮೀವರೆಗೆ ಮಾಗಡಿ ರಸ್ತೆಯಲ್ಲಿ ಸಾಗುತ್ತದೆ. ಸುಂಕದಕಟ್ಟೆಯಲ್ಲಿ ಎರಡೂ ಲೈನ್ಗಳ ಡಿಪೋಗೆ ಯೋಜನೆ ರೂಪಿಸಲಾಗಿದೆ.

****************************************************************************


[…] https://vicharavisthara.com/morning-quick-news-time-21-03-2025/ […]