ಶುಭೋದಯ
ಗುಣಾತ್ಮಕವಾಗಿ ಯೋಚಿಸುವುದಿಲ್ಲ ಎಂದಾದಲ್ಲಿ
ನೀವು ಕನಿಷ್ಠ ಪಕ್ಷ ಸುಮ್ಮನಾದರೂ ಇರಿ
– ಜೋಯೆಲ್ ಆಸ್ಟಿನ್
**************************************************************************************
1.25 ವರ್ಷ ಸಂಸದೀಯ ಕ್ಷೇತ್ರ ಪುನಾರಚನೆ ಮಾಡಬೇಡಿ; ಸ್ಟಾಲಿನ್ ನೇತೃತ್ವದ ಸಮಿತಿಯಿಂದ ನಿರ್ಣಯ ಅಂಗೀಕಾರ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸಮಿತಿಯು ನಿರ್ಣಯವನ್ನು ಅಂಗೀಕರಿಸಿದ್ದು, ಇನ್ನೂ 25 ವರ್ಷಗಳ ಕಾಲ ಗಡಿ ನಿರ್ಣಯ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರವನ್ನು ಕೋರಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಜಂಟಿ ಕ್ರಿಯಾ ಸಮಿತಿಯು, ಸೀಮಾ ನಿರ್ಣಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೋರುವ ನಿರ್ಣಯವನ್ನು ಅಂಗೀಕರಿಸಿತು. 1971ರ ಜನಗಣತಿಯ ಆಧಾರದ ಮೇಲೆ ಸಂಸದೀಯ ಕ್ಷೇತ್ರಗಳ ಮೇಲಿನ ಸ್ಥಗಿತಗೊಳಿಸುವಿಕೆಯನ್ನು ಇನ್ನೂ 25 ವರ್ಷಗಳ ಕಾಲ ವಿಸ್ತರಿಸುವಂತೆ ಜೆಎಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತ ಚೆನ್ನೈನಲ್ಲಿ ಇಂದು ಸಭೆ ನಡೆದಿದೆ.

********************************************************************************
2.ಮನೆಯಲ್ಲಿ ಅಕ್ರಮ ಹಣ ಪತ್ತೆ; ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರಕರಣದ ತನಿಖೆಗೆ ಸಿಜೆಐ ಸಂಜೀವ್ ಖನ್ನಾ ಆದೇಶ
ದೆಹಲಿಯ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾಗಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಆರೋಪಗಳ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ 3 ಸದಸ್ಯರ ಸಮಿತಿ ರಚಿಸಿದ್ದಾರೆ. ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಆರೋಪಗಳ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಆಂತರಿಕ ತನಿಖೆಯನ್ನು ಪ್ರಾರಂಭಿಸಲು ಆದೇಶಿಸಿದ್ದಾರೆ.

**********************************************************************************
3.ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ, ಕೇಂದ್ರದಿಂದ ನಮ್ಮ ಸಂಪನ್ಮೂಲ ಲೂಟಿ: ಡಿಕೆ ಶಿವಕುಮಾರ್
ಚೆನ್ನೈ/ಬೆಂಗಳೂರು: ಉದ್ದೇಶಿತ ಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದಿಂದ ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಚೆನ್ನೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆದಿದ್ದ ಲೋಕಸಭಾ ಕ್ಷೇತ್ರಗಳ ವಿಂಗಡಣೆಯ ಕುರಿತ ಜಂಟಿ ಕ್ರಿಯಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಕೆಶಿ, ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದರು.
ಕ್ಷೇತ್ರ ಪುನರ್ ವಿಂಗಡಣೆಯು, ಜನಸಂಖ್ಯೆಯನ್ನು ನಿಯಂತ್ರಿಸಿದ, ಸಾಕ್ಷರತೆಯನ್ನು ಸುಧಾರಿಸಲು ಮತ್ತು ಮಹಿಳೆಯರ ಸಬಲೀಕರಣಕ್ಕೆ ಯತ್ನಿಸಿದ ದಕ್ಷಿಣ ಭಾರತದ ರಾಜ್ಯಗಳ ಮೇಲಿನ ರಾಜಕೀಯ ದಾಳಿ ಎಂದು ಡಿಕೆ ಶಿವಕುಮಾರ್ ಟೀಕಿಸಿದರು.

*****************************************************************
4. ಪಿಎಲ್ಡಿ ಬ್ಯಾಂಕ್ಗಳಲ್ಲೂ ಕೃಷಿಗೆ ಶೂನ್ಯ ಬಡ್ಡಿ ಸಾಲ: ಸಿದ್ದರಾಮಯ್ಯ
ಬೆಂಗಳೂರು: ‘ರೈತರಿಗೆ ಸಹಕಾರ ಸಂಘಗಳ ಮೂಲಕ ನೀಡುತ್ತಿರುವ ₹5 ಲಕ್ಷದವರೆಗಿನ ಶೂನ್ಯ ಬಡ್ಡಿಯ ಬೆಳೆ ಸಾಲವನ್ನು ಪಿಎಲ್ಡಿ ಬ್ಯಾಂಕ್ಗಳಿಗೂ ವಿಸ್ತರಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಜೆಟ್ ಮೇಲೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಶುಕ್ರವಾರ ಉತ್ತರಿಸಿದ ಅವರು, ‘ಪಿಎಲ್ಡಿ ಬ್ಯಾಂಕ್ಗಳಿಗೂ ಈ ಸವಲತ್ತು ವಿಸ್ತರಿಸುವುದರಿಂದ ಸರ್ಕಾರ ₹38 ಕೋಟಿ ಹೆಚ್ಚು ಮೊತ್ತವನ್ನು ಭರಿಸಬೇಕಾಗಿದೆ’ ಎಂದರು.
ಸಾರಿಗೆ ನಿಗಮಗಳಿಗೆ ಹೆಚ್ಚುವರಿಯಾಗಿ 1,000 ಬಸ್ಗಳನ್ನು ಖರೀದಿಸಲಾಗುತ್ತದೆ ಎಂದು ಹೇಳಿದ್ದಾರೆ. ‘ಬಜೆಟ್ನಲ್ಲಿ 1,000 ಹೊಸ ಬಸ್ ಖರೀದಿಸಲಾಗುತ್ತದೆ ಎಂದು ಹೇಳಿದ್ದೆ. ಈಗ ಅದನ್ನು ಪರಿಷ್ಕರಿಸಲಾಗಿದೆ. ಹೊಸದಾಗಿ ಒಟ್ಟು 2,000 ಬಸ್ ಖರೀದಿಸಲಿದ್ದು, ಅಗತ್ಯ ಅನುದಾನ ಒದಗಿಸುತ್ತೇವೆ’ ಎಂದಿದ್ದಾರೆ.

********************************************************************************
5.Bengaluru’s 2nd Airport |ಏ.7ರಿಂದ ಕೇಂದ್ರದಿಂದ ಸ್ಥಳ ಪರಿಶೀಲನೆ: ಎಂ.ಬಿ.ಪಾಟೀಲ
ಬೆಂಗಳೂರು: ‘ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಅಧಿಕಾರಿಗಳು ಇದೇ ಏಪ್ರಿಲ್ನಲ್ಲಿ ಅವುಗಳ ಪರಿಶೀಲನೆಗೆ ಬರಲಿದ್ದಾರೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕನಕಪುರ ರಸ್ತೆಯಲ್ಲಿ ಎರಡು ಮತ್ತು ನೆಲಮಂಗಲ–ಹಾಸನ ಹೆದ್ದಾರಿಯಲ್ಲಿ ಒಂದು ಸ್ಥಳವನ್ನು ಗುರುತಿಸಲಾಗಿದೆ. ರಾಜ್ಯದ ತಜ್ಞರ ತಂಡ ಈಗಾಗಲೇ ಅವುಗಳ ಪರಿಶೀಲನೆ ನಡೆಸಿದೆ. ಅವುಗಳನ್ನು ಪರಿಶೀಲಿಸುವಂತೆ ಇದೇ ಮಾರ್ಚ್ 5ರಂದು ಎಎಐಗೆ ಪತ್ರ ಬರೆಯಲಾಗಿತ್ತು. ಎಎಐ ತಂಡವು ಏಪ್ರಿಲ್ 7 ಮತ್ತು 9ರ ಮಧ್ಯೆ ಸ್ಥಳಪರಿಶೀಲನೆಗೆ ಬರಲಿದೆ’ ಎಂದು ಮಾಹಿತಿ ನೀಡಿದರು.
‘ಸ್ಥಳ ಪರಿಶೀಲನೆಗೆಂದು ಎಎಐಗೆ ಈಗಾಗಲೇ ₹1.21 ಕೋಟಿ ಶುಲ್ಕ ಕಟ್ಟಿದ್ದೇವೆ. ಅದರ ಸೂಚನೆಯಂತೆ ಮೂರೂ ಸ್ಥಳಗಳ ಕಂದಾಯ ನಕಾಶೆ, ಹವಾಮಾನ ದಾಖಲೆ, ಜಾಮಿತೀಯ ಲಕ್ಷಣಗಳನ್ನು ವಿವರಿಸುವ ಚಿತ್ರ, ಭಾರತೀಯ ಸರ್ವೇ ಇಲಾಖೆಯ ನಕಾಶೆ ಮತ್ತು ಉದ್ದೇಶಿತ ನಿಲ್ದಾಣದಲ್ಲಿನ ಕಾರ್ಯಾಚರಣೆ ಸ್ವರೂಪ ತಿಳಿಸುವ ವರದಿಗಳನ್ನು ಸಿದ್ದಪಡಿಸಿ ಇರಿಸಿಕೊಂಡಿದ್ದೇವೆ’ ಎಂದರು.


ಜಾಹೀರಾತು

