ಶುಭೋದಯ
ಅದೃಷ್ಟ ವೆನ್ನುವುದು ಪ್ರಯತ್ನವೆಂಬ ತಾಯಿಗೆ ,
ಅವಕಾಶವೆಂಬ ತಂದೆಗೆ ಜನಿಸುವ ಮಗು
– ಗುರುನಾನಕ್.
**************************************************************************
1. ಗೂಗಲ್ ಟ್ಯಾಕ್ಸ್ ರದ್ದು ಮಾಡಲಿರುವ ಭಾರತ; ತಣ್ಣಗಾಗುವುದೇ ಟ್ರಂಪ್ ತಾಪ?
India removes 6% Google tax: ವಿದೇಶೀ ಟೆಕ್ ಕಂಪನಿಗಳ ಆನ್ಲೈನ್ ಜಾಹೀರಾತು ಸೇವೆಗಳಿಗೆ ವಿಧಿಸಲಾಗುವ ಶೇ. 6ರ ಈಕ್ವಲೈಸೇಶನ್ ಟ್ಯಾಕ್ಸ್ ಅನ್ನು ಭಾರತ ರದ್ದು ಮಾಡುತ್ತಿದೆ. ಹಣಕಾಸು ತಿದ್ದುಪಡಿ ಕಾಯ್ದೆಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಏಪ್ರಿಲ್ 1ರಿಂದ ಈಕ್ವಲೈಸೇಶನ್ ಟ್ಯಾಕ್ಸ್ ಇರುವುದಿಲ್ಲ. ಪ್ರತಿಸುಂಕದ ಭರಾಟೆಯಲ್ಲಿರುವ ಅಮೆರಿಕ ಭಾರತದ ಬಗ್ಗೆ ಮೃದುಧೋರಣೆ ತಾಳುತ್ತಾ ನೋಡಬೇಕು.

*************************************************************************
2. ಬೀಜಿಂಗ್ನಲ್ಲಿ ಭಾರತ, ಚೀನಾ ರಾಜತಾಂತ್ರಿಕ ಮಾತುಕತೆ; ಎಲ್ಎಸಿ, ಕೈಲಾಸ ಮಾನಸ ಸರೋವರ ಯಾತ್ರೆ ಕುರಿತು ಚರ್ಚೆ
ಭಾರತ ಮತ್ತು ಚೀನಾ ಎಲ್ಎಸಿಯಾದ್ಯಂತ ಪರಿಸ್ಥಿತಿಯನ್ನು ಪರಿಶೀಲಿಸುತ್ತವೆ. ಗಡಿಯಾಚೆಗಿನ ಸಹಕಾರವನ್ನು ಶೀಘ್ರವಾಗಿ ಪುನರಾರಂಭಿಸಲು ಒಪ್ಪಿವೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ. ಇಂದು ನಡೆದ ಸಭೆಯ ಸಮಯದಲ್ಲಿ, ಎರಡೂ ರಾಷ್ಟ್ರಗಳ ಅಧಿಕಾರಿಗಳು ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಗಡಿಯಾಚೆಗಿನ ನದಿಗಳು ಮತ್ತು ಕೈಲಾಸ-ಮಾನಸ ಸರೋವರ ಯಾತ್ರೆ ಸೇರಿದಂತೆ ಗಡಿಯಾಚೆಗಿನ ಸಹಕಾರ ಮತ್ತು ವಿನಿಮಯಗಳ ಆರಂಭಿಕ ಪುನರಾರಂಭಕ್ಕೆ ಒಪ್ಪಿಕೊಂಡಿದ್ದಾರೆ.

*********************************************************************************
3. ಕರ್ನಾಟಕ ಬಿಜೆಪಿಯ ಮೂವರು ಶಾಸಕರು, ಇಬ್ಬರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್..!
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸದ್ದು ಗದ್ದಲ ಜೋರಾಗಿದೆ. ಈ ಹನಿಟ್ರ್ಯಾಪ್ ಪ್ರಕರಣವನ್ನಿಟ್ಟುಕೊಂಡು ಬಿಜೆಪಿ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಇದರ ಮಧ್ಯೆ ಕರ್ನಾಟಕದ ಮೂವರ ಶಾಸಕರು ಹಾಗೂ ಇಬ್ಬರು ಮಾಜಿ ಶಾಸಕರಿಗೆ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ಈ ಮೂಲಕ ಹೈಕಮಾಂಡ್ ಯತ್ನಾಳ್ ಹಾಗೂ ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರುಗಳಿಗೆ ಶಾಕ್ ಕೊಟ್ಟಿದೆ.

************************************************************************************
4.ಹನಿಟ್ರ್ಯಾಪ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಕೊನೆಗೂ ಗೃಹ ಸಚಿವರಿಗೆ ದೂರು ನೀಡಿದ ಕೆಎನ್ ರಾಜಣ್ಣ
ಹನಿಟ್ರ್ಯಾಪ್ ಬಗ್ಗೆ ಕೆಲವು ಸುಳಿವನ್ನ ಬಿಟ್ಟುಕೊಟ್ಟ ಸಚಿವ ಕೆಎನ್ ರಾಜಣ್ಣ ಇಂದು(ಮಾರ್ಚ್ 25) ದೂರು ನೀಡಲೇಬೇಕೆಂದು ತೀರ್ಮಾನ ಮಾಡಿದ್ದರು. ಪರಮೇಶ್ವರ್ ಎಲ್ಲೆ ಇದ್ದರೂ ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆಂದು ಹೇಳಿದಂತೆಯೇ ತುಮಕೂರಿನಿಂದ ಬೆಂಗಳೂರಿಗೆ ಆಗಮಿಸಿದ ರಾಜಣ್ಣ ನೆಲಮಂಗಳದ ಟಿ.ಬೇಗೂರು ಕಾಲೇಜ್ನಲ್ಲಿರುವ ಪರಮೇಶ್ವರ್ರನ್ನು ಭೇಟಿ ಮಾಡಿದರು. ಆದ್ರೆ, ಅಲ್ಲಿ ಬದಲಿಗೆ ಬೆಂಗಳೂರಿನ ಅವರ ಸದಾಶಿವ ನಗರದ ನಿವಾಸಕ್ಕೆ ಬಂದು ಹನಿಟ್ರ್ಯಾಪ್ ಬಗ್ಗೆ ದೂರು ನೀಡಿದ್ದಾರೆ.

********************************************************************************
5.ಚಿಕ್ಕಬಳ್ಳಾಪುರ ನಗರಸಭೆಯ 6 ಸದಸ್ಯರು ಅನರ್ಹ: ಸೇಡು ತೀರಿಸಿಕೊಂಡ ಪ್ರದೀಪ್ ಈಶ್ವರ್!
ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ ಸುಧಾಕರ್ ನಡುವೆ ಪ್ರತಿಷ್ಠೆಯಾಗಿದ್ದ ಚಿಕ್ಕಬಳ್ಳಾಪುರ ನಗರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಮುಗಿದು ಹೋಗಿದೆ. ಸುಧಾಕರ್ ಬೆಂಬಲಿತರೇ ಅಧ್ಯಕ್ಷ-ಉಧ್ಯಾಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಚುನಾವಣೆ ವೇಳೆ ನಾನಾ ನೀನಾ ಸವಾಲಿನಲ್ಲಿ ಮುಖಭಂಗ ಅನುವಿಸಿದ್ದ ಶಾಸಕ ಪ್ರದೀಪ್ ಈಶ್ವರ್ ತಮ್ಮ ಸೇಡನ್ನು ಬೇರೆ ರೀತಿಯಲ್ಲಿ ತೀರಿಸಿಕೊಂಡಿದ್ದಾರೆ.


