1.ಕಿತ್ತೂರು ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಮೋದಿಗೆ ಸಿದ್ದರಾಮಯ್ಯ ಪತ್ರ
ವೀರ ರಾಣಿ ಕಿತ್ತೂರು ಚೆನ್ನಮ್ಮನ ಸಮಾಧಿಯನ್ನು 1958ರ ಪ್ರಾಚೀನ ಸ್ಮಾರಕ ಕಾಯ್ದೆಯಡಿ ರಾಷ್ಟ್ರೀಯ ಮಹತ್ವದ ಸ್ಮಾರಕವಾಗಿ ಘೋಷಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ರಾಣಿ ಚೆನ್ನಮ್ಮನ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸುವ ಈ ಸ್ಮಾರಕವು ಭಾರತದ ಇತಿಹಾಸ ಮತ್ತು ಸಂಸ್ಕೃತಿಗೆ ಅಮೂಲ್ಯ ಕೊಡುಗೆಯಾಗಿದೆ. ಇದರ ಸಂರಕ್ಷಣೆ ಮತ್ತು ಅಭಿವೃದ್ಧಿಯು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುತ್ತದೆ.

**************************************************************************************
2. ಕಲ್ಯಾಣ ಕರ್ನಾಟಕ ರೈತರ 7 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ ಕೆಎಂಎಫ್
ಕರ್ನಾಟಕ ಸರ್ಕಾರ ನಂದಿನಿ ಹಾಲಿನ ದರವನ್ನು ಲೀಟರ್ಗೆ 4 ರೂಪಾಯಿ ಹೆಚ್ಚಿಸಿದೆ. ಕೆಎಂಎಫ್ನ ರಬಕೊವಿ ಒಕ್ಕೂಟ 7 ಕೋಟಿ ರೂಪಾಯಿ ಬಾಕಿ ಹಣವನ್ನು ಹಾಲು ಉತ್ಪಾದಕರಿಗೆ ನೀಡದ ಕಾರಣ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆದಿದೆ. ರಬಕೊವಿ ಅಧಿಕಾರಿಗಳು ಲೀಟರ್ಗೆ 1.50 ರೂಪಾಯಿ ಕಡಿತಗೊಳಿಸಿದ್ದಾರೆ. ರೈತರ ಮುತ್ತಿಗೆಯ ನಂತರ, ಅಧಿಕಾರಿಗಳು ಒಂದು ತಿಂಗಳೊಳಗೆ ಹಣ ಪಾವತಿಸುವ ಭರವಸೆ ನೀಡಿದ್ದಾರೆ.

***********************************************************************************
3. Myanmar Earthquake: ಮ್ಯಾನ್ಮಾರ್, ಥೈಲ್ಯಾಂಡ್ ಭೂಕಂಪಗಳಲ್ಲಿ 1,000ಕ್ಕೂ ಹೆಚ್ಚು ಜನ ಸಾವು; ಆಪರೇಷನ್ ಬ್ರಹ್ಮದಡಿ ಭಾರತ ಸಹಾಯಹಸ್ತ
ಮ್ಯಾನ್ಮಾರ್ ಮಿಲಿಟರಿ ನಾಯಕರ ಪ್ರಕಾರ, ಪ್ರಬಲ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 1,000 ಮೀರಿದೆ. ಯುಎಸ್ ಏಜೆನ್ಸಿಯೊಂದು ಸಾವಿನ ಸಂಖ್ಯೆ 10,000 ಮೀರಬಹುದು ಎಂದು ಎಚ್ಚರಿಸಿದೆ. ಮೇಘಾಲಯ ಮತ್ತು ಮಣಿಪುರ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿಯೂ ಭೂಕಂಪದ ಅನುಭವವಾಗಿದೆ. ಹಾಗೆಯೇ ಬಾಂಗ್ಲಾದೇಶದಲ್ಲಿ ಅದರಲ್ಲೂ ವಿಶೇಷವಾಗಿ ಢಾಕಾ, ಚಟ್ಟೋಗ್ರಾಮ್ನಲ್ಲಿ ಮತ್ತು ಚೀನಾದಲ್ಲಿಯೂ ಬಲವಾದ ಕಂಪನಗಳು ಕಂಡುಬಂದಿವೆ. ಈ ಭೂಕಂಪವು ಎಷ್ಟು ಪ್ರಬಲವಾಗಿತ್ತೆಂದರೆ, 900 ಕಿಲೋಮೀಟರ್ ದೂರದಲ್ಲಿರುವ ಬ್ಯಾಂಕಾಕ್ ಕೂಡ ಅದರ ಪ್ರಭಾವವನ್ನು ಅನುಭವಿಸಿತು. ಇದರಿಂದಾಗಿ ಹಲವಾರು ಐತಿಹಾಸಿಕ ಕಟ್ಟಡ ಮತ್ತು ಸೇತುವೆಗಳು ಕುಸಿದವು.

4. ಭಾರತ ಉತ್ತಮ ಪ್ರಧಾನಿಯನ್ನು ಪಡೆದಿದೆ, ಮೋದಿ ತುಂಬಾ ಬುದ್ಧಿವಂತ ವ್ಯಕ್ತಿ, ಮತ್ತೊಮ್ಮೆ ಹಾಡಿ ಹೊಗಳಿದ ಡೊನಾಲ್ಡ್ ಟ್ರಂಪ್
ಭಾರತದ ಒಳ್ಳೆಯ ಪ್ರಧಾನಿಯನ್ನು ಹೊಂದಿದೆ, ಪ್ರಧಾನಿ ಮೋದಿ ಒಬ್ಬ ಬುದ್ಧಿವಂತ ವ್ಯಕ್ತಿ ಎಂದು ಅಮೆರಿಕದ ಅಧ್ಯಕ್ಷ ಹಾಡಿ ಹೊಗಳಿದ್ದಾರೆ. ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿದ್ದೇವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ತುಂಬಾ ಬುದ್ಧಿವಂತರು ಎಂದೆಲ್ಲ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಮೆರಿಕಕ್ಕೆ ಭೇಟಿ ನೀಡಿದಾಗ ನಾವು ತುಂಬಾ ಒಳ್ಳೆಯ ಮಾತುಕತೆ ನಡೆಸಿದ್ದೇವೆ. ಭಾರತ ಮತ್ತು ನಮ್ಮ ದೇಶದ ನಡುವೆ ಇದು ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.
5. ಛತ್ತೀಸ್ಗಢ: ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ, 16 ನಕ್ಸಲರ ಹತ್ಯೆ
ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದೆ. ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಈ ಗುಂಡಿ ಘರ್ಷಣೆಯಲ್ಲಿ 16 ಜನ ನಕ್ಸಲರು ಸಾವನ್ನಪ್ಪಿದ್ದಾರೆ. ಇದು ದೊಡ್ಡ ಕಾರ್ಯಚರಣೆಯಾಗಿದೆ. ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಈ ಕಾರ್ಯಚರಣೆಯಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿ ಭಾಗಿಯಾಗಿದ್ದಾರೆ.





[…] –36 ****************************************************************************************** 2.https://vicharavisthara.com/morning-quick-news-time-30-03-2025/ ಮಾರ್ನಿಂಗ್ ಕ್ವಿಕ್ ನ್ಯೂಸ್ […]