India ಎಂದರೆ ಹೆದರಿ ನಡುಗುತ್ತೆ Pakistan: 1993 ರ CIA ಗೌಪ್ಯ ದಾಖಲೆಯಲ್ಲಿ ಅಂಶ ಬಹಿರಂಗ!

ನ್ಯೂಯಾರ್ಕ್: ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಿಷೇಧಿತ ಲಷ್ಕರ್-ಎ-ತೈಬಾ (LeT) ನ ಒಂದು ಶಾಖೆ ಎಂದು ನಂಬಲಾದ ಮತ್ತು ಪಾಕಿಸ್ತಾನದ ಸರ್ಕಾರಿ ಬೆಂಬಲಿತವಾದ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಹಿಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಪಾಕಿಸ್ತಾನ ಈ ದಾಳಿಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸುತ್ತದೆ.
ಒಂದೆಡೆ ತನ್ನ ಕೈವಾಡ ನಿರಾಕರಿಸುತ್ತಲೇ ಇರುವ ಪಾಕಿಸ್ತಾನ ಭಾರತ ಕೈಗೊಂಡಿರುವ ಕ್ರಮಗಳಿಂದ ಮಧ್ಯರಾತ್ರಿಯಲ್ಲೂ ಸುದ್ದಿಗೋಷ್ಠಿ ನಡೆಸಿ ಭಾರತದ ದಾಳಿ ಬಗ್ಗೆ ಆತಂಕ ವ್ಯಕ್ತಪಡಿಸುವ ಮಟ್ಟಕ್ಕೆ ಹೆದರಿದೆ.
ಈ ಇತ್ತೀಚಿನ ದುರಂತ ಹಾಗೂ ಭಾರತದೆಡೆಗಿನ ಭಯದ ಹಿಂದೆ ದಶಕಗಳಷ್ಟು ಹಳೆಯದಾದ ವಾಸ್ತವವಿದೆ. ಈ ಅಂಶವನ್ನು ಯುಎಸ್ ಗುಪ್ತಚರ ಇಲಾಖೆ ಬಹಿರಂಗಪಡಿಸಿರುವ ಮಾಹಿತಿ ಖಚಿತಪಡಿಸುತ್ತಿದೆ. 1993 ರಲ್ಲಿ, CIA ರಹಸ್ಯ ದಾಖಲೆಯಿಂದ ಈ ಮಾಹಿತಿ ಲಭ್ಯವಾಗಿದೆ.
*******
ಇದು ಮೋದಿ ಸರ್ಕಾರ, ಪ್ರತಿಯೊಬ್ಬ ಉಗ್ರನನ್ನು ಹುಡುಕಿ ಕೊಲ್ಲುತ್ತೇವೆ; ಪಹಲ್ಗಾಮ್ ಉಗ್ರರಿಗೆ ಅಮಿತ್ ಶಾ ಎಚ್ಚರಿಕೆ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ಗೃಹ ಸಚಿವ ಅಮಿತ್ ಶಾ, ಇದು ನರೇಂದ್ರ ಮೋದಿ ಸರ್ಕಾರ, ಯಾರನ್ನೂ ಬಿಡುವುದಿಲ್ಲ. ಈ ದೇಶದ ಪ್ರತಿಯೊಂದು ಇಂಚಿನಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ನಮ್ಮ ಸಂಕಲ್ಪವಾಗಿದೆ ಮತ್ತು ಅದನ್ನು ಸಾಧಿಸಲಾಗುತ್ತದೆ ಎಂದು ಹೇಳಿದರು.
ಬೋಡೋಫಾ ಉಪೇಂದ್ರನಾಥ ಬ್ರಹ್ಮ ಅವರ ಪರಂಪರೆಯನ್ನು ಗೌರವಿಸಲು ರಸ್ತೆ ಮತ್ತು ಪ್ರತಿಮೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ ಅವರು, ಹೇಡಿತನದ ದಾಳಿ ನಡೆಸುವ ಮೂಲಕ ಇದು ತಮ್ಮ ದೊಡ್ಡ ಗೆಲುವು ಎಂದು ಯಾರಾದರೂ ಭಾವಿಸಿದರೆ, ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ, ಇದು ನರೇಂದ್ರ ಮೋದಿ ಸರ್ಕಾರ, ಯಾರನ್ನೂ ಬಿಡುವುದಿಲ್ಲ. ಈ ದೇಶದ ಪ್ರತಿಯೊಂದು ಇಂಚಿನಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ನಮ್ಮ ಸಂಕಲ್ಪ ಮತ್ತು ಅದು ಸಾಧಿಸಲ್ಪಡುತ್ತದೆ. ಈ ಹೋರಾಟದಲ್ಲಿ 140 ಕೋಟಿ ಭಾರತೀಯರು ಮಾತ್ರವಲ್ಲದೆ ಇಡೀ ಜಗತ್ತು ಭಾರತದೊಂದಿಗೆ ನಿಂತಿದೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ವಿಶ್ವದ ಎಲ್ಲಾ ದೇಶಗಳು ಒಗ್ಗೂಡಿ ಭಾರತದ ಜನರೊಂದಿಗೆ ನಿಂತಿವೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವವರೆಗೆ, ನಮ್ಮ ಹೋರಾಟ ಮುಂದುವರಿಯುತ್ತದೆ ಮತ್ತು ಅದನ್ನು ನಡೆಸಿದವರಿಗೆ ಖಂಡಿತವಾಗಿಯೂ ಸೂಕ್ತ ಶಿಕ್ಷೆ ಸಿಗುತ್ತದೆ ಎಂಬ ಸಂಕಲ್ಪವನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದರು.
*****
ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಪತ್ರ ವಿತರಣೆ; ಮುಂದೆ ಚಾಲಕರು, ಸಹಾಯಕರು ಖಾಯಂ: ಸಿಎಂ ಘೋಷಣೆ

ಬೆಂಗಳೂರು: ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಯ 12,692 ಪೌರಕಾರ್ಮಿಕರನ್ನು ಖಾಯಂಗೊಳಿಸಿ, ನೇಮಕಾತಿ ಪತ್ರವನ್ನು ನೀಡಿದೆ. ಮುಂದಿನ ದಿನಗಳಲ್ಲಿ ಸುಮಾರು 9,000 ವಾಹನ ಚಾಲಕರು, ಸಹಾಯಕರು ಹಾಗೂ ಆಪರೇಟರ್ಗಳನ್ನೂ ಕೂಡ ಖಾಯಂ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.
ಇಂದು ಬಿಬಿಎಂಪಿ ವತಿಯಿಂದ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿದರು.
*****
ಕೋಲಾರದ ರೈತರಿಂದಲೂ ಪಾಕಿಸ್ತಾನ ಮೇಲೆ surgical strike; ಟೊಮ್ಯಾಟೊ ರಫ್ತು ಬಂದ್!

ಕೋಲಾರ: ಪಹಲ್ಗಾಮ್ ದಾಳಿ ಬಳಿಕ ಭಾರತೀಯ ಸೇನಾ ದಾಳಿ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ನಮ್ಮ ಕೋಲಾರದ ರೈತರೂ ಕೂಡ ಶಾಕ್ ನೀಡಿದ್ದು, ಇಷ್ಟು ದಿನ ಪಾಕಿಸ್ತಾನಕ್ಕೆ ರವಾನೆಯಾಗುತ್ತಿದ್ದ ಅಪಾರ ಪ್ರಮಾಣದ ಟೊಮ್ಯಾಟೊ ಬಂದ್ ಆಗಿದೆ.
ಹೌದು.. ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ಭಾರತ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಲವು ಸರಣಿ ಸಭೆಗಳನ್ನು ನಡೆಸಿ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಿದರು.
*****
ICSE, ISC Exams: ಕರ್ನಾಟಕ ಅತ್ಯುತ್ತಮ ಸಾಧನೆ, ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಫಲಿತಾಂಶ!
ಬೆಂಗಳೂರು: ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ICSE) ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ISC) ಬೋರ್ಡ್ ಪರೀಕ್ಷೆಗಳಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದೆ. ICSE 10ನೇ ತರಗತಿಯಲ್ಲಿ ರಾಜ್ಯದ ಶೇ. 99.70 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 12ನೇ ತರಗತಿ ISC ಪರೀಕ್ಷೆಯಲ್ಲಿ ಶೇ.99.63 ರಷ್ಟು ಫಲಿತಾಂಶ ಬಂದಿದೆ. ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಬುಧವಾರ ಫಲಿತಾಂಶಗಳನ್ನು ಪ್ರಕಟಿಸಿದೆ.
ICSE ಮತ್ತು ISC ಪರೀಕ್ಷೆಗಳಲ್ಲಿ ಕರ್ನಾಟಕದ ಉತ್ತೀರ್ಣರಾದವರ ಶೇಕಡಾವಾರು ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. 10 ನೇ ತರಗತಿ ICSE ನಲ್ಲಿ ರಾಜ್ಯ ಶೇ. 99.70 ರಷ್ಟು ಫಲಿತಾಂಶ ಹೊಂದಿದ್ದರೆ, 12 ನೇ ತರಗತಿ ISC ಪರೀಕ್ಷೆಗಳಲ್ಲಿ 99.63 ರಷ್ಟು ಫಲಿತಾಂಶ ಹೊಂದಿದೆ. ICSE ರಾಷ್ಟ್ರೀಯ ಸರಾಸರಿ ಶೇ. 99.09 ರಷ್ಟಿದ್ದರೆ, ISC ಗೆ ಶೇ. 99.02 ರಷ್ಟಿದೆ.

