ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಸಾಲ ಕೊಟ್ಟ IMF

ಭಾರತದ ತೀವ್ರ ವಿರೋಧದ ಹೊರತಾಗಿಯೂ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ಗಳ ಸಾಲವನ್ನು ಅನುಮೋದಿಸಿದೆ. ಪಾಕಿಸ್ತಾನದ ಆರ್ಥಿಕ ಸ್ಥಿತಿಯನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐಎಂಎಫ್ ಹೇಳಿದೆ. ಆದರೆ, ಈ ಸಾಲ ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಕೆಯಾಗಬಹುದು ಎಂಬ ಭಾರತದ ಆತಂಕವನ್ನು ಐಎಂಎಫ್ ನಿರ್ಲಕ್ಷಿಸಿದೆ. ಪಾಕಿಸ್ತಾನದ ಹಿಂದಿನ ಸಾಲಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂಬುದನ್ನು ಭಾರತ ಒತ್ತಿ ಹೇಳಿದೆ.
***
ಪಾಕ್ ಮತ್ತೆ ಡ್ರೋನ್ ದಾಳಿ: ಭಾರತದ ಗಡಿ ರಾಜ್ಯಗಳು ಸಂಪೂರ್ಣ ಬ್ಲಾಕ್ ಔಟ್..!

ಪಾಪಿ ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದೆ. ಬೆಳಗ್ಗೆಯಿಂದ ಸೈಲೆಂಟ್ ಆಗಿದ್ದ ಭಾರತದ ಗಡಿ ರಾಜ್ಯಗಳಲ್ಲಿ ಪಾಕಿಸ್ತಾನ ಡ್ರೋನ್ ದಾಳಿ ಮಾಡಿದೆ. ಕತ್ತಲು ಆಗುತ್ತಿದ್ದಂತೆಯೇ ಡ್ರೋನ್ ಅಟ್ಯಾಕ್ ಯತ್ನ ನಡೆಸಿದೆ, ಆದ್ರೆ, ಇದಕ್ಕೆ ಭಾರತ ಪ್ರತ್ಯುತ್ತರ ನೀಡಿದ್ದು, ಆಕಾಶದಲ್ಲಿ ಪಾಕ್ ಡ್ರೋನ್ಗಳನ್ನು ಉಡೀಸ್ ಮಾಡಿದೆ. ಹೀಗಾಗಿ ಜಮ್ಮು, ಪಂಜಾಬ್, ರಾಜಸ್ಥಾನದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
****
ಪಾಕಿಸ್ತಾನದ ಸೇನೆ ಮೇಲೆ ಬಲೂಚಿಸ್ತಾನ ಗ್ರೆನೇಡ್ ದಾಳಿ

ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೇ, ಬಲೂಚಿಸ್ತಾನದಲ್ಲಿಯೂ ಪಾಕಿಸ್ತಾನಿ ಸೇನೆಯ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಕ್ವೆಟ್ಟಾ, ಟರ್ಬತ್ ಮತ್ತು ಪಂಜ್ಶೀರ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಪಾಕಿಸ್ತಾನ ಸೇನೆಯ ಮೇಲೆ ಗ್ರೆನೇಡ್ ದಾಳಿಗಳನ್ನು ನಡೆಸಿದೆ.
****
ಭಾರತದ ನಗರಗಳ ಮೇಲೆ ಪಾಕಿಸ್ತಾನ ಮತ್ತೆ ದಾಳಿ: ಸೇನೆ, ವಾಯುಪಡೆ, ನೌಕಾಪಡೆ ಮುಖ್ಯಸ್ಥರು, ರಕ್ಷಣಾ ಸಚಿವರೊಂದಿಗೆ ಮೋದಿ ಮಹತ್ವದ ಸಭೆ

ಪಾಕಿಸ್ತಾನ ಸತತ 2ನೇ ದಿನವೂ ಭಾರತದ ಹಲವು ನಗರಗಳ ಮೇಲೆ ಡ್ರೋನ್ ಮೂಲಕ ದಾಳಿಗೆ ಯತ್ನಿಸಿದ್ದು, ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಸುಮಾರು ಮೂರು ದಶಕಗಳಲ್ಲಿಯೇ ಅತ್ಯಂತ ಕೆಟ್ಟ ಮಟ್ಟಕ್ಕೆ ಏರಿದ್ದು, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮತ್ತೆ ಮೂರು ಸೇನಾ ಮುಖ್ಯಸ್ಥರನ್ನು ಭೇಟಿಯಾಗಿ ಸಭೆ ನಡೆಸಿದ್ದಾರೆ.
ಎರಡು ವಾರಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಮಾರಕ ದಾಳಿಗೆ ಪ್ರತಿಕ್ರಿಯೆಯಾಗಿ, ಬುಧವಾರ, ಭಾರತ ಪಾಕಿಸ್ತಾನದಲ್ಲಿರುವ “ಭಯೋತ್ಪಾದಕ ಮೂಲಸೌಕರ್ಯ”ಗಳನ್ನು ಗುರಿಯಾಗಿರಿಸಿಕೊಂಡು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ ವಾಯುದಾಳಿ ನಡೆಸಿತ್ತು.
ಭಾರತದ ಆಪರೇಷನ್ ಸಿಂಧೂರ್ ಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನದ ಸಶಸ್ತ್ರ ಪಡೆಗಳು ಮೇ 8-9ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್ಗಳು ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿ ದಾಳಿಗಳನ್ನು ನಡೆಸಿದವು, ಅವುಗಳನ್ನು “ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಗಿದೆ” ಎಂದು ಭಾರತೀಯ ಸೇನೆ ಇಂದು ತಿಳಿಸಿದೆ.
***
ಶರ್ಬತ್ ಜಿಹಾದ್: ಮುಂದೆ ಇಂತಹ ಆಕ್ಷೇಪಾರ್ಹ ಹೇಳಿಕೆ ನೀಡಲ್ಲ, Ramdev ಭರವಸೆ; ಪ್ರಕರಣ ಮುಕ್ತಾಯ!
ನವದೆಹಲಿ: ಹಮ್ದರ್ದ್ ಸಂಸ್ಥೆಯ ರೂಹ್ ಅಫ್ಜಾ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಯೋಗ ಗುರು ರಾಮ್ದೇವ್ ಭರವಸೆ ನೀಡಿದ ನಂತರ ದೆಹಲಿ ಹೈಕೋರ್ಟ್ ಶುಕ್ರವಾರ ಪ್ರಕರಣವನ್ನು ಮುಕ್ತಾಯಗೊಳಿಸಿತು. ರಾಮದೇವ್ ಮತ್ತು ಪತಂಜಲಿ ಫುಡ್ಸ್ ಲಿಮಿಟೆಡ್ ತಮ್ಮ ಅಫಿಡವಿಟ್ಗಳಲ್ಲಿ ನೀಡಿದ ಹೇಳಿಕೆಗಳು ಅವರ ಮೇಲೆ ಬದ್ಧವಾಗಿವೆ ಎಂದು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಹೇಳಿದರು. ಹಮ್ದರ್ದ್ ನ್ಯಾಷನಲ್ ಫೌಂಡೇಶನ್ ಇಂಡಿಯಾ ಪರವಾಗಿ ತೀರ್ಪು ನೀಡಿತ್ತು. ನ್ಯಾಯಾಲಯವು ಈ ಹಿಂದೆ ವಿವಾದಾತ್ಮಕ ಆನ್ಲೈನ್ ವಿಷಯವನ್ನು ತೆಗೆದುಹಾಕುವಂತೆ ಆದೇಶಿಸಿತ್ತು. ರಾಮ್ದೇವ್ ಮತ್ತು ಪತಂಜಲಿಗೆ ತಮ್ಮ ಹೊಣೆಗಾರಿಕೆಗಳನ್ನು ಸಲ್ಲಿಸುವಂತೆ ಕೇಳಿತ್ತು.

