ಮೊದಲ ಸಲ ಶಾಲೆಗೆ
ಕಳಿಸಬೇಕೆಂಬ ಆಸೆ
ಮಗುವನ್ನು ಸ್ವಲ್ಪ ಹೊತ್ತು ಬಿಟ್ಟಿರಬೇಕಾದ ಬಾಧೆ !
ಮಕ್ಕಳು ದೊಡ್ಡವರಾಗಿ ಉದ್ಯೋಗಕ್ಕೆ ಹೊರಟಗ
ದುಡಿಯುವ ಮಕ್ಕಳೇಂದು ನೋಡುವ ಆಸೆ
ಎಚ್ಚರದಿ ನಡೆ ಎಂದು ಹೇಳುವಾಗ ಆಗುವ ಬಾಧೆ !
ಮದುವೆಯ ವಯಸ್ಸು ಬಂದಾಗ
ಸೊಸೆ ಒಬ್ಬಳ ತರಬೇಕೆಂಬ ಆಸೆ
ಇಲ್ಲವೇ
ಅಳಿಯ ಬರಬೇಕು ಎಂಬ ಆಸೆ
ಮದುವೆ ಮಾಡಿ ಬೇರೊಬ್ಬರ ಕೈಯಲ್ಲಿ
ತನ್ನ ಮಗುವ ಕೈ ಇಡುವಾಗ ಆಗುವ ಬಾಧೆ !
ಕೆಲಸಕ್ಕೆಂದು ನಗರಕ್ಕೆ ತನ್ನ ಸಂಸಾರವ ಹೊತ್ತು ನಡೆವಾಗ
ಮಗುವಿಂದ ತಾಯಿ ದೂರವಾಗುವನೆಂಬ ನೋವಿನ ಬಾಧೆ !
ಕೊನೆಯಲ್ಲಿ ಕಣ್ಣೀರುಡುತ್ತಾ
ಹುಟ್ಟ ಸೀರಿಯ ಸೆರಗಿನ ತುದಿಯಿಂದ ಬಾಯಿ ಮುಚ್ಚಿಕೊಂಡ ಹಾಗೆ
ಯಾರಿಗೂ ತಿಳಿಯದ ಹಾಗೆ ದುಃಖ ತಡೆದುಕೊಳ್ಳಲು ಮಾಡುವ ಪ್ರಯತ್ನದ ಹಾಗೆ !
ನೆಲವನ್ನು ಆವರಿಸಿದ ಬುಡದ ಬೇರು
ತೊಂಡರಿಸಿದ ಕಾಂಡದ ಚಿಗುರೊಡೆಯುವ ಭಾಗ…
ವಿಭಾಗವಾದಾಗ
ಆಗುವ ನೋವು …
ಹೇಳುವುದು ಯಾರಿಗೆ…?
ಭೂಮಿ ತಾಯಿಯ ನಂಬಿ …
ಬೆಳೆಯುವ ಮರಗಳು …
ತಾಯಿ ಯಿಂದ ಮಕ್ಕಳನ್ನು ಬೇರೆ ಮಾಡಿದ
ನರ ಮಾನವರು…
ಸರಿತ.ಹೆಚ್ ಕಾಡುಮಲ್ಲಿಗೆ…✍️…
