ಚಿಕ್ಕಮಗಳೂರು : ದಾವಣಗೆರೆಯ ಡಾಲರ್ಸ್ ಕಾಲೋನಿಯಲ್ಲಿ ನಡೆದ ಕ್ರೂರ ಘಟನೆಯಲ್ಲಿ ಅತ್ತೆಗೆ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಲೆ ಮಾಡಿ, ಚಿನ್ನಾಭರಣ ಹಾಗೂ ಹಣ ದೋಚಿದ ಪ್ರಕರಣದಲ್ಲಿ ಅಜ್ಜಂಪುರ ಪೊಲೀಸರು ಸೊಸೆ ಅಶ್ವಿನಿಯನ್ನು ಬಂಧಿಸಿದ್ದಾರೆ.
ಪ್ರಕರಣ ಹೀಗಿದೆ :
ಆ.20 ರಂದು ವೀಣಾ ರಾಮಚಂದ್ರಪ್ಪ ಅವರು ಠಾಣೆಗೆ ದೂರು ನೀಡಿದ್ದು, ತಮ್ಮ ಅತ್ತಿಗೆ ದೇವಿರಮ್ಮನವರ ಮರಣದ ಹಿಂದೆ ಸಂಚು ಇದೆ ಎಂದು ತಿಳಿಸಿದ್ದಾರೆ. ತನಿಖೆಯಲ್ಲಿ, ಸೊಸೆ ಅಶ್ವಿನಿ ಸ್ನೇಹಿತ ಆಂಜನೇಯ ಜೊತೆಗೂಡಿ ಕೊಲೆ ಮಾಡಿರುವುದು ಬಹಿರಂಗವಾಗಿದೆ.
2025ರ ಆಗಸ್ಟ್ 10ರಂದು ರಾತ್ರಿ ದೇವಿರಮ್ಮನವರಿಗೆ 20 ನಿದ್ರೆ ಮಾತ್ರೆ ಬೆರೆಸಿದ ಊಟ ನೀಡಲಾಗಿತ್ತು. ದೇವಿರಮ್ಮ ಸುಸ್ತಾದರೂ ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೆ ಚಿಕಿತ್ಸೆ ತಡಮಾಡಿ ಸಾವಿಗೆ ಕಾರಣರಾಗಿದ್ದಾರೆ. ಈ ವಿಚಾರವನ್ನು ಮರೆಮಾಚಿ ಸಂಬಂಧಿಕರ ಸಮ್ಮುಖದಲ್ಲಿ ಶವಸಂಸ್ಕಾರ ಮಾಡಲಾಗಿದೆ.
ತನಿಖೆಯಲ್ಲಿ ಅಶ್ವಿನಿ ಹಲವು ಬಾರಿ ಡೂಪ್ಲಿಕೇಟ್ ಕೀ ಬಳಸಿ ಮನೆಯ ಬಂಗಾರ, ಹಣ ಕದ್ದುಕೊಟ್ಟು ಆಂಜನೇಯನಿಗೆ ನೀಡಿದ್ದಳೆಂಬುದು ಬೆಳಕಿಗೆ ಬಂದಿದೆ. ಕೊಲೆಗೂ ಇದೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ತನಿಖೆ :
ಪೊಲೀಸ್ ನಿರೀಕ್ಷಕ ವೀರೇಂದ್ರ ನೇತೃತ್ವದ ತಂಡ ಅಶ್ವಿನಿಯನ್ನು ಬಂಧಿಸಿದ್ದು, ಸುಮಾರು 300 ಗ್ರಾಂ ಚಿನ್ನಾಭರಣವನ್ನು ಬ್ಯಾಂಕ್ಗಳಲ್ಲಿ ಅಡವಿಟ್ಟಿರುವುದು ಪತ್ತೆಯಾಗಿದೆ.
