ಟಿ.ನರಸೀಪುರ : ಆಯುರ್ವೇದಿಕ್ ಆಸ್ಪತ್ರೆಯ ಹೆಚ್ಚಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ರವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯರವರ ಬಳಿ ಚರ್ಚಿಸಿ ಅನುದಾನ ಒದಗಿಸಲು ಮುಂದಾಗುವುದಾಗಿ ಪುರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ತುಂಬಲ ಪ್ರಕಾಶ್ ತಿಳಿಸಿದರು.
ಪಟ್ಟಣದ ಹೊರ ವಲಯ ಹೆಳವರಹುಂಡಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ನೂತನ ಆಯುಶ್ ಆಸ್ಪತ್ರೆಯ ಕಟ್ಟಡದಲ್ಲಿ ಹೋಮ ಹವನ ಪೂಜಾ ಕೈಂಕರ್ಯಗಳೊಂದಿಗೆ ರಾಷ್ಟ್ರೀಯ ಆಯಷ್ ಅಭಿಯಾನಡದಿ 10ನೇ ಆಯುರ್ವೇದ ದಿನಾಚರಣೆ ಆಚರಣೆಯನ್ನು ಆಯುರ್ವೇದ ಫಾರ್ ಪೀಪಲ್ ಅಂಡ್ ಪ್ಲಾನೆಟ್ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿ ಟಿ.ನರಸೀಪುರ ಹಾಗೂ ವರುಣಾ ವಿಧಾನ ಸಭಾದ ಎರೆಡೂ ಕ್ಷೇತ್ರಗಳ ಜನತೆಗೆ ಆಯುರ್ವೇದಿಕ್ ಆಸ್ಪತ್ರೆ ವರದಾನವಾಗಿದೆ.ಹೊರ ವಲಯದಲ್ಲಿ ಇರುವುದರಿಂದ ರೋಗಿಗಳಿಗೆ ಬರಲು ಸ್ವಲ್ಪ ತೊಂದರೆ ಆಗಬಹುದು.ನೀವು ಕೊಡುವ ಉತ್ತಮ ಚಿಕಿತ್ಸೆಯಿಂದ ಎಷ್ಟೇ ದೂರದಲ್ಲಿದ್ದರೂ ಸಾರ್ವಜನಿಕರು ಸೇವೆ ಪಡೆದುಕೊಳ್ಳಲು ಬರುತ್ತಾರೆಂದರು.

ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸೋಮಣ್ಣ ಮಾತನಾಡಿ ಸಿಎಂ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ ರವರ ಕ್ಷೇತ್ರದಲ್ಲಿ ಆಸ್ಪತ್ರೆ ಇರುವುದರಿಂದ ಹೆಚ್ಚು ಆಸಕ್ತಿ ವಹಿಸಿ ಸುಸಜ್ಜಿತ ಆಯುರ್ವೇದಿಕ್ ಆಸ್ಪತ್ರೆ ನಿರ್ಮಾಣ ಮಾಡಿದ್ದು,ಈ ಭಾಗದ ಎಲ್ಲಾ ಜನತೆಗೆ ಆಸ್ಪತ್ರೆಯಿಂದ ಅನುಕೂಲವಾಗಲಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಇದನ್ನು ಓದಿ: ಹಾಸನ: ಮಾನವೀಯತೆ ಮೆರೆದ ಸಂಚಾರಿ ಪೊಲೀಸರ ಸೇವೆ ಪ್ರಶಂಸೆಗೆ ಪಾತ್ರ
ಡಾ.ಅಶೋಕ್ ಕುಮಾರ್ ಮಾತನಾಡಿ ಊರಿನಾಚೆ ಆಸ್ಪತ್ರೆ ಇರುವುದರಿಂದ ಸೇವೆಯ ಲಬ್ಯತೆಗಳು ಏನೇನು ಸಿಗುತ್ತವೆ ಎಂಬುದು ಹೆಚ್ಚು,ಹೆಚ್ಚು ಪ್ರಚಾರ ಸಿಗುವಂತ್ತಾಗಬೇಕು.ನಮ್ಮ ಆಯುರ್ವೇದ ಆಸ್ಪತ್ರೆಯಲ್ಲಿ ಎಲ್ಲಾ ಖಾಯಿಲೆಗೂ ಚಿಕಿತ್ಸೆ ನೀಡಲಾಗುತ್ತದೆ. ವಿಶೇಷವಾಗಿ ಆಯುರ್ವೇದ ಕೀಲು ನೋವುಗಳಿಗೆ ಬಹಳ ಹೆಸರುವಾಸಿಯಾಗಿದೆ.ಅದರ ಸೇವೆ ಲಬ್ಯವಿದೆ.ಪಂಚಕರ್ಮ ಚಿಕಿತ್ಸೆ ಬಹಳ ಮುಖ್ಯವಾಗಿದೆ.ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.ನುರಿತ ಸಿಬ್ಬಂದಿಗಳು ನೇಮಕವಾಗದೆ ವಿಶೇಷ ಚಿಕಿತ್ಸೆಗಳು ತಡವಾಗುತ್ತದೆ.

ಆಯುರ್ವೇದದಲ್ಲಿ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ.ಮಂಡಿ,ಕೀಲು ನೋವು,ಚರ್ಮ ಸಮಸ್ಯೆ, ನರಗಳಲ್ಲಿ ಸಮಸ್ಯೆ ಇರುವವರು ನಮ್ಮಲ್ಲಿಗೆ ಹೃಚ್ಚಿನ ರೋಗಿಗಳು ಬರುತ್ತಾರೆ.ಬೇರೆಲ್ಲಿಯೂ ವಾಸಿಯಾಗದಿದ್ದಾಗ ಆಯುರ್ವೇದ ಹುಡುಕಿಕೊಂಡು ಕೊನೆಯದಾಗಿ ಬರುತ್ತಾರೆ.ಖಂಡಿತವಾಗಿಯೂ ನಮ್ಮಲ್ಲಿ ಎಲ್ಲಾ ತರಹದ ಕಾಯಿಲೆಗಳನ್ನು ಗುಣ ಪಡಿಸುವ ಔಷಧಿಗಳು ಲಭ್ಯವಿರುತ್ತವೆ.ಅದನ್ನು ಸರಿಯಾದ ರೀತಿ ಮತ್ತು ಪ್ರಮಾಣದಲ್ಲಿ ಮಾಡಬೇಕಷ್ಟೇ ಎಂದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮಂಜು ಬಾದಾಮಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಎಂ.ನಾಗೇಂದ್ರ ಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ಆಲಗೂಡು ರೇವಣ್ಣ,ಉಪಾಧ್ಯಕ್ಷ ನಂಜುಂಡಯ್ಯ ತಾಲ್ಲೂಕು ಆರೋಗ್ಯಾಧಿಕಾರಿ ರವಿಕುಮಾರ್,ಜಿಲ್ಲಾ ಆಯುರ್ವೇದಿಕ್ ವೈದ್ಯಾಧಿಕಾರಿಗಳಾದ ಡಾ.ರೇಣುಕಾದೇವಿ,ಡಾ.ಯತೀಶ್,ಡಾ.ಅಶೋಕ್ ಕುಮಾರ್, ಡಾ.ವೇದ .ಎಸ್ ಎಂ., ಡಾ.ದಿನಕರ್, ಡಾ. ಅಮೃತಾನಂದ, ಡಾ.ಆಶಾ, ಡಾ.ಮನ್ಸೂರ್,ಡಾ.ರಾಘವೇಂದ್ರ,ಡಾ.ಹತಿಕ್, ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಆಯುರ್ವೇದಿಕ್ ವೈದ್ಯರು ಭಾಗಿಯಾಗಿದ್ದರು.
- ಎಂ.ನಾಗೇಂದ್ರಕುಮಾರ್

[…] ಇದನ್ನು ಓದಿ : ಟಿ.ನರಸೀಪುರದಲ್ಲಿ ಆಯುರ್ವೇದಿಕ್ ಆಸ್ಪತ್ರ… […]