ಹಾಸನ: ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿರುವ ಹಾಸನ ಮಹಾನಗರ ಪಾಲಿಕೆಯ ಚುನಾಯಿತ ಮಂಡಳಿಯ ಅವಧಿ ಅಕ್ಟೋಬರ್ 28, 2025 ರಂದು ಮುಕ್ತಾಯಗೊಂಡಿದೆ. ಇದರಿಂದ ಮುಂದಿನ ಆಡಳಿತಾತ್ಮಕ ನಿರ್ವಹಣೆಗೆ ರಾಜ್ಯ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಆದೇಶ ಹೊರಡಿಸಿದೆ.
ಇದನ್ನು ಓದಿ : ಅರಕಲಗೂಡು: ಕಾವೇರಿ ನದಿಯ ಕಟ್ಟೆಪುರ ಸಮೀಪ ಬೃಹತ್ ಮೊಸಳೆ…! ಜನರಲ್ಲಿ ಭೀತಿ ಹೆಚ್ಚಳ…!
ನಗರಾಭಿವೃದ್ಧಿ ಇಲಾಖೆಯ ಆದೇಶದಂತೆ, ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅವರನ್ನು ಹಾಸನ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅವರು ಅಕ್ಟೋಬರ್ 29ರಿಂದ ಮುಂದಿನ ಸೂಚನೆ ಬರುವವರೆಗೂ ಕರ್ತವ್ಯ ನಿರ್ವಹಿಸಲಿದ್ದಾರೆ.
ಕರ್ನಾಟಕ ಮಹಾನಗರ ಪಾಲಿಕೆ ಅಧಿನಿಯಮ–1976ರ ನಿಯಮ 509ರ ಅನ್ವಯ, ಚುನಾಯಿತ ಮಂಡಳಿ ರಹಿತ ಅವಧಿಯಲ್ಲಿ ನಿರ್ವಹಣಾ ಕಾರ್ಯಾಚರಣೆ ಸುಗಮವಾಗಿರಲು ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ ಮಾಹಿತಿ ನೀಡಿದ್ದಾರೆ.
