ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿಯ ಮಡುವಿನಕೋಡಿ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಉಪಾಧ್ಯಕ್ಷೆ ರತಿ ಮಹದೇವ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೆಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನ ಬಯಸಿ ನಾಗರಾಜು ಹೊರತುಪಡಿಸಿ ಉಳಿದ ಯಾವ ಸದಸ್ಯರು ಉಮೇದಾರಿಕೆ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ನೂತನ ಉಪಾಧ್ಯಕ್ಷ ನಾಗರಾಜು ಮಾತನಾಡಿ ನಮ್ಮ ನಾಯಕರಾದ ಮನ್ಮುಲ್ ನಿರ್ದೇಶಕ ಎಂ.ಬಿ ಹರೀಶ್ ಮಾರ್ಗದರ್ಶನದಲ್ಲಿ ಹಾಗೂ ನಮ್ಮ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ.ಅದಕ್ಕೆ ಋಣಿಯಾಗಿ ನಮ್ಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ಧಿಗೆ ಶ್ರಮವಿಸುತ್ತಾ.ಸರ್ಕಾರದಿಂದ ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯಗಳು ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು,ಎಲ್ಲಾ ಸದಸ್ಯರ ಸಹಕಾರದಿಂದ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸುತ್ತೇನೆ,ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಲೋಪದೋಷಗಳು ಬರದ ಹಾಗೆ ಸಾರ್ವಜನಿಕರ ಪರ ಕೆಲಸಗಳನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬಳಿಕ ಗ್ರಾಮಸ್ಥರು ಸರ್ವ ಸದಸ್ಯರು, ಬೆಂಬಲಿಗರು, ಹಿರಿಯರು, ಗ್ರಾ.ಪಂ ಸಿಬ್ಬಂದಿಗಳು ಹಾರ ತುರಾಯಿಗಳನ್ನು ಹಾಕಿ ಸಿಹಿ ಹಂಚಿ ಪಟಾಕಿ ಸಸಿಡಿಸುವ ಮೂಲಕ ಅವಿರೋಧವಾಗಿ ಆಯ್ಕೆಯಾದ ನೂತನ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಪ್ರೀತಿ ಪಿ.ಎಲ್, ಸದಸ್ಯರಾದ ರತಿ ಮಹದೇವ್, ಮಂಜುನಾಥ್, ಬಸವರಾಜಪ್ಪ ಡಿ.ಪಿ,ಶಿಭಾಫಿರ್ ದೋಸ್, ಗೌರಮ್ಮ,ಮಂಜುಳ, ಚಂದ್ರಹಾಸ, ಶಿವಕುಮಾರ್ ಹೆಚ್.ಎಸ್, ರವಿಕುಮಾರ್, ಪಿಡಿಓ ಮಹೇಶ್ ಎಂ, ಗ್ರಾಮದ ನ್ಯಾಯ ಮಂಡಳಿ ಅಧ್ಯಕ್ಷ ಎಸ್.ಮಹೇಶ್, ಎಂ.ಪಿ ರಾಜು,ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಬಾಚಹಳ್ಳಿ ಯೊಗೇಂದ್ರ, ಎಂ.ವೈ ನಾಗರಾಜ್, ನಿಂಗರಾಜು, ಕೆಂಪರಾಜು,ಗ್ರಾ.ಪಂ ಮಾಜಿ ಅಧ್ಯಕ್ಷ ಅಶೋಕ್,ಯುವ ಮುಖಂಡರಾದ ದೀಪು, ರಘು,ಡಿಸ್ ಮಹೇಶ್,ಸುರೇಶ,ಮಹೇಂದ್ರ, ಪ್ರಸನ್ನ(ಕೆಂಪಿ),ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಕವಳ್ಳಿ ಕೆ ಆರ್ ಪೇಟೆ
